ಒಂಭತ್ತು ಅಡಿ ಎತ್ತರವಿರುವ ಇಲ್ಲಿನ ಶಿವಲಿಂಗದ ವೈಶಿಷ್ಟ್ಯತೆಗಳು ಏನು ಗೊತ್ತಾ..???

ಒಂಭತ್ತು ಅಡಿ ಎತ್ತರವಿರುವ ಇಲ್ಲಿನ ಶಿವಲಿಂಗದ ವೈಶಿಷ್ಟ್ಯತೆಗಳು ಏನು ಗೊತ್ತಾ..???

ನಮಸ್ತೆ ಪ್ರಿಯ ಓದುಗರೇ, ನಮ್ಮ ರಾಜ್ಯ ಹಲವಾರು ಸಂಸ್ಕೃತಿಗಳ ತವರೂರು. ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ,ವಿಜಯನಗರ ಹೀಗೆ ಅನೇಕ ಸಾಮ್ರಾಜ್ಯಗಳು ಈ ನೆಲದಲ್ಲಿ ತಮ್ಮ ಆಡಳಿತವನ್ನು ನಡೆಸಿ ತಮ್ಮ ಸಂಸ್ಥಾನದ ಕುರುಹಾಗಿ ಅನೇಕ ದೇವಾಲಯಗಳನ್ನು ನಿರ್ಮಿಸಿ ಹೋಗಿದ್ದಾರೆ. ಅದ್ರಲ್ಲೂ ಹಂಪಿಯ ಕಲಾ ಸೌಂದರ್ಯಕ್ಕೆ ತಲೆ ಬಾಗದೆ ಹೋದವರು ಯಾರು ಇಲ್ಲ ಎಂದೇ ಹೇಳಬಹುದು. ಬನ್ನಿ ಇವತ್ತಿನ ಲೇಖನದಲ್ಲಿ ಹಂಪಿಗೆ ಹೋದಾಗ ಭೇಟಿ ನೀಡಬಹುದಾದ ಶಿವನ ಪುಣ್ಯ ಆಲಯದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪಡೆದುಕೊಂಡು ಬರೋಣ. ನಡು ಬಾಗಿದ ವ್ಯಕ್ತಿಯೊಬ್ಬ ಬೃಹತ್ ಶಿವಲಿಂಗಕ್ಕೆ ಪೂಜೆ ಮಾಡುವ ಸನ್ನಿವೇಶದ ಚಿತ್ರವನ್ನು ನಾವೆಲ್ಲ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರ್ಥಿವಿ. ಅತ್ಯಂತ ಸುಂದರವಾದ ಈ ಶಿವಲಿಂಗ ಇರೋದು ಬೇರೆಲ್ಲೋ ಇಲ್ಲ. ಅದು ಹಂಪಿಯ ಸಮೀಪ ಇರುವ ಉಗ್ರ ನರಸಿಂಹ ದೇವಾಲಯದ ಬಳಿ ಇರುವ ಬಡವಿ ಲಿಂಗವಾಗಿದೆ.

ಸದಾ ನೀರಿನಿಂದ ಆವೃತವಾದ ಈ ಸ್ಥಳದಲ್ಲಿ ಒಂಭತ್ತು ಅಡಿಯ ದೊಡ್ಡದಾದ ಏಕಶಿಲಾ ಶಿವನ ಕಿಂಗವಿದ್ದು, ಇಲ್ಲಿನ ಶಿವನು ನಮಗೆ ತ್ರಿನೇತ್ರ ದಾರಿಯಾಗಿ ದರ್ಶನವನ್ನು ನೀಡುತ್ತಾನೆ. ಪರಮೇಶ್ವರನು ಇಲ್ಲಿ ನೀರಿನಿಂದ ಆವೃತವಾಗಿ ಇರ್ವುದರಿಂದ ಈ ದೇವನನ್ನು ಜಲಕಂಠೇಶ್ವರ ಎಂದು ಕರೆಯುತ್ತಾರೆ. ಪುಟ್ಟದಾದ ಗುಡಿಯಲ್ಲಿ ಇರುವ ಇಲ್ಲಿನ ಬೃಹದಾಕಾರದ ಶಿವಲಿಂಗಕ್ಕೆ ಮೇಲ್ಛಾವಣಿ ಇಲ್ಲದೆ ಇರುವುದನ್ನು ನಾವು ನೋಡಬಹುದು. ಇಲ್ಲಿನ ಮೇಲ್ಛಾವಣಿಯ ನ್ನ ಬಹುಮನಿ ಸುಲ್ತಾನರು ಹಾಲು ಮಾಡಿದರೂ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಶಿವನ ಭಕ್ತರಿಗೆ ದರ್ಶನವನ್ನು ನೀಡುತ್ತಾ ಬಂದಿದ್ದಾನೆ. ಸದಾ ಕಾಲ ಶಿವ ಲಿಂಗದ ಸುತ್ತಲೂ ನೀರು ಇರುವುದರಿಂದ ದೇವರನ್ನು ಹತ್ತಿರದಿಂದ ಸ್ಪರ್ಶಿಸಿ ಪೂಜೆ ಮಾಡಲು ಆಗೋದಿಲ್ಲ. ಶಿವಲಿಂಗದ ಪ್ರವೇಶ ದ್ವಾರದ ಬಳಿ ನಿಂತು ಒಂದು ರೂಪಾಯಿ ನಾಣ್ಯವನ್ನು ಎಸೆದರೆ ಆ ನಾಣ್ಯವು ನೀರಿನಲ್ಲಿ ಬೀಳದೆ ಶಿವಲಿಂಗದ ಮೇಲೆ ಹೋಗಿ ಬಿದ್ದರೆ ಸಕಲ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ. ಇಲ್ಲಿನ ಶಿವನ ಮುಂದೆ ನಿಂತು ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಪಟಿಸಿದರೆ ಸಾಕು, ಕರುಣಾ ಪೂರಿತನಾದ ಈ ದೇವನು ನಮ್ಮೆಲ್ಲ ಕೋರಿಕೆಗಳನ್ನು ಮಾನ್ಯ ಮಾಡ್ತಾನೆ ಎಂದು ಹೇಳಲಾಗುತ್ತದೆ.

ಈ ಸ್ಥಳದಲ್ಲಿ ಬೃಹತ್ ಲಿಂಗವನ್ನು ಸ್ಥಾಪನೆ ಮಾಡುವುದರ ಹಿಂದೆ ಇಂದು ಜಾನಪದ ಕಥೆ ಇದೆ. ಹಿಂದೆ ಶಿವನ ಪರಮ ಭಕ್ತರು ಆಗಿದ್ದ ಬಡವ ಮಹಿಳೆ ಒಬ್ಬಳು ಶಿವನ ಹತ್ತಿರ ನನ್ನ ಮನದ ಆಸೆಯನ್ನು ಪೂರ್ಣ ಮಾಡಿದರೆ ನಿಮಗೆ ಒಂದು ಶಿವಲಿಂಗವನ್ನು ಹರಕೆ ಹೇಳಿಕೊಳ್ಳುತ್ತಾಳೆ. ಇವಳ ಭಕ್ತಿಗೆ ಮೆಚ್ಚಿ ಪರಮೇಶ್ವರ ಆಕೆಯ ಮನಸ್ಸಿನ ಕೋರಿಕೆಗಳನ್ನು ಮಾನ್ಯ ಮಾಡುತ್ತಾನೆ. ಇದರಿಂದ ಅವಳು ಸಂತುಷ್ಟಗೊಂಡು ಶಿವನಿಗೆ ಈ ಬೃಹತ್ ಲಿಂಗವನ್ನು ನಿರ್ಮಾಣ ಮಾಡಿದಳು ಎಂದು ಒಂದು ಕಥೆಯಲ್ಲಿ ಹೇಳಿದ್ದಾರೆ. ಹಾಗೂ ಬಡವ ಮಹಿಳೆ ಈ ಲಿಂಗವನ್ನು ಸ್ಥಾಪನೆ ಮಾಡಿರುವುದರಿಂದ ಈ ಲಿಂಗವನ್ನು ಬಡವಿ ಲಿಂಗ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನವು ವಿಜಯನಗರ ಜಿಲ್ಲೆಯ ಐತಿಹಾಸಿಕ ನಗರಿ ಹಂಪಿಯಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ಐತಿಹಾಸಿಕ ಬಡವಿ ಲಿಂಗದ ದರ್ಶನ ಪಡೆಯಿರಿ. ಶುಭದಿನ.

ಭಕ್ತಿ