ನಮಸ್ತೆ ಪ್ರಿಯ ಓದುಗರೇ, ಸನಾತನ ಎಷ್ಟು ಪುರಾತನವೂ ಅಷ್ಟೇ ವಿನೂತನ. ಸನಾತನ ಧರ್ಮದಲ್ಲಿ ಮಹಿಳೆ ಅಂದ್ರೆ ಥಟ್ ಅಂತ ನಮ್ಮ ಕಣ್ಣು ಮುಂದೆ ಬರೋದು ಲಕ್ಷಣವಾಗಿ ಹಣೆಗೆ ಕುಂಕುಮ ಇಟ್ಟುಕೊಂಡು ಬಳೆ ತೊಟ್ಟುಕೊಂಡು ಸೀರೆ ಉಟ್ಟಿರುವ ಚಿತ್ರ. ಸೀರೆ ಅಂದಾಕ್ಷಣ ಸನಾತನ ಧರ್ಮದ ಹಿಂದೂ ಧರ್ಮದ ಸಂಸ್ಕೃತಿಯ ಸಂಕೇತ. ಈ ಸೀರೆ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಹೆಣ್ಣಿಗೆ ಸೀರೆ ಚೆಂದ. ಜೀನ್ಸ್, ಟೀಶರ್ಟ್, ಯಾವ ಡ್ರೆಸ್ ಆದ್ರೂ ಅಷ್ಟೇ. ಸೀರೆಯನ್ನು ಮೀರಿಸಲು ಆಗಲ್ಲ. ಸೀರೆ ಹೆಣ್ಣುಮಕ್ಕಳ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಸೀರೆಯನ್ನು ಸುಮಾರು 4 ಸಾವಿರ ವರ್ಷಗಳ ಹಿಂದಿನಿಂದಲೇ ಬಳಸುತ್ತಿದ್ದರು. ಅನೇಕ ಶಾಸನಗಳಲ್ಲಿ ಇದರ ಬಗ್ಗೆ ಉಲ್ಲೇಖ ಇದೆ. ಸೀರೆ ಹೆಣ್ಣಿನ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ ಅದರ ಜೊತೆಗೆ ಗೌರವ ಕೂಡ ಹೆಚ್ಚಿಸುತ್ತದೆ. ಸೀರೆ ಉಡುವುದು ವೈಜ್ಞಾನಿಕವಾಗಿ ಕೂಡ ಒಳ್ಳೆಯದು. ಸೀರೆಯನ್ನು ದೇಹಕ್ಕೆ ಸುತ್ತಿಕೊಳ್ಳುವುದರಿಂದ ದೇಹದ ಸುತ್ತ ಆವರಿಸುವ ನೆಗಟಿವ್ ಎನರ್ಜಿ ದೂರ ಆಗುತ್ತೆ. ಆದ್ರೆ ಇವತ್ತಿನ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಸೀರೆ ಉಡಬೇಕು ಅಂದ್ರೆ ಯಾವುದಾದರೂ ಮದುವೆ, ಫಂಕ್ಷನ್ ಇಲ್ಲವೇ ಹಬ್ಬ ಬರಬೇಕು. ಅದು ಕೂಡ ಸ್ವಲ್ಪ ಹೊತ್ತು ಫೋಟೋಗೆ ಅಂತ ಉಡ್ತಾರೆ.
ಈಗಿನ ಜನರೇಶನ್ ಹೆಣ್ಣು ಮಕ್ಕಳಿಗೆ ಅಂತೂ ಸೀರೆ ಉಡಲು ಬರಲ್ಲ. ನಾವೇ ಸೀರೆ ಮಹತ್ವ ತಿಳಿದುಕೊಂಡಿಲ್ಲ ಅಂದ್ರೆ ನೆಕ್ಸ್ಟ್ ಜನರೇಷನ್ ನ ಕಥೆ ಏನು? ಯಾವಾಗಲೂ ಸೀರೆ ಉಡೂಕೆ ಆಗದೇ ಇದ್ರೂ ಪರವಾಗಿಲ್ಲ. ಪ್ರತೀ ಸನಾತನ ಹಬ್ಬ, ಮದುವೆ, ಪೂಜೆ ದಿನದಂದು ಮತ್ತು ದೇವಸ್ಥಾನಕ್ಕೆ ಹೋಗುವಾಗ ಲಕ್ಷಣವಾಗಿ ಸೀರೆ ತೊಟ್ಟು ಹೋಗೋಣ. ಸನಾತನ ಸಂಸ್ಕೃತಿ ಯ ಉಡುಗೆಯನ್ನು ಮುಂದುವರೆಸೋಣ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.