ದೇಹದಲ್ಲಿರುವ ಸಪ್ತ ಚಕ್ರಗಳನ್ನು ಬ್ಯಾಲನ್ಸ್ ಮಾಡಲು ಈ ರೀತಿ ಮಾಡಿ…!!!

ನಮಸ್ತೆ ಪ್ರಿಯ ಓದುಗರೇ, ಸಂಖ್ಯಾಶಾಸ್ತ್ರ ದ ಪ್ರಕಾರ ಕೆಲವೊಂದು ಸಮಸ್ಯೆಗಳಿಗೆ ಹೀಲಿಂಗ್ ಕೋಡ್ ಅಂದ್ರೆ ಕೆಲ ಸಂಖ್ಯೆಗಳ ಶಕ್ತಿಯಿಂದ ಪರಿಹಾರ ಪಡೆದುಕೊಳ್ಳಬಹುದು. ನಮ್ಮ ದೇಹದಲ್ಲಿ 7 ಚಕ್ರಗಳು ಇರುತ್ತವೆ. ಆ ಚಕ್ರಗಳಿಗೆ ತೊಂದರೆ ಆದಾಗ ಅನೇಕ ಸಮಸ್ಯೆಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ. ಆದ್ರೆ ದೇಹದಲ್ಲಿನ ಎಲ್ಲಾ 7 ಚಕ್ರಗಳನ್ನು ಬ್ಯಾಲನ್ಸ್ ಮಾಡಲು ಅವೆಲ್ಲವುಗಳನ್ನು ಸಮತೋಲನದಲ್ಲಿ ಇಟ್ಟುಕೊಂಡು, ಹೇಗೆ ನಮ್ಮ ಎಲ್ಲ ಸಮಸ್ಯೆಗಳಿಂದ ಹೊರಗೆ ಉಳಿದು ಸಂತೋಷವಾಗಿ ಇದ್ದು, ಅಭಿವೃದ್ಧಿ ಹೊಂದುವುದು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ನಮ್ಮ ದೇಹದ ಎಲ್ಲ ಚಕ್ರಗಳನ್ನು ಕೇವಲ ಒಂದು ನಂಬರ್ ಬರೆದುಕೊಳ್ಳುವ ಮುಖಾಂತರ ಹೇಗೆ ಬ್ಯಾಲನ್ಸ್ ಮಾಡುವುದು ಎಂದು ನೋಡೋಣ. ಎಷ್ಟು ಅದ್ಭುತ ಅನ್ಸುತ್ತೆ ಅಲ್ವಾ? ಬನ್ನಿ ಹಾಗಾದರೆ ಆ ಕೋಡ್ ಯಾವುದು ಹಾಗೂ ಅದನ್ನು ಹೇಗೆ ಬಳಕೆ ಮಾಡಬೇಕು ಎಂದು ನೋಡೋಣ.

 

 

ಮೊದಲಿಗೆ 56 51 521 ಹೀಗೆ ಎರಡು ನಂಬರ್ ಗಳ ಮಧ್ಯೆ ಗ್ಯಾಪ್ ಕೊಟ್ಟು ಮೇಲೆ ತಿಳಿಸಿದ ಹಾಗೆ ಬರೆಯಬೇಕು. ಈ ರೀತಿ ಬರೆದಾಗ ಮಾತ್ರ ಆ ನಂಬರ್ ನಮ್ಮ ದೇಹದ ಮೇಲೆ ಪರಿಣಾಮ ಬೀರಿ ಆಕ್ಟಿವೆಟ್ ಆಗಿ ಎಲ್ಲಾ 7 ಚಕ್ರಗಳನ್ನು ಬ್ಯಾಲನ್ಸ್ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಎಡ ದೇಹದ ಅಂಗಗಳು, ಅಥವಾ ಯಾವುದೇ ದೇಹದ ಎಡ ಭಾಗದ ಸ್ಥಳದಲ್ಲಿ ಇದನ್ನು ನೀಲಿ ಬಣ್ಣದ ಪೆನ್ ಇಂದ ಬರೆದುಕೊಳ್ಳಬಹಿದು. ಈ ರೀತಿ ಬರೆದರೆ ನಿಮ್ಮ ದೇಹದ 7 ಚಕ್ರಗಳು ಸಮತೋಲನದಲ್ಲಿ ಇಡಲು ಸಹಾಯವಾಗುತ್ತದೆ. ಇವೆಲ್ಲವುಗಳು ಪ್ರಯತ್ನ ಮಾಡಿ ಪರೀಕ್ಷೆ ಮಾಡಿ ಉತ್ತಮ ಫಲಿತಾಂಶ ಬಂದ ಮೇಲೆ ನಿಮಗೆ ಇದರ ಪ್ರಯೋಜನ ತಿಳಿಸಿರುತ್ತಾರೆ.

 

 

ಹಾಗಾಗಿ ಅನುಮಾನ ಬೇಡ. ಹಾಗೆಯೇ ನೀವು ಯಾವುದೇ ಕೆಲ್ಸ ನಂಬಿ ಮಾಡುವಾಗ ಸಕಾರಾತ್ಮಕವಾಗಿ ಚಿಂತನೆ ನಡೆಸಿ ಒಳ್ಳೆಯ ಪಾಸಿಟಿವ್ ಮನಸ್ಸಿನಿಂದ ಮಾಡಿದರೆ ನೀವು ಮಾಡಿದ ಯಾವ ಪ್ರಯತ್ನ ಕೆಲಸ ಕೈ ಕೊಡುವುದಿಲ್ಲ. ನಿಮ್ಮ ದೇಹದ 7 ಚಕ್ರಗಳಲ್ಲಿ ಯಾವುದೋ ಒಂದು ಚಕ್ರಕ್ಕೆ ಸಂಬಂಧಿಸಿದಂತೆ ನೀವು ರೇಖಿ ಹೀಲಿಂಗ್ ಮಾಡುವವರ ಬಳಿ ಹೋದ್ರೆ ಏನಿಲ್ಲ ಅಂದ್ರೂ ಎರಡು ಮೂರು ಸಿಟ್ಟಿಂಗ್ ಅಂತ 700, 500 ಚಾರ್ಜ್ ಮಾಡ್ತಾರೆ. ಇಂತಹ ಸಂದರ್ಭದಲ್ಲಿ ದೇಹದ 7 ಚಕ್ರಗಳು ಕೇವಲ ಒಂದು ಹೀಲಿಂಗ್ ಕೋಡ್ ಇಂದ ಸರಿ ಮಾಡಿಕೊಳ್ಳಬಹುದು ಅಂದ್ರೆ ಯಾಕೆ ಒಮ್ಮೆ ಟ್ರೈ ಮಾಡಬಾರದು ಹೇಳಿ. ಅತೀ ಸರಳ ಅತೀ ಸುಲಭ ಆಗಿರುವ ಈ ಪ್ರಯತ್ನ ಮಾಡಿ ನಿಮ್ಮ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಕಂಡುಕೊಳ್ಳಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *