ಕನ್ನಡ ಮೀಡಿಯಂ ನಲ್ಲಿ ಓದಿ UPSC ಪರೀಕ್ಷೆಯನ್ನು ಪಾಸ್ ಮಾಡಿದ ಅರುಣಾ. ಏಮ್ ನ ಸಾಧನೆಯ ದಾರಿ ಅಷ್ಟು ಸುಲಭ ಆಗಿರಲಿಲ್ಲ..!!

ಕನ್ನಡ ಮೀಡಿಯಂ ನಲ್ಲಿ ಓದಿ UPSC ಪರೀಕ್ಷೆಯನ್ನು ಪಾಸ್ ಮಾಡಿದ ಅರುಣಾ. ಏಮ್ ನ ಸಾಧನೆಯ ದಾರಿ ಅಷ್ಟು ಸುಲಭ ಆಗಿರಲಿಲ್ಲ..!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಕಾಲದಲ್ಲಿ ಭಾರತ ಸರ್ಕಾರದ ಒಂದು ಪ್ರತಿಷ್ಠಿತ ಸಂಸ್ಥೆ ಆದ ಯು.ಪಿ.ಎಸ್.ಸಿ ಪರೀಕ್ಷೆಯನ್ನು ಎದುರಿಸಿ ಪರೀಕ್ಷೆಯಲ್ಲಿ ಪಾಸ್ ಆಗುವುದು ತುಂಬಾ ಕಷ್ಟ. ಅದರಲ್ಲಿ ಹಳ್ಳಿ ಪ್ರದೇಶದಿಂದ ಕನ್ನಡ ಮಾಧ್ಯಮದಲ್ಲಿ ಓದಿ ಅಂತಹ ದೊಡ್ಡ ಪ್ರತಿಷ್ಠಿತ ಪರೀಕ್ಷೆಗಳನ್ನು ಈಡೇರಿಸುವುದು ಸುಲಭದ ಮಾತಲ್ಲ. ಆದ್ರೆ ಇಂದಿನ ಲೇಖನದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ, ಯುಪಿ ಎಸ್ ಸಿ ಪರೀಕ್ಷೆಯನ್ನು ಸತತ 8 ವರ್ಷಗಳ ಪ್ರಯತ್ನದಿಂದ ಅರುಣಾ ಏಮ್ ಎನ್ನುವವರು 6 ನೆ ಪ್ರಯತ್ನದಲ್ಲಿ ಉತ್ತಿರ್ಣಾಗಿ ಕರ್ನಾಟದಲ್ಲಿ ಟಾಪರ್ ಲಿಸ್ಟ್ ಅಲ್ಲಿ ಆಗ್ರ ಸ್ಥಾನದಲ್ಲಿ ಇದ್ದಾರೆ. ಅವರ ಕುರಿತು ಒಂಚೂರು ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಅರುಣಾ ಏಮ್ ಅವರು ಹುಟ್ಟಿದ್ದು ಕಡಕಲೂರು ಎಂಬ ಗ್ರಾಮದಲ್ಲಿ ಅವರ ತಂದೆ ತಾಯಿಗೆ ಅರುಣಾ ಸೇರಿದಂತೆ ಇನ್ನೂ 4 ಜನ ಅಕ್ಕ ತಮ್ಮಂದಿರು ಇದ್ದಾರೆ. ಅರುಣಾ ಅವರ ತಂದೆ ಒಬ್ಬ ಕೃಷಿಕಾರ ಆಗಿದ್ದು, ರೈತನಾಗಿ ತನ್ನ ಒಟ್ಟು 5 ಮಕ್ಕಳನ್ನು ಉತ್ತಮ ಉನ್ನತ ಶಿಕ್ಷಣ ಕೊಡಿಸಬೇಕು ಎಂಬ ಮಹದಾಸೆ ಹೊಂದಿದ ವ್ಯಕ್ತಿ ಆಗಿದ್ದರು.

 

 

ಅವರ ಎಲ್ಲಾ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಡಲು ಮಾಡಿದ ಸಾಲದ ಹೊರೆಯಿಂದ 2009 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈ ನೋವಿನಿಂದ ಹೊರ ಬಂದು ಅರುಣಾ ಅವರು ಸತತ 8 ವರ್ಷಗಳ ಅಭ್ಯಾಸದ ಫಲವಾಗಿ 6 ನೆ ಪ್ರಯತ್ನದಲ್ಲಿ ಸಫಲವಾಗಿ ಕರ್ನಾಟಕಕ್ಕೆ ಮೊದಲ ರಾಂಕ್ ಬಂದಿದ್ದಾರೆ. ಮೊದಲ ಐದು ಬಾರಿ ಪರೀಕ್ಷೆಯಲ್ಲಿ ಪ್ರಿಲಿಮ್ಸ್ ನಲ್ಲಿ ಪಾಸ್ ಆದರೂ ಮೆನ್ಸ್ ಪರೀಕ್ಷೆಯಲ್ಲಿ ಯಾಕೋ ಫೇಲ್ ಆಗುತ್ತಿದ್ರು. ಆದರೆ ಸತತ ಐದು ಬಾರಿ ಅಂದುಕೊಂಡ ಫಲಿತಾಂಶ ಬರದಿದ್ದಾಗ ನೊಂದಿದ್ದು ಉಂಟು, ಆದ್ರೆ ತಮ್ಮ ತಂದೆಯನ್ನು ನೆನೆದು ಅವರ ತ್ಯಾಗಕ್ಕೆ ಮನಸೋತು ಏನಾದರೂ ಸಾಧನೆ ಮಾಡಬೇಕು ಎಂದು ಹಠ ಹಿಡಿದು ಮತ್ತೆ ಇನ್ನಷ್ಟು ತಯಾರಿ ನಡೆಸಿ ಇಂದು ಉತ್ತೀರ್ಣರಾದರು. ಇವರು ಮೂಲತಃ ಎಂಜಿನಿಯರ್ ಆಗಿದ್ದು, ಎರಡು ವರ್ಷಗಳು ಒಂದು ಕಂಪನಿಯಲ್ಲಿ ಸೇವೆ ಸಲ್ಲಿಸಿ ಮುಂದೆ ತನ್ನ ತಂದೆ ಕಂಡ ಕನಸನ್ನು ನನಸಾಗಿಸಲು ಯಾವುದಾದರೂ ಒಂದು ಸರಿಯಾದ ರೀತಿಯಲ್ಲಿ ರೈತರ ಮುಖದಲ್ಲಿ ನಗು ಕಾಣಲು ಸತತವಾಗಿ ಶ್ರಮಿಸಿ ಇಂದಿನ ಗೆಲುವಿಗೆ ತಾವೇ ಕಾರಣರಾಗಿದ್ದಾರೆ.

 

 

ಇವ್ರು ತಮ್ಮ ಪ್ರಾಥಮಿಕ ಶಾಲಾ ಹಂತವನ್ನು ತಮ್ಮ ಶಿರಾ ತಾಲೂಕಿನ ಕಡಕಲೂರು ಕುಗ್ರಾಮದಲ್ಲಿ ಆಗ ಅವರ ಊರಿನಲ್ಲಿ ಕರೆಂಟ್ ವ್ಯವಸ್ಥೆ ಸಹ ಇರಲಿಲ್ಲ ಹಾಗೆಯೇ ದೀಪದ ಬೆಳಕಿನಲ್ಲಿ ಓದು ಮುಗಿಸಿದರು, ಅದು ಎಂತಹ ಕುಗ್ರಾಮ ಅಂದ್ರೆ ಅವರ ಊರಿಗೆ ಸರಿಯಾಗಿ ಬಸ್ ಕೂಡ ಸಂಚಾರ ಆಗುವುದಿಲ್ಲ. ಅಂತಹ ಊರಿನ ಪ್ರತಿಭೆಯೇ ಈ ಅರುಣಾ ಏಮ್. ನಂತರ ಮುಂದಿನ ಪದವಿ ಪೂರ್ವ ಶಿಕ್ಷಣಕ್ಕಾಗಿ ತುಮಕೂರಿನಲ್ಲಿ ವಿಧ್ಯಾಭ್ಯಾಸ ಮುಗಿಸಿ ನಂತರ ಎಂಜಿನಿಯರಿಂಗ್ ಪದವಿ ಮುಗಿಸಿ ಎರೆಡು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ತಮ್ಮ ಪರೀಕ್ಷೆಗೆ ಬೇಕಾದ ತಯಾರಿ ಸಹ ನಡೆಸಿ ಇಂದಿನ ಗೆಲುವಿಗೆ ತಾವೇ ಕಾರಣರಾಗಿದ್ದಾರೆ. ಅವರು ತಮ್ಮದೇ ಒಂದು ಅರುಣಾ ಐಎಎಸ್ ಅಕಾಡೆಮಿ ಎನ್ನುವ ಕೋಚಿಂಗ್ ಅಂದ್ರೆ ತರಬೇತಿ ನೀಡುವ ಒಂದು ಸಂಸ್ಥೆಯನ್ನು ಸಹ ಹುಟ್ಟು ಹಾಕಿ ಅದರಲ್ಲಿ ಹೀಗೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವ ಎಲ್ಲರಿಗೂ ಪಠ್ಯದ ಅನುಗುಣವಾಗಿ ತರಬೇತಿ ಸಹ ನೀಡುತ್ತಿದ್ದಾರೆ. ಈಗ ಇತ್ತೀಚೆಗೆ ಒಂದು ವಾರದ ಹಿಂದೆ ಬಂದ ಫಲಿತಾಂಶದಲ್ಲಿ ಉತ್ತೀರ್ಣರಾಗಿದ್ದು,ಇಡೀ ಕರ್ನಾಟಕದ ಹೆಮ್ಮೆ ಹೆಚ್ಚಿಸಿದ್ದಾರೆ. ಇವರು ನಮ್ಮ ನಾಡಿನ ಮಗಳು ಎನ್ನುವುದೇ ಸಂತಸದ ಸಂಗತಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು