ಪರಶುರಾಮರಿಂದ ಸ್ಥಾಪಿಸಲ್ಪಟ್ಟ ಕುಂಜಾರುಗಿರಿಯ ಶ್ರೀ ದುರ್ಗಾದೇವಿಯ ಪುಣ್ಯ ಕ್ಷೇತ್ರವಿದು..!!!

ನಮಸ್ತೆ ಪ್ರಿಯ ಓದುಗರೇ, ಆದಿಶಕ್ತಿ ಪರಾಶಕ್ತಿ ಅಂಬೇ ಜಗದಂಬೇ ತ್ರಿಪುರ ಸುಂದರಿ ಹೀಗೆ ನಾನಾ ಹೆಸರುಗಳಿಂದ ಕರೆಯುವ ದುರ್ಗಾ ಮಾತೆಗೆ ನಮ್ಮ ರಾಜ್ಯದಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಅಮ್ಮಾ ಎಂದು ಭಕ್ತಿಯಿಂದ ಕೂಗಿದರೆ ಆ ತಾಯಿ ನಮ್ಮೆಲ್ಲ ಕಷ್ಟಗಳನ್ನು ತನ್ನ ಅಭಯ ಹಸ್ತದಿಂದ ದೂರ ಮಾಡುತ್ತಾಳೆ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಮನೋಕಾಮನೆಗಳನ್ನು ಶೀಘ್ರವಾಗಿ ಪೂರ್ತಿ ಮಾಡುವ ಕುಂಜಾರುಗಿರೀ ಯ ದುರ್ಗಾ ದೇವಿಯನ್ನು ದರ್ಶನ ಮಾಡಿ ಪುನೀತ ರಾ ಗೋಣ. ಕುಂಜಾರುಗೀರಿ, ಕುಂಜಾ ಗುರಿ, ಪಾಜಕ ಕ್ಷೇತ್ರ, ವಿಮಾನ ಗಿರಿ ಎಂಬೆಲ್ಲ ಹೆಸರಿನಿಂದ ಖ್ಯಾತವಾದ ಈ ಸ್ಥಳದಲ್ಲಿ ಪರಶುರಾಮ ರಿಂದ ಸ್ಥಾಪಿಸಲ್ಪಟ್ಟ ದುರ್ಗಾ ದೇವಿಯ ಮೂರ್ತಿ ಇದ್ದು, ಈ ಆಲಯವು ಸಮುದ್ರ ಮಟ್ಟದಿಂದ 100 ಅಡಿ ಎತ್ತರ ಇದೆ. ಭಕ್ತರ ಸಂಕಷ್ಟಗಳನ್ನು ಪರಿಹರಿಸಲು ಪರಶುರಾಮನು ಈ ಸ್ಥಳದಲ್ಲಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಭಾರ್ಗವ ರಾಮರು ದೇವಿಯನ್ನು ಪ್ರತಿಷ್ಠಾಪನೆ ಮಾಡಿದ್ದಾಗ ಆಕಾಶದಿಂದ ದೇವತೆಗಳು ವಿಮಾನ ಏರಿ ಬಂದು ಇಲ್ಲಿ ಪುಷ್ಪ ಮಳೆಗೈದರು ಎಂದು ಹೇಳಲಾಗುತ್ತದೆ.

 

ಹೀಗಾಗಿ ಈ ಕ್ಷೇತ್ರಕ್ಕೆ ವಿಮಾನಗಿರಿ ಎಂಬ ಹೆಸರು ಬಂದಿದೆ ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಹಸಿರು ಕಾನನದ ಮಧ್ಯದಲ್ಲಿ ಇರುವ ಈ ದೇಗುಲಕ್ಕೆ ಬಂದು ದೇವಿಯನ್ನು ದರ್ಶನ ಮಾಡಬೇಕು ಅಂದ್ರೆ ಬರೋಬ್ಬರಿ 257 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕು. ಮಹಿಳೆಯರು ಇಲ್ಲಿಗೆ ಬಂದು ಕರಿಮಣಿ ಹಾಗೂ ತಾಳಿಯನ್ನು ದೇವಿಗೆ ಸಮರ್ಪಣೆ ಮಾಡಿದ್ರೆ ಅವರ ಕುಂಕುಮ ಭಾಗ್ಯ ಗಟ್ಟಿಯಾಗಿ ಇರುತ್ತದೆ ಎನ್ನುವುದು ಇಲ್ಲಿಗೆ ಬರುವ ಮಹಿಳಾ ಭಕ್ತರ ನಂಬಿಕೆ. ಇನ್ನೂ ಉಬ್ಬಸ ರೋಗ ಇರುವವರು ಕಾಯಿಲೆ ನಿವಾರಣೆಗೆ ನಾರಿನ ಸಮರ್ಪಣೆ, ವ್ಯಾಧಿ ಉಳ್ಳವರು ಬೆಳ್ಳಿಯ ಸರಿಗೆ ಸಮರ್ಪಣೆ, ಸಂತಾನ ಪ್ರಾಪ್ತಿ ಗೆ ಬೆಳ್ಳಿಯ ತೊಟ್ಟಿಲು ಸೇವೆ, ವಿವಾಹ ವಿಳಂಬ ಸಮಸ್ಯೆ ಇರುವವರು ಬಟ್ಟೆ ಸೀರೆ ಸಮರ್ಪನೆಯನ್ನು ಮಾಡಿಸಿ ತಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ.

 

 

ಭಕ್ತರ ಧುರಿತವನ್ನು ಪರಿಹರಿಸುವ ಸೌಭಾಗ್ಯ ಆರೋಗ್ಯ ಸಂಪತ್ತು ಕರುಣಿಸುವ,ಶರಣು ಬಂದವರನ್ನು ಪೊರೆಯುವ ಅಭಯ ಪ್ರಯಾದಕಳಾದ ಈ ದೆರ್ಗ ದೇವಿಯು ನಿಂತ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಳೆ. ದೇವಿಯು ಕೈಯಲ್ಲಿ ಶಂಖ ಚಕ್ರ ಗದೆಗಳನ್ನು ಹಿಡಿದು ಸರ್ವಾಲಾಂಕೃತ ಭೋಶಿತೆ ಆಗಿ ಗರ್ಭ ಗುಡಿಯಲ್ಲಿ ವಿರಾಜಮಾನ ಆಗಿದ್ದಾಳೆ. ಈ ಕ್ಷೇತ್ರಕ್ಕೆ ಸೋಣ ತಿಂಗಳಲ್ಲಿ ಬಂದ್ರೆ ಸಕಲ ಇಷ್ಟಾರ್ಥಗಳು ಬೇಗನೆ ಸಿದ್ಧಿ ಆಗುತ್ತೆ. ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಸೂರ್ಯ ದೇವನು ಸಿಂಹ ರಾಶಿಯಲ್ಲಿ ಸಂಚರಿಸುವ ಸಮಯವನ್ನು ಸೋಣ ತಿಂಗಳು ಎಂದು ಕರೆಯಲಾಗುತ್ತದೆ. ಅದ್ರಲ್ಲಿ ಸೋಣ ಮಾಸದ ಶುಕ್ರವಾರ ಸಾಕ್ಷಾತ್ ದುರ್ಗಾ ಮಾತೆ ಭೂಮಿಗೆ ಬರುತ್ತಾಳೆ ಎಂದು ಹೇಳಲಾಗುತ್ತದೆ. ಈ ದಿನ ಸಾವಿರಾರು ಮಂದಿ ದೇವಿಯ ದರ್ಶನ ಮಾಡಿ ಕೃತಾರ್ಥ ಆಗ್ತಾರೆ. ಅತ್ಯಂತ ಶಕ್ತಿಶಾಲಿ ಆದ ಈ ದೇವಿಯನ್ನು ಬೆಳಿಗ್ಗೆ 5 ಗಂಟೆಯಿಂದ ಸಂಜೆ 7.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಈ ದುರ್ಗಾ ಮಾತೆಯ ದೇವಾಲಯ ಉಡುಪಿ ಜಿಲ್ಲೆಯ ಕೂರ್ಕಾಲು ಎಂಬ ಪುಟ್ಟ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವಿಯ ಸನ್ನಿಧಿಗೆ ಭೇಟಿ ನೀಡಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.

Leave a comment

Your email address will not be published. Required fields are marked *