ಸ್ನೇಹಿತರೆ ಭಾರತ ದೇಶದಲ್ಲಿ ಪ್ರತಿ ಬಾರಿ ಬಿಸ್ಕೆಟ್ ಹೆಸರು ಹೇಳುವಾಗ ನಮಗೆಲ್ಲರಿಗೂ ನೆನಪಿಗೆ ಬರುವುದೇ ಗೋಲ್ಡನ್ ಬಣ್ಣದ ಪ್ಯಾಕೆಟ್ ನಲ್ಲಿ ಸಿಗುವಂತಹ ಪಾರ್ಲೇಜಿ. ಈ ಬಿಸ್ಕೆಟ್ ಒಂದು ಕಾಲದಲ್ಲಿ ಪೂರ್ತಿ ಭಾರತದಲ್ಲಿ ಬಹಳ ಪ್ರಸಿದ್ಧಿ ಪಡೆದಿತ್ತು. ಇದರ ಪ್ರಾಚೀನತೆ ಎಷ್ಟು ಇತ್ತು ಅಂದ್ರೆ ಎರಡನೇ ವಿಶ್ವ ಯುದ್ಧ ನಡೆಯುತ್ತಿರುವಾಗ ಅಲ್ಲಿನ ಸೈನಿಕರಿಗೆ ಪಾರ್ಲೇಜೀ ಬಿಸ್ಕೆಟ್ ಮೊದಲನೇ ಆಯ್ಕೆ ಆಗಿತ್ತು. ಇದೆ ಕಾರಣ ಇಂದಿನ ಲೇಖನದಲ್ಲಿ ಹೇಗೆ ಪಾರ್ಲೆಜೀ ಬಿಸ್ಕೆಟ್ ಇಷ್ಟು ವಿಶಾಲವಾಗಿ ಬೆಳೆದು ಬಂತು ಅಂದ್ರೆ ಬೇರೆ ಯಾವ ಕಂಪನಿಯು ಇದರ ಹತ್ತಿರಕ್ಕೆ ಬರಲು ಸಾಧ್ಯ ಆಗುತ್ತಿಲ್ಲ ಯಾಕೆ? ಈ ಬಿಸ್ಕೆಟ್ ಕವರ್ ಮೇಲಿರುವ ಈ ಸುಂದರವಾದ ಹುಡುಗಿ ನಿಜವಾಗಲೂ ಯಾರು? ಇಂದು ಈ ಪುಟ್ಟ ಹುಡುಗಿ ಹೇಗಿದ್ದಾಳೆ? ಈ ಎಲ್ಲಾ ಮಾಹಿತಿಗಳನ್ನು ತಿಳಿಯೋಣ. 1929 ರಲ್ಲಿ ಒಬ್ಬ ಸಿಲ್ಕ್ ವ್ಯಾಪಾರಿ ಆಗಿದ್ದ ಮೋಹನ್ ಲಾಲ್ ದಯಾಳ್ ಮುಂಬೈ ನ ವಿಲೇಪಾರ್ಲೆ ನಗರದಲ್ಲಿ ಒಂದು ಪಾಳು ಬಿದ್ದಂತ ಫ್ಯಾಕ್ಟರಿಯ ನ್ನ ಖರೀದಿಸುತ್ತಾರೆ.
ಈ ಫ್ಯಾಕ್ಟರಿಯಲ್ಲಿ ಮಿಠಾಯಿ ಅಂದ್ರೆ ಕ್ಯಾಂಡಿ ರೀತಿಯ ಆಹಾರಗಳನ್ನು ತಾರಿಸುತ್ತಿದ್ದರು. ಮೋಹನ್ ಲಾಲ್ ಸ್ವದೇಶಿ ಆಂದೋಲನದಿಂದ ಪ್ರಭಾವಿತರಾಗಿದ್ದರು. ಇದೆ ಜಾರಣ ಮೋಹನ್ ಲಾಲ್ ಜರ್ಮನಿಗೆ ಹೋದಾಗ ಅಲ್ಲಿ ಮಿಠಾಯಿ ತಯಾರಿಸುವ ಮಿಷನ್ ಗಳನ್ನ ನೋಡಿ 1929 ರಾಲ್ಲಿ ಮಿಠಾಯಿ ತಯಾರಿಸುವ ಮಿಷನ್ ತೆಗೆದುಕೊಂಡು ಭಾರತಕ್ಕೆ ಬರುತ್ತಾರೆ. ಆ ಕಾಲದಲ್ಲಿ ಈ ಮಿಷನ್ ನ ಬೆಲೆ 60,000 ಆಗಿತ್ತು. ಈಗ ಮೋಹನ್ ಲಾಲ್ ಬಳಿ ಮಿಶಿನ್ ಹಾಗೂ ಫ್ಯಾಕ್ಟರಿ ಎರಡೂ ಇತ್ತು. ಇದರ ಜೊತೆಗೆ ಅದೇ ಫ್ಯಾಕ್ಟರಿಯಲ್ಲಿ 12 ಜನರೊಂದಿಗೆ ಕೆಲಸ ಆರಂಭಿಸಿದರು. ಈ 12ಜನ ಬೇರೆ ಯಾರೋ ಅಲ್ಲ. ಮೋಹನ್ ಲಾಲ್ ಕುಟುಂಬಸ್ಥರು ಆಗಿದ್ದರು. ಮೋಹನ್ ಲಾಲ್ ತಮ್ಮ ಕೆಲಸದಲ್ಲಿ ಎಷ್ಟು ಮಗ್ನರಾಗಿದ್ದರು ಅಂದ್ರೆ ತಮ್ಮ ಫ್ಯಾಕ್ಟರಿಗೆ ಹೆಸರು ಇರುವುದನ್ನೇ ಮರೆತಿದ್ದರು. ಹೀಗಾಗಿ ಈ ಫ್ಯಾಕ್ಟರಿ ಇರುವ ಜಾಗದ ಹೆಸರಲ್ಲೇ ಮಾರಾಟ ಆಗುತ್ತಿತ್ತು. ಪಾರ್ಲೆ ಬಿಸ್ಕಿಟ್ ತಯಾರಿಸಲು ಆರಂಭಿಸಿದ್ದು ಕಂಪನಿ ಶುರು ಆಗಿ 10 ವರ್ಷದ ನಂತರ. ಅಂದ್ರೆ 1939 ರಲ್ಲಿ ಆಲಿವರೆಗೋ ಭಾರತದಲ್ಲಿ ಸಿಗುತ್ತಿದ್ದ ಬಿಸ್ಕೆಟ್ ಎಲ್ಲವನ್ನೂ ಹೊರಗಿನಿಂದ ಆಮದು ಮಾಡಲಾಗುತ್ತಿತ್ತು. ಇದರಿಂದ ಆ ಬಿಸ್ಕೆಟ್ಗಳು ತುಂಬಾ ಬೆಲೆ ಇರುತ್ತಿತ್ತು. ಪಾರ್ಲೆ ತನ್ನ ಬಿಸ್ಕೇಟ್ ಗಳನ್ನ ಅತಿ ಕಡಿಮೆ ಬೆಲೆಗೆ ಬಡ ಜನರಿಗಾಗಿ ಮಾಡುತ್ತಿತ್ತು. ಈ ಬಿಸ್ಕೆಟ್ ಎಷ್ಟು ಜನಪ್ರಿಯ ಆಗಿತ್ತು ಅಂದ್ರೆ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಸಹ ಈ ಬಿಸ್ಕೆಟ್ ಬೇಡಿಕೆ ಇತ್ತು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಆದ್ರೆ ಪಾಕಿಸ್ತಾನದ ವಿಭಜನೆಯಿಂದ ಅಲ್ಲಿಂದ ಗೋದಿ ತರಿಸುವುದು ಸಾಧ್ಯ ಆಗದ ಕಾರಣ ಭಾರತದಲ್ಲಿ ಗೋದಿ ಉತ್ಪಾದನೆ ಕಡಿಮೆ ಇದ್ದರಿಂಡ ಬೇರೆ ದಾರಿಯಿಲ್ಲದೆ ಈ ಫ್ಯಾಕ್ಟರಿ ನಿಲ್ಲಿಸುವುದು ಅನಿವಾರ್ಯ ಆಗಿತ್ತು.
ಈ ಸಮಸ್ಯೆಯಿಂದ ಮೇಲೆ ಬರಲು ಪಾರ್ಲೆ ಬಾರ್ಲೆ ಇಂದ ಬಿಸ್ಕೆಟ್ ತಯಾರಿಸಲು ಪ್ರಾರಂಭ ಮಾಡಿತು. ಆ ಹೊತ್ತಿಗೆ ಒಂದು ಜಾಹೀರಾತಿನಲ್ಲಿ ಪಾರ್ಲೆ ಸ್ವತಂತ್ರ ಬಂದ ನಂತರ ಗೋದಿಯ ಬೆಲೆ ಕಡಿಮೆ ಇರುವುದರಿಂದ ಬಾರ್ಲೇ ಇಂದ ತಯಾರಿಸಿದ ಬಿಸ್ಕೆಟ್ ಬಳಸಲು ಕೇಳಿಕೊಂಡಿತು. 1960 ರಲ್ಲಿ ಪಾರ್ಲೆಗೆ ಹಲವಾರು ಬ್ರಾಂಡ್ ಗಳ ಕಾಂಪಿಟೇಶನ್ ಬಿತ್ತು. ಹೀಗಾಗಿ ಇದರ ಬಳಕೆಯಲ್ಲಿ ಇಳಿಕೆ ಕಂಡು ಬಂದು ಬೇರೆ ರೀತಿಯ ಪಾಕೆಟ್ ತಯಾರಿಸಲು ನಿರ್ಧಾರ ಮಾಡಲಾಯಿತು. ಆಗ ಬಂದ ಪ್ಯಾಕೆಟ್ ಅಲ್ಲಿ ಕೆಂಪು ಬಣ್ಣದ ಮೇಲೆ ಪಾರ್ಲೆಜಿ ಎಂದು ಬರೆದು ಪಕ್ಕದಲ್ಲಿ ಒಂದು ಪುಟ್ಟ ಹುಡುಗಿಯ ಚಿತ್ರ ಬಂತು. 1980 ರಲ್ಲಿ ಪಾರ್ಲೇಜಿ ಹೊಸ ರೀತಿ ಪ್ಯಾಕೆಟ್ ಅಲ್ಲಿ ಬಂತು. ಆಗ ಇನ್ನೂ ಜನಪ್ರಿಯತೆ ಗಳಿಸಿತು. ನಂತರ ಟಿವಿ ಆಡ್ ಗಳನ್ನ ನೀಡಲು ಶುರು ಮಾಡಿತು. ಪಾರ್ಲೇಜಿ ಬಿಸ್ಕೆಟ್ ಎಷ್ಟು ಪ್ರಸಿದ್ಧಿ ಪಡೆದಿತ್ತು ಅಷ್ಟೇ ಪ್ಯಾಕೆಟ್ ಮೇಲಿರುವ ಚಿಕ್ಕ ಹುಡುಗಿಯ ಚಿತ್ರವೂ ಅಷ್ಟೇ ಪ್ರಸಿದ್ಧಿ ಪಡೆದಿತ್ತು. ಕೆಲವರು ಈ ಪುಟ್ಟ ಹುಡುಗಿ ಇನ್ಫೋಸಿಸ್ ಕಂಪನಿಯ ಸುಧಾ ಮೂರ್ತಿ ಎಂದು ಹೇಳುತ್ತಾರೆ. ಆದ್ರೆ ಸ್ವತಃ ಪಾರ್ಲೆ ಕಂಪನಿ ವ್ಯವಸ್ಥಾಪಕ ಹೇಳುವಂತೆ ಈ ಪ್ಯಾಕೆಟ್ ಮೇಲಿರುವ ಪುಟ್ಟ ಹುಡುಗಿ ಅದು ಯಾರ ಚಿತ್ರವೂ ಅಲ್ಲ. ಅದೊಂದು ಕೈಯಿಂದ ಚಿತ್ರಿಸಿದ ಚಿತ್ರ ಅಷ್ಟೇ. ಈ ಚಿತ್ರವನ್ನು ನಿರ್ಮಿಸಿದ್ದು ಒಬ್ಬ ಚಿತ್ರಕಾರ. ಹೀಗಾಗಿ ನೀವೇನಾದರೂ ಈ ಪುಟ್ಟ ಹುಡುಗಿ ಯಾರು ಎಂದು ತಲೆ ಕೆಡಿಸಿಕೊಂಡಿದ್ದರೆ ಆ ಹುಡುಗಿ ಹುಟ್ಟೇ ಇಲ್ಲ. ಅದೊಂದು ಕಾಲ್ಪನಿಕ ಚಿತ್ರವಷ್ಟೇ. ಪಾರ್ಲೇಜಿ ಬಿಸ್ಕಿಟ್ ಗ್ರಾಹಕರ ಬಂಡವಾಳ ಅರಿತು ತನ್ನ ಕಂಪನಿಯ ಲಾಭ ನೋಡದೇ ಅತೀ ಕಡಿಮೆ ಬೆಲೆಗೆ ಬಿಸ್ಕೆಟ್ ಕೊಡುತ್ತಿದೆ. ಇದರ ಜೊತೆಗೆ ಕ್ರಕ್ ಜಾಕ್, 20-20 ಹಲವಾರು ಬೇರೆ ಬೇರೆ ಹೆಸರುಗಳಿಂದ ತಯಾರಿಸುತ್ತಿದೆ. ಇವತ್ತಿಗೆ ಪಾರ್ಲೆ ಕಂಪನಿಯ ಒಟ್ಟು 132 ಕಂಪನಿಗಳು ಇವೆ. 50 ಲಕ್ಷ ರಿಟೇಲ್ ಸ್ಟೋರ್ ಗಳಿವೆ. 20 ಕ್ಕೊ ಹೆಚ್ಚು ದೇಶಗಳಿಗೆ ಪಾರ್ಲೆ ಬಿಸ್ಕೆಟ್ ರಫ್ತು ಆಗುತ್ತಿದೆ. 2003 ರಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಾರಾಟ ಆಗುವ ಬಿಸ್ಕೆಟ್ ಆಗಿತ್ತು.