ಪುರುಷರೇ ನಿಮ್ಮ ಪವರ್ ಕಡಿಮೆಯಾಗಿದ್ದರೆ, ದಾಳಿಂಬೆ ಹಣ್ಣನ್ನು ಸೇವನೆ ಮಾಡಿ ನಿಮ್ಮ ಪವರ್ ವಾಪಸ್ ಪಡೆಯಿರಿ..!!

ನಮಸ್ತೆ ಪ್ರಿಯ ಓದುಗರೇ, ನಮ್ಮ ಪ್ರಕೃತಿ ಅದೆಷ್ಟೋ ಕಾಯಿಲೆಗಳನ್ನು ನಿವಾರಣೆ ಮಾಡಿಕೊಳ್ಳಲು ಔಷಧೀಯ ಖಜಾನೆಯನ್ನು ಕೊಟ್ಟಿದೆ ಅಂದ್ರೆ ತಪ್ಪಾಗುವುದಿಲ್ಲ. ಅದ್ರಲ್ಲೂ ಮುತ್ತುಗಳಂತಹ ಬೀಜಗಳನ್ನು ಹೊಂದಿರುವ ದಾಳಿಂಬೆ ಹಣ್ಣು ಪ್ರಕೃತಿ ನೀಡಿರುವ ಅದ್ಭುತ ಕೊಡುಗೆ ಎನ್ನಬಹುದು. ಹೌದು ಇದು ಹಣ್ಣಿನ ರೂಪದಲ್ಲಿ ಇದ್ದು, ಔಷಧೀಯ ಖಜಾನೆಯನ್ನು ಹೊಂದಿದೆ ಅಂದ್ರೆ ತಪ್ಪಾಗುವುದಿಲ್ಲ. ಯಾಕಂದ್ರೆ ಇದರಲ್ಲಿ ಹಲವಾರು ರೀತಿಯ ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳನ್ನ ಹೊಂದಿದೆ. ಇದು ನಮ್ಮ ದೇಹದ ಅರಿಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ರೋಗಗಳು ಬರುವುದನ್ನು ತಡೆಗಟ್ಟುತ್ತದೆ. ಇಂದಿನ ಲೇಖನದಲ್ಲಿ ದಾಳಿಂಬೆ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಎಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಬೇಗನೆ ವಯಸ್ಸಾದಂತೆ ಕಾಣುವುದನ್ನು ಮತ್ತು ಯಂಗ್ ಆಗಿ ಕಾಣಲು ದಾಳಿಂಬೆ ಹಣ್ಣನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಒಳ್ಳೆಯದು ಎಂದು ಸಂಶೋಧಕರು ಹೇಳುತ್ತಾರೆ.

 

 

ದಾಳಿಂಬೆ ಹಣ್ಣನ್ನು ಹಿಂದಿನ ಕಾಲದಲ್ಲಿ ದೇವರ ಆಹಾರ ಎಂದು ಕರೆಯುತ್ತಿದ್ದರು. ಅದರಲ್ಲಿರುವ ನಿಖರ ರಾಸಾಯನಿಕ ಮನುಷ್ಯನನ್ನು ತಾರುಣ್ಯವಾಗಿ ಕಾಣುವಂತೆ ಮಾಡುತ್ತದೆ. ಅಷ್ಟೇ ಅಲ್ಲ ದಾಳಿಂಬೆ ಹಣ್ಣು ಹೃದಯಕ್ಕೆ ಒಳ್ಳೆಯದು. ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ರಕ್ತ ತೆಳುವಾಗುತ್ತದೆ. ಹಾಗಾಗಿ ಅನಗತ್ಯವಾದ ರಕ್ತ ಹೆಪ್ಪುಗಟ್ಟುವಿಕೆ ಆಗುವುದಿಲ್ಲ. ಇದರಿಂದ ಹೃದಯ ಸೂಕ್ಷ್ಮ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವಂತೆ ಉತ್ತೇಜಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಯಾರನ್ನು ಏನೇ ಕೇಳಿದರೂ ಕೂಡ ನೆನಪಿಲ್ಲ ಬಿಡಿ ಎಂದು ಹೇಳುವವರ ಸಂಖ್ಯೆ ಜಾಸ್ತಿ ಆಗಿದೆ. ಮತ್ತು ಬಹಳಷ್ಟು ಜನರಿಗೆ ಅವರ ನೆನಪಿನ ಶಕ್ತಿ ಒತ್ತಡದ ಜೀವನ ಶೈಲಿಯಿಂದ ಕಡಿಮೆ ಆಗುತ್ತಾ ಇದೆ. ನಿಮಗೂ ನೆನಪಿನ ಶಕ್ತಿ ಕಡಿಮೆ ಆಗುತ್ತಿದ್ದರೆ ದಾಳಿಂಬೆ ಹಣ್ಣನ್ನು ಸೇವನೆ ಮಾಡಿ ಇದರಿಂದ ನಿಮ್ಮ ನೆನಪಿನ ಶಕ್ತಿ ವೃದ್ಧಿ ಆಗುವುದರ ಜೊತೆಗೆ ನಿಮ್ಮ ಹೃದಯಕ್ಕೂ ಒಳ್ಳೆಯದು. ಈ ಹಣ್ಣಿನ ಇನ್ನೊಂದು ಅತ್ತ್ಯುತ್ತಮ ಪ್ರಯೋಜನ ಏನಂದ್ರೆ ನಾವು ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ಕೆಮಿಕಲ್ ದಾಸ್ತಾನು ಬಳಸುತ್ತಾ ಇದ್ದೇವೆ.

 

 

ಅದು ನೀವು ಬಳಸುವ ಸೋಪು, ಫೆಸ್ ವಾಶ್, ನಿಮ್ಮ ಚರ್ಮಕ್ಕೆ ಬಳಸುವ ಯಾವುದೇ ಕ್ರೀಮ್ ಆಗಿರಬಹುದು. ಇಂತಹ ವಸ್ತುಗಳನ್ನು ಬಳಸುವುದರಿಂದ ಮೊದ ಮೊದಲು ನಿಮ್ಮ ತ್ವಚೆ ಉತ್ತಮವಾಗಿ ಇರುತ್ತದೆ ಕಾಲಕ್ರಮೇಣ ನಿಮ್ಮ ತ್ವಚೆ ಹಾಳಾಗುವುದು ಖಂಡಿತ. ಬೇಗನೆ ವಯಸ್ಸಾದಂತೆ ಕಾಣುವುದನ್ನು ತಪ್ಪಿಸಲು ಮತ್ತು ತಾರುಣ್ಯರಂತೆ ಕಾಣಲು ದಾಳಿಂಬೆ ಹಣ್ಣನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಟೆಸ್ಟೋಸ್ಟರಾನ್ ಎಂಬ ಹಾರ್ಮೋನ್ ಬಿಡುಗಡೆ ಆಗುತ್ತದೆ. ಟೇಸ್ಟೋಟರನ್ ಎನ್ನುವುದು ಪುರುಷರ ಪ್ರೈಮರಿ ಸೆಕ್ಸ್ ಹಾರ್ಮೋನ್ ಎಂದು ಕರೆಯುತ್ತಾರೆ. ಈ ಹಾರ್ಮೋನ್ ಪುರುಷರ ಆಂತರಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಿಲನದಲ್ಲಿ ಹೆಚ್ಚು ಉತ್ಸಾಹದಿಂದ ಭಾಗವಹಿಸಲು ನೆರವಾಗುತ್ತದೆ. ಇನ್ನೂ ನಮ್ಮ ದೇಹದಲ್ಲಿ ರಕ್ತದೊತ್ತಡ ಹೃದಯ ಸಂಬಂಧಿ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ತಮ್ಮ ಒತ್ತಡದ ಜೀವನ ಶೈಲಿಯಿಂದ ರಕ್ತದೊತ್ತಡ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ನಿಯಮಿತವಾಗಿ ಈ ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *