ನಮಸ್ತೆ ಪ್ರಿಯ ಓದುಗರೇ, ಚಿಕ್ಕ ಪುಟ್ಟ ಸಮಸ್ಯೆಗಳಿಗೆ ತಂದೆ ತಾಯಿ ಬೇರೆ ಆಗ್ತಾರೆ ಆದ್ರೆ ಅವರಿಬ್ಬರೂ ಅವರ ಮಕ್ಕಳ ಬಗ್ಗೆ ಯೋಚನೆ ಮಾಡೋದೇ ಇಲ್ಲ. ಮಕ್ಕಳ ಮೇಲೆ ಬೀರುವಂತಹ ಪರಿಣಾಮ ಮಾನಸಿಕವಾಗಿ ಅವರು ಡಿಸ್ಟರ್ಬ್ ಆಗುವಂಥ ರೀತಿ ಅವರ ಭವಿಷ್ಯ ಇದರ ಯಾವುದರ ಬಗ್ಗೆಯೋ ಅವರ ಅಪ್ಪ ಅಮ್ಮ ಆ ಕ್ಷಣಕ್ಕೆ ಯೋಚನೆ ಮಾಡೋದಿಲ್ಲ. ಇದು ಮಕ್ಕಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಮಕ್ಕಳು ಹಾದಿ ತಪ್ಪಲು ಕೂಡ ಎಷ್ಟೋ ಸಂದರ್ಭದಲ್ಲಿ ಕಾರಣ ಆಗುತ್ತೆ. ಅಂಥದ್ದೇ ಒಂದು ಸ್ಟೋರಿ ನ ಇಂದಿನ ಲೇಖನದಲ್ಲಿ ನೋಡೋಣ. ಬೇರೆ ಯಾರದ್ದೋ ಅಲ್ಲ. ಖ್ಯಾತ ನಟಿಯಾದ ಶೃತಿ ಹಾಸನ್. ಹೌದಾ ಹಾಗಾದ್ರೆ ಶೃತಿ ಹಾಸನ್ ದಾರಿ ತಪ್ಪಿದ್ರ? ಅವರ ಬದುಕಿನಲ್ಲಿ ಏನಾಯ್ತು? ಅದೆಲ್ಲವನ್ನೂ ತಿಳಿಯೋಣ. ಶೃತಿ ಹಾಸನ್ ನಮಗೆಲ್ಲ ಗೊತ್ತಿರುವ ಹಾಗೆ ಖ್ಯಾತ ನಟ ಕಮಲ್ ಹಾಸನ್ ಪತ್ನಿ ಸಾರಿಕಾ ಅವರ ಮಗಳು. ಸಾರಿಕಾ ಶೃತಿ ಹಾಸನ್ ಗೆ 18 ವರ್ಷ ಇರುವಾಗ ಬೇರೆ ಬೇರೆ ಆಗ್ತಾರೆ.
ಕಮಲ್ ಹಾಸನ್ ಹಾಗೂ ಸಾರಿಕಾ ಮದುವೆ ಆಗುವ 2 ವರ್ಷ ಮುಂಚೆಯೇ ಶೃತಿ ಹಾಸನ್ ಹುಟ್ಟಿದ್ರು. ಶೃತಿ ಹಾಸನ್ ಹುಟ್ಟಿ 2 ವರ್ಷಗಳ ನಂತರ ಕಮಲ್ ಹಾಸನ್ ಸಾರಿಕಾ ಮದುವೆ ಆಗ್ತಾರೆ. ನಂತರ ಶೃತಿ ಹಾಸನ್ ಗೆ 18 ವರ್ಷ ಇರುವಾಗ ಕಮಲ್ ಹಾಸನ್ ಸಾರಿಕಾ ಬೇರೆ ಬೇರೆ ಆಗ್ತಾರೆ. ಇದು ಶೃತಿ ಹಾಸನ್ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಇನ್ನೂ ಅವರ ಸಿನೆಮಾ ಕೆರಿಯರ್ ಬಗ್ಗೆ ಹೇಳುವುದಾದರೆ ಅವರು ಹೇ ರಾಮ್ ಎನ್ನುವ ಸಿನೆಮಾದಲ್ಲಿ 2000 ಇಸವಿಯಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ಕಾಣಿಸಿಕೊಳ್ಳುತ್ತಾರೆ. 2008 ತಳ್ಳಿ ಲಕ್ ಎನ್ನುವ ಹಿಂದಿ ಸಿನಿಮಾದಿಂದ ದೆಬ್ಯು ಮಾಡ್ತಾರೆ. ನಂತರ ತೆಲುಗು ತಮಿಳು ಚಿತ್ರರಂಗದಲ್ಲಿ ಸಹ ಸಿನೆಮಾ ಮಾಡುತ್ತಾ, ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದ್ರೆ ವೈಯಕ್ತಿಕ ಬದುಕಿನಲ್ಲಿ ನಾನಾ ಬಗೆಯ ಕಷ್ಟಗಳನ್ನು ಅನುಭವಿಸಬೇಕಾಯಿತು. ಮೊದಲು ಅವರ ತಂದೆಯ ಪ್ರೀತಿಯಿಂದ ವಂಚಿತ ಆಗುತ್ತಾರೆ, ಈ ಕಾರಣಕ್ಕಾಗಿ ಅವರ ಮನಸು ಪ್ರೀತಿಯನ್ನು ಹುಡುಕಿಕೊಂಡು ಹೋಗ್ತಾ ಇತ್ತು. ಈ ಕಾರಣದಿಂದ ಸಾಲು ಸಾಲು ರಿಲೇಶನ್ ಶಿಪ್ ಮೂಲಕ ಸುದ್ದಿ ಆದ್ರೂ. ಮೋದನೆಯದಾಗಿ ಶೃತಿ ಹಾಸನ್ ಸಿದ್ದಾರ್ಥ್ ಸಂಬಂಧ ಸುದೀರ್ಘವಾದ ಹಂತದ ವರೆಗೆ ಹೋಗಿ ಮದುವೆ ಆಗ್ತಾರೆ ಎಂಬ ಮಾತು ಕೂಡ ಇತ್ತು. ಆ ನಂತರ ಶೃತಿ ಹಾಸನ್ ಹಾಗೂ ಧನುಷ್. ನಾಗಾಚೈತನ್ಯ ಹಾಗೂ ಶೃತಿ ಹಾಸನ್ ನಡುವಿನ ಸಂಬಂಧ, ರಣಬೀರ್ ಕಪೂರ್ ಶೃತಿ ಹಾಸನ್ ರೂಮಾರ್ಸ್ ಕೂಡ ಹರಿದಾಡಿತ್ತು. ಬೇರೆ ಭಾಷೆಯ ನಟನ ಜೊತೆ ಸುದೀರ್ಘವಾದ ರಿಲೇಶನ್ ಶಿಪ್ ಇತ್ತು. ಅದು ಕೂಡ ಬ್ರೇಕಪ್ ಆಗುತ್ತೆ. ಹೀಗೆ ಹಲವಾರು ಸುದ್ದಿಗಳು ಹರಿದಾಡಿದವು.
ಈಗ ಅವರಿಗೆ ವಯಸ್ಸು 36 ಇನ್ನೂ ಮದುವೆ ಆಗುವ ಬಗ್ಗೆ ಯೋಚನೆ ಮಾಡಿಲ್ಲ. ನನಗೆ ಪ್ರೀತಿ ಪ್ರೇಮ ಓಕೆ ಬಟ್ ಮದುವೆ ಅಂದ್ರೆ ನನಗೆ ಭಯ ಆಗುತ್ತೆ, ನನ್ನ ತಂದೆಯ ಬದುಕನ್ನು ನೋಡಿದ್ರೆ ಭಯ ಆಗುತ್ತೆ ಅಂತ ಒಮ್ಮೆ ಅವರೇ ಹೇಳಿಕೊಂಡಿದ್ದಾರೆ. ಇದೆಲ್ಲ ಒಂದು ಕಡೆ ಆದ್ರೆ ಶೃತಿ ಹಾಸನ್ ಅವರ ಬದುಕನ್ನು ತುಂಬಾ ತೊಂದರೆಗೆ ಈಡು ಮಾಡಿದ್ದು ಕುಡಿತದ ಚಟ. ಸ್ವತಃ ಶೃತಿ ಹಾಸನ್ 2019 ರಲ್ಲಿ ಒಂದು ಸಂದರ್ಶನದಲ್ಲಿ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಂಡಿದ್ದು, ಒಂದು ಕಡೆ ನನ್ನ ಅಪ್ಪ ಅಮ್ಮ ದೂರ ಆಗಿದ್ದು , ನನ್ನ ಸಾಕು ಸಾಕು ಅಫೇರ್ ಗಳು ಬ್ರೆಕಪ್ ಗಳು ಇವೆಲ್ಲವುಗಳಿಂದ ನಾನು ವಿಪರೀತ ಕುಡಿತಕ್ಕೆ ದಾಸಲಾಗಿಬ್ಬಿಟ್ಟೆ. ರಾತ್ರಿ ಪೂರ್ತಿ ಕುಡಿತಾ ಇದ್ದೆ, ಇದರ ಪರಿಣಾಮ ಮುಂದಿನ ದಿನ ಏಳಲು ಸಾಧ್ಯವಾಗದೆ ಇಡೀ ದಿನ ಮಲಗೆ ಇರುತ್ತಿದ್ದೆ. ಒಂದು ದಿನ ಮಧ್ಯ ಇಲ್ಲ ಅಂದ್ರೆ ಅವರಿಗೆ ಆಗ್ತಾನೆ ಇರಲಿಲ್ಲ. ಅಷ್ಟರ ಮಟ್ಟಿಗೆ ಅವರು ಸಂಪೂರ್ಣವಾಗಿ ಕುಡಿತಕ್ಕೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಇದು ಎಲ್ಲಿಯವರೆಗೆ ಹೋಗಿತ್ತು ಅಂದ್ರೆ ಶೃತಿ ಹಾಸನ್ ಅವರ ಸಿನೆಮಾ ಬದುಕನ್ನೇ ಹಾಳು ಮಾಡಿಬಿಡುತ್ತದೆ. ಒಂದು ಹಂತಕ್ಕೆ ಅವರಿಗೆ ಸಿನೆಮಾ ಅವಕಾಶಗಳೂ ಕಂಪ್ಲೀಟ್ ಆಗಿ ಕಡಿಮೆ ಆಗಿಬಿಡುತ್ತೆ. ಹೀಗಾಗಿ ಅವರು ಶೂಟಿಂಗ್ ಸ್ಪಾಟ್ ಗೆ ಸರಿಯಾದ ಸಮಯಕ್ಕೆ ಹೋಗುತ್ತಾ ಇರಲಿಲ್ಲ. ಕೆಲವೊಂದಿಷ್ಟು ಜನ ಹೇಳುವ ಹಾಗೆ ಅವರ ಹತ್ತಿರ ಹೋಗುವುದಕ್ಕೂ ಸಾಧ್ಯ ಆಗೋದಿಲ್ಲ. ಅವರು ಸ್ನಾನ ಮಾಡದೆ ತುಂಬಾ ಕೊಳಕಾಗಿ, ತುಂಬಾ ಗಬ್ಬು ವಾಸನೆ ಇರ್ತಾರೆ ಹಾಗೆ ಶೂಟಿಂಗ್ ಸ್ಪಾಟ್ ಗೆ ಬರ್ತಾರೆ. ಹೀಗೆ ಏನೇನೋ ಸುದ್ದಿಗಳು ಸ್ಪ್ರೆಡ್ ಆಗಿ ಇವೆಲ್ಲದರ ಪರಿಣಾಮ ಶೃತಿ ಹಾಸನ್ ಗೆ ಅವಕಾಶಗಳು ಧಿಡೀರ್ ಆಗಿ ಕಡಿಮೆ ಆಗಿಬಿಡುತ್ತೆ. ಜೊತೆಗೆ ಈ ಕುಡಿತದ ಚಟದಿಂದ ಶೃತಿ ಹಾಸನ್ ಅರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಕೊನೆಗೆ ಅವರಿಗೆ ಅನಿಸಿ ನನ್ನ ಸಿನೆಮಾ ಬದುಕು ಹಾಳು ಆಗ್ತಾ ಇರೋದು ಈ ಕುಡಿತದ ಚಟ. ಈ ಕಾರಣಕ್ಕಾಗಿ ಕುಡಿತದ ಚಟದಿಂದ ಹೊರಗೆ ಬರಬೇಕು ಎನ್ನುವ ನಿರ್ಧಾರ ತೆಗೆದುಕೊಂಡು ಅದರಿಂದ ಕಂಪ್ಲೀಟ್ ಹೊರಗೆ ಬರ್ತಾರೆ. ನಂತರ ಅವರಿಗೆ ಸ್ಟಾರ್ ನಟರೊಂದಿಗೆ ಅವಕಾಶ ಸಿಗಲಿ ಆರಂಭ ಆಗುತ್ತೆ.