ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೆ ಏರಿಸಿಕೊಂಡ ಸಿನಿ ಶೆಟ್ಟಿ ಯಾರು ಗೊತ್ತಾ? ಹೆಮ್ಮೆಯ ಕನ್ನಡತಿ ಈಗ ಮಿಸ್ ಇಂಡಿಯಾ..!!

ನಮಸ್ತೆ ಪ್ರಿಯ ಓದುಗರೇ, ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ಅವರು ಈ ವರ್ಷದ ಫೆಮಿನ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದಿದ್ದಾರೆ. ಇನ್ನ ರಾಜಸ್ಥಾನದ ರೂಬಲ್ ಶಿಖಾವತ್ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ. ಭಾನುವಾರ ಅಂದ್ರೆ ಜುಲೈ 3 ರಂದು ಮುಂಬೈ ನ ಜಿಯೋ ಕನ್ವೆನ್ಷನ್ ಸೆಂಟರ್ ಅಲ್ಲಿ ನಡೆದಂತಹ ವಿಎಲ್ಸಿಸಿ ಫೀಮಿನ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕ ಮೂಲದ 21ವರ್ಷದ ಸಿನಿ ಶೆಟ್ಟಿ ಅವರು ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹಿಂದಿನ ವರ್ಷ ಮಿಸ್ ಇಂಡಿಯಾ ಆಗಿದ್ದ ಮಾನಸ ಅವರು ಈ ವರ್ಷದ ಮಿಸ್ ಇಂಡಿಯಾ ಗೆ ಕಿರೀಟವನ್ನು ಮುಡಿಗೆ ಏರಿಸಿದರು.

 

ಸಿನಿ ಶೆಟ್ಟಿ ರೂಬಲ್ ಶೇಖಾವತ್, ಪ್ರಜ್ಞಾ ಆಯ್ಯಗಿರಿ ಮತ್ತು ಕಾರ್ಗಿ ನಂದಿ ಮೊದಲಾದವರು ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿದ್ದರು. ನಟರಾದ ನೇಹಾ ದೂಪಿಯ, ಮಲೈಕಾ ಅರೋರಾ ಕೂಡ ಇಲ್ಲಿ ಉಪಸ್ಥಿತ ಇದ್ದರೂ. ಇವರ ಜೊತೆಗೆ ವಿನ್ಯಾಸಕರು ಆದ ರೋಹಿತ್ ಗಾಂಧಿ, ರಾಹುಲ್ ಖನ್ನಾ, ನೃತ್ಯ ನಿರ್ದೇಶಕ ಶಿಯ ದವನ್ ಮತ್ತು ಮಾಜಿ ಕ್ರಿಕೆಟ್ ತಾರೆ ಮೈತಾಲಿ ರಾಜ್ ಕೂಡ ಫಿನಾಲೆಯಲ್ಲಿ ತೀರ್ಪುಗಾರರು ಆಗಿದ್ರು. ಅಷ್ಟಕ್ಕೂ ಈ ಸಿನಿ ಶೆಟ್ಟಿ ಯಾರು ಎಂದು ನೀವು ಕೇಳುವುದಾದರೆ, ಇವರು ಜನಿಸಿದ್ದು ಮುಂಬೈ ಅಲ್ಲಿ ಆದ್ರೆ ಕರ್ನಾಟಕ ಮೂಲದವರು ಪ್ರಸ್ತುತ ಚಾರ್ಟೆಡ್ ಫೈನಾನ್ಶಿಯಲ್ ಅನಲಿಸ್ಟ್ ಅಂದ್ರೆ ಸಿಎಫ್ಏ ವೃತ್ತಿಪರ ಕೋರ್ಸ್ ಮಾಡ್ತಾ ಇದ್ದಾರೆ. ಅದರ ಜೊತೆ ಸಿನಿ ಶೆಟ್ಟಿ ನೃತ್ಯ ಗಾರ್ಥಿಯು ಹೌದು.

 

ತಮ್ಮ 4 ನೆ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿ 14 ವರ್ಷ ಇದ್ದಾಗ ತನ್ನ ಅರಂಗೆತ್ರಂ ಮತ್ತು ಭರತನಾಟ್ಯ ಪೂರ್ಣಗೊಳಿಸಿದರು. ಇನ್ನೂ ಮಿಸ್ ಇಂಡಿಯಾ 2022 ರನ್ನರ್ ಅಪ್ ರೂಬಲ್ ಶೇಖಾವತ್ ಅವರು ನೃತ್ಯ ನಟನೆ ಚಿತ್ರಕಲೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಕಾಂತಿಯುತ ಮೋಡಿ ಮಾಡುವ ಸೌಂದರ್ಯದಿಂದ ಸಿನಿ ಶೆಟ್ಟಿ ನಮ್ಮ ಹೃದಯವನ್ನು ಗೆದ್ದಿದ್ದಾರೆ. ನಾವು ಬಹಳ ಹೆಮ್ಮೆ ಪಡುತ್ತೇವೆ. ವಿಶ್ವ ಸುಂದರಿ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ನಾವು ನೋಡಲು ಕಾತುರದಿಂದ ಕಾಯುತ್ತಿದ್ದೇವೆ ಅಂತ ಮಿಸ್ ಇಂಡಿಯಾ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

Leave a comment

Your email address will not be published. Required fields are marked *