ಇಂಡಿಯಾ ಇಂಗ್ಲೆಂಡ್ ಸರಣಿ ಪಂದ್ಯದಲ್ಲಿ ಕ್ಯಾಪ್ ಹಾಗೂ ಗಾಗಲ್ ನಲ್ಲಿ ಕ್ಯಾಮೆರಾ ಅಳವಡಿಸುವ ವಿಶೇಷ ಪ್ರಯೋಗ..!!!

ನೆನ್ನೆ ಮಧ್ಯಾನ ಮೂರು ಗಂಟೆಗೆ ಇಂಡಿಯಾ ವರ್ಸಸ್ ಇಂಗ್ಲೆಂಡ್ ಟೆಸ್ಟ್ ಪಂದ್ಯ ನಡೀತು. ಕಳೆದ ವರ್ಷವೇ ನಡೆಯಬೇಕಿದ್ದ ಈ ಪಂದ್ಯ ಕೊವಿಡ್ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ರೋಹಿತ್ ಶರ್ಮಾ ರ ಅನುಪ ಸ್ಥಿತಿಯಲ್ಲಿ ಬುಂಬ್ರ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ನ ಎದುರಿಸಿತು. ಇನ್ನ ಕ್ರಿಕೆಟ್ ಇತಿಹಾಸದಲ್ಲೇ ಮೊದಲಿಗೆ ಒಂದು ವಿಶೇಷವಾದ ಪ್ರಯೋಗ ಈ ಪಂದ್ಯದ ಮುಖಾಂತರ ನಡೀತು. ಈಗಾಗಲೇ ಈ ಪ್ರಯೋಗಕ್ಕೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹಾಗೂ ಐಪಿಲ್ ಬಿಐಸಿಸಿ ಒಪ್ಪಿಗೆಯನ್ನು ಸೂಚಿಸಿದೆ. ಅದೇನಪ್ಪಾ ಅಂದ್ರೆ ಇತಿಹಾಸದಲ್ಲೇ ಇದೆ ಮೊದಲನೇ ಬಾರಿಗೆ ಇಂಟರ್ನ್ಯಾಷನಲ್ ಕ್ರಿಕೆಟ್ ಪಂದ್ಯದಲ್ಲಿ ಫೀಲ್ಡರ್ ಗಳು ಕ್ಯಾಮೆರಾ ನ ಧರಿಸಿರುತ್ತಾರೆ. ಹೌದು! ಅಭಿಮಾನಿಗಳಿಗೆ ಕ್ರಿಕೆಟ್ ನ ಅನುಭವಿಸುವುದಕ್ಕೆ ಹೊಸ ಹೊಸ ಆಂಗಲ್ ನ ಆಗಾಗ ತಂತ್ರಜ್ಞಾನ ತರುತ್ತ ಇರುತ್ತೆ.

 

ಸ್ಟಂಪ್ ಕ್ಯಾಮೆರಾ, ಹಿಡನ್ ಕ್ಯಾಮೆರಾಗಳ ನಂತರ ಈಗ ಫೀಲ್ಡರ್ ಗಳ ಕ್ಯಾಪ್ ಅಥವಾ ಕನ್ನಡಕದಲ್ಲಿ ಕೂಡ ಕ್ಯಾಮರನ ಫಿಟ್ ಮಾಡ್ಬೇಕು ಅಂತ ಇ ಸಿ ಬೀ ತೀರ್ಮಾನ ಮಾಡಿದೆ. ಇಂಗ್ಲೆಂಡ್ ಅಲ್ಲಿ ಈ ಪಂದ್ಯವನ್ನು ಸ್ಕೈ ಸ್ಪೋರ್ಟ್ಸ್ ಟೇಲಿಕ್ಯಾಸ್ಟ್ ಮಾಡಿದ್ದು, ಅವರು ಈ ವಿನೂತನ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ. ಅಷ್ಟಕ್ಕೂ ಈ ಪಂದ್ಯದಲ್ಲಿ ಇಂಗ್ಲೆಂಡ್ ನ ಒಲಿಪೋರ್ ಈ ಕ್ಯಾಮೆರಾ ನ ಧರಿಸಿದ್ದರು. ಇದರಿಂದಾಗಿ ಅಭಿಮಾನಿಗಳಿಗೆ. ಇಂದೆಂದೋ ನೋಡಿರದ ವಿಶೇಷವಾದ ಆಂಗಲ್ ಅಲ್ಲಿ ಕ್ರಿಕೆಟ್ ನ ವೀಕ್ಷಿಸಬಹುದು. ಫೀಲ್ಡರ್ ಗಳಿಗೆ ಬಾಲ್ ಬಂದಿರುವಾಗ ಯಾವ ರೀತಿ ಅನುಭವ ಆಗುತ್ತೆ ಅನ್ನುವುದು ಈಗ ವೀಕ್ಷಕರಿಗೆ ಸಹ ಕ್ಲೀನ್ ಆಗಿ ಗೊತ್ತಾಗಲಿದೆ.

 

ಇನ್ನ ಈ ವಿಷಯ ಆಚೆ ಬರುತ್ತಿದ್ದ ಹಾಗೆ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಇದನ್ನು ನೋಡಲು ನಾವು ತುಂಬಾ ಕಾತರ ಆಗಿದ್ದಿವಿ ಅಂತ ಚರ್ಚೆ ಶುರು ಮಾಡ್ತಾ ಇದಾರೆ. ಘಟಾನುಘಟಿ ಆಟಗಾರರು ಟೀಮ್ ಇಂಡಿಯಾ ದಿಂದ ಆಚೆ ಉಳಿದಿರುವುದು ದೊಡ್ಡ ತಲೆನೋವು ಆಗಿದೆ. ಮತ್ತೊಂದು ಕಡೆ ಇಂಗ್ಲೆಂಡ್ ನ್ಯೂಜಿಲೆಂಡ್ ನ ಈಗಷ್ಟೇ 30 ಅಂತರದಿಂದ ಬಹಳ ಹೀನಾಯವಾಗಿ ಸೋಲಿಸಿ ತುಂಬಾನೇ ಕನ್ಪೈಡನ್ಸ್ ಬಂದಿದೆ. ಇನ್ನೂ ಈಗಾಗಲೇ ಈ ಸರಣಿಯಲ್ಲಿ ಇಂಡಿಯಾ 2,1 ಅಂತರದಲ್ಲಿ ಮುನ್ನಡೆದು ಬರ್ತಿದೆ. ಈ ಮ್ಯಾಚ್ ನ ಡ್ರಾ ಮಾಡಿಕೊಂಡರೂ ಸರಣಿಯನ್ನು ಟೀಮ್ ಇಂಡಿಯಾ ಗೆದ್ದ ಹಾಗೆಯೇ ಆಗುತ್ತೆ.

Leave a comment

Your email address will not be published. Required fields are marked *