ಪ್ರೆಗ್ನೆಂಟ್ ಆಗಿದ್ದು ಆಲಿಯಾ, ಟ್ರೊಲ್ ಆಗಿದ್ದು ದೀಪಿಕಾ! ಆಲಿಯಾ ಗರ್ಭಿಣಿ ಆದ್ರೆ ದೀಪಿಕಾ ಪಡುಕೋಣೆನಾ ಯಾಕ್ರೋ ಟ್ರೊಲ್ ಮಾಡ್ತೀರಾ..?

ಪ್ರೆಗ್ನೆಂಟ್ ಆಗಿದ್ದು ಆಲಿಯಾ, ಟ್ರೊಲ್ ಆಗಿದ್ದು ದೀಪಿಕಾ! ಆಲಿಯಾ ಗರ್ಭಿಣಿ ಆದ್ರೆ ದೀಪಿಕಾ ಪಡುಕೋಣೆನಾ ಯಾಕ್ರೋ ಟ್ರೊಲ್ ಮಾಡ್ತೀರಾ..?

ನಮಸ್ತೆ ಪ್ರಿಯ ಓದುಗರೇ, ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಜೋಡಿ ತಾವು ಪೋಷಕರು ಆಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದು, ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಆದ್ರೆ ಆಲಿಯಾ ಗರ್ಭಿಣಿ ಆಗಿರುವುದು ತಿಳಿಯುತ್ತಾ ಇದ್ದಂತೆ ಅಭಿಮಾನಿಗಳು ನಟಿ ದೀಪಿಕಾ ಪಡುಕೋಣೆ ಯನ್ನು ಟ್ರೊಲ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಧ್ಯ ದೀಪಿಕಾ ಟ್ರೆಂಡಿಂಗ್ ಅಲ್ಲಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಮಾಡುವುದಲ್ಲದೆ, ವಿಚಿತ್ರ ರೀತಿಯ ಫೋಟೋಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ. ಹೌದು! ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮದುವೆ ಆಗು ಕೇವಲ ಎರಡು ತಿಂಗಳು ಆಗಿದೆ.

 

ತುಂಬಾ ಬೇಗ ಈ ಜೋಡಿ ಗುಡ್ ನ್ಯೂಸ್ ಕೊಟ್ಟಿದೆ. ಆದ್ರೆ ದೀಪಿಕಾ ಹಾಗೂ ರಣ್ವೀರ್ ಸಿಂಗ್ ಮದುವೆಯಾಗಿ 3 ವರ್ಷಗಳೇ ಆಗಿ ಹೋಯ್ತು. ಆದ್ರೆ ಇನ್ನೂ ಮಕ್ಕಳಾಗಿಲ್ಲ. ಹಾಗಾಗಿ ನಿಮ್ದು ಯಾವಾಗ ಎಂದು ಅಭಿಮಾನಿಗಳು ಕೇಳುತ್ತಾ ಇದ್ದು, ಜೊತೆಗೆ ನೆಟ್ಟಿಗರು ಟ್ರೊಲ್ ಕೂಡ ಮಾಡ್ತಾ ಇದ್ದರೆ. ದೀಪಿಕಾ ಪಡುಕೋಣೆ ಹಾಗೂ ರಣ್ ವೀರ್ ಸಿಂಗ್ ಮಕ್ಕಳ ವಿಚಾರದಲ್ಲಿ ಟ್ರೊಲ್ ಆಗಿರುವುದು ಇದೇ ಫಸ್ಟ್ ಅಲ್ಲ. ಈ ಮೊದಲು ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೋಹ್ಲಿ ಪೋಷಕರು ಆಗ್ತಾ ಇರೋ ಸುದ್ಧಿ ತಿಳಿದು, ಅಭಿಮಾನಿಗಳು ಆ ಸಮಯದಲ್ಲಿ ಸಹ ದೀಪಿಕಾ ಪಡುಕೋಣೆ ಯನ್ನ ಟ್ರೊಲ್ ಮಾಡಿದರೂ.

 

ಕೆಲವರು ಅಂತೂ ದೀಪಿಕಾ ಪಡುಕೋಣೆ ಗರ್ಭಿಣಿ ಅನ್ನೋ ಸುದ್ದಿಯನ್ನೇ ಹರಡೀಬಿಟ್ಟಿದ್ದರು. ಹಾಗೇ ಸೋನಮ್ ಕಪೂರ್ ಗರ್ಭಿಣಿ ಆದಾಗ ಪ್ರಿಯಾಂಕ ಚೋಪ್ರಾ ತಾಯಿಯಾದ ವಿಚಾರ ತಿಳಿದ ಮೇಲೆ ಕೂಡ ದೀಪಿಕಾ ಪಡುಕೋಣೆ ನ ಜನರು ಟ್ರೊಲ್ ಮಾಡಿದ್ರು. ಈಗಂತೂ ರಣಬೀರ್ ಹಾಗೂ ಆಲಿಯಾ ಭಟ್ ಕಾರಣಕ್ಕೆ ಜನ ದೀಪಿಕಾ ಪಡುಕೋಣೆ ನ ಹೆಚ್ಚಾಗಿ ಕಾಲು ಎಳಿತಿದಾರೆ. ದೀಪಿಕಾ ಹಾಗೂ ರಣಬೀರ್ ಕಪೂರ್ ಒಂದು ಕಾಲದಲ್ಲಿ ಪ್ರೀತಿ ಮಾಡ್ತಾ ಇದ್ರು. ಕೆಲವು ಕಾರಣಗಳಿಂದ ದೂರ ಆಗಿದ್ರು. ಹೀಗಾಗಿ ಈಗ ಮತ್ತೆ ಟ್ರೊಲ್ ಮಾಡ್ತಿದ್ದಾರೆ. ಆಲಿಯಾ ಭಟ್ ತಾವು ಗರ್ಭಿಣಿ ಅನ್ನುವುದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದು, ತಮ್ಮ ಮಗು ಸಧ್ಯದಲ್ಲಿ ಬರಲಿದೆ ಅಂತ ಸ್ಕಾನಿಂಗ್ ಮಾಡ್ತಾ ಇರೋ ಫೋಟೋ ಶೇರ್ ಮಾಡಿದ್ದಾರೆ. ಇದು ಆಲಿಯಾ ಹಾಗೂ ರಣಬೀರ್ ಅಭಿಮಾನಿಗಳಿಗೆ ಸಂತೋಷ ಉಂಟು ಮಾಡಿದ್ದು, ಸಕಥ್ ವಿಶಸ್ ಮಾಡ್ತಾ ಇದ್ದಾರೆ. ಹಾಗೆ ದೀಪಿಕಾ ಜೋಡಿಗೊ ವಿಷ್ ಮಾಡ್ತಿದ್ದಾರೆ.

ಸುದ್ದಿ