ವರ್ಷದಲ್ಲಿ 6 ತಿಂಗಳು ಮಾತ್ರ ಭಕ್ತರಿಗೆ ದರ್ಶನವನ್ನು ನೀಡ್ತಾನೆ ಈ ಪರಮಾತ್ಮ..!!!

ವರ್ಷದಲ್ಲಿ 6 ತಿಂಗಳು ಮಾತ್ರ ಭಕ್ತರಿಗೆ ದರ್ಶನವನ್ನು ನೀಡ್ತಾನೆ ಈ ಪರಮಾತ್ಮ..!!!

ನಮಸ್ತೆ ಪ್ರಿಯ ಓದುಗರೇ, ಭಗವಂತ ಅಂದ್ರೆ ಒಂದು ನಂಬಿಕೆ. ಬದುಕಿನ ದೋಣಿಯನ್ನು ಸಾಗಿಸಲು ಸಹಾಯ ಮಾಡುವ ಶಕ್ತಿ ಅಂದ್ರೆ ನಾವು ನಂಬಿರುವ ದೇವರು. ಸಾಮಾನ್ಯವಾಗಿ ದೇವಸ್ಥಾನದ ಗರ್ಭ ಗುಡಿಯಲ್ಲಿ ನ ದೇವನನ್ನು ವರ್ಷದ ಎಲ್ಲಾ ದಿನಗಳಲ್ಲಿ ದರ್ಶನ ಮಾಡುವ ಅವಕಾಶ ನಮಗೆ ಎಲ್ಲಾ ಆಲಯಗಳಲ್ಲಿ ಸಿಗುತ್ತೆ. ಆದ್ರೆ ಈ ದೇವಸ್ಥಾನದಲ್ಲಿ ಇರುವ ದೇವರನ್ನು ಮಾತ್ರ ವರ್ಷದಲ್ಲಿ ಆರು ತಿಂಗಳು ಮಾತ್ರ ದರ್ಶನ ಮಾಡಬಹುದು. ಅಲ್ಲದೆ ಇಲ್ಲಿ ಹರಿಯುವ ತೀರ್ಥಕ್ಕೆ ನಮ್ಮ ರೋಗಗಳನ್ನು ಗುಣಪಡಿಸುವ ವಿಶೇಷ ಶಕ್ತಿ ಇದೆ ಎಂದು ಹೇಳಲಾಗುತ್ತದೆ. ಹಾಗಾದ್ರೆ ಆ ದೇವಸ್ಥಾನ ಯಾವುದು ಅಲ್ಲಿನ ವಿಶೇಷತೆಗಳು ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ನೆಲ್ಲಿತೀರ್ಥದ ಸೋಮನಾಥೇಶ್ವರ ದೇವಾಲಯ ಒಂದಾಗಿದ್ದು. ಈ ದೇವಾಲಯವು ಸುಮಾರು 1000 ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿದೆ. ಈ ಕ್ಷೇತ್ರದಲ್ಲಿ ಸೋಮೇಶ್ವರ ದೇವರು ಪೂಜಿಸಲ್ಪಡುತ್ತಿದ್ದು ಇಲ್ಲಿ ಪರಮೇಶ್ವರನ ಜೊತೆ ದುರ್ಗಾ ದೇವಿ, ಮಹಾಗಣಪತಿ, ಭೂತ ಗಣಗಳು, ಜಾವಲಿ ಮಹರ್ಷಿಗಳು ಕೂಡ ನೆಲೆ ನಿಂತಿದ್ದಾರೆ.

ವರ್ಷದಲ್ಲಿ ಆರು ತಿಂಗಳು ಮಾತ್ರ ಈ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ. ಪ್ರತಿ ವರ್ಷ ತುಲಾ ಸಂಕ್ರಮಣ ಶುಭ ಮುಹೂರ್ತದಲ್ಲಿ ಈ ಗುಹಾ ದೇವಾಲಯವನ್ನು ತೆರೆಯಲಾಗುತ್ತದೆ. ಇಲ್ಲಿರುವ ಸೋಮೇಶ್ವರ ದೇವರನ್ನು ನೋಡುವ ಮೊದಲು ದೇವಾಲಯದ ಹೊರಗಡೆ ಇರುವ ನಾಗಪ್ಪನ ಕೆರೆಯಲ್ಲಿ ಸ್ನಾನ ಮಾಡಿ ನಂತರ ಗುಹೆಯೊಳಗೆ 230ಮೀಟರ್ ತೆವಳಿಕೊಂಡು ಹೋದ್ರೆ ಸುಂದರವಾದ ಈ ದೇವಾಲಯವನ್ನು ದರ್ಶನ ಮಾಡಬಹುದು. ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿ ಶಿವಲಿಂಗಕ್ಕೆ ಅಭಿಷೇಕ ಹಾಗೂ ಪೂಜೆ ಮಾಡಿದರೆ ಇಷ್ಟಾರ್ಥ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಇಲ್ಲಿನ ಗುಹಾಲಯ ದ ಒಳಗಡೆ ಕಲ್ಲುಗಳ ಸಂದಿಯಿಂದ ನೆಲ್ಲಿಕಾಯಿ ಗಾತ್ರದಲ್ಲಿ ನೀರು ಸದಾ ಹರಿಯುತ್ತಾ ಇರುತ್ತೆ. ಈ ನೀರನ್ನು ಅಂತರಗಂಗೆ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ನೀರು ನೆಲ್ಲಿಕಾಯಿ ಆಕಾರದಲ್ಲಿ ಹರಿಯುತ್ತೆ ಹಾಗಾಗಿ ಈ ಕ್ಷೇತ್ರಕ್ಕೆ ನೆಲ್ಲಿತೀರ್ಥ ಎಂದು ಕರೆಯಲಾಗುತ್ತದೆ. ಗುಹೆಯೊಳಗೆ ಇರುವ ಜಲರಾಶಿಯ ಮಧ್ಯದಲ್ಲಿ ಕೆಂಪು ಬಣ್ಣದ ಮಣ್ಣು ಇದ್ದು, ಈ ಮಣ್ಣನ್ನು ಮೈಗೇ ಹಚ್ಚಿಕೊಂಡರೆ ಎಲ್ಲಾ ರೀತಿಯ ಚರ್ಮ ರೋಗಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

ಹೀಗಾಗಿ ಪ್ರತಿವರ್ಷ ಸಾವಿರಾರು ಮಂದಿ ಬಂದು ಗುಹೆಯೊಳಗೆ ಇಳಿದು ದೇವರ ಪವಿತ್ರ ಮಣ್ಣನ್ನು ದೇಹಕ್ಕೆ ಲೇಪಿಸಿಕೊಂಡು ತಮ್ಮೆಲ್ಲ ಚರ್ಮರೋಗಗಳಿಗೆ ಬಿಡುಗಡೆ ಪಡೆಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಜಾಬಾಲಿ ಮುನಿಗಳು ತಪಸ್ಸು ಮಾಡಿದ್ದು, ಈಗಲೋ ಇಲ್ಲಿ ಜಾಬಾಲಿ ಮುನಿಗಳು ಇಲ್ಲಿ ತಪಸ್ಸನ್ನು ಮಾಡ್ತಾ ಇದ್ದಾರೆ ಎಂದು ಹೇಳಲಾಗುತ್ತದೆ. ಮುನಿಗಳ ತಪೋ ಭಂಗ ಮಾಡಬಾರದು ಎಂಬ ಕಾರಣದಿಂದ ವರ್ಷದ ಆರು ತಿಂಗಳು ಮಾತ್ರ ಈ ಗುಹಾಲಯವನ್ನು ತೆರೆಯಲಾಗುತ್ತದೆ. ಇಲ್ಲಿರುವ ಸುರಂಗಮಾರ್ಗ ನಮ್ಮನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಕರೆದುಕೊಂಡು ಹೋಗುತ್ತೆ ಎಂದು ಹೇಳಲಾಗುತ್ತದೆ. ಆದ್ರೆ ಈ ಸುರಂಗವು ತುಂಬಾ ಆಳ ಇರುವ ಕಾರಣ ಯಾರಿಗೋ ಪ್ರವೇಶ ಮಾಡೋಕೆ ಅನುಮತಿ ನೀಡಲ್ಲ. ಬೇಡಿದ ವರವನ್ನು ನೀಡುವ ಈ ದೇವರನ್ನು ಪ್ರತಿವರ್ಷ ಅಕ್ಟೋಬರ್ ತಿಂಗಳಿನಿಂದ ಏಪ್ರಿಲ್ ತಿಂಗಳ ವರೆಗೆ ದರ್ಶನ ಮಾಡಬಹುದಾಗಿದೆ. ಭಗವಂತನ ದರ್ಶನದ ಅನನ್ಯ ಅನುಭೂತಿಯನ್ನು ನೀಡುವ ಈ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಸ್ವಾಮಿಯನ್ನು ದರ್ಶನ ಪಡೆದು ಪುನೀತರಾಗಿ. ಶುಭದಿನ.

 

ಭಕ್ತಿ