ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಖ್ಯಾತ ಗಾಯಕ ಜಸ್ಟಿನ್ ಬೈಬರ್ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಸಂಗೀತ ಕಾರ್ಯಕ್ರಮಗಳಿಗೆ ಲಕ್ಷಾಂತರ ಜನ ಸೇರುತ್ತಾರೆ. ಇನ್ಸ್ಟಗ್ರಾಮ್ ನಲ್ಲಿ ಅವರನ್ನು 240 ಮಿಲಿಯನ್ ಗಿಂತ ಹೆಚ್ಚು ಮಂದಿ ಫಾಲೋ ಮಾಡ್ತಿದಾರೆ. ಇಷ್ಟೆಲ್ಲಾ ಜನಪ್ರಿಯತೆ ಇರುವ ಜಸ್ಟಿನ್ ಬೈಬರ್ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಅವರ ಮುಖಕ್ಕೆ ಪಾರ್ಶ್ವ ವಾಯು ಹೊಡೆದಿದೆ. ಹಾಗಂತ ಇದು ಗಾಸಿಪ್ ಅಲ್ಲ. ಈ ವಿಚಾರವನ್ನು ಖುದ್ದು ಜಸ್ಟಿನ್ ಬೈಬರ್ ಅವರೇ ಖಚಿತ ಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿರುವ ಅವರು ತಮ್ಮ ಪರಿಸ್ಥಿತಿಗೆ ಕಾರಣ ಏನು ಅನ್ನುವುದನ್ನು ಎಕ್ಸಪ್ಲೈನ್ ಮಾಡಿದ್ದಾರೆ. ತಮ್ಮ ನೆಚ್ಚಿನ ಗಾಯಕನಿಗೆ ಈ ರೀತಿ ಆಗಿರುವುದನ್ನು ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿದೆ.
ಹಾಗೆ ತಮಗೆ ಮುಖದ ಪಾರ್ಶ್ವವಾಯು ಆಗುವುದಕ್ಕೆ ಒಂದು ಕಾರಣ ಅಂತ ಜಸ್ಟಿನ್ ಬೈಬರ್ ವಿವರಿಸಿದ್ದಾರೆ. ಈ ವಿಡಿಯೋ ಈಗ ತುಂಬಾ ವೈರಲ್ ಆಗುತ್ತಿದೆ. ಕೋವುಡ್ ಕಾರಣದಿಂದ ಜಸ್ಟಿನ್ ಬೈಬರ್ ಅವರ ಹಲವು ಶೋ ರದ್ದಾಗಿದ್ದವು. ಈಗ ಅನಾರೋಗ್ಯದ ಕಾರಣದಿಂದ ಸಂಗೀತ ಸಮಾರಂಭ ಕ್ಯಾನ್ಸಲ್ ಆಗಿದೆ. ಅದಕ್ಕೆ ಮುಖದ ಪಾರ್ಶ್ವವಾಯು ಕಾರಣ ಅಂತ ಅವರೇ ಹೇಳಿಕೊಂಡಿದ್ದಾರೆ. ಒಂದು ವೈರಸ್ ಅವರ ಕಿವಿಯನ್ನು ಹೊಕ್ಕಿದೆ ಹೀಗಾಗಿ ಅವರಿಗೆ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ. ಒಂದು ಕಡೆ ಅವರ ಒಂದು ಕಣ್ಣು ಮುಚ್ಚುಲು ಸಾಧ್ಯ ಆಗುತ್ತಿಲ್ಲ. ನಕ್ಕರೆ ಒಂದು ಕಡೆ ತುಟಿಗಳು ಮಾತ್ರ ಸ್ಪಂದಿಸುತ್ತವೆ. ಪಾರ್ಶ್ವವಾಯು ಆಗಿರುವ ಭಾಗ ನಿಷ್ಕ್ರಿಯ ಆದ ಹಾಗೆ ಕಾಣುತ್ತಿದೆ. ಜಸ್ಟಿನ್ ಬೈಬರ್ ಈ ಸ್ಥಿತಿಗೆ ಅಭಿಮಾನಿಗಳು ಬಹಳ ಬೇಜಾರಾಗಿದ್ದಾರೆ.
ಈ ವೀಡಿಯೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಒಂದು ವರೆ ಕೋಟಿ ಗೊ ಅಧಿಕ ಜನರು ಇದನ್ನು ನೋಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಇದಕ್ಕೆ ರಿಯಾಕ್ಟ್ ಮಾಡುತ್ತಿದ್ದಾರೆ. ನಾವೆಲ್ಲರೂ ನಿಮಗಾಗಿ ಪ್ರಾರ್ಥನೆ ಮಾಡ್ತೀವಿ ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕ ಸೂಪರ್ ಹಿಟ್ ಇಂಗ್ಲಿಷ್ ಗೀತೆಗಳಿಗೆ ಜಸ್ಟಿನ್ ಬೈಬರ್ ದನಿಯಾಗಿದ್ದಾರೆ. ಅವರ ಮ್ಯೂಸಿಕ್ ವಿಡಿಯೋಗಳಿಗೆ ವಿಶ್ವದಾದ್ಯಂತ ಅನೇಕ ಫ್ಯಾನ್ಸ್ ಇದಾರೆ. ಜಗತ್ತಿನ ಅನೇಕ ಕಡೆಗಳಲ್ಲಿ ಅವರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಆದ್ರೆ ಈಗ ಸಧ್ಯ ಅನಾರೋಗ್ಯದ ಕಾರಣದಿಂದ ಜಸ್ಟಿನ್ ಬೈಬರ್ ಅವರು ಯಾವುದೇ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿ ಆಗ್ತಾ ಇಲ್ಲ. ಸಧ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ನಾವು ಆಶಿಸೋಣ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.