ನದಿಯಲ್ಲಿ ಹೆಂಡತಿಗೆ ಮುತ್ತು ಕೊಟ್ಟಿದ್ದಕ್ಕೆ ಗಂಡನನ್ನು ಥಳಿಸಿದ ಸ್ಥಳೀಯರು….

ನದಿಯಲ್ಲಿ ಹೆಂಡತಿಗೆ ಮುತ್ತು ಕೊಟ್ಟಿದ್ದಕ್ಕೆ ಗಂಡನನ್ನು ಥಳಿಸಿದ ಸ್ಥಳೀಯರು….

ನಮ್ಮ ಜಗತ್ತಿನಲ್ಲಿ ಹಲವಾರು ಕಡೆ ಸಂಸ್ಕೃತಿ ಹಾಗೂ ಸಭ್ಯತೆಯನ್ನು ಬಹಳ ಕಾಪಾಡಿಕೊಳ್ಳುತ್ತಾರೆ ಅದಕ್ಕೆ ಧಕ್ಕೆ ಆದರೆ ಯಾರೂ ಕೂಡ ಕೇಳುವುದಿಲ್ಲ ಇದಕ್ಕೆ ಉದಾಹರಣೆ ತುಂಬಾನೇ ಇದ್ದಾರೆ ಆದರೆ ಇಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ತನ್ನ ಪತ್ನಿಗೆ ಮುತ್ತು ಕೊಟ್ಟಿದ್ದಕ್ಕೆ ವ್ಯಕ್ತಿಯೋರ್ವನನ್ನು ನಿಂದಿಸಿ ಥಳಿಸಿದ ಘಟನೆ ನಡೆದಿದೆ. ಹೌದು ಈ ಘಟನೆ ನಡೆದ ಸ್ಥಳದಲ್ಲಿ ಇದ್ದ ಜನರು ಗಂಡನಿಗಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅಯೋಧ್ಯೆಯ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.

 

ವೈರಲ್ ಆಗಿರುವ ವಿಡಿಯೋದಲ್ಲಿ ಅಯೋಧ್ಯೆಯ ಸರಯೂ ನದಿಯಲ್ಲಿ ತನ್ನ ಹೆಂಡತಿಯೊಂದಿಗೆ ಮುಳುಗೇಳುತ್ತಿದ್ದ ವ್ಯಕ್ತಿ ಆಕೆಗೆ ಮುತ್ತು ನೀಡಿದ್ದಕ್ಕೆ ಆ ಪುರುಷನನ್ನು ಎಳೆದೊಯ್ದು, ಸುತ್ತಮುತ್ತಲಿನ ಹಲವಾರು ಜನರು ಥಳಿಸಿದ್ದಾರೆ. ಅಯೋಧ್ಯೆಯಲ್ಲಿ ಇಂತಹ ಅಸಭ್ಯತೆಯನ್ನು ಸಹಿಸುವುದಿಲ್ಲ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ವೇಳೆ ಆತನ ಹೆಂಡತಿ ತಡೆಯಲು ಬಂದರೂ ಜನರು ಅವರಿಬ್ಬರಿಗೂ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಹೆಂಡತಿ ತನ್ನ ಗಂಡನನ್ನು ರಕ್ಷಿಸಲು ಪ್ರಯತ್ನಿಸಿ, ವಿಫಲಳಾಗಿದ್ದಾಳೆ. ಕೊನೆಗೆ ಆ ದಂಪತಿಯನ್ನು ಅಲ್ಲಿದ್ದ ಜನರು ನದಿಯಿಂದ ಹೊರಗೆ ಹೋಗಲು ಸೂಚಿಸಿದರು.

 

ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಯೋಧ್ಯಾ ಪೊಲೀಸರು ತಿಳಿಸಿದ್ದಾರೆ. ಅಲ್ಲಿದ್ದ ಜನರ ಪ್ರಕಾರ ಅವರು ಸಾಮಾಜಿಕ ಸ್ಥಳದಲ್ಲಿ ತಪ್ಪು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹೌದು ನಮ್ಮ ಕರ್ತವ್ಯ ಪುರಾತನ ಕಾಲದಿಂದ ಬಂದ ಪೂರ್ವಜರು ಬೆಳೆಸಿದ ನೀತಿಯನ್ನು ನಾವು ಕಾಪಾಡಿಕೊಳ್ಳಬೇಕು. ಮಾಡಬಾರದ ಕಡೆ ಏನೇನು ಮಾಡಿದರೆ ಹೀಗೆ ಆಗುತ್ತದೆ ಎಂಬ ಉದಾಹರಣೆ ನಮಗೆ ದೊರಕಿದೆ ಪ್ರಭಾರಿ ಇನ್ಸ್‌ಪೆಕ್ಟರ್ ಕೊತ್ವಾಲಿ ಅಯೋಧ್ಯೆಗೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅಯೋಧ್ಯೆ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಸರಯೂ ಗಂಗೆಯ ಏಳು ಉಪನದಿಗಳಲ್ಲಿ ಒಂದಾಗಿದೆ. ಇದನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ಸರಯೂ ನದಿಯ ದಡದಲ್ಲಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ಸುದ್ದಿ