ಅರುಂಧತಿ ನಕ್ಷತ್ರ ಬದಲು ಪುನೀತ್ ಫೋಟೋ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ನಿಜಕ್ಕೂ ಯಾರು ಗೊತ್ತಾ.

ರಾಜರತ್ನ ಪುನೀತ್ ಸಾವನ್ನಪ್ಪಿ ಕೆಲ ತಿಂಗಳುಗಳು ಕಳೆದರೂ ಅಪ್ಪು ಮೇಲಿನ ಅಭಿಮಾನ ಮಾತ್ರ ಕಡಿಮೆ ಆಗಿಲ್ಲ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ವರವ ತನ್ನ ವಿವಾಹದ ದಿನದಂದು ರಾಜರತ್ನ ನಿಗೆ ವಿಭಿನ್ನವಾಗಿ ನಮನ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನೀ ವಾಸತಿ ಆಗಿರುವ ಆನಂದ್ ಪಟ್ಟಣ ಹಾಗೂ ಜ್ಯೋತಿ ಎನ್ನುವ ಯುವಜೋಡಿ ಪುನೀತ್ ಅವರ ನೆನಪಿನಲ್ಲಿ ವಿಶೇಷವಾಗಿ ವಿವಾಹವಾಗಿದ್ದಾರೆ. ರಾಯಭಾಗ ಪಟ್ಟಣದಲ್ಲಿ

 

ಅದ್ದೂರಿಯಾಗಿ ನಡೆದ ವಿವಾಹ ಸಮಾರಂಭ ಸಂಪೂರ್ಣವಾಗಿ ಪುನೀತ್ ಮಯವಾಗಿತ್ತು. ಮದುವೆ ಸಮಾರಂಭ ನಡೆಯುವ ಕಲ್ಯಾಣ ಮಂಟಪ ಪುನೀತ್ ಭಾವಚಿತ್ರ ಗಳಿಂದ ರಾರಾಜಿಸುತ್ತಿತ್ತು. ಮದುವೆ ಸಮಾರಂಭದ ವೇದಿಕೆಯಲ್ಲಿ ಪುನೀತ್ ಭಾವಚಿತ್ರವನ್ನು ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು. ವಿಶೇಷವೆಂದರೆ ಯುವಜೋಡಿಗಳು ಅರುಂಧತಿ ನಕ್ಷತ್ರ ನೋಡುವ ಬದಲು ಪುನೀತ್ ಭಾವಚಿತ್ರವನ್ನು ನವಜೀವನಕ್ಕೆ ಕಾಲಿಟ್ಟಿದೆ. ಹೌದು ಬಹುತೇಕ ಮದುವೆ ಸಮಾರಂಭಗಳಲ್ಲಿ ನವ ವಧುವರರು ಅರುಂಧತಿ ನಕ್ಷತ್ರ ನೋಡುವುದು ವಾಡಿಕೆ.

 

ಆದರೆ ಈ ಜೋಡಿ ಪುನೀತ್ ಭಾವಚಿತ್ರವನ್ನೇ ಅರುಂಧತಿ ನಕ್ಷತ್ರ ಎಂದು ನೋಡಿ ಆಶೀರ್ವಾದ ಪಡೆದರು. ಪುನೀತ್ ಅಪ್ಪಟ ಅಭಿಮಾನಿಯಾಗಿರುವ ಆನಂ ದ್ ಅವರಿಗೆ ತನ್ನ ಸ್ನೇಹಿತರು ಪುರಿ ಭಾವಚಿತ್ರವಿರುವ ಅನೇಕ ಉಡುಗೊರೆಗಳನ್ನು ನೀಡಿ ಸಂತಸಪಟ್ಟರು. ಆನಂದ್ ಪಟ್ಟಣ್ ಅವರ ಸ್ನೇಹಿತರು ಪುನೀತ್ ಅವರ ಹಾಡುಗಳನ್ನು ಹಾಡಿ ಮದುವೆಗೆ ಮತ್ತಷ್ಟು ಕಳೆ ತಂದರು.

Leave a comment

Your email address will not be published. Required fields are marked *