ಅಪ್ಪಿ ತಪ್ಪಿಯೂ ಕೂಡ ಸೇಬು ಹಣ್ಣಿನ ಬೀಜವನ್ನು ತಿನ್ನಬೇಡಿ.. ಏಕೆ ಗೊತ್ತಾ?

ಅಪ್ಪಿ ತಪ್ಪಿಯೂ ಕೂಡ ಸೇಬು ಹಣ್ಣಿನ ಬೀಜವನ್ನು ತಿನ್ನಬೇಡಿ.. ಏಕೆ ಗೊತ್ತಾ?

ನಮಸ್ತೆ ಪ್ರಿಯ ಓದುಗರೇ, ಸೇಬು ಹಣ್ಣಿನ ಬೀಜಗಳನ್ನು ತಿನ್ನಬೇಡಿ. ತಿಂದರೆ ಏನು ಆಗುತ್ತದೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಹಣ್ಣುಗಳು ಯಾರಿಗೆ ಇಷ್ಟ ಇಲ್ಲ ಹೇಳಿ? ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳು ನಮ್ಮ ದೇಹಕ್ಕೆ ಹೆಚ್ಚಿನ ಪ್ರೊಟೀನ್, ವಿಟಮಿನ್ಸ್ ಮತ್ತು ಪೋಷಕಾಂಶಗಳನ್ನು ಒದಗಿಸುತ್ತವೆ. ಅದ್ರಲ್ಲೂ ನಾವು ತಿನ್ನುವಂತಹ ಕೆಲವು ಹಣ್ಣು ಹಂಪಲುಗಳು ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತವೆ ಅಷ್ಟೇ ಅಲ್ಲದೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಹಣ್ಣು ಹಂಪಲು ಗಳು ನಮ್ಮ ದೇಹಕ್ಕೆ ಎಷ್ಟು ಅಗತ್ಯ ಆಗಿರುತ್ತವೆ. ಕೆಲವೊಮ್ಮೆ ನಾವು ವಿವಿಧ ಬಗೆಯ ಹಣ್ಣುಗಳನ್ನು ತಿನ್ನಲು ಬಯಸುತ್ತೇವೆ. ಅವುಗಳಲ್ಲಿ ಒಂದು ಸೇಬು ಹಣ್ಣು. ಈ ಸೇಬು ಹಣ್ಣು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿದ ದೊಡ್ಡವರ ವರೆಗೆ ಎಲ್ಲರೂ ಸೇಬು ಹಣ್ಣನ್ನು ತಿನ್ನಲು ಬಯಸುತ್ತಾರೆ. ಆದರೆ ಇತ್ತೀಚಿನ ವರದಿಗಳ ಪ್ರಕಾರ ತಿಳಿದು ಬರುವುದು ಏನೆಂದರೆ, ದಿನಕ್ಕೆ ಒಂದು ಸೇಬು ಹಣ್ಣು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು. ಆದರೆ ಈ ಸೇಬು ಹಣ್ಣು ತಿನ್ನುವಾಗ ಈ ಒಂದು ಬಹು ಮುಖ್ಯ ಅಂಶವನ್ನು ನೆನಪಲ್ಲಿ ಇಟ್ಟುಕೊಳ್ಳಬೇಕು.

 

ಆ ಒಂದು ಅಂಶ ಯಾವುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಸ್ನೇಹಿತರೆ. ಸೇಬು ಹಣ್ಣು ಸೇವಿಸುವಾಗ ನಾವು ನೆನಪಲ್ಲಿ ಇಟ್ಟುಕೊಳ್ಳಬಹುದು ಆದ ಒಂದು ಅಂಶ ಎಂದರೆ, ಈ ಸೇಬು ಹಣ್ಣಿನ ಬೀಜವನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ದುಷ್ಪರಿಣಾಮ ಬೀರುತ್ತದೆ. ಕೆಲವೊಂದು ಸಂಶೋಧನೆಗಳಲ್ಲಿ ಈಗ ತಿಳಿದು ಬಂದಿದೆ. ಆದರಿಂದ ಸೇಬು ಹಣ್ಣಿನ ಬೀಜವನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ದುಷ್ಪರಿಣಾಮ ಆಗುತ್ತದೆಂದು ತಿಳಿಯೋಣ. ಹಣ್ಣುಗಳಲ್ಲಿ ಪೋಷಕಾಂಶಗಳು, ಜೀವಸತ್ವಗಳು, ವಿಟಮಿನ್ಸ್ ಹೇರಳವಾಗಿ ಇರುತ್ತವೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವೊಂದು ಹಣ್ಣಿನ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹ ಅನಾರೋಗ್ಯಕ್ಕೆ ಈಡಾಗುತ್ತದೆ. ಕೆಲವೊಂದು ಸಂಶೋಧನೆಗಳಲ್ಲಿ ಇದು ತಿಳಿದು ಬಂದಿದೆ. ಏಕೆಂದರೆ ಕೆಲವು ಹಣ್ಣಿನ ಬೀಜಗಳು ಉಪಯೋಗಕ್ಕೆ ಬರುವುದಿಲ್ಲ. ಅದ್ರಲ್ಲಿ ಮುಖ್ಯವಾದದ್ದು ಸೇಬು ಹಣ್ಣಿನ ಬೀಜಗಳು. ನಾವು ಯಾವುದೇ ಕಾರಣಕ್ಕೂ ಸೇವಿಸಬಾರದು. ಒಂದು ವೇಳೆ ತಿನ್ನುವಾಗ ಆ ಬೀಜ ಸಿಕ್ಕಿದರೆ ತಕ್ಷಣ ಅದನ್ನು ತೆಗೆದು ಬಿಸಾಡಬೇಕು.

 

ಸೇಬು ಹಣ್ಣಿನ ಬೀಜಗಳು ಒಂದು ಅಥವಾ ಎರಡು ಅಕಸ್ಮಾತ್ ತಿಂದರೆ ಏನೂ ಆಗುವುದಿಲ್ಲ. ಆದರೆ 5 ಗ್ರಾಂ ಗಿಂತ ಅಧಿಕ ಬೀಜಗಳನ್ನು ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಅನಾರೋಗ್ಯ ಸಮಸ್ಯೆ ಕಾಡುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ. ಏಕೆಂದರೆ ಈ ಬೀಜಗಳಲ್ಲಿ ಅಮೇಡಾಲಿನ್ ಎಂಬ ಪದಾರ್ಥ ಇರುತ್ತದೆ. ಇದು ದೇಹಕ್ಕೆ ಒಳ್ಳಯದಲ್ಲ. ಹಾಗಾಗಿ ಈ ಬೀಜವನ್ನು ಸೇವುಸಕೊಡದು. ನಮಗೆ ಉಸಿರಾಟದ ತಿಂದರೆ ಆಗಬಹುದು ಎಂದು ಸಂಶೋಧನೆಗಳು ತಿಳಿಸಿವೆ. ಅಷ್ಟೇ ಅಲ್ಲದೆ ತಲೆನೋವು, ವಾಂತಿ, ಬಲಹೀನತೆ, ಸುಸ್ತು ಇತ್ಯಾದಿ ಲಕ್ಷಣಗಳು ಕಾಣಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಇದನ್ನು ದೊಡ್ಡವರು ಹಾಗೆ ಮಕ್ಕಳಂತೂ ಇದನ್ನು ಸೆವಿಸಲೆ ಬಾರದು. ಮಕ್ಕಳಿಗೆ ಸೇಬು ಹಣ್ಣು ತಿನ್ನಲು ಕೊಡುವಾಗ ಬೀಜಗಳನ್ನು ತೆಗೆದು ಕೊಡುವುದು ತುಂಬಾ ಮುಖ್ಯ. ಒಂದೆರಡು ಬೀಜಗಳಿಂದ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಬಾಯಿಗೆ ಸಿಕ್ಕ ತಕ್ಷಣ ನೋಡುವುದಕ್ಕೆ ಸುಂದರವಾಗಿದೆ, ಬಾಯಿಗೆ ರುಚಿಯಾಗಿದೆ ಎಂದು ಸೇಬು ಹಣ್ಣುಗಳನ್ನು ಗಮನಿಸದೆ ಅದರ ಬೀಜಗಳನ್ನು ಸೇವಿಸುವುದರಿಂದ ನಾವು ತುಂಬಾ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆರೋಗ್ಯ