ಮರಾಠಿ ನಟಿ ಕೇತಕಿ ಚಿತಾಲೆ ವಿರುದ್ಧ 22 ಪ್ರಕರಣಗಳು. ಇದೆಲ್ಲದಕ್ಕೂ ಕೇವಲ ಒಂದು ಫೇಸ್ ಬುಕ್ ಪೋಸ್ಟ್ ಕಾರಣ ಅಂದ್ರೆ ನಂಬುತ್ತೀರಾ..??

ನಮಸ್ತೆ ಪ್ರಿಯ ಓದುಗರೇ, ಮಹಾರಾಷ್ಟ್ರದ NCP ನಾಯಕ ಶರತ್ ಪವಾರ್ ಯಾರು ಎಂದು ಈ ಮರಾಠಿ ನಟಿಗೆ ಗೊತ್ತಿರಲಿಲ್ಲವೋ ಏನೋ, ಶರತ್ ಪವಾರ್ ವಿರುದ್ಧ ಕೇವಲ ಒಂದೇ ಒಂದು ಪೋಸ್ಟ್ ನ ಅದು ಕೂಡ ಸ್ವಂತ ಬರೆಯದೆ ಯಾರೋ ಹಾಕಿದ್ದನ್ನು ಶೇರ್ ಮಾಡಿ ಈಗ ಬರೋಬ್ಬರಿ 22 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಅಂದ್ರೆ NCP ಮುಖ್ಯಸ್ಥ ಶರತ್ ಪವಾರ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ನ ಶೇರ್ ಮಾಡಿದ ಆರೋಪದ ಮೇಲೆ ಮೇ ತಿಂಗಳಿನಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ಕೇತಕಿ ಚಿತಾಲೆ ಕೇವಲ ಒಂದು ಫೆಸ್ ಬುಕ್ ಪೋಸ್ಟ್ ನ ಕಾಪಿ ಪೇಸ್ಟ್ ಮಾಡಿ ತನ್ನ ವಾಲ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಈಗ ಬಹಳ ದೊಡ್ಡ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಬಗ್ಗೆ ತಮ್ಮನ್ನು ಪೊಲೀಸರು NCP ಕಾರ್ಯಕರ್ತರು ಹೇಗೆ ನಡೆಸಿಕೊಂಡಿದ್ದಾರೆ ಅಂತ ಈಗ ಹೇಳಿಕೊಂಡಿದ್ದಾರೆ.

 

NCP ಮುಖ್ಯಸ್ಥ ಶರತ್ ಪವಾರ್ ಅವಮಾನಿಸಿದ ಆರೋಪದ ಮೇಕ್ ಬಂಧಿತರಾಗಿರುವ ಮರಾಠಿ ನಟಿ ಕೇತಕಿ ಚಿತಾಲೇ ಪೋಲಿಸ್ ಕಸ್ಟಡಿ ಅಲ್ಲಿದ್ದಾಗ NCP ಕಾರ್ಯಕರ್ತರು ಅವರನ್ನು ನಿಂದಿಸಿದ್ದಾರೆ ಅಂತ ಮಂಗಳವಾರ ಹೇಳಿಕೊಂಡಿದ್ದಾರೆ. ಅವರ ಪ್ರಕಾರ ತನ್ನನ್ನು ಅನ್ಯಾಯಾಯುತ ಮನೆಗೆ ವಾರೆಂಟ್ ಕೂಡ ನೀಡದೆ ಸೂಚನೆ ಇಲ್ಲದೆ ಜೈಲಿಗೆ ಕರೆದೊಯ್ದರು. ಅಲ್ಲೇ ವಿಚಾರಣೆ ನಡೆಸಲಾಯಿತು ಎಂದು ಹೇಳಿಕೊಂಡಿದ್ದಾರೆ. ಮಹವಿಕಾಸ ಅಗಾಡಿ ಸರ್ಕಾರವು ತನ್ನ ವಿರುದ್ಧ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದೆ ಅಂತ ಟೀಕಿಸಿದ್ದಾರೆ. ನಟಿ ಕೇತಕಿ ನೀಡಿದ್ದ ಸಂದರ್ಶನದಲ್ಲಿ ನನ್ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ನಂತರ ಕಸ್ಟಡಿ ಕೈ ಬದಲಿಸಿಸಲಾಗಿದೆ. ಕಲಂ ಬೋಲಿ ಇಂದ ನನ್ನನ್ನು ತಾಣೆ ಪೊಲೀಸ್ ಸ್ಟೇಶನ್ ಅಲ್ಲಿ ಒಪ್ಪಿಸಲಾಗಿದೆ. ಅಲ್ಲಿದ್ದ NCP ಮಹಿಳೆಯರು ನನ್ನನ್ನು ಥಳಿಸಿದ್ದಾರೆ. ಅವರು ಸುಮಾರು 20 ಜನರ ಗುಂಪು ಇದ್ರು. ನನ್ನ ಮೇಲೆ ಬಣ್ಣ ಎಸೆದರು.

 

ಇಲ್ಲ ನಾವು ಶಾಹಿಯನ್ನು ಎಸೆದೆವು ಅಂತ ಹೇಳ್ತಾರೆ. ಆದ್ರೆ ಅದು ಶಾಹಿ ಆಗಿರಲಿಲ್ಲ. ಅದು ವಿಷಕಾರಿ ಕಪ್ಪು ಬಣ್ಣವಾಗಿತ್ತು. ಇದು ನನ್ನ ಚರ್ಮಕ್ಕೆ ಅತ್ಯಂತ ಹಾನಿಕರ ಆಗಿದೆ. ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೇ ಅವರು ಈ ಬಣ್ಣವನ್ನು ನನ್ನ ಮೇಲೆ ಎಸೆದರು. ಬಳಿಕ ಅವರು ಮೊಟ್ಟೆಗಳನ್ನು ಕೂಡ ಎಸೆದಿದ್ದಾರೆ. ಆದ್ರೆ ಪೊಲೀಸ್ ಕಂಪೊಂಡ್ ಒಳಗೆ ಪೊಲೀಸರು ನನಗೆ ಅರ್ಥವಾಗುತ್ತಿಲ್ಲ ಅಂತ ಇದು ಕಾನೂನು ಬಾಹಿರವಾಗಿದೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೇ ನನ್ನನ್ನು ಕಸ್ಟಡಿಗೆ ತೆಗೆದುಕೊಂಡು ಹೋಗುವಾಗ ನನ್ನನ್ನು ಬಾರಿ ಎಳೆದಾಡಿದರು. ನಾನು ಪೊಲೀಸ್ ಕಾರಿನ ಮೇಲೆ ಕೂಡ ಬಿದ್ದೇ. ಅವರು ಕೋಪಗೊಂಡಿದ್ದಾರೆ ನಿಜ. ಆದ್ರೆ ಅದು ಏನೇ ಇರಲಿ ಒಬ್ಬ ಹೆಣ್ಣಿಗೆ ಈ ಥರ ಕಿರುಕುಳ ನೀಡೋದು ಎಷ್ಟರ ಮಟ್ಟಿಗೆ ಸರಿ, ಭವಿಷ್ಯದಲ್ಲಿ ನಮ್ಮನ್ನು ಪ್ರತಿನಿಧಿಸುವವರು ಇವರೇನಾ ಅಂತ ನಟಿ ಕೇತಕಿ ಭಾವುಕರಾಗಿದ್ದರು. ಪವಾರ್ ಬಗ್ಗೆ ಅವಹೇಳನಕಾರಿ ಟೀಕೆಗಳುಳ್ಳ ಫೆಸ್ ಬುಕ್ ಪೋಸ್ಟ್ ನ ಹಂಚಿಕೊಂಡ ನಂತರ ಠಾಣೆ ಪೊಲೀಸರು ಚಿಥಾಲೆ ಅವರನ್ನು ಮೇ 14 ರಂದು ಬಂಧಿಸಿದರು. ಕೇತಕಿ ಚೀತಾಲೆ ತನ್ನ ವಿರುದ್ಧ ಪ್ರಕರಣವನ್ನು ಇನ್ನೂ ಮುಂದುವರೆಸುತ್ತಾ ಇದ್ದು, ಕೊನೆಯಲ್ಲಿ ಸತ್ಯ ಗೆಲ್ಲುತ್ತೆ, ನಾನು ಅನುಭವಿಸಿದ ನೋವು ನಾನು ಅದನ್ನೂ ಇಂದಿಗೂ ಮರೆಯಲು ಸಾಧ್ಯ ಇಲ್ಲ ಅಂತ ಹೇಳಿದ್ದಾರೆ.

Leave a comment

Your email address will not be published. Required fields are marked *