ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠ ವನಸ್ಪತಿ ಎಂದು ಹೇಳಲಾಗುತ್ತದೆ. ತುಳಸಿ ಗಿಡ ವೃಂದಾ ದೇವಿಯ ಆತ್ಮದಿಂದ ಪ್ರಕಟವಾಗಿದೆ. ತುಳಸಿ ಗಿಡ ಭಗವಾನ್ ಶ್ರೀ ವಿಷ್ಣುವಿಗೆ ಅತ್ಯಂತ ಪ್ರಿಯವಾದ ಗಿಡವಾಗಿ ದೇ. ಹಾಗಾಗಿ ನಮ್ಮ ಪ್ರಾಚೀನ ಗ್ರಂಥಗಳಲ್ಲಿ ತುಳಸಿಯ ಮಹತ್ವವನ್ನು ವಿಶೇಷವಾಗಿ ಹೇಳಲಾಗಿದೆ. ತುಳಸಿಗೆ ಸಾಕಷ್ಟು ರೋಗಗಳನ್ನು ನಾಶ ಮಾಡುವ ಚಮತ್ಕಾರಿ ಶಕ್ತಿಯೂ ಇದೆ. ಮನೆಯ ಒಳಗೆ ತುಳಸಿ ಗಿಡ ಇದ್ರೆ ಹೊರಗಿನಿಂದ ಬರುವ ಋಣಾತ್ಮಕ ಶಕ್ತಿಗಳನ್ನು ನಮಗೆ ಗೊತ್ತಾಗದಂತೆ ತಡೆಯುತ್ತದೆ. ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ ಬೆಳೆಸುವುದರಿಂದ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು, ರಾಜ ಮಹಾರಾಜರು ತಮ್ಮ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸಿ ಪೂಜೆ ಮಾಡುತ್ತಿದ್ದರು.
ಆಗಿನಿಂದಲೇ ಸ್ತ್ರೀಯರು ಪ್ರತಿದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ತುಳಸಿಗೆ ನೀರು ಹಾಕಿ ಪೂಜೆ ಮಾಡುವ ಪರಂಪರೆ ಪ್ರಚಲಿತಕ್ಕೆ ಬಂದಿದೆ. ತುಳಸಿ ಗಿಡವನ್ನು ಮಹಾಲಕ್ಷ್ಮಿ ಸ್ವರೂಪ ಎಂದೇ ಹೇಳಬಹುದು. ಯಾವ ಮನೆಯಲ್ಲಿ ತುಳಸಿ ಗಿಡವನ್ನು ಪೂಜಿಸುತ್ತಾರೆ ಆ ಮನೆಗೆ ಮಹಾಲಕ್ಷ್ಮಿ ಆಗಮನ ಆಗುತ್ತೆ. ಮನೆಯ ಮುಂದೆ ಸರಿಯಾದ ದಿಕ್ಕಿನಲ್ಲಿ ತುಳಸಿ ಗಿಡ ಇಟ್ಟಿದ್ದಾರೆ ಆ ಮನೆಯಲ್ಲಿ ಶಾಂತ ವಾತಾವರಣ ಇರುತ್ತೆ. ಮನೆಯಲ್ಲಿ ಸುಖ ಸಮೃದ್ಧಿ ಇರುತ್ತೆ. ದಿನವೂ 5 ತುಳಸಿ ಎಲೆಯನ್ನು ತಿನ್ನುವುದರಿಂದ ನಮ್ಮನ್ನು ಮಾತೆ ತುಳಸಿ ಹಲವಾರು ರೋಗಗಳಿಂದ ರಕ್ಷಣೆ ಮಾಡುತ್ತಾಳೆ. ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಕೂಡ ಆಗುತ್ತೆ. ತುಳಸಿ ಗಿಡಕ್ಕೆ ನೀರು ಹಾಕಿ ಪೂಜೆ ಮಾಡುವುದು ಅತ್ಯಂತ ಶುಭ. ಆದ್ರೆ ಕೆಲವೊಂದು ದಿನಗಳಂದು ತುಳಸಿ ಗಿಡಕ್ಕೆ ನೀರು ಹಾಕಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಆ ದಿನಗಳು ಯಾವುದು? ತುಳಸಿ ಗಿಡವನ್ನು ಮನೆಯ ಯಾವ ದಿಕ್ಕಿಗೆ ಇಟ್ಟರೆ ಶುಭ? ಯಾವ ದಿಕ್ಕಿಗೆ ಇಟ್ಟರೆ ಅಶುಭ? ತುಳಸಿ ಗಿಡ ಒಣಗಿದರೆ ಏನನ್ನು ಸೂಚಿಸುತ್ತದೆ? ಹೀಗೆ ಇನ್ನೂ ಅನೇಕ ಕುತೂಹಲಕಾರಿ ವಿಷಯಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಯಾವ ದಿನಗಳಂದು ತುಳಸಿ ಗಿಡಕ್ಕೆ ನೀರು ಹಾಕಬಾರದು? ತುಳಸಿ ಗಿಡಕ್ಕೆ ಏಕಾದಶಿ, ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣ ದ ದಿನಗಳಂದು ತುಳಸಿ ಗೆ ನೀರು ಹಾಕಬಾರದು. ಸೂರ್ಯಾಸ್ತ ಆದಮೇಲೆ ತುಳಸಿ ಎಲೆಗಳನ್ನು ಕೀಳಬಾರದು. ಹೀಗೆ ಮಾಡಿದ್ರೆ ಮನೆಗೆ ವಾಸ್ತು ದೋಷ ತಗುಲುತ್ತದೆ. ಅಂಗಳದಲ್ಲಿ ಇರುವ ತುಳಸಿ ಗಿಡ ಒಣಗಿದರೆ, ಅದು ಆಶುಭದ ಮುನ್ಸೂಚನೆ ಆಗಿದೆ. ತುಳಸಿ ಗಿಡವನ್ನು ಯಾವ ದಿಕ್ಕಿಗೆ ಇಡಬೇಕು? ತುಳಸಿ ಗಿಡವನ್ನು ಈಶಾನ್ಯ, ಅಥವಾ ಪೂರ್ವ ದಿಕ್ಕಿಗೆ ಇಡಬೇಕು. ಈ ದಿಕ್ಕಿನಲ್ಲಿ ಇಟ್ರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಯಾವ ದಿಕ್ಕಿಗೆ ತುಳಸಿ ಗಿಡವನ್ನು ಇಡಬಾರದು? ತುಳಸಿ ಗಿಡವನ್ನು ದಕ್ಷಿಣ ದಿಕ್ಕಿಗೆ ಇರಿಸಬಾರದು. ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ತುಳಸಿ ಗಿಡ ಇಟ್ರೆ ಆ ಮನೆಗೆ ಅಪಾಯದ ಸಂಭವ ಹೆಚ್ಚು ಎನ್ನಲಾಗಿದೆ. ನಿಮ್ಮ ಮಗು ತುಂಬಾ ಹಠ ಮಾಡುತ್ತಿದ್ದರೆ,ತುಳಸಿ ಗಿಡವನ್ನು ಪೂರ್ವ ದಿಕ್ಕಿನ ಕಿಟಕಿಯ ಪಕ್ಕದಲ್ಲಿ ಇರಿಸಿ ನಿಮ್ಮ ಮಗುವಿನ ಹಠ ಕಡಿಮೆ ಆಗುತ್ತದೆ. ಇಂದಿನ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.