ಭೂತಬಾಧೆ ಮತ್ತು ಮಾಟಮಂತ್ರ ಸಮಸ್ಯೆಗಳಿಗೆ ಈ ದೇವನಲ್ಲಿದೆ ಶಾಶ್ವತ ಪರಿಹಾರ..!!!

ಭೂತಬಾಧೆ ಮತ್ತು ಮಾಟಮಂತ್ರ ಸಮಸ್ಯೆಗಳಿಗೆ ಈ ದೇವನಲ್ಲಿದೆ ಶಾಶ್ವತ ಪರಿಹಾರ..!!!

ನಮಸ್ತೆ ಪ್ರಿಯ ಓದುಗರೇ, ಶನಿವಾರ ಬಂತು ಅಂದ್ರೆ ಸಾಕು ಆಂಜನೇಯ ಸ್ವಾಮಿಯ ಗುಡಿಗಳಿಗೆ ಹೆಚ್ಚಿನ ಜನರು ಹೋಗಿ ಅಂಜನಿ ಪುತ್ರನನ್ನು ದರ್ಶನ ಮಾಡಿ ಬರುತ್ತಾರೆ. ಅದ್ರಲ್ಲೂ ಶ್ರೀರಾಮ ಚಂದ್ರನಿಂದ ಚಿರಂಜೀವಿ ಆಗಿ ಭೂಮಿ ಮೇಲೆ ನೆಲೆಸು ಎಂದು ವರವನ್ನು ಪಡೆದಿರುವ ಈ ಸ್ವಾಮಿಯನ್ನು ನಂಬಿದರೆ ಬಂದ ಕಷ್ಟಗಳು ಎಲ್ಲವೂ ಮಂಜಿನಂತೆ ಕರಗಿ ಹೋಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಸರ್ವ ಸಂಕಷ್ಟಗಳನ್ನು ನೀಗಿಸುವ ಆಂಜನೇಯ ಸ್ವಾಮಿಯ ಪುಣ್ಯ ಕ್ಷೇತ್ರವನ್ನು ದರ್ಶನ ಮಾಡಿ ಹನುಮಂತನ ಕೃಪೆಗೆ ಪಾತ್ರರಾಗೋಣ. ಕೊರವೇಶ, ಕೋರ್ವೇಶ, ಕೊರವೇಶ್ವರ, ಕೊರವಾರೇಶ ಎಂಬ ನಾಮಗಳಿಂದ ಕ್ಯಾತವಾಗಿರುವ ಆಂಜನೇಯ ಸ್ವಾಮಿಯು ಈ ಕ್ಷೇತ್ರದಲ್ಲಿ ವೀರ ಭಂಗಿಯಲ್ಲಿ ಅಭಯ ಹಸ್ತವನ್ನು ಹಿಡಿದು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ.

 

ಸಾಲಿಗ್ರಾಮ ಶಿಲೆಯಲ್ಲಿ ಇರುವ ಇಲ್ಲಿನ ಹನುಮಪ್ಪನ ವಿಗ್ರಹವು 5 ಅಡಿ ಎತ್ತರವಿದ್ದು ಸ್ವಾಮಿಯ ಕಪ್ಪು ವರ್ಣದ ವಿಗ್ರಹವನ್ನು ವ್ಯಾಸ ರಾಯರು ಇಲ್ಲಿ ಪ್ರತಿಷ್ಠಾಪಿಸಿದರು ಎಂದು ಐತಿಹ್ಯ ಇದೆ. ಸುಮಾರು 400 ವರ್ಷಗಳಷ್ಟು ಪುರಾತನವಾದ ಈ ದೇಗುಲವು ಗೋಪುರ ಪ್ರದಕ್ಷಿಣಾ ಪಥ ಗರ್ಭ ಗೃಹ ಭೋಜನ ಶಾಲೆಯನ್ನು ಒಳಗೊಂಡಿದೆ. ಇಲ್ಲಿನ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಮನದಲ್ಲಿ ನೆನೆದರೆ ಸಾಕು ಮನದ ಕ್ಲೇಶಗಳು ಎಲ್ಲವೂ ದೂರವಾಗುತ್ತದೆ. ಅಲ್ಲದೆ ಈ ದೇಗುಲಕ್ಕೆ ಬಂದು ಆಂಜನೇಯನ ಮುಂದೆ ನಿಂತು ಭಕ್ತಿಯಿಂದ ಸ್ವಾಮಿ ನಿನಗೆ ತೆಂಗಿನ ಕಾಯಿ ಕಟ್ಟುತ್ತೇವೆ ನಮ್ಮ ಕಷ್ಟ್ಗಳನ್ನು ದೂರ ಮಾಡು ಎಂದು ಕೇಳಿಕೊಂಡು ಸ್ವಾಮಿಗೆ ಹರಕೆ ಮಾಡಿಕೊಂಡರೆ ಕಷ್ಟಗಳು ಎಲ್ಲವೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಸಂತಾನ ಸಮಸ್ಯೆ, ಬರಗಾಲದ ಸಮಸ್ಯೆ, ವಾಕ್ ಸಿದ್ಧಿ, ಕಳ್ಳತನದ ಸಮಸ್ಯೆ,ಅನಾರೋಗ್ಯ ಭೂತ ಬಾಧೆ, ಮಾಟಮಂತ್ರ ಸಮಸ್ಯೆ, ಸಿಡಿಲಿನ ಭಯ, ಆತಂಕ ನಿವಾರಣೆ ಹೇಗೆ ಎಲ್ಲ ಬಗೆಯ ಸಮಸ್ಯೆಗಳಿಗೆ ಈ ದೇವನಲ್ಲಿ ಪರಿಹಾರ ಇದೆ.

 

ಸ್ವಚ್ಛ ಸಂಕಲ್ಪದಿಂದ, ಪಾವಿತ್ರ್ಯತೆ ಇಂದ ಈ ದೇವನಿಗೆ ಹರಸಿಕೊಂಡರೆ ಮನದ ಅಭಿಷ್ಟೆಗಳು ನೆರವೇರುತ್ತದೆ ಎನ್ನುವುದು ಈ ಮುಖ್ಯ ಪ್ರಾಣ ದೇವರನ್ನು ನಂಬುವ ಭಕ್ತರ ಅಚಲವಾದ ನಂಬಿಕೆ ಆಗಿದೆ. ಶನಿವಾರದಂದು ಇಲ್ಲಿನ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಶ್ರಾವಣ ಶನಿವಾರದ ಪೂಜೆ, ಹನುಮ ಜಯಂತಿ, ಕಾರ್ತಿಕೋತ್ಸವ, ಯುಗಾದಿ, ವಾದಿರಾಯರ ಆರಾಧನೆಯನ್ನು ಪ್ರತಿವರ್ಷ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನಿತ್ಯ ತ್ರಿಕಾಲ ಪೂಜೆಗೊಳ್ಳುವ ಈ ಆಂಜನೇಯ ಸ್ವಾಮಿಯನ್ನು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ದರ್ಶನ ಮಾಡಬಹುದು. ಭಕ್ತರು ಅಲಂಕಾರ ಸೇವೆ, ತುಳಸಿ ಅರ್ಚನೆ, ಸಿಂಧೂರ ಲೇಪನ ಸೇವೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಭಕ್ತರು ಬೇಡಿದ ವರಗಳನ್ನು ತಡ ಮಾಡದೆ ಕೊಡುವ ಈ ಆಂಜನೇಯ ಸ್ವಾಮಿಯ ದೇಗುಲವು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೊರವಾರ ಎಂಬ ಪುಟ್ಟ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆಯಿರಿ. ಶುಭದಿನ

ಉಪಯುಕ್ತ ಮಾಹಿತಿಗಳು