ವರ್ಷದಿಂದ ವರ್ಷಕ್ಕೆ ಬೆಳೆಯೋ ಈ ಆಂಜನೇಯನ ಕಥೆಯೇ ವಿಭಿನ್ನ..!!!

ವರ್ಷದಿಂದ ವರ್ಷಕ್ಕೆ ಬೆಳೆಯೋ ಈ ಆಂಜನೇಯನ ಕಥೆಯೇ ವಿಭಿನ್ನ..!!!

ನಮಸ್ತೆ ಪ್ರಿಯ ಓದುಗರೇ, ಅಂಜನಿಪುತ್ರನಾಗಿ ಜನಿಸಿ, ಲಂಕಾ ದಹನ ಮಾಡಿ ರಾಮನ ಪರಮ ಭಕ್ತನಾಗಿ ಇಂದಿಗೂ ಭೂಮಿಯ ಮೇಲೆ ಚಿರಂಜೀವಿ ಆಗಿ ನೆಲೆಸಿರುವ ಸ್ವಾಮಿ ಅಂದ್ರೆ ಅದು ಹನುಮಂತ ಸ್ವಾಮಿ. ಸನ್ಮಾರ್ಗದಲ್ಲಿ ಸಾಗುವ ಜನರಿಗೆ ಬಂದ ಕಷ್ಟಗಳನ್ನು ದೂರ ಮಾಡುವ ಈ ದೇವನನ್ನು ದಿನದಲ್ಲಿ ಎಷ್ಟು ಬಾರಿ ಸ್ಮರಣೆ ಮಾಡಿದರೂ ಕಡಿಮೆಯೇ. ಬನ್ನಿ ಇವತ್ತಿನ ಲೇಖನದಲ್ಲಿ ಮದ್ದೂರಿನ ಸಮೀಪದ ಹೊಳೆ ಆಂಜನೇಯ ಸ್ವಾಮಿಯ ದರ್ಶನ ಮಾಡಿ ಪುನೀತರಾಗೊಣ. ಸುಮಾರು 550 ವರ್ಷಗಳಷ್ಟು ಪುರಾತನವಾದ ಈ ದೇವಾಲಯದಲ್ಲಿ ಆಂಜನೇಯ ದೇವರು ನೆಲೆ ನಿಂತಿದ್ದು, ಶೀರ್ಷ ಹೊಳೆಯ ತಟದ ಮೇಲೆ ಈ ದೇಗುಲವನ್ನು ನಿರ್ಮಾಣ ಮಾಡಿರುವುದರಿಂದ ಈ ಕ್ಷೇತ್ರವನ್ನು ಹೊಳೆ ಆಂಜನೇಯ ದೇಗುಲ ಎಂದೇ ಕರೆಯಲಾಗುತ್ತದೆ. ವ್ಯಾಸರಾಯರು ಮತ್ತು ಶ್ರೀಪಾದರಾಜರು ಪ್ರತಿಷ್ಠಾಪಿಸಿ ಪೂಜೆ ಮಾಡಿದ್ರು ಎಂಬ ಕಾರಣಕ್ಕೆ ಈ ಕ್ಷೇತ್ರ ದಿನೇ ದಿನೇ ಅಸಂಖ್ಯಾತ ಭಕ್ತರನ್ನು ತನ್ನತ್ತ ಸೆಳೆಯುತ್ತದೆ.

 

 

ಸಾಮಾನ್ಯವಾಗಿ ಬೇರೆಲ್ಲಾ ಆಂಜನೇಯ ದೇಗುಲದಲ್ಲಿ ಹರಕೆ ರೂಪದಲ್ಲಿ ವಿಲ್ಯೆದೆಲೇ, ಹಾರ, ಬೆಣ್ಣೆ ಸಮರ್ಪಣೆ, ಅಲಂಕಾರ, ಸಿಂಧೂರ ಅಲಂಕಾರ ಮಾಡಿಸುವುದನ್ನು ನಾವು ನೋಡಿರುತ್ತೇವೆ. ಆದ್ರೆ ಈ ದೇವರಿಗೆ ಹರಕೆ ಫಲಿಸಿಡ ಮೇಲೆ ಒಂದು ಕಾಲು ರೂಪಾಯಿ ಸಮರ್ಪಣೆ ಮಾಡ್ತೀವಿ ಅಂತ ಹರಕೆ ಹೊತ್ತರೆ, ಬಂದ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ. ಒಂದು ಕಾಲು ರೂಪಾಯಿ ಹರಕೆ ಹೊತ್ತುಕೊಂಡರೆ ವಿವಾಹ ವಿಳಂಬ ಸಮಸ್ಯೆ, ಆರ್ಥಿಕ ಸಮಸ್ಯೆ, ಹಣಕಾಸಿನ ವ್ಯಾಜ್ಯ ಬಗೆಹರಿಯುತ್ತದೆ ಎನ್ನುವುದು ಇಲ್ಲಿಗೆ ನಿತ್ಯ ಭೇಟಿ ನೀಡುವ ಭಕ್ತರ ಅಭಿಪ್ರಾಯವಾಗಿದೆ. ಆಂಜನೇಯ ಸ್ವಾಮಿಯು ರಾಮಾಯಣ ಕಾಲದಲ್ಲಿ ಹನುಮಂತ ನಾಗಿ ಮಹಾಭಾರತದಲ್ಲಿ ಭೀಮನಾಗಿ ಹಾಗೂ ಕಲಿಯುಗದಲ್ಲಿ ಮಧ್ವಾಚಾರ್ಯರ ಆಗಿ ಅವತಾರ ಎತ್ತಿದ್ದು, ಈ ಕ್ಷೇತ್ರದ ಗರ್ಭ ಗುಡಿಯಲ್ಲಿ ಇರುವ ಆಂಜನೇಯನ ಮೂರ್ತಿ ವರ್ಷದಿಂದ ವರ್ಷಕ್ಕೆ 6-7 ಇಂಚು ಬೆಳೆಯುತ್ತೆ ಎನ್ನುವುದು ಇಲ್ಲಿ ನೆಲೆಸಿರುವ ಹನುಮಂತ ದೇವರ ಪವಾಡ ಎಂದೇ ಹೇಳಬಹುದು.

 

 

ಇಲ್ಲಿನ ಹನುಮಂತ ದೇವರ ಮೂರ್ತಿಯ ಎರಡು ಬೆರಳುಗಳು ಉದ್ದವಿದ್ದು, ದೇವನು ಕೈಯಲ್ಲಿ ಸೌಗಂಧಿಕಾ ಪುಷ್ಪವನ್ನು ಹಿಡಿದು ಬಾಲದಲ್ಲಿ ಗಂಟೆ ಹಾಗೂ ತಲೆಯಲ್ಲಿ ಸೂರ್ಯ ಚಂದ್ರನನ್ನು ಹೊಂದಿದ್ದಾನೆ. ಈ ಮೂರ್ತಿಯ ಇನ್ನೊಂದು ವಿಶೇಷತೆ ಎಂದರೆ ದೇವನ ತಲೆಯಲ್ಲಿ ಜುಟ್ಟು ಇದೆ ಎನ್ನುವುದು. ಇನ್ನೂ 2004 ರಾಲ್ಲೀ ರಾಮನವಮಿಯಂದು ದೇವಸ್ಥಾನದ ಬಾಕಿಳು ಹಾಕಿದರೂ ಒಳಗಿನಿಂದ ಶಂಖ ಜಾಗಟೆ ನಗಾರಿಯ ಶಬ್ಧ ಕೇಳಿಸಿತು ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ. ಶ್ರಾವಣ ಮಾಸದಲ್ಲಿ ಇಲ್ಲಿನ ಮುಖ್ಯ ಪ್ರಾಣ ದೇವರಿಗೆ ಬೆಣ್ಣೆ ಅಲಂಕಾರ, ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕ, ಕ್ಷೀರ ಅಭಿಷೇಕ ಮಾಡಲಾಗುತ್ತದೆ. ಸರ್ವಾಲಂಕಾರ ಭೋಷಿತನಾದ ಈ ದೇವನನ್ನು ಬೆಳಿಗ್ಗೆ 7.30 ರಿಂದ ಮಧ್ಯಾನ 1 ಗಂಟೆ ವರೆಗೆ ಸಂಜೆ 4.30 -7.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಆಂಜನೇಯ ಸ್ವಾಮಿ ನೆಲೆ ನಿಂತಿರುವ ಈ ಸುಕ್ಷೇತ್ರ ವೂ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಅಂಜನಿಪುತ್ರನ ದರ್ಶನ ಮಾಡಿ ಬನ್ನಿ. ಶುಭದಿನ.

ಭಕ್ತಿ