ಎನ್ ಗುರು ಇದು ! ಹುಲಿನ ನಾಯಿ ಥರ ಕರ್ಕೊಂಡು ಹೋಗ್ತಿದ್ದಾನೆ..!!! ಕೊನೆಗೂ ಮೆಕ್ಸಿಕೋದಲ್ಲಿ ಸಿಕ್ಕಿಬಿದ್ದ ಹುಲಿ ಕಳ್ಳ!

ನಮಸ್ತೆ ಪ್ರಿಯ ಓದುಗರೇ, ಇತ್ತೀಚೆಗೆ ಒಬ್ಬ ಮನುಷ್ಯ ಹುಲಿಯನ್ನು ನಾಯಿ ಥರ ಕರ್ಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ನೀವು ಕೂಡ ನೋಡಿರಬಹುದು. ನೋಡಿಲ್ಲ ಅಂದ್ರೆ ಈಗಲೇ ನೋಡಿ. ಅಸಲಿ ಸುದ್ದಿ ಏನು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಆರಾಮಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಹುಲಿಯನ್ನು ನೋಡಿ ಅಲ್ಲಿನ ಜನರು ಬೆಚ್ಚಿ ಬಿದ್ದ ಜನರು. ನೋಡ ನೋಡುತ್ತಿದ್ದಂತೆ ಅತ್ತಿಂದ ಬಂದ ಯುವಕನೊಬ್ಬ ಹುಲಿಯನ್ನು ಹಗ್ಗದಲ್ಲಿ ಕಟ್ಟಿ ಕರ್ಕೊಂಡು ಹೋಗ್ತಿದ್ದಾನೇ. ಮುಂದೆ ಆಗಿದ್ದೆ ಬೇರೆ. ಸಾಮಾನ್ಯವಾಗಿ ನಾಯಿ ಕಂಡರೆ ಸಾಕು ಭಯ ಪಡುವವರೆ ಹೆಚ್ಚು, ಅಂಥಾದ್ದರಲ್ಲಿ ಈತ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಾಗ್ರವನ್ನು ಕರೆದುಕೊಂಡು ಹೋಗುತ್ತಿದ್ದಾನೆ. ಆಶ್ಚರ್ಯ ಪಡುವ ವಿಷಯ ಏನು ಗೊತ್ತಾ? ಈ ಹುಲಿ ರಾಯ ಸುಮ್ಮನೆ ಇದ್ದಿದ್ದೇ ದೊಡ್ಡ ಆಶ್ಚರ್ಯ. ಆತ ಬಂದ ಹಗ್ಗವನ್ನು ಹುಲಿಯ ಕುತ್ತಿಗೆಗೆ ಹಾಕಿದ ಕರ್ಕೊಂಡು ಹೋದ.

ಹೌದು! ಹುಲಿ ಕೂಡ ಅವನ ಅನುಸರಿಸಿ ಅವನ ಹಿಂದೆ ಹೋಯ್ತು. ಮುಂದೆ ಆಗಿದ್ದು ಬೇರೇನೇ. ಅದೇನು ಎಂದು ನೋಡೋಣ. ಬೆಂಗಾಲ್ ಹುಲಿಯಂತೆ ಕಾಣುವ ಹುಲಿಯೊಂದು ಮಕ್ಸಿಕೊ ಪಟ್ಟಣದ ಟೇಕುಲಾರ್ ನಗರದಲ್ಲಿ ಕಾಣಿಸಿಕೊಂಡಿದೆ. ಈ ವೇಳೆ ರಸ್ತೆಯಲ್ಲಿ ಹುಲಿಗೆ ಮುಖಾ ಮುಖಿಯಾದ ಜನರು ಹೃದಯದ ಕಂಪನ ವೇಗವನ್ನು ಪಡೆದುಕೊಂಡರೂ ಕೂಡ ರಸ್ತೆಯಲ್ಲಿದ್ದ ಜನರು ಹುಲಿಯ ವಿಡಿಯೋ ಮಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಹುಲಿಗೆ ರಸ್ತೆಯಲ್ಲಿ ನಡೆದಾಡಿ ಸುಸ್ಥಾಯ್ತು ಏನೂ ಗೊತ್ತಿಲ್ಲ. ಒಂದು ಬೈಕ್ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ನೋಡು ನೋಡ್ತಾ ಇದ್ದಂತೆ ಹುಲಿಯ ಬಳಿ ಬಂದ ವ್ಯಕ್ತಿಯೊಬ್ಬ, ಹಗ್ಗದಿಂದ ಕಟ್ಟಿ ಕರೆದುಕೊಂಡು ಹೋದ. ಹುಲಿಯು ಕೂಡ ಸೈಲೆಂಟ್ ಆಗಿ ಅವನ ಹಿಂದೆ ನಡೆದುಕೊಂಡು ಹೋಯ್ತು. ಇದಿಷ್ಟೂ ವೈರಲ್ ವಿಡಿಯೋದಲ್ಲಿ ಸೆರೆಯಾದ ದೃಶ್ಯ. ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಕ್ತಿಯ ಅಸಲೀಯತ್ತು ಬಯಲಿಗೆ ಬಂದಿದೆ. ಅಸಲಿಗೆ ಈ ವ್ಯಕ್ತಿ ಅಕ್ರಮವಾಗಿ ಹುಲಿಯನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ.

ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಯ ಪ್ರಕಾರ ಸಿನಲೋವ ಗಡಿಯಲ್ಲಿ ಹುಲಿಯನ್ನು ಸೆರೆ ಹಿಡಿಯಲಾಗಿದೆ ಅಂತ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಅಟಾರ್ನಿ ಜನರಲ್ ಬುಧವಾರ ಹೇಳಿದ್ದಾರೆ. ಬೆಂಗಾಲ್ ಹುಲಿ ಟೇಕುವಾಲ ಬೀದಿಗಳಲ್ಲಿ ಅಲೆದಾಡುತ್ತಿರುವ ಬಗ್ಗೆ ವರದಿಗಳನ್ನು ಸ್ವೀಕರಿಸಿದ ನಂತರ ಅಕ್ರಮವಾಗಿ ಹುಲಿ ಸಾಕ್ತಾ ಇರುವುದು ತಿಳಿದು ಬಂದಿದೆ. ಹೀಗಾಗಿ ಇಲಾಖೆಯು ರಕ್ಷಣೆ ಮಾಡಿದೆ ಎಂದು ಹೇಳಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಹುಲಿಯ ಉಗುರುಗಳನ್ನು ತೆಗೆಯಲಾಗಿದೆ ಅಂತೆ. ನೋಡಿ ಏನೋ ಮಾಡಲು ಹೋಗಿ ಇನ್ನೇನೋ ಆಯ್ತು ಅಂತಾರಲ್ಲ ಹಾಗೆ ಅಲ್ಲಿದ್ದ ಜನರು ಹುಲಿಯ ವಿಡಿಯೋ ಮಾಡಿ ವಿಡಿಯೋ ನ ಪೋಸ್ಟ್ ಮಾಡ್ತಾರೆ. ಆದ್ರೆ ಅಸಲೀಯತ್ತು ಆ ಕಳ್ಳನ ಕೈವಾಡ ಹುಲಿಯನ್ನು ಸಾಗಾಣಿಕೆ ಮಾಡ್ತಾ ಇದ್ದಿದ್ದು ಅಂತ ಆಮೇಲೆ ತನಿಖೆಯಿಂದ ಬೆಳಕಿಗೆ ಬಂದಿದೆ. ಎಲ್ಲೆಲ್ಲಿ ಎಂಥಾ ಜನರು ಇರ್ಥಾರೋ! ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *