ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಫೈಬ್ರಾಯ್ಡ್ ಯೂಟಿರಸ್ ಸಮಸ್ಯೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ. ಈ ಫೈಬ್ರಾಯ್ಡ್ ಯುಟಿರಸ್ ಸಮಸ್ಯೆ ಸಾಮಾನ್ಯವಾಗಿ ಮಧ್ಯ ವಯಸ್ಕ ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಅಂದ್ರೆ 25-35, 40 ವರ್ಷಗಳ ಹೆಣ್ಣುಮಕ್ಕಳಲ್ಲಿ ಜಾಸ್ತಿ ಈ ಸಮಸ್ಯೆಯನ್ನು ನೋಡಬಹುದು. ಗರ್ಭಕೋಶದಲ್ಲಿ ಗೆಡ್ಡೆ ರೀತಿ ಆಗಿರುತ್ತೆ. ಗೆಡ್ಡೆ ಅಂದ ತಕ್ಷಣ ಇದು ಕ್ಯಾನ್ಸರ್ ಅಲ್ಲ. ಆದ್ರೆ ಇದು ಕೆಲವೊಂದು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟು ಹೆಣ್ಣುಮಕ್ಕಳಿಗೆ ತುಂಬಾ ತೊಂದರೆ ಕೊಡುತ್ತೆ. ಎಷ್ಟೂ ಬಾರಿ ಈ ಫೈಬ್ರೋಯ್ಡ್ ಯು ಇರುವುದು ಇನ್ಯಾವುದೋ ಸಮಸ್ಯೆಗೆ ಸ್ಕ್ಯಾನ್ ಮಾಡಿದಾಗ ಕಾಣ ಸಿಗುತ್ತೆ. ಇನ್ನೂ ಕೆಲವು ಹೆಣ್ಣುಮಕ್ಕಳಲ್ಲಿ ವಿಪರೀತ ಸುಸ್ತು, ಅಥವಾ ವಿಪರೀತ ಋತುಸ್ರಾವ ಜಾಸ್ತಿ ಆಗುತ್ತಾ ಇರುತ್ತದೆ. ಆಗ ಒಂದುವೇಳೆ ಅವರು ವೈದ್ಯರ ಬಳಿ ಹೋದಾಗ ವೈದ್ಯರು ಸ್ಕ್ಯಾನ್ ಮಾಡಿಸಲು ಸಲಹೆ ನೀಡಿದ್ದಾಗ ಇದು ಸಮಸ್ಯೆ ಇರುವುದು ಗೊತ್ತಾಗುತ್ತೆ. ಕೆಲವರು ಅನೀಮಿಯಾ ಇಂದ ಬಳಲುತ್ತಾ ಇರುತ್ತಾರೆ. ಅವರಿಗೆ ಪ್ರತಿ ತಿಂಗಳೂ ಜಾಸ್ತಿ ರಕ್ತರಾವ ಆಗುವುದು ಸಾಮಾನ್ಯ ಅಂದುಕೊಂಡು ಅದು ಮುಂದುವರೆದು ಇಂದಿನ ಅನೀಮಿಯಾ ಸಮಸ್ಯೆಗೆ ಎಡೆ ಮಾಡಿ ಕೊಟ್ಟಿರುತ್ತದೆ. ಸಾಮಾನ್ಯವಾಗಿ 65-70 ಏಮ್.ಎಲ್ ರಕ್ತಸ್ರಾವ ಆಗುವುದು ಸಹಜ.
ಮುಂಚೆ ಪ್ಯಾಡ್ ಬಳಸುತ್ತಾ ಇದ್ದಾಗ ಪ್ಯಾಡ್ ನೋಡಿ, ಅಥಾವ ಎಷ್ಟು ಪ್ಯಾಡ್ ಬಳಸಿದ್ದಾರೆ ಎನ್ನುವುದರ ಮೇಲೆ ರಕ್ತಸ್ರಾವ ಯಾವ ಮಟ್ಟಿಗಿದೆ ಎಂದು ಗೊತ್ತಾಗುತ್ತಿತ್ತು. ಈಗೆಲ್ಲಾ ವೇಜಿನಲ್ ಕಪ್ಸ್ ಅಂತ ಬಂದಿದೆ. ಕೆಲವರು ಈ ಸಮಸ್ಯೆಗೆ ಒಳಪಟ್ಟವರು ತುಂಬಾ ಜಾಸ್ತಿ ರಕ್ತಸ್ರಾವ ವನ್ನಾ ಅನಭವಿಸುತ್ತ ಇರ್ತಾರೆ. ರಕ್ತಸ್ರಾವ ಆಗಿ ಆರಾಮಾಗಿ ಇದ್ದರೆ ತೊಂದರೆ ಇಲ್ಲ. ಆದ್ರೆ ರಕ್ತಸ್ರಾವ ಆಗಿ ನಿಂತ ಮೇಲೆ ವಿಪರೀತ ಸುಸ್ತು, ಆಯಾಸ, ಅನೀಮಿಯಾ, ಹಿಮೋಗ್ಲೋಬಿನ್ ಒಂದೇ ಸಮ ಇಳಿಯುವುದು ಆದಾಗ ಪೈಬ್ರಾಯ್ಡ್ ಯುಟಿರಸ್ ಗೆ ಚಿಕಿತ್ಸೆ ಬೇಕಾಗಿದೆ ಎಂದೇ ಹೇಳಬಹುದು. ಹೋಮಿಯೋಪಥಿ ಯಲ್ಲಿ ಇದಕ್ಕೆ ಬಹಳಷ್ಟು ಒಳ್ಳೆಯ ಔಷಧಿಗಳು ಇವೆ. ಈ ಔಷಧಗಳನ್ನು ಪ್ರತಿಯೊಬ್ಬರ ಮುಟ್ಟಿನ ಸಮಸ್ಯೆಗಳು ಅಂದ್ರೆ ಮುಟ್ಟಿನ ಮುಂಚೆ ಮುಟ್ಟಿನ ನಂತರ ಆಗುವ ಸಮಸ್ಯೆಗಳನ್ನು ನೋಡಿ ಅದಕ್ಕೆ ಅನುಗುಣವಾಗಿ ಔಷಧಗಳನ್ನು ಕೊಡಲಾಗುತ್ತದೆ. ಎಷ್ಟೋ ಜನರಿಗೆ ಮುಟ್ಟಿನ ಸಮಯದಲ್ಲಿ ವಿಪರೀತ ಇರ್ರಿಟೇಶನ್, ವಿಪರೀತ ಕೋಪ ಆದ್ರೆ ವೈದ್ಯರಿಗೆ ಅಥವಾ ಆ ಹೆಣ್ಣು ಮಗುವಿಗೆ ಒಂದು ಕ್ಲೂ ಸಿಕ್ಕಂತೆ. ಏನಾದ್ರೂ ಹಾರ್ಮೋನ್ ಇಂಬಲನ್ಸ್ ಆಗಿರಬಹುದು ಎಂದು.
ಇದಕ್ಕೆ ಚಿಕಿತ್ಸೆ ಕೊಡದೆ ಹೋಗಿ, ಇದೆ ಬೇಳಿಯುತ್ತ ಬೆಳೆಯುತ್ತ ಮುಂದೆ ಫೈಬ್ರೊಯ್ಡ್ ಯುಟಿರಸ್ ಸಮಸ್ಯೆಗೆ ತುತ್ತಾಗುತ್ತಾರೆ. ಒಂದುವೇಳೆ ಈ ಸಮಸ್ಯೆ ಆಗಿದೆ ಅಂದಾಗ ನೂರಕ್ಕೆ ತೊಂಬತ್ತು ಪ್ರತಿಶತ ಗರ್ಭಕೋಶ ತೆಗೆಯುವ ಅವಶ್ಯಕತೆ ಇಲ್ಲ. ಇದನ್ನು ಎಲ್ಲಾ ಹೆಣ್ಣುಮಕ್ಕಳು ತಿಳಿದಿರಬೇಕು. ನೀವು ತೋರಿಸುವ ಗೈನೋಕಲಾಜಿಸ್ಟ್ ಮಕ್ಕಳೆಲ್ಲ ಆದ ಮೇಲೆ ಗರ್ಭಕೋಶ ಯಾಕೆ ಅಂತ ಹೇಳಿ ಗರ್ಭಕೋಶ ತೆಗೆಸಲು ಸಲಹೆ ಕೊಡುತ್ತಾರೆ. ಆದ್ರೆ ಆ ತರಹ ಮಾಡಬೇಡಿ. ಯಾಕಂದ್ರೆ ಗರ್ಭಕೋಶ ತೆಗೆದ ಮೇಲೂ ಮತ್ತೆ ಸಮಸ್ಯೆಗಳಿಗೆ ತುತ್ತಾಗಿರುವ ಉದಾಹರಣೆಗಳು ಇವೆ. ಗರ್ಭಕೋಶ ತೆಗೆಸಬೇಕು ಎಂದು ನಿರ್ಧಾರ ಮಾಡುವ ಮೊದಲು ಒಮ್ಮೆ ನಿಮ್ಮ ಸಮಸ್ಯೆಗೆ ಅನುಗುಣವಾಗಿ ಹೋಮಿಯೋಪತಿ ಚಿಕಿತ್ಸೆ ತೆಗೆದುಕೊಂಡು ನೋಡಿ. ಪರಿಹಾರ ಆಗಲಿಲ್ಲ ಋತುಸ್ರಾವ ಆಗುವಾಗ ತುಂಬಾ ನೋವು ಇದೆ ಅಂದಾದ್ರೆ ಮಾತ್ರ ಮುಂದಿನ ತೆಗೆಸುವ ಯೋಚನೆ ಮಾಡಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.