ನಮಸ್ತೆ ಪ್ರಿಯ ಓದುಗರೇ, ಮಹಾವಿಷ್ಣು ವೂ ಶ್ರೀನಿವಾಸನ ರೂಪಿಯಾಗಿ ತಿರುಪತಿಯಲ್ಲಿ ನೆಲೆ ನಿಂತರೆ ಆತನ ಸತಿಯಾದ ಮಹಾಲಕ್ಷ್ಮಿ ದೇವಿಯು ಕೊಲ್ಲಾಪುರದಲ್ಲಿ ನೆಲೆಸಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ. ಬಹಳಷ್ಟು ಮಂದಿಗೆ ಜೀವಮಾನದಲ್ಲಿ ಒಮ್ಮೆ ಇವೆರಡೂ ಕ್ಷೇತ್ರಗಳಿಗೆ ದರ್ಶನ ಮಾಡಬೇಕು ಎನ್ನುವ ಆಸೆ ಇರುತ್ತೆ ಆದ್ರೆ ಹೋಗೋಕೆ ಶಾದುವಾಗಲ್ಲ. ಅಂತಹವರು ಈ ಕ್ಷೇತ್ರಕ್ಕೆ ಹೋದರೆ ವೆಂಕಟೇಶ್ವರನ ಜೊತೆ ಲಕ್ಷ್ಮೀ ದೇವಿಯನ್ನು ಸಂದರ್ಶಿಸಿ ಆ ದೇವರ ಕೃಪೆಗೆ ಪಾತ್ರರಾಗಬಹುರು. ಬನ್ನಿ ಹಾಗಾದರೆ ಆ ಕ್ಷೇತ್ರದ ವಿಶೇಷತೆ ಏನು ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಸುಮಾರು 450 ವರ್ಷಗಳಷ್ಟು ಪುರಾತನವಾದ ಕೊಲ್ಲೂರು ಕ್ಷೇತ್ರದಲ್ಲಿ ಮಹಾಲಕ್ಷ್ಮಿಯು ನೆಲೆ ನಿಂತಿದ್ದು ದೇವಿಯ ವಿಗ್ರಹವನ್ನು ಸಾಣೇಕಲ್ಲಿನಿಂದ ಕೆತ್ತಲಾಗಿದೆ. ದೇವಿಯು ಸಿಂಹ ಪೀಠದ ಮೇಲೆ ಅಭಯ ಹಸ್ತವನ್ನು ಹಿಡಿದು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ.
ಸಂತಾನ ಭಾಗ್ಯ, ಕಂಕಣ ಭಾಗ್ಯ ಹಾಗೂ ಮನಸಿನ ಎಲ್ಲಾ ಕಾರ್ಯಗಳು ಸಿದ್ಧಿ ಆಗಬೇಕು ಎನ್ನುವವರು ಈ ಕ್ಷೇತ್ರಕ್ಕೆ ಬಂದು ಎರಡು ತೆಂಗಿನಕಾಯಿಯನ್ನು ಕಟ್ಟುತ್ತೇವೆ ಎಂದು ಹರಕೆ ಹೊತ್ತರೆ ಅವರ ಕೋರಿಕೆಗಳನ್ನು ಈ ತಾಯಿ ಮಾನ್ಯ ಮಾಡುತ್ತಾಳೆ. ಮಹಿಳೆಯರು ಇಲ್ಲಿಗೆ ಬಂದು ಮಡಿ ತುಂಬುವ ಸೇವೆ ಮಾಡಿದರೆ ಅವರಿಗೆ ಮುತ್ತೈದೆ ಭಾಗ್ಯ ಈ ದೇವಿ ಕರುಣಿಸುತ್ತಾಳೆ ಎನ್ನುವುದು ಇಲ್ಲಿಗೆ ಬರುವ ಮಹಿಳೆಯರ ಅಚಲವಾದ ನಂಬಿಕೆ. ಇನ್ನೂ ಇಲ್ಲಿಗೆ ಬಂದು ತೆಂಗಿನಕಾಯಿ ಕಟ್ಟುವ ಹರಕೆ ಹೊತ್ತವರು ತಮ್ಮ ಕೋರಿಕೆಗಳು ಈಡೇರಿದ ಮೇಲೆ ತೆಂಗಿನಕಾಯಿಯನ್ನು ಇಳಿಸಿ ಅರ್ಚಕರಿಗೆ ನೀಡಬೇಕು ಎಂದು ಪ್ರತೀತಿ ಇದ್ದು, ಒಬ್ಬರು ಎಷ್ಟು ಬಾರಿ ಬೇಕಾದರೂ ಈ ಹರಕೆಯನ್ನು ಹೊಟ್ಟುಕೊಳ್ಳಬಹುದು. ಶಕ್ತಿಶಾಲಿ ಆದ ಮಹಾಲಕ್ಷ್ಮಿ ದೇವಿಯು ಈ ಕ್ಷೇತ್ರದಲ್ಲಿ ಬಂದು ನೆಲೆಸಿರುವ ಹಿಂದೆ ಒಂದು ಕಥೆ ಇದೆ. ಹಿಂದೆ ಲಕ್ಷ್ಮೀ ಕಂತಾಚರ್ ಎಂಬುವವರು ಕೊಲ್ಲಾಪುರ ಮಹಾಲಕ್ಷ್ಮಿಯ ಮಹಾನ್ ಭಕ್ತರಾಗಿದ್ದರು ಅವರು ತಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಮುಂಚೆ ಕೊಲ್ಲಾಪುರ ಮಹಾಲಕ್ಷ್ಮಿಯ ದರ್ಶನ ಮಾಡಿ ಬರ್ತಾ ಇದ್ರಂತೆ.
ಆದ್ರೆ ಅವರಿಗೆ 85 ವರ್ಷ ಆದಾಗ ಮನೆಯಲ್ಲಿ ನಡೆಯುವ ಶುಭ ಕಾರ್ಯದ ಸಂದರ್ಭದಲ್ಲಿ ಕೊಲ್ಲಾಪುರಕ್ಕೆ ಹೋಗಲು ಸಾಧ್ಯ ಆಗಲಿಲ್ಲ ಆಗ ದೇವಿಯು ಲಕ್ಷ್ಮೀ ಕಾಂತಾಚಾರ್ ಅವರ ಕನಸಿನಲ್ಲಿ ಕಾಣಿಸಿಕೊಂಡು ಇನ್ನೂ ಮುಂದೆ ನಾನು ಕಲ್ಲೂರು ಕ್ಷೇತ್ರದಲ್ಲಿ ನೆಲೆಸುತ್ತೇನೆ ನೀನು ಅಲ್ಲಿಗೆ ಬಂದು ನನ್ನ ದರ್ಶನವನ್ನು ಮಾಡು ಎಂದು ಹೇಳಿದಲಂತೆ. ನಂತರ ಲಕ್ಷ್ಮೀಕಾಂತ ಚಾರ್ ಅವರು ಇಲ್ಲಿ ಪುಟ್ಟದಾದ ಗುಡಿಯನ್ನು ನಿರ್ಮಿಸಿದ್ದರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ದೇಗುಲದಲ್ಲಿ ನವರಾತ್ರಿ ಹಾಗೂ ವರ ಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ನಡೆಯುತ್ತದೆ. ವರ ಮಹಾಲಕ್ಷ್ಮಿ ಹಬ್ಬದಂದು ದೇವಿಗೆ ತುಪ್ಪದ ಅಭಿಷೇಕ, ಕ್ಷೀರ ಅಭಿಷೇಕ, ಪುಷ್ಪಾಲಂಕಾರ ಮಾಡಲಾಗುತ್ತೆ. ಈ ಸಮಯದಲ್ಲಿ ಸರ್ವಲಂಕೃತ ದೇವಿಯನ್ನು ನೋಡುವುದು ಒಂದು ಪುನ್ಯವಾದ ಕೆಲ್ಸವಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಈ ದೇವಿಯನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೂ ದರ್ಶನ ಮಾಡಬಹುದು. ಇಲ್ಲಿಗೆ ಬಂದರೆ ಲಕ್ಷ್ಮೀ ದೇವಿಯ ಜೊತೆಗೆ ಶ್ರೀನಿವಾಸನ ದರ್ಶನ ಕೂಡ ಪಡೆಯಬಹುದು. ಈ ದೇವಸ್ಥಾನವು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಲ್ಲೂರು ಎಂಬ ಪುಟ್ಟ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ನಿಮ್ಮ ಜೀವಮಾನದಲ್ಲಿ ಇಲ್ಲಿಗೆ ಭೇಟಿ ನೀಡಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.