ನಮಸ್ತೆ ಪ್ರಿಯ ಓದುಗರೇ, ಅದು 24 ವರ್ಷದ ಹಿಂದಿನ ಪಾಪ. ಇವತ್ತಿಗೂ ಸಲ್ಮಾನ್ ಖಾನ್ ನ ಕಾಡ್ತಾ ಇದೆ. 4 ವರ್ಷದ ಹಿಂದೆ ಸಲ್ಮಾನ್ ಖಾನ್ ನನ್ನು ಅವನೊಬ್ಬ ಮುಗಿಸ್ತಿನಿ ಅಂದಿದ್ದ. ಈಗ ಮತ್ತೆ ಅಪ್ಪ ಮಗನನ್ನು ಕೊಲ್ಲುತ್ತಿವಿ ಅಂತ ಬೆದರಿಕೆ ಬಂದಿದೆ. ಎರಡೂ ಬೆದರಿಕೆಗಳ ಕಾರಣ ಒಂದೇ. ಅದೇ 24 ವರ್ಷದ ಹಿಂದೆ ಮಾಡಿದ್ದ ಪಾಪದ ಕೃತ್ಯ. ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್. ಸಲ್ಮಾನ್ ಗೆ ರಾತ್ರಿ ಈಗ ಸರಿಯಾಗಿ ನಿದ್ರೆ ಬರ್ತಿಲ್ಲ. ಸೆಕ್ಯೂರಿಟಿ ಇಲ್ಲದೆ ಇರೋಕೆ ಆಗ್ತಿಲ್ಲ. ಕಾರಣ ಭಯ. ಜೀವದ ಮೇಲಿನ ಭಯ. ತಂದೆ ಸಲೀಮ್ ಖಾನ್ ಮಗ ಸಲ್ಮಾನ್ ಖಾನ್ ಇಬ್ಬರೂ ಬೆದರುವುದಕ್ಕೆ ಕಾರಣ ಒಂದು ಲೆಟರ್. ಸಲೀಮ್ ಖಾನ್ ಸೆಕ್ಯುರಿಟಿ ಜೊತೆಗೆ ಜಾಗಿಂಗ್ ಹೋಗ್ತಾರೆ. ಜಾಗಿಂಗ್ ಮಧ್ಯದಲ್ಲಿ ಸಲೀಮ್ ಖಾನ್ ಒಂದು ಜಾಗದಲ್ಲಿ ರೆಸ್ಟ್ ಮಾಡ್ತಾರೆ. ಆದ್ರೆ ಅದೊಂದು ದಿನ ಬೆಂಚ್ ಮೇಲೆ ಕುಳಿತಿದ್ದ ಸಲೀಮ್ ಖಾನ್ ಗೆ ಒಂದು ಚೀಟಿ ಸಿಗುತ್ತೆ.
ಆ ಚೀಟಿಯಲ್ಲಿ ಏನೋ ಬರೆದಿತ್ತು, ಅದನ್ನ ಓದಿದ್ದೆ ತಡ ಸಲೀಮ್ ಖಾನ್ ಬೇವರಿದ್ರು. ಯಾಕಂದ್ರೆ ಆ ಚೀಟಿಯಲ್ಲಿ ಇದ್ದದ್ದು. ಪಂಜಾಬ್ ನ ಮೂಸಾವಾಲ ರೀತಿಯಲ್ಲಿ ನಿಮ್ಮನ್ನು ಕೊಲೆ ಮಾಡ್ತೀವಿ ಅಂತ. ಸಲೀಮ್ ಖಾನ್ ನೇರವಾಗಿ ಬಾಂಡ್ರ ಪೋಲಿಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಟ್ ಕೊಡ್ತಾರೆ. ಪೊಲೀಸರು ತನಿಖೆ ಮಾಡ್ತಾ ಇದಾರೆ. ಅಷ್ಟಕ್ಕೂ ಸಿದ್ದು ಮೂಸವಾಲ ನ ಕೊಲೆಯ ಬಗ್ಗೆ ಈ ಚೀಟಿಯಲ್ಲಿ ಯಾಕೆ ಬರೆದಿದ್ರು ಅಲ್ಲೇ ಇರೋದು ಅಸಲಿ ಕಥೆ. ಪಂಜಾಬ್ ನ ರಾಪ್ ಸಿಂಗರ್ ಸಿದ್ದು ಮೂಸವಾಲ ರೀಸೆಂಟ್ ಆಗಿ ಕೊಲೆ ಆಗಿದ್ದ. ಸಿದ್ದು ಕೊಲೆಯನ್ನು ನಾವೇ ಮಾಡಿದ್ದು ಅಂತ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೊಯ್ ಹೇಳಿಕೊಂಡಿದ್ದ. ಇದೇ ಲಾರೆನ್ಸ್ ಬಿಷ್ಣೊಯ್ 4 ವರ್ಷದ ಹಿಂದೆ ಸಲ್ಮಾನ್ ಖಾನ್ ಗೂ ಬೆದರಿಕೆ ನೀಡಿದ್ದ. ಅದಕ್ಕೆ ಕಾರಣ ಸಲ್ಲು ಮಾಡಿದ ಒಂದು ತಪ್ಪು. 1998 ರಲ್ಲಿ ಸಲ್ಮಾನ್ ಖಾನ್ ಕೃಷ್ಣ ಮೃಗದ ಬೇಟೆ ಆಡಿ ಮಹಾಪಾಪ ಮಾಡಿಬಿಟ್ಟಿದ್ದ. ಕೃಷ್ಣ ಮೃಗ ಅಂದ್ರೆ ಬಿಷ್ಣೊಯ್ ಸಮುದಾಯಕ್ಕೆ ಪವಿತ್ರವಾದ ಪ್ರಾಣಿ. ಸೋ ಅದನ್ನು ಬೇಟೆ ಆಡಿದ್ದಕ್ಕೆ ಬಿಷ್ಣೊಯ್ ಸಮುದಾಯಕ್ಕೆ ತುಂಬಾ ನೋವಾಗಿತ್ತು. ಆ ಕಾರಣಕ್ಕೆ 2018 ರಲ್ಲಿ ಲಾರೆನ್ಸ್ ಬಿಷ್ಣೊಯ್ ಸಲ್ಮಾನ್ ಖಾನ್ ನನ್ನು ಮುಗಿಸ್ತಿನಿ ಅಂತ ಕೋರ್ಟ್ ಮುಂದೇನೆ ಹೇಳಿಕೊಂಡಿದ್ದ.
ಅದನ್ನು ಯಾರೂ ಕೂಡ ಸೀರಿಯಸ್ ಆಗಿ ತಗೊಂಡಿರಲಿಲ್ಲ. ಯಾಕಂದ್ರೆ ಲಾರೆನ್ಸ್ ಒಬ್ಬ ಡಾನ್ ಅನ್ನೋದು ಯಾರಿಗೂ ಗೊತ್ತೇ ಇರಲಿಲ್ಲ. ಲಾರೆನ್ಸ್ ಬಿಷ್ಣೊಯ್ ಕಾಲೇಜ್ ದಿನಗಳಲ್ಲಿ ಹವಾ ಶುರು ಮಾಡಿದ್ದ ಹರಿಯಾಣದ ಡಾನ್. ಇವನದು ಒಂಥರಾ ಇಂಟರೆಸ್ಟಿಂಗ್ ಕಾರೆಕ್ಟರ್. ತಂದೆ ಪೊಲೀಸ್ ಕಾನ್ಸ್ಟೇಬಲ್, ಈತ LLB ಮುಗಿಸಿದ್ದ. ಲಾ ಮುಗಿಸಿ ಲಾಯರ್ ಆಗಬೇಕಿದ್ದವನು ಭೂಗತ ಲೋಕಕ್ಕೆ ಕಾಲು ಇಡ್ತಾನೆ. ಚಿಕ್ಕ ಪುಟ್ಟ ಕ್ರೈಮ್ ಮಾಡ್ತಾ ಲಾರೆನ್ಸ್ ತನ್ನದೇ ಆದ ಗ್ಯಾಂಗ್ ಕಟ್ಟಿದ್ದ. ಮಧ್ಯ ಮಾಫಿಯಾ ಗು ಕೈ ಹಾಕಿದ್ದ. ಹೀಗೆ ಪಂಜಾಬ್ ಹರಿಯಾಣ ದಲ್ಲಿ ಮೆರೆದು ಇಂಟರ್ನ್ಯಾಷನಲ್ ಲೆವೆಲ್ ಅಲ್ಲಿ ನೆಟ್ವರ್ಕ್ ಬೆಳೆಸಿದ. ಮುಂದೆ ಇದೇ ಬಿಷ್ಣೊಯ್ 2018 ರಲ್ಲಿ ಸಲ್ಮಾನ್ ಖಾನ್ ನನ್ನು ಮುಗಿಸ್ಥಿನಿ ಅಂದು ಇನ್ನೂ ಫೇಮಸ್ ಆಗಿದ್ದ. ಈಗ ಮತ್ತೆ ಸಲ್ಮಾನ್ ಖಾನ್ ಹಾಗೂ ತಂದೆ ಸಲೀಮ್ ಖಾನ್ ಗೆ ಬೆದರಿಕೆ ಬಂದಿದೆ. ಇದು ಕೂಡ ಅವನಿಂದಲೇ ನ? ಇದೆ ವಿಷಯಕ್ಕೆ? ಅನ್ನುವುದು ಇನ್ವೆಸ್ಟಿಗೇಷನ್ ಅಲ್ಲಿ ಗೊತ್ತಾಗಬೇಕು. ಸಲ್ಮಾನ್ ಖಾನ್ ಗೆ 24 ವರ್ಷದಿಂದ ಅದೊಂದು ಪಾಪ ಇನ್ನಿಲ್ಲದೆ ಕಾಡ್ತಾ ಇರೋದು ಸುಳ್ಳಲ್ಲ. ಸಧ್ಯಕ್ಕೆ ಸ್ವಲ್ಪ ರಿಲ್ಯಾಕ್ಸ್ ಆಗಿದ್ದ ಸಲ್ಮಾನ್ ಖಾನ್ ಹೆದರಿಕೆಯನ್ನು ಬದುಕು ನಡೆಸುವ ಹಾಗಾಗಿದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.