ನಮಸ್ತೆ ಪ್ರಿಯ ಓದುಗರೇ, ಕೆ. ಎಲ್. ರಾಹುಲ ನಮ್ಮೆಲ್ಲರ ಅಚ್ಚುಮೆಚ್ಚಿನ ಆಟಗಾರ ಗಾಯ ಆಗಿರುವ ಕಾರಣ ಕೆಲ ಕಾಲ ಕ್ರಿಕೆಟ್ ಮೈದಾನದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಹೌದು! ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೇಮ್ಸ್ ಅನ್ನುವಂತಹ ಹೊಸ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತು ಅದನ್ನು ತುಂಬಾ ಚೆನ್ನಾಗಿ ನಿಭಾಯಿಸಿ ತನ್ನ ತಂಡವನ್ನು ಪ್ಲೇ ಆಫ್ ವರೆಗೂ ಕರೆದುಕೊಂಡು ಹೋದ್ರು ರಾಹುಲ್. ಆದ್ರೆ ಈಗ ಗಾಯದ ಸಮಸ್ಯೆ ಹೆಚ್ಚಾಗಿರುವುದರಿಂದ ಶಸ್ತ್ರ ಚಿಕಿತ್ಸೆ ಮಾಡಬೇಕಂತೆ. ಹಾಗಾಗಿ ಇಂತಹ ಸಮಯದಲ್ಲಿ ಬೆಂಬಲವಾಗಿ ಜೊತೆಯಾಗಿ ಅತಿಯಾ ಶೆಟ್ಟಿ ಅವರು ಕೆ. ಎಲ್ ರಾಹುಲ್ ಜೊತೆಗೆ ಜರ್ಮನಿಗೆ ಹೋಗುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 5 ಪಂದ್ಯಗಳ ಟಿ 20 ಸರಣಿಗೆ ಟೀಮ್ ಇಂಡಿಯಾ ನಾಯಕರಾಗಿ ಕೆ ಎಲ್ ರಾಹುಲ್ ಆಯ್ಕೆ ಆಗಿದ್ರು. ಆದ್ರೆ ಸರಣಿ ಆರಂಭಕ್ಕೂ ಮುನ್ನ ಈ ಆರಂಭಿಕ ಆಟಗಾರ ಗಾಯಗೊಂಡು ಪ್ರವಾಸಕ್ಕೆ ತೆರಳಲು ಸಾಧ್ಯ ಆಗಲಿಲ್ಲ. ಜೊತೆಗೆ ರಾಹುಲ್ ಇಂಗ್ಲೆಂಡ್ ಪ್ರವಾಸದಿಂದ ಕೂಡ ದೂರ ಇದಾರೆ. ಈಗ ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ ಎನ್ನುವುದು ಸುದ್ದಿ.
ರಾಹುಲ್ ಶಸ್ತ್ರ ಭಾನುವಾರ ಮುಂಬೈ ವಿಮಾನ ನಿಲ್ದಾಣದಿಂದ ಜರ್ಮನಿಗೆ ತೆರಳಿದರು. ಈ ಸಮಯದಲ್ಲಿ ಅವರ ಗೆಳತಿ ಹಾಗೂ ನಟಿ ಆತಿಯಾ ಶೆಟ್ಟಿ ಕೂಡ ಅವರೊಂದಿಗೆ ಕಾಣಿಸಿಕೊಂಡರು. ರಾಹುಲ್ ತಮ್ಮ ಶಸ್ತ್ರ ಚಿಕಿತ್ಸೆಗಾಗಿ ಜರ್ಮನಿಯಲ್ಲಿ ಒಂದು ತಿಂಗಳ ಕಾಲ ಇರ್ತಾರೆ. ಈ ಸಮಯದಲ್ಲಿ ಅತಿಯಾ ಕೂಡ ಅವರ ಜೊತೆ ಇರ್ತಾರೆ. ಇಬ್ಬರೂ ಕೂಡ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಟೈಲಿಶ್ ಉಡುಗೆಯಲ್ಲಿ ಕಾಣಿಸಿಕೊಂಡರು. ನೀಲಿ ಡೆನಿಮ್ ಜೀನ್ಸ್ ಮೇಲೆ ಬಿಳಿ ಟಾಪ್ ಧರಿಸಿ ಸ್ವೆಟರ್ ನಲ್ಲಿ ಅತೀಯಾ ಕ್ಯಾಶುವಲ್ ಆಗಿ ಕಾಣಿಸಿಕೊಂಡರೆ ರಾಹುಲ್ ಕಪ್ಪು ಟೀಶರ್ಟ್ ನೋಂದಿಗೆ ಖಾಕಿ ಬಣ್ಣದ ಪ್ಯಾಂಟ್ ಅಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ಅಭಿಮಾನಿಗಳ ಮೊಬೈಲ್ ಕ್ಯಾಮೆರಾಗೆ ಇಬ್ಬರೂ ಪೋಸ್ ನೀಡಿದ್ರು.
ಬಹಳ ದಿನಗಳಿಂದ ಈ ಜೋಡಿ ಶೀಗ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎನ್ನುವುದು ಕೂಡ ಈ ಹಿಂದೆ ವರದಿಯಾಗಿತ್ತು. ಈ ಜೋಡಿ ಡಿಸೆಂಬರ್ ಅಲ್ಲಿ ಮದುವೆ ಆಗ್ತಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿತ್ತು. ಈ ನಡುವೆ ಬಗ್ಗೆ ಇಬ್ಬರೂ ಕೂಡ ಯಾವುದೇ ಹೇಳಿಕೆ ನೀಡಿಲ್ಲ. ಆದ್ರೆ ಅತಿಯಾ ಅವರ ತಂದೆ ಹಾಗೂ ನಟ ಸುನಿಲ್ ಶೆಟ್ಟಿ ಈ ಬಗ್ಗೆ “ಅವಳು ನನ್ನ ಮಗಳು ಅವಳು ಯಾವಾಗ ಬೇಕಾದ್ರೂ ಮದುವೆ ಆಗಬಹುದು. ನನ್ನ ಮಗನಿಗೂ ಕೂಡ ಮದುವೆ ಆಗಬೇಕು. ಎಷ್ಟು ಬೇಗ ಆಗುತ್ತೋ ಅಷ್ಟು ಒಳ್ಳೆಯದು. ಅವನು ಕೂಡ ತನ್ನ ಆಯ್ಕೆಯ ಹುಡುಗಿಯನ್ನೇ ಮದುವೆ ಆಗ್ತಾನೆ. ಇನ್ನೂ ರಾಹುಲ್ ಬಗ್ಗೆ ಹೇಳುವುದಾದರೆ, ನಾನು ಅವನ್ನನ್ನು ಪ್ರೀತಿಸುತ್ತೇನೆ, ಈಗ ಕಾಲ ಬದಲಾಗಿರುವ ಕಾರಣ ಅವರು ಏನು ಮಾಡಬೇಕು ಎಂದು ಅವರೇ ನಿರ್ಧಾರ ಮಾಡಿರುತ್ತಾರೆ” ಎಂದು ಸುನೀಲ ಶೆಟ್ಟಿ ಮಗ ಹಾಗೂ ಮಗಳ ಹಾಗೆ ರಾಹುಲ್ ಬಗ್ಗೆ ಅಭಿಪ್ರಾಯ ಪಡಿಸಿದ್ದು ಹೀಗೆ.