ಈ ಕ್ಷೇತ್ರದಲ್ಲಿ ಪ್ರತಿವರ್ಷ ಎರಡು ಇಂಚು ಉದ್ದ ಬೆಳೆಯುವ ಜೀವಂತ ಶುವಧನಸ್ಸು..!!!

ಈ ಕ್ಷೇತ್ರದಲ್ಲಿ ಪ್ರತಿವರ್ಷ ಎರಡು ಇಂಚು ಉದ್ದ ಬೆಳೆಯುವ ಜೀವಂತ ಶುವಧನಸ್ಸು..!!!

ನಮಸ್ತೆ ಪ್ರಿಯ ಓದುಗರೇ, ಪ್ರತಿ ದೇವಾಲಯಗಳು ವರ್ಷದಲ್ಲಿ ಒಂದು ಬಾರಿ ದೇವರ ಜಾತ್ರಾ ಮಹೋತ್ಸವ ವನ್ನಾ ಆಚರಿಸಲಾಗುತ್ತದೆ. ಈ ಸಮಯದಲ್ಲಿ ರಥದಲ್ಲಿ ಕುಳಿತ ದೇವರ ವಿಗ್ರಹ ನೋಡುವುದೇ ಕಣ್ಣಿಗೊಂದು ಹಬ್ಬವಾಗಿದೆ. ನಮ್ಮ ಕರ್ನಾಟಕದಲ್ಲಿ ಶಿರಸಿಯ ಮಾರಿಕಾಂಬಾ ಜಾತ್ರೆಯನ್ನು ಅತ್ಯಂತ ದೊಡ್ಡ ಜಾತ್ರೆ ಎಂದೇ ಕರೆಯಲಾಗುತ್ತದೆ. ಪ್ರತಿ ಊರಿನಲ್ಲಿ ನಡೆಯುವ ದೇವರ ಜಾತ್ರೆಗಳು ಒಂದಿಲ್ಲ ಒಂದು ವಿಶೇಷತೆಗಳಿಂದ ಕೂಡಿರುತ್ತವೆ. ನಾವು ಇವತ್ತು ನಿಮಗೆ ಪರಿಚಯಿಸಲು ಹೊರಟಿರುವ ದೇಗುಲದಲ್ಲಿ ಜಾತ್ರೆಯ ಸಂದರ್ಭದಲ್ಲಿ ಶಿವ ಧನಸ್ಸನ್ನು ಪೂಜೆ ಮಾಡಲಾಗುತ್ತದೆ. ದೇವರ ವಿಗ್ರಹದ ಜೊತೆ ಶುವ ದನಸ್ಸನ್ನು ಪೂಜೆ ಮಾಡುವ ಆ ದೇವಾಲಯ ಯಾವುದು ಅಲ್ಲಿನ ಶಿವ ಧನಸ್ಸಿನ ಮಹಿಮೆ ಏನು ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಸುಮಾರು 500 ವರ್ಷಗಳಷ್ಟು ಪುರಾತನವಾದ ತೇರು ಮಲ್ಲೇಶ್ವರ ದೇವಾಲಯವನ್ನು ದಕ್ಷಿಣ ಕಾಶಿ ಎಂದೇ ಕರೆಯಲಾಗುತ್ತದೆ. ಹೇಗೆ ಕಾಶಿಯಲ್ಲಿ ವಿಶ್ವನಾಥನ ಶಿವ ಲಿಂಗವು ದಕ್ಷಿಣದ ಕಂಡೆ ಮುಖ ಮಾಡಿ ನಿಂತಿದೆಯೋ ಅದೇ ರೀತಿ ಇಲ್ಲಿಯೂ ಕೂಡ ಶಿವ ಲಿಂಗವು ದಕ್ಷಿಣಕ್ಕೆ ಮುಖ ಮಾಡಿದೆ. ಹೀಗಾಗಿ ಈ ದೇಗುಲಕ್ಕೆ ಹೋದರೆ ಕಾಶಿ ವಿಶ್ವನಾಥನ ದರ್ಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

 

1446 ರಲ್ಲಿ ಕೆಂಚಪ್ಪ ನಾಯಕ ಎಂಬ ಪಾಳೆಗಾರ ಈ ಭವ್ಯವಾದ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಿದ ಎಂದು ಇತಿಹಾಸಗಳ ಲ್ಲಿ ದಾಖಲು ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಪರಮೇಶ್ವರನು ಬಂದು ನೆಲೆ ನಿಲ್ಲುವುದರ ಹಿಂದೆ ಒಂದು ರೋಚಕವಾದ ಕಥೆ ಇದೆ. ಹಿಂದೆ ಶಿವನ ಭಕ್ತೆಯೊಬ್ಬಳು ಈ ಊಊರಿನಲ್ಲಿ ವಾಸ ಮಾಡುತ್ತಿದ್ದು ಅವಳು ಪ್ರತಿವರ್ಷ ಚಾಚೂ ತಪ್ಪದೇ ಕಾಶಿಗೆ ಹೋಗಿ ವಿಶ್ವೇಶ್ವರನ ದರ್ಶನ ಮಾಡಿ ಬರ್ತಾ ಇದ್ದಳು. ಕಾಲ ಕ್ರಮೇಣ ಅವಳಿಗೆ ವಯಸ್ಸಾದ ಕಾರಣ ಆ ಭಕ್ತೆಗೆ ಕಾಶಿಗೆ ಹೋಗಲು ಸಾಧ್ಯ ಆಗಲಿಲ್ಲ. ಆಗ ಅವಳು ತನ್ನ ಮನೆಯಲ್ಲಿ ಕುಳಿತು ಶಿವನ ಧ್ಯಾನ ಮಾಡುತ್ತಾ ದೇವರೇ ನನಗೆ ಹೇಗಾದರೂ ಮಾಡಿ ದರ್ಶನ ನೀಡು ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾಳೆ. ಅವಳ ಶುದ್ಧವಾದ ಭಕ್ತಿಯನ್ನು ಮೆಚ್ಚಿ ಪರಮೇಶ್ವರನು ಇನ್ನೂ ಮುಂದೆ ನೀನು ನನ್ನನ್ನು ದರ್ಶನ ಮಾಡಲು ಕಾಶಿಗೆ ಬರಬೇಕಿಲ್ಲ,ನಾನು ನೀನು ಇರುವ ಸ್ಥಳದಲ್ಲಿ ಬಂದು ನೆಲೆಸುತ್ತೇನೆ ಎಂದು ಹೇಳಿ ಅವಳ ಮನೆಯ ಒರಳು ಕಲ್ಲಿನಲ್ಲಿ ಪ್ರತಿಷ್ಠಾಪನೆ ಆದಳು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಮುಂದೆ ಈ ಒರಳು ಕಲ್ಲೇ ಶಿವನ ಲಿಂಗವಾಗಿ ಅನೇಕ ಜನರಿಂದ ಪೂಜಿಸಿ ನಂತರದ ದಿನಗಳಲ್ಲಿ ಈ ಶಿವ ಲಿಂಗಕ್ಕೆ ಭವ್ಯವಾದ ಆಲಯವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಇನ್ನೂ ಈ ದೇಗುಲದ ಮುಂದೆ ಉಯ್ಯಾಲೆ ಕಂಭವಿದ್ದು, ಜಾತ್ರೆಯ ಸಮಯದಲ್ಲಿ ಇಲ್ಲಿಗೆ ಬಂದು ಈ ಕಂಬವನ್ನು ತೂಗಿ ದೇವರಿಗೆ ಕರ್ಪೂರ ಹಚ್ಚುತ್ತೇವೆ ಎಂದು ಹರಕೆ ಹೊತ್ತರೆ ಸಂತಾನ ಸಮಸ್ಯೆ ದೂರ ಆಗುತ್ತೆ ಎಂಬ ಪ್ರತೀತಿ ಇದೆ.

 

ಹೀಗಾಗಿ ಈ ಕ್ಷೇತ್ರದಲ್ಲಿ ನಡೆಯುವ ಜಾತ್ರೆಗೆ ಕೇವಲ ಹಿಂದೂಗಳು ಮಾತ್ರವಲ್ಲ ಮುಸ್ಲಿಂ, ಕ್ರಿಶ್ಚಿಯನ್ ಗಳು ಆಗಮಿಸಿ ತಮ್ಮನ್ನು ಸಂಕಷ್ಟಗಳಿಂದ ಪಾರು ಮಾಡುವಂತೆ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಹೀಗಾಗಿ ಈ ಕ್ಷೇತ್ರವನ್ನು ಸರ್ವ ಧರ್ಮಗಳ ನೆಲೆ ಬೀಡು ಎಂದು ಕರೆಯಲಾಗುತ್ತದೆ. ಈ ದೇಗುಲವು ಅತ್ಯಂತ ಪ್ರಸಿದ್ಧಿ ಆಗಲು ಕಾರಣ ದೇಗುಲದಲ್ಲಿ ಇರುವ ಶಿವ ಧನಸ್ಸು. ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಈ ಧನಸ್ಸನ್ನು ಹೊರ ತೆಗೆದು ವೇದಾವತಿ ನದಿಯಲ್ಲಿ ಅಭಿಷೇಕ ಮಾಡಿಸಿ ಮತ್ತೆ ದೇಗುಲಕ್ಕೆ ತಂದು ಇಡುವ ಪರಿಪಾಠ ಇದ್ದು, ಈ ಶಿವ ಧನಸ್ಸು ವರ್ಷದಿಂದ ವರ್ಷಕ್ಕೆ ಎರಡು ಇಂಚು ಬೆಳೆಯುತ್ತೆ ಎಂದು ಹೇಳಲಾಗುತ್ತದೆ. ಕೆಂಚಪ್ಪ ನಾಯಕ ಎನ್ನುವವನಿಗೆ ಈ ನದಿಯಲ್ಲಿ ಧನಸ್ಸು ದೊರಕಿತು ಎನ್ನುವುದರ ಬಗ್ಗೆ ಉಲ್ಲೇಖವಿದ್ದು, ನಾಯಕನಿಗೆ ಧನಸ್ಸು ಸಿಕ್ಕಾಗ ಅದು ಕೇವಲ 5 ಅಡಿ ಉದ್ದ ಇತ್ತಂತೆ. ಪ್ರತಿವರ್ಷ ಬೆಳೆದು ಬೆಳೆದು ಇದೀಗ 30 ಅಡಿಗು ಹೆಚ್ಚು ಉದ್ದವಾಗಿದೆ. ಧನಸ್ಸನ್ನು ವೇದಾವತಿ ನದಿ ನೀರಿನಲ್ಲಿ ಅಭಿಷೇಕ ಮಾಡಿಸಿ ವಾಪಸ್ ತರುವಾಗ ಧನಸ್ಸು ಏನಾದರೂ ಭಾರವಾಗಿ ನಿಂತುಕೊಂಡರೆ ಅವತ್ತು ಬರಗಾಲ ಬರುತ್ತೆ ಎಂದು ಹಗುರವಾಗಿ ಹಿಡಿದುಕೊಳ್ಳಲು ಬಂದ್ರೆ ಆ ವರ್ಷ ಉತ್ತಮ ಮಳೆ ಬೆಳೆ ಆಗುತ್ತೆ ಎಂದು ಹೇಳಲಾಗುತ್ತದೆ. ಪ್ರತಿವರ್ಷದ ಮಾಘ ಮಾಸದ ಮಾಘ ನಕ್ಷತ್ರದಲ್ಲಿ ಧನಸ್ಸಿಗೆ ಪೂಜೆ ಸಲ್ಲಿಸಿದ ನಂತರವೇ ಇಲ್ಲಿ ದೇವರ ತೇರನ್ನು ಎಳೆಯಲಾಗುತ್ತದೆ. ಭಕ್ತರು ಬೇಡಿದ ವರಗಳನ್ನು ಶೀಘ್ರವಾಗಿ ಕರುಣಿಸುವ ಈ ಮಲ್ಲೇಶ್ವರ ದೇವಾಲಯವು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಎಂಬ ಪ್ರದೇಶದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ಶಿವ ದನಸ್ಸಿನ ಅನುಗ್ರಹ ಪಡೆಯಿರಿ. ಶುಭದಿನ.

ಭಕ್ತಿ