ಈ ದೇಗುಲದಲ್ಲಿರುವಾ ಶ್ರೀಚಕ್ರದ ಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು..?

ಈ ದೇಗುಲದಲ್ಲಿರುವಾ ಶ್ರೀಚಕ್ರದ ಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು..?

ನಮಸ್ತೆ ಆತ್ಮೀಯ ಓದುಗರೇ, ಹಿಂದೂ ಧರ್ಮದ ಪ್ರಕಾರ ಯಾವಾಗ ಭೂಮಿ ಮೇಲೆ ರಾಕ್ಷಸರ ಅಟ್ಟಹಾಸ ಹೆಚ್ಚಾಗುತ್ತದೆ ಆಗ ಜಗನ್ಮಾತೆ ತನ್ನ ಭಕ್ತರನ್ನು ರಕ್ಷಿಸಲು ಅವತಾರ ಎತ್ತುತ್ತಾಳೆ. ಪಾರ್ವತಿ ದೇವಿಯು ಜಗದಾಂಬಿಕೆ ರೂಪದಲ್ಲಿ ಕಾವೇರಿ ನದಿಯ ದಡದ ಮೇಲೆ ವಿರಾಜಮಾನಳಾಗಿ ತನ್ನ ಬಳಿ ಬರುವ ನೊಂದ ಭಕ್ತರ ಪಾಲಿಗೆ ಬೆಳಕಾಗಿ ಕೋಟಿ ಕೋಟಿ ಭಕ್ತರನ್ನು ಸಲಹುವ ಆರಾಧ್ಯ ದೇವಿಯಾಗಿ ಈ ಕ್ಷೇತ್ರದಲ್ಲಿ ನೆಲೆಸಿದ್ದಾಳೆ. ಬನ್ನಿ ಇವತ್ತಿನ ಲೇಖನದಲ್ಲಿ ನಿಮಿಷಾಂಬ ದೇವಿಯನ್ನು ಕಣ್ಣು ತುಂಬಿಕೊಂಡು ಕೃತಾರ್ಥರಾಗೋಣ. ಶ್ರೀಚಕ್ರದ ಮೇಲೆ ಆಸಿನಳಾಗಿರುವ ಈ ತಾಯಿಯನ್ನು ಒಮ್ಮೆ ನೋಡಿದ್ರೆ ಸಾಕು ಬದುಕಿನ ಎಲ್ಲ ಕಷ್ಟಗಳು ದೂರವಾದಂತೆ. ಭೂ ಪ್ರಸ್ತಾರ ಕೃಷ್ಣ ಶಿಲೆಯಲ್ಲಿ ಕೆತ್ತಲ್ಪಟ್ಟಿರುವ ಶ್ರೀಚಕ್ರವು ಅದ್ವಿತಿಯವಾಗಿದೆ. ಶ್ರೀಚಕ್ರದ ದಳಗಳ ಮೇಲೆ ಬೀಜಾಕ್ಷರಿ ಮಂತ್ರವನ್ನು ಬರೆಯಲಾಗಿದೆ. ಅತ್ಯಂತ ಶಕ್ತಿಶಾಲಿ ಆದ ಈ ಶ್ರೀಚಕ್ರದ ಮೇಲೆ ದೇವಿ ಮಂಸ್ಮಿತಲಾಗಿ ಕುಳಿತು ತನ್ನ ಬಳಿ ಬರುವ ಪ್ರತಿ ಭಕ್ತರ ಮನೋಭಿಲಾಷೆಗಳನ್ನು ಪೂರ್ತಿ ಮಾಡುತ್ತಿದ್ದಾಳೆ.

 

ಹೀಗಾಗಿ ಯಾರು ಈ ಕ್ಷೇತ್ರಕ್ಕೆ ಬಂದು ಶ್ರೀಚಕ್ರವನ್ನು ದರ್ಶನ ಮಾಡುತ್ತಾರೋ ಅವರ ಇಷ್ಟಾರ್ಥಗಳು ನೆರವೇರುತ್ತವೆ ಅಲ್ಲದೆ ಮನಸ್ಸಿಗೆ ಶಾಂತಿ ನೆಮ್ಮದಿ ಕೂಡ ಪ್ರಾಪ್ತಿ ಆಗುತ್ತೆ. ಇನ್ನೂ ಶ್ರೀ ನಿಮಿಷಾಂಬ ದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಮದುವೆ ಆಗದವರಿಗೆ ಕಂಕಣ ಭಾಗ್ಯ ಮಕ್ಕಳು ಆಗದೆ ಇರುವವರಿಗೆ ಸಂತಾನ ಭಾಗ್ಯ ಆರ್ಥಿಕ ಸಮಸ್ಯೆ ಇರುವವರಿಗೆ ಧನ ಧಾನ್ಯ ಅನಾರೋಗ್ಯದಿಂದ ಬಳಲುತ್ತಿದ್ದರೇ ಆರೋಗ್ಯ ಭಾಗ್ಯ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಕರುಣಿಸುತ್ತಾಳೆ ಈ ಪ್ರಸನ್ನ ವದನೆಯಾದ ನಿಮಿಷಾಂಬ ದೇವಿ. ನಿಮಿಷಾಂಬ ದೇವಿಗೆ ನಿಂಬೆ ಹಣ್ಣಿನ ಹಾರ ಪ್ರಿಯವಾಗಿದ್ದು, ಈ ದೇವಸ್ಥಾನಕ್ಕೆ ಹೋದಾಗ ನಿಂಬೆ ಹಣ್ಣಿನ ತಿರುಳಿನಲ್ಲಿ ದೀಪವನ್ನು ಬೆಳಗಿಸಿ ದೇವಿಯಲ್ಲಿ ಪ್ರಾರ್ಥನೆ ಮಾಡಿದರೆ ಅವರ ಎಲ್ಲಾ ಆಸೆಗಳು ಶೀಘ್ರವಾಗಿ ನೆರವೇರುತ್ತದೆ.ಅಲ್ಲದೆ ಈ ದೇವಾಲಯದಲ್ಲಿ ನಿಂಬೆ ಹಣ್ಣಿನ ದೀಪವನ್ನು ಹಚ್ಚಿದರೆ ಪಾಪಗಳು ನಾಶ ಆಗುತ್ತೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ. ಸುಂದರವಾದ ರಾಜ ಗೋಪುರವನ್ನು ಹೊಂದಿರುವ ಈ ದೇವಾಲಯದ ಪ್ರವೇಶ ದ್ವಾರ ದ ಬಲ ಭಾಗದ ಗೋಡೆ ಮೇಲೆ ಲಕ್ಷ್ಮೀ ವಿಗ್ರಹ, ಎಡ ಭಾಗದ ಮೇಲೆ ಸರಸ್ವತಿ ವಿಗ್ರಹವನ್ನು ಕೆತ್ತಲಾಗಿದೆ. ವಿಶಾಲವಾದ ಆವರಣದ ಮಧ್ಯದಲ್ಲಿ ಶ್ರೀ ನಿಮಿಷಾಂಬ ದೇವಿಯು ಶ್ರೀಚಕ್ರ ಸಮೇಥಲಾಗಿ ನೆಲೆ ನಿಂತಿದ್ದಾಳೆ.

 

ದೇವಸ್ಥಾನದ ಆವರಣದಲ್ಲಿ ಸೂರ್ಯ ದೇವ, ಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ಮುಕ್ತಿಕೇಶ್ವರ ದೇವರ ಸನ್ನಿಧಾನಗಳು ಸಹ ನೋಡಬಹುದು. ಸ್ನೇಹಿತರೆ ಕಾವೇರಿ ನದಿಯ ಈ ಸುಂದರವಾದ ಪ್ರದೇಶದಲ್ಲಿ ತಾಯಿ ಜಗನ್ಮಾತೆ ಅವತರಿಸಿದ ಹಿಂದೆ ಒಂದು ಕಥೆ ಕೂಡ ಇದೆ. ಬಹಳ ಹಿಂದೆ ಶ್ರೀರಂಗ ಪಟ್ಟಣವನ್ನು ಸುಮನಸ್ಕ ಎಂಬ ದೊರೆ ಆಳುತ್ತಾ ಇದ್ದು, ಆತ ತನ್ನ ಪ್ರಜೆಗಳ ಕ್ಷೇಮಕ್ಕಾಗಿ ಯಾಗವನ್ನು ಮಾಡಲು ನಿರ್ಧರಿಸುತ್ತಾನೆ. ನಂತರ ಕಾವೇರಿ ನದಿಯ ದಂಡೆಯ ಮೇಲೆ ಯಾಗವನ್ನು ಮಾಡಲು ಪ್ರಾರಂಭ ಮಾಡಿದಾಗ,ಸುಮಂಡಲ ಹಾಗೂ ಜಾನು ಎಂಬ ರಾಕ್ಷಸರು ರಾಜನು ನಡೆಸುವ ಯಾಗಕ್ಕೆ ಅಡ್ಡಪಡಿಸುತ್ತಾರೆ. ಆಗ ದಾರಿ ಕಾಣದೆ ರಾಜ ಹಾಗೂ ಋಷಿ ಮುನಿಗಳು ದೇವಿ ಆದಿಶಕ್ತಿಯ ಮೊರೆ ಹೋದ್ರು ಆಗ ತಾಯಿ ನಿಮಿಷ ಮಾತ್ರದಲ್ಲಿ ಹೋಮ ಕುಂಡದಿಂದ ಎದ್ದು ಬಂದು ದುಷ್ಟ ಸಂಹಾರ ಮಾಡಿದಳು ಹಾಗೂ ತಾನು ಇನ್ನೂ ಮುಂದೆ ಇಲ್ಲಿಯೇ ನೆಲೆಸಿ ಬೇಡಿ ಬಂದ ಭಕ್ತರ ಸಂಕಷ್ಟಗಳನ್ನು ನಿಮಿಷ ಮಾತ್ರದಲ್ಲಿ ಬಗೆ ಹರಿಸುವೆ ಎಂದು ಹೇಳಿ ಸ್ವಯಂಭೂ ಆದಳು. ಹಾಗಾಗಿ ಇಲ್ಲಿ ನೆಲೆಸಿರುವ ಜಗನ್ಮಾತೆಯನ್ನು ನಿಮಿಷಾಂಬ ಎಂದು ಕರೆಯಲಾಗುತ್ತದೆ. ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12.30 ರ ವರೆಗೆ ಸಂಜೆ 4 ರಿಂದ ರಾತ್ರಿ 8.30ರ ವರೆಗೆ ಈ ದೇವಿಯ ದರ್ಶನ ಪಡೆಯಬಹುದು. ನಿಮಿಷಾಂಬ ದೇವಿಯ ಈ ಆಲಯವು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿದೇ. ಸಾಧ್ಯವಾದರೆ ನೀವು ಒಮ್ಮೆ ಈ ತಾಯಿಯ ದರ್ಶನ ಮಾಡಿ ಅವಳ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.

ಭಕ್ತಿ