ಅಣಬೆಯನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಯಾವ ರೀತಿ ಪೌಷ್ಟಿಕಾಂಶಗಳು ಸಿಗುತ್ತವೆ? ಯಾವೆಲ್ಲ ರೋಗವನ್ನು ಈ ಅಣಬೆ ತಡೆಗಟ್ಟುತ್ತದೆ ಗೊತ್ತಾ?

ಅಣಬೆಯನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಯಾವ ರೀತಿ ಪೌಷ್ಟಿಕಾಂಶಗಳು ಸಿಗುತ್ತವೆ? ಯಾವೆಲ್ಲ ರೋಗವನ್ನು ಈ ಅಣಬೆ ತಡೆಗಟ್ಟುತ್ತದೆ ಗೊತ್ತಾ?

ನಮಸ್ತೆ ಪ್ರಿಯ ಓದುಗರೇ, ಅಣಬೆ ಬಾಯಿಗೆ ರುಚಿ ಮಾತ್ರ ಅಲ್ಲದೇ, ದೇಹಕ್ಕೆ ಅಗತ್ಯ ಇರುವ ಅನೇಕ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಅಣಬೆಯಲ್ಲಿನ ಪ್ರೊಟೀನ್, ವಿಟಮಿನ್, ಮಿನರಲ್ಸ್, ಅಮೈನೋ ಆಸಿಡ್, ಹಾಗೂ ಆಂಟಿ ಬಯೋಟಿಕ್ ಅಂಶಗಳು ಆರೋಗ್ಯಕ್ಕೆ ಪೂರಕವಾಗಿದೆ. ಅಣಬೆಯಲ್ಲಿ ದೇಹಕ್ಕೆ ಅಗತ್ಯವಾದ ಇನ್ನೂ ಹಲವಾರು ಅಂಶಗಳು ಇವೆ. ಈ ಅಣಬೆ ಇಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗ ಇದೆ ಎಂದು ಈ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ. 100 ರಿಂದ 200 ಗ್ರಾಂ ಒಣಗಿದ ಅಣಬೆಗಳಲ್ಲಿ ಒಬ್ಬ ಆರೋಗ್ಯವಂತ ಮನುಷ್ಯನಿಗೆ ಬೇಕಾದಷ್ಟು ಪೌಷ್ಟಿಕಾಂಶ ಈ ಅಣಬೆಯಲ್ಲಿ ಇರುತ್ತದೆ. ಜೊತೆಗೆ ಇದರಲ್ಲಿ ಪೊಟ್ಯಾಸಿಯಂ, ವಿಟಮಿನ್ ಏ ಗಳು ಸಹ ಇರುತ್ತವೆ. ಇನ್ನೂ ಅಣಬೆಗಳಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳು ಲೆಕ್ಕ ಹಾಕಲು ಸಾಧ್ಯವೇ ಇಲ್ಲ.  Ashtara ಮಟ್ಟಿಗೆ ಇವು ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ.

 

ಅಣಬೆಯಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಹಾಗಾಗಿ ಇದು ದೇಹಕ್ಕೆ ಅನಾರೋಗ್ಯ ತರುವ ಅಂಶಗಳ ಮೇಲೆ ಹೋರಾಡುತ್ತದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದ್ದರಿಂದ ಇದನ್ನು ಸೇವಿಸುತ್ತಾ ಇದ್ದರೆ ಆರೋಗ್ಯದಲ್ಲಿ ಉಂಟಾಗುವ ಚಿಕ್ಕ ಪುಟ್ಟ ಸಮಸ್ಯೆಗಳಿಂದ ದೂರ ಇರಬಹುದು. ಮತ್ತು ಮಧುಮೇಹಿಗಳಿಗೆ ಅಣಬೆ ಒಂದು ಉತ್ತಮ ಆಹಾರ ಆಗಿದೆ. ಏಕೆಂದರೆ ಇದರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಇಲ್ಲ. ಆಹಾರದಲ್ಲಿನ ಸಕ್ಕರೆಯ ಅಂಶವನ್ನು ತೆಗೆದು ಹಾಕುತ್ತದೆ. ಅಷ್ಟೇ ಅಲ್ಲದೆ ಅಣಬೆಯಲ್ಲಿ ಕಾರ್ಬೋಹೈಡ್ರೇಟ್ ಅಂಶ ತುಂಬಾ ಕಡಿಮೆ ಇರುತ್ತದೆ. ಆದ ಕಾರಣ ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುವುದಿಲ್ಲ. ಅಧ್ಯಯನದ ಪ್ರಕಾರ ಅಣಬೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮತ್ತು ದೇಹದ ತೂಕವನ್ನು ಕಡಿಮೆ ಮಾಡಲು ಅಣಬೆ ತುಂಬಾ ಸಹಾಯಕಾರಿ. ಇದರಲ್ಲಿ ಮೊದಲೇ ಹೇಳಿದಂತೆ ಕೊಲೆಸ್ಟ್ರಾಲ್ ಅಂಶ ಇರುವುದಿಲ್ಲ. ಇದು ಕೊಬ್ಬು ರಹಿತವಾಗಿ ಇರುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ.

 

ನಾವು ತಿನ್ನುವ ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ ಅಗತ್ಯವಾಗಿದೆ. ಅಣಬೆ ಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ2 ಮತ್ತು ಬಿ3 ಇದ್ದು, ಇದು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ. ಇದರಲ್ಲಿನ ವಿಟಮಿನ್ಸ್ ಗಳು ನಮ್ಮ ದೇಹಕ್ಕೆ ತೀರ ಅಗತ್ಯವಾಗಿರುತ್ತದೆ. ಇನ್ನೂ ನಮ್ಮ ದೇಹ ಸುಗಮವಾಗಿ ಕೆಲ್ಸ ಮಾಡಲು ಅಗತ್ಯವಾದ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಅಣಬೆಗಳು ಅಗತ್ಯ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಅಣಬೆಯನ್ನು ನಿಯಮಿತವಾಗಿ ಸೇವನೆ ಮಾಡಿ ಆರೋಗ್ಯದಿಂದ ಇರಿ. ನೋಡಿದ್ರಲ್ವ ಸ್ನೇಹಿತರೆ, ಒಂದು ಚಿಕ್ಕ ಅಣಬೆ ನಮ್ಮ ದೇಹಕ್ಕೆ ಯಾವೆಲ್ಲ ಲಾಭಗಳನ್ನು ತಂದು ಕೊಡುತ್ತದೆ ಎಂದು. ಹಾಗಾದರೆ ಇಂದಿನಿಂದಲೇ ಅಣಬೆಯನ್ನು ನಿಮ್ಮ ನಿತ್ಯದ ಅಡುಗೆಯಲ್ಲಿ ಬಳಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆರೋಗ್ಯ