ಟೂತ್ ಪೇಸ್ಟ್ ಮೇಲೆ ಹಸಿರು, ಕೆಂಪು, ನೀಲಿ, ಕಪ್ಪು ಬಣ್ಣದ ಗೆರೆ ಏಕೆ ಇರುತ್ತೆ? ಯಾವ ಬಣ್ಣದ ಟೂತ್ ಪೇಸ್ಟ್ ಬಳಸಿದರೆ ಒಳ್ಳೆಯದು…???

ನಮಸ್ತೆ ಪ್ರಿಯ ಓದುಗರೇ, ಬೆಳಿಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬರ ಕೆಲಸ ಏನು ಅಂದ್ರೆ ಅದು ಟೂತ್ ಬ್ರಷ್, ಟೂತ್ ಪೇಸ್ಟ್ ತೆಗೆದುಕೊಂಡು ಹಳ್ಳು ಉಜ್ಜುವುದು. ಕೆಲವರು ಬೇರೆ ಬೇರೆ ಬ್ರಾಂಡ್ ಗಳ ಟೂತ್ ಪೇಸ್ಟ್ ನ್ನೂ ಬಳಸುತ್ತಾ ಇರ್ತಾರೆ. ಮತ್ತು ಇನ್ನೂ ಕೆಲವರು ಬೆಲೆ ಕಡಿಮೆ ಇರುವ ಟೂತ್ಪೇಸ್ಟ್ ಖರೀದಿ ಮಾಡುತ್ತಾರೆ ಮತ್ತು ಕೆಲವರು ಬ್ರಾಂಡ್ ನೋಡಿ ಟೂತ್ ಪೇಸ್ಟ್ ನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ ಆ ಟೂತ್ ಪೇಸ್ಟ್ ಮೇಲೆ ಹಾಕಿರುವ ಕಲರ್ ಬಾರ್ ಮೇಲೆ ಬಹುತೇಕ ಜನರಿಗೆ ತಿಳಿಯದ ಒಂದು ವಿಷಯವಿದೆ. ಬಹುತೇಕ ಟೂತ್ ಪೇಸ್ಟ್ ಗಳ ಮೇಲೆ ಒಂದೊಂದು ತರಹದ ಬಣ್ಣಗಳು ಇರುತ್ತವೆ. ಈ ಟೂತ್ ಪೇಸ್ಟ್ ನಲ್ಲಿ ಇರುವಂತಹ ಬಣ್ಣದ ಬಾರ್ ನೋಡಿಕೊಂಡು ಅದರಲ್ಲಿ ಯಾವೆಲ್ಲ ಪದಾರ್ಥಗಳನ್ನು ಹಾಕುತ್ತಾರೆ ಎಂದು ತಿಳಿದುಕೊಳ್ಳಬಹುದು. ಆದ್ರೆ ಎಲ್ಲಾ ಕಂಪನಿಗಳು ಟೂತ್ ಪೇಸ್ಟ್ ಗೆ ಏನೇನು ಪದಾರ್ಥ ಹಾಕಿರುತ್ತಾರೆ ಎನ್ನುವುದನ್ನು ಹೇಳುವುದಿಲ್ಲ. ಕಂಪನಿಗಳು ಬಣ್ಣದ ಮೂಲಕ ಟೂತ್ ಪೇಸ್ಟ್ ಗೆ ಏನೇನು ಪದಾರ್ಥಗಳನ್ನು ಬಳಸಿದ್ದಾರೆ ಎಂಬುದನ್ನು ಹೇಳುತ್ತಾರೆ. ಹಾಗಾದರೆ ಈ ಟೂತ್ ಪೇಸ್ಟ್ ನ ಬಾರ್ ಹಿಂದಿರುವ ರಹಸ್ಯ ಏನು? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

 

 

ಟೂತ್ ಪೇಸ್ಟ್ ಹಿಂದೆ ಕೊನೆಯಲ್ಲಿ ಕಪ್ಪು ಬಣ್ಣದ ಗೆರೆ ಇದ್ರೆ ಆ ಟೂತ್ ಪೇಸ್ಟ್ ಬಳಕೆ ಮಾಡುವುದು ಒಳ್ಳೆಯದಲ್ಲ. ಅತೀ ಹೆಚ್ಚು ಕೆಮಿಕಲ್ ಬಳಸುವ ಕಂಪನಿಗಳು ತಮ್ಮ ಕಂಪನಿ ಟೂತ್ ಪೇಸ್ಟ್ ಮೇಲೆ ಕಪ್ಪು ಗೆರೆಯನ್ನು ಎಳೆದಿರುತ್ತರೆ. ಹಾಗಾಗಿ ಕಪ್ಪು ಬಣ್ಣದ ಗೆರೆ ಎಳೆದಿರುವ ಟೂತ್ ಪೇಸ್ಟ್ ನ್ನೂ ಬಳಸದೆ ಇರುವುದು ಒಳ್ಳೆಯದು. ಇನ್ನೂ ಈ ಟೂತ್ ಪೇಸ್ಟ್ ಹಿಂದೆ ಕೆಂಪು ಬಣ್ಣದ ಗೆರೆ ಇದ್ರೆ ಅದರಲ್ಲಿ ಕೂಡ ರಾಸಾಯನಿಕಗಳನ್ನು ಬಳಸಿರುತ್ತಾರೆ ಆದ್ರೆ ಕಪ್ಪು ಬಣ್ಣದ ಗೆರೆ ಉಳ್ಳ ಟೂತ್ ಪೇಸ್ಟ್ ಗಿಂತ ಇದು ಸ್ವಲ್ಪ ಬೆಟರ್ ಎಂದು ಹೇಳಬಹುದು. ಇದರಲ್ಲಿ ರಾಸಾಯನಿಕ ವಸ್ತು ಜೊತೆಗೆ ನೈಸರ್ಗಿಕ ವಸ್ತುಗಳನ್ನು ಸೇರಿಸಿರಲಾಗುತ್ತದೆ.

 

ಇನ್ನೂ ನೀಲಿ ಬಣ್ಣದ ಗೆರೆ ಇರುವ ಟೂತ್ ಪೇಸ್ಟ್ ಬಳಕೆಗೆ ಒಳ್ಳೆಯದು. ಇದರಲ್ಲಿ ನೈಸರ್ಗಿಕ ವಸ್ತುಗಳ ಜೊತೆಗೆ ಔಷಧೀಯ ತತ್ವಗಳು ಕೂಡ ಇರುತ್ತೆ, ಇದು ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿ ಹೊಳೆಯುವಂತೆ ಮಾಡುವ ಹಾಗೂ ಬೇರೆ ಬೇರೆ ರೋಗಗಳನ್ನು ದೂರ ಮಾಡುತ್ತೆ. ಇನ್ನೂ ಕೊನೆಯದಾಗಿ ಹಸಿರು ಬಣ್ಣದ ಗೆರೆ ಇರುವ ಟೂತ್ ಪೇಸ್ಟ್. ಹಸಿರು ಬಣ್ಣದ ಗೆರೆ ಯಾಕೆ ಇರುತ್ತೆ ಅಂದ್ರೆ ಇದರಲ್ಲಿ ನೈಸರ್ಗಿಕವಾಗಿ ಸಿಗುವಂತಹ ಗಿಡಮೂಲಿಕೆಗಳನ್ನು ಬಳಸಿರುತ್ತಾರೆ. ಕೆಂಪು ಮತ್ತು ನೀಲಿ ಟೂತ್ ಪೇಸ್ಟ್ ಬಳಕೆಗಿಂತ ಹಸಿರು ಬಣ್ಣದ ಗೆರೆ ಇರುವ ಟೂತ್ ಪೇಸ್ಟ್ ಬಳಕೆ ಬಹಳ ಒಳ್ಳೆಯದು. ಯಾಕಂದ್ರೆ ಇದರಲ್ಲಿ ಕೇವಲ ಗಿಡಮೂಲಿಕೆ ಇಂದ ತಯಾರಿಸುತ್ತಾರೆ. ಹಾಗಾಗಿ ಇದು ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *