ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಸಾಲ ಸಾವಿರದಲ್ಲಿ ಇರಲಿ ಪಕ್ಷಗಳಲ್ಲಿ ಇರಲಿ ಶಾಸ್ತ್ರಗಳಲ್ಲಿ ಹೇಳಿರುವಂತೆ ಕೇವಲ ಒಂದು ವಿಲ್ಯೆದೇಲೇ, ಎರಡು ಲವಂಗ, ಎರಡು ಏಲಕ್ಕಿ ತೆಗೆದುಕೊಂಡು ಈ ಪ್ರಯೋಗ ಮಾಡುವುದರಿಂದ ಇಂಥ ದೊಡ್ಡ ಸಾಲವನ್ನು ಸಹ ತೀರಿಸಬಹುದು ಎನ್ನುವುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಸಾಲ ಅಂತ ಇದ್ರೆ ನಮ್ಮನ್ನು ರಾತ್ರಿ ನಿದ್ದೆ ಮಾಡೋಕೆ ಬಿಡೋಲ್ಲ. ಯಾವಾಗ ಸಾಲ ತೀರಿಸುತ್ತೇವೆ ಎನ್ನುವ ಚಿಂತೆ ಹಗಲಿರುಳು ನಮ್ಮನ್ನು ಕಾಡುತ್ತಾ ಇರುತ್ತದೆ. ಸಾಲ ಇಲ್ಲದ ಜೀವನ ಅತೀ ಸುಖಮಯ ಜೀವನ ಎಂದೇ ಹೇಳಬಹುದು. ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ, ಆದ್ರೆ ಅದನ್ನು ತೀರಿಸುವುದು ಅತೀ ಕಷ್ಟದ ಕೆಲಸ ಅಂತ ಎಲ್ಲರಿಗೂ ಗೊತ್ತು. ಕೆಲವೊಮ್ಮೆ ಪರಿಸ್ಥಿತಿಗಳು ಹೇಗೆ ಬರುತ್ತೆ ಅಂದ್ರೆ ತೆಗೆದುಕೊಂಡ ಸಾಲವನ್ನು ತೀರಿಸಲು ಜೀವನ ಪೂರ್ತಿ ಕಳೆಯಬೇಕಾಗುತ್ತದೆ. ಸಾಲದಲ್ಲಿ ಸಿಲುಕಿರುವ ವ್ಯಕ್ತಿ ಮಾತ್ರ ಅಲ್ಲ ಅವನ ಇಡೀ ಕುಟುಂಬದ ಸದಸ್ಯರು ಕಷ್ಟ ಅನುಭವಿಸಬೇಕಾಗುತ್ತದೆ.
ಸಾಲದ ಬಿಸಿ ಹೇಗಿರುತ್ತೆ ಅಂದ್ರೆ, ಮನೆಯ ಮುಖ್ಯಸ್ಥ ತನ್ನ ಕಷ್ಟಗಳನ್ನು ಹೆಂಡತಿ ಮಕ್ಕಳ ಮೇಲೆ ಕೂಗಾಡುವುದರ ಮುಖಾಂತರ ಇಲ್ಲವೇ ಜಗಳ ಆಡುವ ಮೂಲಕ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇಲ್ಲದಂತಾಗುತ್ತದೆ. ಸಾಲ ತೆಗೆದುಕೊಳ್ಳುವಾಗ ಮುಂದೆ ಅದರ ಪರಿಣಾಮಗಳ ಬಗ್ಗೆ ಯೋಚನೆ ಮಾಡದೆ ಸಾಲ ತೆಗೆದುಕೊಂಡರೆ ತೀರಿಸಲು ಆಗದೆ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಸ್ನೇಹಿತರೆ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಮಂಗಳವಾರ, ಶನಿವಾರ ಯಾವುದೇ ಕಾರಣಕ್ಕೂ ಸಾಲ ತೆಗೆದುಕೊಳ್ಳಬಾರದು. ನೀವೇನಾದರೂ ಮಂಗಳವಾರ ಶನಿವಾರ ಸಾಲ ತೆಗೆದುಕೊಂಡರೆ ಅದನ್ನು ತೀರಿಸಲು ನೀವು ಹಲವಾರು ವರ್ಷಗಳನ್ನು ತೆಗೆದುಕೊಳ್ಳಬಹುದು. ಅಥವಾ ಸಾಲ ತೀರಿಸುವುದು ಕಷ್ಟ ಆಗಬಹುದು. 8 ಶನಿಯ ಸಂಖ್ಯೆ ಎಂದು ಹೇಳಲಾಗುತ್ತದೆ. ಹಾಗಾಗಿ 8,17,26 ಈ ದಿನಾಂಕಗಳಲ್ಲಿ ಸಾಲ ತೆಗೆದುಕೊಳ್ಳಬಾರದು. ಅಥವಾ ಸಾಲದ ಪತ್ರಕ್ಕೆ ಈ ದಿನಾಂಕ ದಲ್ಲಿ ಸಹಿ ಕೂಡ ಮಾಡಬಾರದು. ಸಾಲ ಪಡೆಯುವ ಅನಿವಾರ್ಯತೆ ಇದ್ರೆ ಸೋಮವಾರ,ಬುಧವಾರ ಅಥವಾ ಶುಕ್ರವಾರ ಪಡೆಯಬಹುದು. ಈ ದಿನಗಳಲ್ಲಿ ಪಡೆದ ಸಾಲ ಬೇಗ ತೀರುತ್ತದೆ.
ಸಾಲ ಪಡೆಯುವ ಮೊದಲು ಈಶ್ವರನ ಸ್ಮರಣೆ ಮಾಡಬೇಕು. ಸಾಲ ತೀರಿಸುವುದು ಕಷ್ಟದ ಕೆಲಸ ಆದ್ರೆ ಕಠಿಣ ಅಲ್ಲ. ಶಾಸ್ತ್ರಗಳಲ್ಲಿ ಹೇಳಿರುವ ಕೆಲವು ಉಪಾಯಗಳನ್ನು ಮಾಡುವ ಮುಖಾಂತರ ಸಾಲವನ್ನು ಸುಲಭವಾಗಿ ತೀರಿಸಬಹುಡು. ಸಾಲವನ್ನು ತೀರಿಸಲು ಉಪಾಯಗಳು ಯಾವುದು ನೋಡೋಣ ಸ್ನೇಹಿತರೆ. ವಿಲ್ಯೇದೇಲೆ ಅಥವಾ ಪಾನ್ ಗೆ ಬಳಸುವ ಎಲೆಗಳನ್ನು ಉಪಯೋಗಿಸುವ ಮೂಲಕ ಸಾಲವನ್ನು ತೀರಿಸಲು ಚಮತ್ಕಾರಿ ಪ್ರಯೋಗ ಮಾಡಬಹುದು. ಸ್ಕಂದ ಪುರಾಣದ ಪ್ರಕಾರ ಸಮುದ್ರ ಮಂಥನದ ಮುಂಚೆ ಈ ಎಲೆಯನ್ನು ಮೊಟ್ಟ ಮೊದಲ ಬಾರಿಗೆ ಬಳಸಲಾಗುತ್ತಿತ್ತು. ಅಂದಿನಿಂದ ಎಲ್ಲಾ ಶುಭ ಕಾರ್ಯಗಳಲ್ಲಿ ಎಲೆಯನ್ನು ಬಳಸುಲಾಗುತ್ತಿದೇ. ಎಲೆಯ ಜೊತೆಗೆ ಬುಧ ಗೃಹದ ನಂಟು ಇದೆ ಎಂದು ಹೇಳಲಾಗುತ್ತದೆ. ಇದು ಹಣಕಾಸಿನ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಈ ಪ್ರಯೋಗ ಮಾಡಲು ಒಂದು ಚೆನ್ನಾಗಿರುವ ಎಲ್ಲೋ ಮುರಿದಿರದ, ಕಿತ್ತು ಹೋಗದೇ ಇರುವ ಎಲೆ ಆಗಬೇಕು, ಅದು ಹಸಿರಾಗಿರಲಿ, ಒಣಗಿರಬಾರದು , ಅದರ ತುಂಬನ್ನೂ ತೆಗೆದುಬಿಡಿ, ನಂತರ ಅದರ ಮೇಲೆ ಒಂದು ಲವಂಗ ಒಂದು ಏಲಕ್ಕಿ ಇಟ್ಟು, ಪಾನ್ ರೀತಿ ಮಡಚಿ ಮಂಗಳವಾರ ಸಂಜೆ ಸ್ನಾನ ಮಾಡಿ, ಸ್ವಚ್ಛ ವಸ್ತ್ರ ಧರಿಸಿ ಆಂಜನೇಯ ದೇಗುಲಕ್ಕೆ ಹೋಗಿ ಈ ಪಾನ್ ನ್ನೂ ಆಂಜನೇಯ ದೇವಸ್ಥಾನಕ್ಕೆ ಕೊಟ್ಟು,ದೇವರ ಪಾದಕ್ಕೆ ಇರಿಸಲು ಅರ್ಚಕರಿಗೆ ಮನವಿ ಮಾಡಿ. ಇದೆ ಕ್ರಮವನ್ನು ಪ್ರತಿ ಮಂಗಳವಾರ ಮೂರು ತಿಂಗಳು ಮಾಡಿ. ಎಲ್ಲಾ ಮಂಗಳವಾರಗಳು ಸಾತ್ವಿಕ ಆಹಾರ ಸೇವಿಸಿ, ಮಾಂಸಾಹಾರ ನಿಷಿದ್ಧ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಶೇರ್ ಮಾಡಿ. ಶುಭದಿನ.