ಸೂಪರ್ ಆದ ಟೇಸ್ಟಿ ಹಾಗೂ ಗರಿ ಗರಿಯಾದ ಕ್ರಿಸ್ಪಿ ಕ್ಯಾಬೇಜ್ ಪಕೋಡ ಹಾಗೂ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ…

ಸೂಪರ್ ಆದ ಟೇಸ್ಟಿ ಹಾಗೂ ಗರಿ ಗರಿಯಾದ ಕ್ರಿಸ್ಪಿ ಕ್ಯಾಬೇಜ್ ಪಕೋಡ ಹಾಗೂ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ…

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಸಾಯಂಕಾಲದ ಸ್ನಾಕ್ಸ್ ಅಥವಾ ಟೀ ಟೈಂ ಸ್ನಾಕ್ ಆಗಿ ಕ್ಯಾಬೇಜ್ ಪಕೋಡ ಹಾಗೂ ಅದಕ್ಕೆ ನೆಂಚಿಕೊಳ್ಳಲು ಚಟ್ನಿಯನ್ನು ಹೇಗೆ ಮಾಡುವುದು ಎಂದು ನೋಡೋಣ ಸ್ನೇಹಿತರೆ. ಇದನ್ನು ಒಮ್ಮೆ ಮನೆಯಲ್ಲಿ ಮಾಡಿದರೆ ಪದೇ ಪದೇ ಮಾಡಿಕೊಂಡು ತಿಂತೀರಾ. ಒಮ್ಮೆ ಈ ರೀತಿ ಟ್ರೈ ಮಾಡಿ ನೋಡಿ. ಹಾಗಾದರೆ ಕ್ಯಾಬೇಜ್ ಪಕೋಡ ಮಾಡಲು ಏನೇನು ಪದಾರ್ಥಗಳು ಬೇಕು ಎನ್ನುವುದನ್ನು ನೋಡೋಣ ಸ್ನೇಹಿತರೆ. ಎರಡು ಚಿಕ್ಕದಾಗಿ ಕಟ್ ಮಾಡಿದ ದೊಡ್ಡ ಈರುಳ್ಳಿ, ಅರ್ಧ ಕ್ಯಾಬೇಜ್, 4 ಹಸಿಮೆಣಸಿನ ಕಾಯಿ. ಈಗ ಕ್ಯಾಬೇಜ್ ನ ಚಿಪ್ಸ್ ಮಾಡುವ ತುರಿಯನ್ನು ಬಳಸಿ ಕ್ಯಾಬೇಜ್ ನ್ನೂ ಸ್ಲೈಸ್ ರೀತಿ ತುರಿದುಕೊಳ್ಳಿ. ಈರುಳ್ಳಿಯನ್ನು ಸಹ ಉದ್ದವಾಗಿ ಸ್ಲೈಸ್ ಮಾಡಿಕೊಳ್ಳಿ. ಒಂದು ಮಿಕ್ಸಿಂಗ್ ಬೌಲ್ ಗೆ ಸ್ಲೈಸ್ ಮಾಡಿದ ಕ್ಯಾಬೇಜ್, ಈರುಳ್ಳಿಯನ್ನು ಹಾಕಿ ಅದಕ್ಕೆ ಒಂದು ಚಿಕ್ಕ ಬಟ್ಟಲು ಕಡಲೆ ಬೇಳೆ ಹಿಟ್ಟು ಹಾಕಿ, 2 ಚಮಚ ಅಕ್ಕಿ ಹಿಟ್ಟು, ಅಕ್ಕಿ ಹಿಟ್ಟು ಹಾಕುವುದರಿಂದ ಪಕೋಡ ಕ್ರಿಸ್ಪಿ ಆಗುತ್ತವೆ.

 

ಎರಡು ಚಮಚ ಹಸಿಮೆಣಸಿನಕಾಯಿ, ಅರ್ಧ ಚಮಚ ಕೊತ್ತಂಬರಿ ಬೀಜ ಕುಟ್ಟಿ ಹಾಕಿ, ಕರಿಬೇವು ಸೊಪ್ಪು, ಅರ್ಧ ಚಮಚ ಅಜ್ವಾನ್ ಕಾಳು ಸೇರಿಸಿ, ಒಂದು ಚಿಟಿಕೆ ಅರಿಶಿನ, ಅರ್ಧ ಚಮಚ ಜೀರಿಗೆ ಪುಡಿ, ಕಾಲು ಚಮಚ ಗರಂ ಮಸಾಲ, ಅರ್ಧ ಚಮಚ ಖಾರದ ಪುಡಿ, ಕಾಲು ಚಮಚ ಧನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಕೈಯಲ್ಲಿ ಚೆನ್ನಾಗಿ ಕಲಸಿ, ಈರುಳ್ಳಿ, ಕ್ಯಾಬೇಜ್ ನೀರು ಬಿಡುವುದರಿಂದ ನೀರು ಹಾಕದೆ ಮೊದಲು ಕಲಸಿ ನಂತರ ಬೇಕಾದರೆ ಒಂದೆರಡು ಚಮಚ ನೀರು ಸೇರಿಸಿ ಕಲಸಿ ಹತ್ತು ನಿಮಿಷ ಮುಚ್ಚಳ ಮುಚ್ಚಿ ಹಾಗೆ ಇಡಿ. ಅದು ನೆನೆಯುವ ಟೈಂ ಆಲಿ ಚಟ್ನಿ ರೆಡಿ ಮಾಡಿಕೊಳ್ಳೋಣ.

 

ಅದಕ್ಕೆ ಒಂದು ಸಣ್ಣ ಜಾರ್ ನಲ್ಲಿ ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಒಂದು ಹಸಿ ಮೆಣಸಿನಕಾಯಿ, ತುಂಡು ಶುಂಠಿ, ಒಂದು ಚಮಚ ಹುರಿಗಡಲೆ, ಒಂದು ಚಿಟಿಕೆ ಜೀರಿಗೆ ಪುಡಿ, ಅರ್ಧ ಚಮಚ ಚಾಟ್ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಚಮಚೆ ಮೊಸರು ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. ಈಗ ಎಣ್ಣೆ ಬಿಸಿಯಲ್ಲಿಡಿ, ಕಲಸಿದ ಪಕೋಡ ಹಿಟ್ಟಿಗೆ ನಾವು ಯಾವುದೇ ರೀತಿ ಸೋಡಾ ಹಾಕದೆ, ಕಾದಿರುವ ಎಣ್ಣೆಯನ್ನು ಒಂದು ಚಮಚ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಪಕೋಡ ರೀತಿ ಎಣ್ಣೆಯಲ್ಲಿ ಹಾಕಿ, ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಈಗ ಬಿಸಿ ಬಿಸಿಯಾದ ಗರಿ ಗರಿಯಾದ ಕ್ರಿಸ್ಪಿ ಕ್ಯಾಬೇಜ್ ಪಕೋಡ ಹಾಗೂ ಹಸಿರು ಚಟ್ನಿಯ ಜೊತೆ ಸಂಜೆಯ ಟೀ ಜೊತೆ ಸವಿಯುತ್ತ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಅಂತೀರಾ. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆಹಾರ