ಅದೊಂದು ಘಟನೆಯಿಂದ ತುಂಡುಡುಗೆ ಧರಿಸದಿರಲು ನಿರ್ಧರಿಸಿದ ಸಾಯಿ ಪಲ್ಲವಿ. ಅವಕಾಶವಿಲ್ಲದಿದ್ದರೊ ಬಟ್ಟೆ ಬಿಚ್ಚಲ್ಲ…!!!

ಅದೊಂದು ಘಟನೆಯಿಂದ ತುಂಡುಡುಗೆ ಧರಿಸದಿರಲು ನಿರ್ಧರಿಸಿದ ಸಾಯಿ ಪಲ್ಲವಿ. ಅವಕಾಶವಿಲ್ಲದಿದ್ದರೊ ಬಟ್ಟೆ ಬಿಚ್ಚಲ್ಲ…!!!

ನಮಸ್ತೆ ಪ್ರಿಯ ಓದುಗರೇ, ಸಿನೆಮಾ ಇಂಡಸ್ಟ್ರಿಯಲ್ಲಿ ನಟಿಯರ ಸ್ಥಾನ ಮಾನ ಎಲ್ಲಿಗೆ ಬಂದು ನಿಂತಿದೆ ಅಂದ್ರೆ, ಹೀರೋಯಿನ್ ಗಳು ಇರುವುದು ಕೇವಲ ಮೈ ತೋರಿಸೋಕೆ ಇರೋದಿಕ್ಕೆ, ಯಾವುದೋ ಒಂದು ಡಾನ್ಸ್ ಗೆ,ಮರ ಸುತ್ತುವುದಕ್ಕೆ ಇಷ್ಟು ಬಿಟ್ರೆ ಸಿನಿಮಾಗಳಲ್ಲಿ ಹೀರೋ ದೇ ಎಲ್ಲವೂ ಕೂಡ. ಅಂದ್ರೆ ಸಂಪೂರ್ಣ ಸಿನೆಮಾವನ್ನು ಆತನೆ ಆಕ್ರಮಿಸಿಕೊಂಡಿರುತ್ತಾನೆ ಎನ್ನುವ ಹಂತಕ್ಕೆ ಬಂದಿದೆ. ಅದರ ಹೊರತಾಗಿಯೂ ಅಲ್ಲಲ್ಲಿ ಮಹಿಳಾ ಪ್ರಧಾನ ಸಿನೆಮಾಗಳು ಬರ್ತಾ ಇರುತ್ತೆ. ಅದರ ಹೊರತಾಗಿ ಕೂಡ ಈ ಮಹಿಳೆಯರು ಅಥವಾ ನಟಿಯರು ದೇಹ ತೋರಿಸಲು ಮಾತ್ರ ಅಂತಹ ಕೆಲವೊಂದಿಷ್ಟು ಮಾತುಗಳು ನಡುವೆಯೂ ಕೂಡ ಕೆಲವೇ ಕೆಲವು ನಟಿಯರು ಕೇವಲ ಪ್ರತಿಭೆಗಳ ಮೂಲಕ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಅವಕಾಶಗಳು ಇಲ್ಲದೆ ಹೋದ್ರೂ ಪರವಾಗಿಲ್ಲ ನಾನು ದೇಹ ತೋರಿಸಲ್ಲ, ಬಟ್ಟೆ ಬಿಚ್ಚಲು ತಯಾರಿಲ್ಲ ಎನ್ನುವಂತಹ ನಟಿಯರು ಇದ್ದಾರೆ. ಅದರಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವವರು ಅಂದ್ರೆ ಸಾಯಿ ಪಲ್ಲವಿ.

ಸಾಯಿ ಪಲ್ಲವಿ ಅಂದ್ರೆ ಇಡೀ ಭಾರತದಾದ್ಯಂತ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗ ಇದೆ. ಅವರನ್ನು ವಿಶೇಷವಾಗಿ ಗೌರವಿಸುವವರು ಇದ್ದಾರೆ. ಪ್ರಮುಖವಾಗಿ ನಾನು ಹೆಗಿದ್ದಿನಿ ಹಾಗೆ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಅನ್ನುವುದು ಸಾಯಿ ಪಲ್ಲವಿ ಅವರ ಪ್ರಮುಖವಾದ ನಿಲುವು ಸಿದ್ಧಾಂತ. ಅದೇ ರೀತಿಯಾಗಿ ಹಲವು ಸಿನಿಮಾಗಳಲ್ಲಿ ಅವರ ಮುಖದಲ್ಲಿ ಹೇಗೆ ಗುಳ್ಳೆ ಮೊಡವೆಗಳು ಇತ್ತು ಹಾಗೆಯೇ ಕಾಣಿಸಿಕೊಂಡಿದ್ದಾರೆ. ಮೇಕಪ್ ಇಲ್ಲದೆ ಕೂಡ ಹಲವು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೂ ಮಿಗಿಲಾಗಿ ಫೇರ್ ಅಂಡ್ ಲವ್ಲಿ ಆಡ್ ಅವಕಾಶ ಬಂದಾಗ ಸ್ಪಷ್ಟವಾಗಿ ಹೇಳಿದ್ರು” ನಾನು ಜನರ ದಾರಿ ತಪ್ಪಿಸಲು ಹೋಗೋದಿಲ್ಲ, ಕಪ್ಪು ಬಣ್ಣ ಬಿಳಿ ಬಣ್ಣ ಇದೇ ನಿಮ್ಮ ದೇಹದ ಕಲರ್ ಆಗಿರಬೇಕು. ಎಂದು ಸಾರಲು ಹೋಗುವುದಿಲ್ಲ.ನೀವು ಹೇಗೆ ಇರುತ್ತೀರ ಹಾಗೆಯೇ ನಿಮ್ಮ ದೇಹ ಇರಬೇಕು ಅದನ್ನೇ ನೀವು ಪ್ರೀತಿಸಬೇಕು ಎನ್ನುವುದು ನನ್ನ ಸಿದ್ಧಾಂತ” ಈ ಕಾರಣಕ್ಕಾಗಿ ನಾನು ಫೇರ್ ಅಂಡ್ ಲವ್ಲಿ ಆಡ್ ನ ಮಾಡೋದಿಲ್ಲ ಎಂದು ಸಾಯಿ ಪಲ್ಲವಿ ಹೇಳಿದರು. ಇದರ ಮೂಲಕ ಇನ್ನಷ್ಟು ಅಭಿಮಾನಿಗಳನ್ನು ಆಕರ್ಷಣೆ ಮಾಡಿದ್ರು. ಪ್ರೀತಿ ಗೌರವ ಹೆಚ್ಚಿಸಿಕೊಂಡರು.

ನೀವು ಸಾಯಿ ಪಲ್ಲವಿ ಅವರ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ನೋಡಿ ಅವರು ಬರೀ ಸೀರೆ ಚೂಡಿದಾರ ಗಳನ್ನು ಮಾತ್ರ ಧರಿಸಿರುತ್ತಾರೆ. ಅವರು ಯಾವುದೇ ಕಾರಣಕ್ಕೂ ತುಂಡುಡುಗೆ ಧರಿಸಲ್ಲ. ಇದಕ್ಕೆ ಒಂದು ಕಾರಣ ಕೂಡ ಇದೆ. ಅದನ್ನು ಸ್ವತಃ ಸಾಯಿ ಪಲ್ಲವಿ ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರ ಪ್ರೆಮಮ್ಮ್ ಸಿನಿಮಾ ಬಂದ ಸಂದರ್ಭದಲ್ಲಿ ಅವರಿಗೆ ವಿಪರೀತ ಪಾಪ್ಯುಲಾರಿಟಿ ಸಿಗುತ್ತೆ ಇದೆ ಸಮಯದಲ್ಲಿ ಅವರ ಹಳೆಯ ಡಾನ್ಸ್ ವಿಡಿಯೋಗಳನ್ನು ಜನರು ವೈರಲ್ ಮಾಡಲು ಶುರು ಮಾಡ್ತಾರೆ ಆಗ ಒಮ್ಮೆ ಸಾಯಿ ಪಲ್ಲವಿ ಜಾರ್ಜಿಯಾ ಗೆ ವಿಧ್ಯಾಭ್ಯಾಸ ಮಾಡಲು ಹೋದಾಗ ಅಲ್ಲಿ ಟ್ಯಾಂಗೋ ಡಾನ್ಸ್ ಕಲಿತಾರೆ. ಆ ಡಾನ್ಸ್ ಮಾಡುವಾಗ ತುಂಡುಡುಗೆ ತೊಟ್ಟು ಡಾನ್ಸ್ ಮಾಡ್ತಾರೆ. ಆ ವಿಡಿಯೋ ವೈರಲ್ ಆಗಿ ಜನ ತುಂಬಾ ಕೆಟ್ಟ ಕೆಟ್ಟ ಕಾಮೆಂಟ್ ಮಾಡಲು ಶುರು ಮಾಡ್ತಾರೆ. ಆಗ ಸಾಯಿ ಪಲ್ಲವಿ ಅವರಿಗೆ ತುಂಬಾ ಮನಸಿಗೆ ಬೇಜಾರಾಗಿ ಅವತ್ತು ನಿರ್ಧಾರ ಮಾಡ್ತಾರೆ, ನಾನು ಮುಂದೆ ಎಂದಿಗೂ ತುಂಡುಡುಗೆ ತೋಡೊದಿಲ್ಲ, ಮೈ ತೊರಿಸಲ್ಲ ಎಂದು. ಹೀಗಾಗಿ ಇಂದಿಗೂ ಅಂದು ಮಾಡಿದ ನಿರ್ಧಾರವನ್ನು ಮರೆಯದೆ ಕೊಟ್ಟ ಮಾತನ್ನು ಉಳಿಸಿಕೊಂಡು ಉತ್ತಮ ಸಿನಿಮಾಗಳನ್ನ ಕೊಡುತ್ತಿದ್ದಾರೆ. ಶುಭದಿನ.

ಉಪಯುಕ್ತ ಮಾಹಿತಿಗಳು