ಕರ್ನಾಟಕದ ಕಬ್ಬನ್ ಪಾರ್ಕ್ ಗೆ ಬರಲಿದೆ ದುಬೈ ಮಾದರಿಯ ಟನ್ನಲ್ ಅಕ್ವೇರಿಯಂ..

ಕರ್ನಾಟಕದ ಕಬ್ಬನ್ ಪಾರ್ಕ್ ಗೆ ಬರಲಿದೆ ದುಬೈ ಮಾದರಿಯ ಟನ್ನಲ್ ಅಕ್ವೇರಿಯಂ..

ನಮಸ್ತೆ ಪ್ರಿಯ ಓದುಗರೇ, ಬೆಂಗಳೂರನ್ನು ಗಾರ್ಡನ್ ಸಿಟಿ ಅಂತಾನೆ ಕರೀತಾರೆ. ಇಲ್ಲಿ ಸಾಕಷ್ಟು ಉದ್ಯಾನವನಗಳು ಇವೆ. ಅದರಲ್ಲಿ ಸಾಕಷ್ಟು ಜನರನ್ನು ಸೆಳೆಯುವಂತ ಉದ್ಯಾನವನ ಅಂದ್ರೆ ಅದು ನಮ್ಮ ಕಬ್ಬನ್ ಪಾರ್ಕ್. ಈ ಕಬ್ಬನ್ ಪಾರ್ಕ್ ನಲ್ಲಿ ಕರ್ನಾಟಕದ ಮೊದಲ ಸುರಂಗ ಅಕ್ವೇರಿಯಂ ನಿರ್ಮಾಣ ಆಗಲಿದೆ. ಈಗಾಗಲೇ ಕಬ್ಬನ್ ಪಾರ್ಕ್ ನಲ್ಲಿ ಸುಮಾರು 38 ವರ್ಷಗಳಷ್ಟು ಹಳೆಯದಾದ ಅಕ್ವೇರಿಯಂ ಇದ್ದು, ಇದನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಇಲ್ಲಿನ ಮತ್ಸಾಲಯಕ್ಕೆ ಹೊಸ ರೂಪ ಸಿಗಲಿದ್ದು, ಬೃಹದಾಕಾರವಾಗಿ ಅಭಿವೃದ್ಧಿ ಆಗಲಿದೆ. ಇಲ್ಲಿನ ಅಕ್ವೇರಿಯಂ 1983 ರಲ್ಲೀ ನಿರ್ಮಾಣ ಆಗಿತ್ತು. ಈ ಅಕ್ವೇರಿಯಂ ನ ಕಂಪ್ಲೀಟ್ ಆಗಿ ಚೇಂಜ್ ಮಾಡಬೇಕು ಅಂತ ಬಂದರು ಮತ್ತು ಮೀನುಗಾರಿಕೆ ಇಲಾಖೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ವಾರ್ಷಿಕವಾಗಿ ಈ ಮತ್ಸ್ಯ ಲಯಕ್ಕೆ ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿ ಬಂದು ಹೋಗ್ತಾರೆ.

 

ಅದನ್ನು ಇನ್ನಷ್ಟು ಸಿಂದರಗೊಳಿಸಲು ಆಧುನಿಕ ರೀತಿಯಲ್ಲಿ ಸುರಂಗ ಮಾದರಿಯ ಉದ್ದನೆಯ ಅಕ್ವೇರಿಯಂ ನಿರ್ಮಾಣ ಕೆ ಮೀನುಗಾರಿಕೆ ಇಲಾಖೆ ಮುಂದಾಗಿದೆ. ಇಷ್ಟು ವರ್ಷಗಳ ಕಾಲ ನಾವೆಲ್ಲ ಫಾರಿನ್ ನ ವಿಡಿಯೋಗಳಲ್ಲಿ ಮಾತ್ರ ಈ ರೀತಿಯ ಸುರಂಗ ಮಾದರಿಯ ಅಕ್ವೇರಿಯಂ ನ ನೋಡ್ತಾ ಇದ್ವಿ. ಇದೀಗ ನಮ್ಮ ಬೆಂಗಳೂರಿಗೆ ಸಹ ಈ ರೀತಿಯ ಅಕ್ವೇರಿಯಂ ಬರ್ತಾ ಇದೆ. ಇಲಾಖೆಯ ಯೋಜನೆಗೆ ಬೆಂಗಳೂರು ಮೂಲದ ಏಜೆನ್ಸಿ ಒಂದು ನವೀಕರಣಕ್ಕೆ ಕೈ ಜೋಡಿಸಿದೆ. ಈ ಕಾರ್ಯಕ್ಕೆ ಜುಲೈ 4 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಂಖ ಸ್ಥಾಪನೆ ನೆರವೇರಿಸಿದರು. ಬೆಂಗಳೂರಿನ ಆಕರ್ಷಣೆ ಆಗಿರುವ ಕಬ್ಬನ್ ಪಾರ್ಕ್ ಗೆ ನಿತ್ಯ ಸಾವಿರಾರು ಮಂದಿ ಆಗಮಿಸುತ್ತಾರೆ. ಮಹಿಳೆಯರು ವಿದ್ಯಾರ್ಥಿಗಳು ಮಕ್ಕಳು ಸೇರಿದಂತೆ ಸಾರ್ವಜನಿಕರು ಭೇಟಿ ನೀಡುತ್ತಾರೆ.

 

ಈ ಮುಖಾಂತರ ಈ ಉದ್ಯಾನಕ್ಕೆ ವಾರ್ಷಿಕವಾಗಿ 12ಲಕ್ಷ ಆದಾಯ ಇದೆ. ಇದೀಗ ಅಕ್ವೇರಿಯಂ ಕೂಡ ನವೀಕರಣ ಆದ್ರೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಕಬ್ಬನ್ ಪಾರ್ಕ್ ಸಜ್ಜಾದಂತೆ ಆಗುತ್ತೆ. ಇನ್ನ ಈ ಅಕ್ವೇರಿಯಂ ಗೆ ಆಧುನಿಕ ಸ್ಪರ್ಶ ನೀಡಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭ ಆಗಿದೆ. ಈ ಪ್ರಕ್ರಿಯೆಯಲ್ಲಿ ಬೋಲೋ ಆಕ್ವಾ ಸ್ಟೇಡಿಯಂ ಅಂತಹ ಬೆಂಗಳೂರಿನ ಖಾಸಗಿ ಸಂಸ್ಥೆ ಟೆಂಡರ್ ಕೋಗಿಕೊಂಡಿದೆ. ಒಟ್ಟು 15 ಕೋಟಿ ರೂಪಾಯಿಯಲ್ಲಿ ಈ ಅಕ್ವೇರಿಯಂ ನ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 60 ಸಾವಿರ ಲೀಟರ್ ಸಮುದ್ರದ ನೀರನ್ನು ಹೊಂದಿರುವ ಅಕ್ವೇರಿಯಂ ನಲ್ಲಿ 30 ಕ್ಕೋ ಹೆಚ್ಚು ಬಗೆಯ ವಿಶೇಷವಾದ ಆಕ್ವಾ ಪ್ರಾಣಿಗಳು ಇರಲಿವೆ. ಒಟ್ಟು 24 ಅಡಿ ಉದ್ದದ 10 ಅಡಿ ಅಗಲ ಮತ್ತು 15 ಅಡಿ ಎತ್ತರದ ಅಕ್ವೇರಿಯಂ ಇದಾಗುತ್ತೆ. ಸಿಂಗಾಪುರ ದುಬೈ ಚೀನಾ ಹೊರತು ಪಡಿಸಿದರೆ ಇಂತಹ ಸುರಂಗ ಭಾರತದ ಗುಜರಾತ್ ನಲ್ಲಿದೆ. ಬಿಟ್ರೆ ಕರ್ನಾಟಕದಲ್ಲಿ ಮೊದಲ ಬಾರಿ ಇಂತಹ ಅಕ್ವೇರಿಯಂ ನಿರ್ಮಾಣ ಆಗುತ್ತೆ.

ಸುದ್ದಿ