ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ಕ್ಯಾನ್ಸರ್ ಅಂದ್ರೆ ಏನು? ಎನ್ನುವುದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳೋಣ. ಮನುಷ್ಯನಿಗೆ ಕ್ಯಾನ್ಸರ್ ಅಂದ ಕ್ಷಣ ಏನೋ ಒಂದು ರೀತಿಯ ಭಯ, ಭೀತಿ ಹಾಗೆಯೇ ನಮ್ಮ ಕಣ್ಣು ಮುಂದೆ ಆ ಸಾವಿನ ವೀಕ್ಷಣೆ, ಕಲ್ಪನೆ ಬಂದು ಮನಸ್ಸಿಗೆ ತಲ್ಲಣ ಉಂಟು ಮಾಡುತ್ತದೆ. ಹಾಗಾಗಿ ಇಂದಿನ ಲೇಖನದಲ್ಲಿ ಕ್ಯಾನ್ಸರ್ ಬಗ್ಗೆ ಒಂದಿಷ್ಟು ಅರಿವನ್ನು ಮೂಡಿಸುವ ಪ್ರಯತ್ನ ಮಾಡೋಣ ಸ್ನೇಹಿತರೆ. ಮೂಲತಃ ಜನಸಾಮಾನ್ಯರೆ,ಸ್ನೇಹಿತರೆ ಕ್ಯಾನ್ಸರ್ ಒಂದು ದೊಡ್ಡ ರೋಗವಲ್ಲ. ನಮ್ಮ ಜೀವನದ ಒಂದು ಹಂತ ಎಂದು ಹೇಳಬಹುದು. ನಮಗೆ ವಯಸ್ಸಾಗುತ್ತಾ ಹೋದಾಗ ಸುಮಾರು 70-80 ವರ್ಷಗಳು ಬದುಕಲು ಸಾಧ್ಯ ಇರುವ ಕಾರಣ ವಯಸ್ಸಿಗೆ ತಕ್ಕಂತೆ ಬರುವಂತಹ ಒಂದು ಪರಿಸ್ಥಿತಿ ಈ ಕ್ಯಾನ್ಸರ್ ಎಂದು ಹೇಳಬಹುದು.
ತುಂಬಾ ಸಾಮಾನ್ಯವಾಗಿ ಸರಳವಾಗಿ ಹೇಳುವುದಾದರೆ ಕ್ಯಾನ್ಸರ್ ಅಂದ್ರೆ ನಮ್ಮ ದೇಹದಲ್ಲಿ ಇರುವ ಕಣಗಳು ಕೆಟ್ಟ ಕಣಗಳಾಗಿ ಮಾರ್ಪಟ್ಟು, ಆ ಕೆಟ್ಟ ಕಣಗಳು ಯಥೇಚ್ಛವಾಗಿ ಬಹಳ ವೇಗವಾಗಿ ಬೆಳೆದಾಗ ಗಂಥಿ ಆಗುತ್ತವೆ. ಈ ಗಂಥಿಗಳನ್ನು ನಾವು ಕ್ಯಾನ್ಸರ್ ಎಂದು ಹೇಳಲಾಗುತ್ತದೆ. ನಾವು ಬಾಳುವಂತಹ ಜೀವಾವಧಿ ಇದೆ, ಆ ಜೀವಾವಧಿ ಜಾಸ್ತಿ ಆದಾಗ ಅದರಿಂದ ಬರುವ ಒಂದು ಪರಿಸ್ಥಿತಿಯೇ ಕ್ಯಾನ್ಸರ್. ಇದರ ಜೊತೆಗೆ ನಮ್ಮ ಜೀವನ ಶೈಲಿ,ನಾವು ತಿನ್ನುವಂತಹ ಆಹಾರ, ಯಥೇಚ್ಛವಾಗಿ ತಿನ್ನುವಂಥಹ ಕೊಬ್ಬಿನ ಅಂಶ, ಮಧ್ಯಪಾನ, ಧೂಮಪಾನ ಮತ್ತು ಈ ಸ್ಟ್ರೆಸ್ ಫುಲ್ ಲೈಫ್. ಈ ನಗರಗಳಲ್ಲಿ ಸಿಕ್ಕಾಪಟ್ಟೆ ವೆಗವಾಗಿರುವ ಜೀವನ ಶೈಲಿಯಿಂದ ಬರುವ ಖಾಯಿಲೆ ಅಥವಾ ಪರಿಸ್ಥಿತಿಯೇ ಕ್ಯಾನ್ಸರ್. ದೇಹದ ತೂಕ ಅಥವಾ ಒಬೆಸಿಟಿ ಇಂದ ಕ್ಯಾನ್ಸರ್ ಬರುವ ಸಂಭವ ಹೆಚ್ಚು ಪ್ರಮಾಣದಲ್ಲಿ ಇರುತ್ತೆ. ನಾವು ತಿನ್ನುವಂತಹ ಆಹಾರದಲ್ಲಿ ರಸಗೊಬ್ಬರ ಹಾಕಿ ಬೆಳೆಸಿದ ಕಲುಷಿತ ತರಕಾರಿ, ಆಹಾರ ಪದಾರ್ಥಗಳು ಈ ಕ್ಯಾನ್ಸರ್ ಗೆ ಪ್ರಮುಖ ಕಾರಣ ಆಗಬಹುದು. ಇತ್ತೀಚಿನ ದಿನಗಳಲ್ಲಿ ನಾವು ಉಸಿರಾಡುವ ಗಾಳಿ, ಕುಡಿಯುವ ನೀರು ಎಲ್ಲಾ ಕಲುಷಿತ ಆಗಿರುವುದರಿಂದ ಕ್ಯಾನ್ಸರ್ ಆಗಲು ಇವುಗಳೂ ಸಹ ಕಾರಣ ಆಗಬಲ್ಲವು.
ಹಾಗಾಗಿ ಈ ನಿಸರ್ಗದಲ್ಲಿ ಇರುವಂಥ ತೊಂದರೆಗಳಿಂದ ನಮಗೆ ಕ್ಯಾನ್ಸರ್ ರಿಗವನ್ನು ಹೆದರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಅಂದ್ರೆ ತಪ್ಪಾಗಲಾರದು. ಒಂದು ಮಾತಿದೆ, ನಮಗೆ ಬರುವಂತಹ ಆರೋಗ್ಯ ಸಮಸ್ಯೆ ಹಾಗೂ ಆ ಸಮಸ್ಯೆಗೆ ಪರಿಹಾರ ಎರಡೂ ಈ ನಿಸರ್ಗದಲ್ಲಿ ಇವೆ. ಹಾಗಾಗಿ ಕ್ಯಾನ್ಸರ್ ಬರದಂತೆ ಇರಲಿ ನಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡು, ವ್ಯಾಯಾಮ ಮಾಡಬೇಕು, ಹೆಚ್ಚಿನ ಹಸಿರು ತರಕಾರಿಗಳನ್ನು ಸೇವನೆ ಮಾಡಬೇಕು, ಕೆಂಪು ಮಾಂಸವನ್ನು ಕಡಿಮೆ ಮಾಡಬೇಕು, ಮಧ್ಯಪಾನ, ಧೂಮಪಾನ ಕಡಿಮೆ ಮಾಡಬೇಕು, ಜೊತೆಗೆ ಈ ಒತ್ತಡದ ಸ್ಟ್ರೆಸ್ ಫುಲ್ ಲೈಫ್ ನ ಕಡಿಮೆ ಮಾಡಿಕೊಳ್ಳಬೇಕು. ಮತ್ತು ಮರಳಿ ನಾವು ನಿಸರ್ಗಕ್ಕೆ ಹೊರಟರೆ ಬರುವಂತಹ ಕ್ಯಾನ್ಸರ್ ಸಂಖ್ಯೆ ಬಹಳ ಕಡಿಮೆ ಆಗುತ್ತದೆ. ಹಾಗಾಗಿ ಕ್ಯಾನ್ಸರ್ ಒಂದು ರೋಗವಲ್ಲ, ನಮ್ಮ ಜೀವನಾವಧಿಯಲ್ಲಿ ಬರುವಂತಹ ಒಂದು ಹಂತ. ಅದರಿಂದ ಹೆದರಿಕೊಂಡು ಕೂರುವ ಬದಲು ಈ ಕ್ಯಾನ್ಸರ್ ಬರಲು ಏನು ಕಾರಣ ಎಂದು ಹುಡುಕಿ ಅದನ್ನು ಅಂದ್ರೆ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡರೆ ಈ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.