ತಮ್ಮ ಮುಂಬರುವ ಚಿತ್ರ ಪ್ರಾಜೆಕ್ಟ್ ಕೆ ಚಿತ್ರೀಕರಣಕ್ಕಾಗಿ ಹೈದರಾಬಾದ್ ನಲ್ಲಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇದ್ದಕ್ಕಿದ್ದ ಆಸ್ಪತ್ರೆಗೆ ದಾಖಲಾದರು ಎಂಬ ಸುದ್ದಿ ಹರಿದಾಡುತ್ತಿದೆ ಮೂಲತಃ ಬೆಂಗಳೂರಿನವರು ಆಗಿದ್ದ ದೀಪಿಕಾ ಪಡುಕೋಣೆ ಅವರು ತಮ್ಮ ಸಿನಿಮಾ ಪಯಣವನ್ನು ಶುರುಮಾಡಿದ್ದು ನಮ್ಮ ಕನ್ನಡ ಚಿತ್ರದಿಂದ ನಂತರ ಶಾರುಖ್ ಖಾನ್ ಅವರ ಜೊತೆಗೆ ಕೂಡಿ ಮಾಡಿದ ಓಂ ಶಾಂತಿ ಓಂ ಎಂಬ ಚಿತ್ರದಿಂದ ಅವರಿಗೆ ಹಲವಾರು ಅವಕಾಶಗಳು ಸಿಕ್ಕವು ನಂತರ ಅವರು ದೊಡ್ಡ ಸ್ಟಾರ್ ಆದರು ಮೂಲಗಳ ಪ್ರಕಾರ, ನಟಿಯ ಹೃದಯ ಬಡಿತ ಹೆಚ್ಚಾದ ನಂತರ ಅಸ್ವಸ್ಥಗೊಂಡಿದ್ದರು.
ಹೀಗಾಗಿ ತಕ್ಷಣವೇ ಅವರನ್ನು ನಗರದ ಕಾಮಿನೇನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ನಟಿ ದೀಪಿಕಾ ಪಡುಕೋಣೆಯನ್ನು ಪರೀಕ್ಷಿಸಿದರು. ಚಿಕಿತ್ಸೆಯ ನಂತರ, ದೀಪಿಕಾ ತನ್ನ ಹೃದಯ ಬಡಿತ ಸ್ಥಿರವಾಗುತ್ತಿದ್ದಂತೆ ಅಮಿತಾಬ್ ಬಚ್ಚನ್ ಅವರೊಂದಿಗೆ ಚಿತ್ರೀಕರಣಕ್ಕಾಗಿ ಸೆಟ್ಗೆ ಮರಳಿದರು ಎಂದು ತಿಳಿದು ಬಂದಿದೆ.ಪ್ರಾಜೆಕ್ಟ್ ಕೆ ಪ್ರಭಾಸ್ ಅವರೊಂದಿಗೆ ದೀಪಿಕಾ ಅವರ ಮೊದಲ ಚಿತ್ರವಾಗಿದೆ. ಇದರಲ್ಲಿ ಅಮಿತಾಭ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಗುರು ಪೂರ್ಣಿಮೆಯಂದು, ಅಮಿತಾಭ್ ಬಚ್ಚನ್ ಅವರು ಬಹುನಿರೀಕ್ಷಿತ ಪ್ರಭಾಸ್ ಅಭಿನಯದ ಚಿತ್ರದ ಮುಹೂರ್ತದ ಚಿತ್ರೀಕರಣ ಆರಂಭಗೊಂಡಿತ್ತು.
ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ಅಭಿನಯದ ಸಿನಿಮಾ ಇದಾಗಿದ್ದು ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ.ಸತತ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಿಂದ ಮತ್ತು ವಿಶ್ರಾಂತಿಯ ಕೊರತೆಯಿಂದ ಹೀಗಾಗಬಹುದು ಎಂದು ಹೇಳಲಾಗುತ್ತಿದೆ.ಸ್ಯಾಂಡಲ್ವುಡ್ನ ಉಪೇಂದ್ರ ನಟನೆಯ ಐಶ್ವರ್ಯ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ದೀಪಿಕಾ ಬಳಿಕ ದಕ್ಷಿಣ ಭಾರತದ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಪ್ರಾಜೆಕ್ಟ್ ಕೆ ಚಿತ್ರದ ಮೂಲಕ ಇತ್ತ ಮುಖ ಮಾಡಿದ್ದಾರೆ.ರಿಯಲ್ ಸ್ಟಾರ್ ಉಪೇಂದ್ರ ನಟನೆಯ `ಐಶ್ವರ್ಯ’ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಇದಾದ ಬಳಿಕ ಅವರು ದಕ್ಷಿಣ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ `ಪ್ರಾಜೆಕ್ಟ್ ಕೆ’ ಚಿತ್ರದಿಂದ ದಕ್ಷಿಣದ ಸ್ಟಾರ್ ನಟನ ಜತೆ ನಟಿಸುತ್ತಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ದಿಶಾ ಪಟಾಣಿ ಕೂಡ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಸದ್ಯ, ಶಾರುಖ್ ಖಾನ್ ಜೊತೆ `ಪಠಾಣ್’ ಮತ್ತು ಹೃತಿಕ್ ರೋಷನ್ ಜೊತೆ `ಫೈಟರ್’ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ದೀಪಿಕಾ ಅವರು ಬೇಗನೆ ಹುಷಾರಾಗಲಿ ಎಂದು ಬೇಡಿಕೊಳ್ಳೋಣ. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ