ನಮಸ್ತೆ ಪ್ರಿಯ ಓದುಗರೇ, ಕನ್ನಡ ಕಿರುತೆರೆ ಲೋಕದಲ್ಲೂ ಆಂಕರ್ ಅನುಶ್ರೀ ಟಾಪ್ ನಿರೂಪಕಿ ಆಗಿ ಮಿಂಚುತ್ತಾ ಇದ್ದಾರೆ. ಅನೇಕ ಸಿನೆಮಾ ಕಾರ್ಯಕ್ರಮಗಳನ್ನು ನಡೆಸಿ ಕೊಡ್ತಾರೆ. ಬಹು ಬೇಡಿಕೆಯ ನಿರೂಪಕಿ ಅಂದ್ರೆ ಅದು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೆ ಕೂಡ ತುಂಬಾ ಇಷ್ಟ. ಪ್ರಸ್ತುತ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಅಂದ್ರೆ ಡಿಕೆಡಿ ಕಾರ್ಯಕ್ರಮ ಕೂಡ ಅನುಶ್ರೀ ಅವರಿಂದ ಕಳೆ ಕಟ್ಟಿದೆ.
ಈ ಶೋ ಗೆ ಶಿವರಾಜಕಮಾರ್ ಜಡ್ಜ್ ಆಗಿ ಬಂದಿದ್ದಾರೆ. ಶಿವಣ್ಣ ಅವರಿಂದ ಅನುಶ್ರೀ ಗೆ ಒಂದು ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ಈ ಉಡುಗೊರೆ ಸಿಕ್ಕಿದ್ದಕ್ಕೆ ಅವರು ತುಂಬಾ ಖುಷಿ ಪಟ್ಟಿದ್ದಾರೆ. ಆ ಗಿಫ್ಟ್ ಬೇರೇನೂ ಅಲ್ಲ. ಸ್ವತಃ ಶಿವಣ್ಣ ಅವರು ಧರಿಸಿದ್ದ ಜಾಕೆಟ್. ಹೌದು ಈ ಉಡುಗೊರೆ ಪಡೆದ ಕ್ಷಣ ಹೇಗಿತ್ತು ಎಂಬುದನ್ನು ವಿಡಿಯೋ ಸಮೇತ ಅನುಶ್ರೀ ವಿವರಿಸಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ. ಅನುಶ್ರೀ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು ಅದರ ಜೊತೆಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. “ಇದು ಯಾವ ಜನ್ಮದ ಪುಣ್ಯ… ಕಳೆದ ವಾರ ಡಿಕೆಡೀ ಶೂಟ್ ವೇಳೆ ಹೇಳಿದ್ದೆ, ಶಿವಣ್ಣ ನಿಮ್ಮ ಜಾಕೆಟ್ ಸಕ್ಕತ್ ಆಗಿದೆ ಅಂತ.
ಅದಕ್ಕೆ ಶಿವಣ್ಣ ಆಯ್ತು ಬಿದಮ್ಮ ನಿಂಗೆ ಕೊಡ್ತೀನಿ ಅಂದ್ರು..ನಾನು ಸುಮ್ನೆ ಹೇಳಿರ್ಥಾರೆ ಅನ್ಕೊಂಡೆ. ಆದ್ರೆ ಎಷ್ಟೇ ಆದ್ರೂ ಅಣ್ಣಾವ್ರ ರಕ್ತ ಅಲ್ವಾ? ಆಕಾಶ ನೋಡದ ಕೈ ಪ್ರೀತಿ ಹಂಚಿದ ಕೈಗಳು ಅವು”. ಶಿವಣ್ಣ ಹೊರಡುವ ಮುನ್ನ ಜಾಕೆಟ್ ಬಿಚ್ಚಿ ಅದರ ಮೇಲೆ ವಿತ್ ಲಾಟ್ಸ್ ಆಫ್ ಲವ್ ಟು ಡಿಯರೆಸ್ಟ್ ಫ್ರೆಂಡ್ ಅನು ಅಂತ ಬರೆದು ಸಹಿ ಹಾಕಿ ತನ್ನ ಕೈಯಾರೆ ಜಾಕೆಟ್ ತೊಡಿಸಿ ಮತ್ತೊಮ್ಮೆ ಮಮತೆ ಮೆರೆದ ಮುತ್ತಣ್ಣ ಶಿವಣ್ಣ. ನಿಮ್ಮ ರೂಪದಲ್ಲಿ ನಮ್ಮ ಪರಮಾತ್ಮನನ್ನು ಕಾಣುತ್ತಾ ಇದ್ದೀವಿ. ಮತ್ತೊಮ್ಮೆ ಧನ್ಯವಾದಗಳು ಸರ್ ಅಂತ ಅನುಶ್ರೀ ಬರೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಅಲ್ಲಿ ಅಪ್ಲೋಡ್ ಮಾಡಿದ ವಿಡಿಯೋ 2 ಗಂಟೆಗಳಲ್ಲಿ 4ಲಕ್ಷಕ್ಕೂ ಅಧಿಕ ವಿವ್ ಕಂಡಿದೆ. 80 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಕಾಮೆಂಟ್ಗಳ ಮೂಲಕ ನೂರಾರು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ನೀವು ತುಂಬಾ ಲಕ್ಕಿ ಅಂತ ಕೂಡ ಕಾಮೆಂಟ್ ಮಾಡ್ತಾ ಇದ್ದಾರೆ.