ನಮಸ್ತೆ ಪ್ರಿಯ ಓದುಗರೇ, ಋಷಿಗಳ ತಪೋ ಭೂಮಿ ಇದು ದೇವ ನದಿಯಾದ ಗಂಗೆ ಭೂಲೋಕದಲ್ಲಿ ಹರಿಯುವ ಈ ಪುಣ್ಯ ಭೂಮಿಯಲ್ಲಿ ಕಟ್ಟಿರುವ ಒಂದೊಂದು ದೇಗುಲವು ಒಂದೊಂದು ಅಚ್ಚರಿಯೇ ಸರಿ. ಅದರಲ್ಲೂ ಕಡಲಿನ ಕಿನಾರೆಯಲ್ಲಿ ನಿರ್ಮಿಸಿರುವ ಈ ದೇಗುಲವನ್ನು ದರ್ಶನ ಮಾಡ್ತಾ ಇದ್ರೆ ಮನಸ್ಸು ಕ್ಷಣ ಕಾಲ ಪರಮೇಶ್ವರನ ಚಾರಣ ಕಮಲಗಳಲಿ ತನ್ಮಯ ಆಗುವುದು ನಿಜ. ಬನ್ನಿ ಇವತ್ತಿನ ಲೇಖನದಲ್ಲಿ ಶ್ರೀ ಅಗಸ್ತ್ಯೇಶ್ವರ ದೇವಾಲಯವನ್ನು ದರ್ಶನ ಮಾಡಿ ಪುನೀತರಾಗೋಣ. ಅಗಸ್ತ್ಯೇಶ್ವರ ಅಥವಾ ಕಿರಿ ಮಂಜೇಶ್ವರ ಎನ್ನುವ ಹೆಸರಿನಿಂದ ಕರೆಯುವ ಈ ದೇಗುಲದ ಗರ್ಭ ಗುಡಿಯಲ್ಲಿ ಸಪ್ತ ಋಷಿಗಳಲ್ಲೀ ಒಬ್ಬರಾದ ಅಗಸ್ತ್ಯ ಮುನಿಗಳು ಸ್ಥಾಪಿಸಿದ ಲಿಂಗವಿದ್ದು, ಈ ಲಿಂಗವನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೆ ಅವರ ಸಕಲ ಪಾಪಗಳೂ ಪರಿಹಾರವಾಗುತ್ತವೆ ಎಂದು ಹೇಳಲಾಗುತ್ತದೆ. ದೇಗುಲದ ಸುತ್ತ ಅಗಸ್ತ್ಯ ತೀರ್ಥ,ಕೋಟಿ ತೀರ್ಥ, ಕಮಂಡಲ ತೀರ್ಥ ಎನ್ನುವ ಹೆಸರಿನ ಪುಷ್ಕರಣಿ ಇದ್ದು, ಪ್ರತಿ ನಿತ್ಯ ಈ ಪುಷ್ಕರಣಿ ನೀರಿನಿಂದ ಶಿವನಿಗೆ ಅಭಿಷೇಕ ಮಾಡಲಾಗುತ್ತದೆ.
ಇಲ್ಲಿನ ಲಿಂಗವು ನದಿ ಮೂಲದ ಸಹಜ ಲಿಂಗವಾಗಿ ದೇ. ಈ ಕ್ಷೇತ್ರದಲ್ಲಿ ಶಿವನ ಜೊತೆ ವಿಶಾಲಾಕ್ಷಿ, ಗಣಪತಿ, ಸುಬ್ರಮಣ್ಯ ಕೂಡ ನೆಲೆ ನಿಂತಿದ್ದು, ಈ ದೇವರನ್ನು ಯಾರು ಶ್ರದ್ಧಾ ಭಕ್ತಿಯಿಂದ ನೆನೆಯುತ್ತಾರೆ ಅವರ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಇನ್ನೂ ಈ ದೇವಾಲಯದಲ್ಲಿ ಜಗದೇಶ್ವರ ಬಂದು ನೆಲೆ ನಿಲ್ಲುವುದರ ಹಿಂದೆ ಒಂದು ಕಥೆ ಕೂಡ ಇದೆ. ಹಿಂದೆ ವಿಂದ್ಯಾ ಪರ್ವತವು ಬಹಳ ಅಹಂಕಾರವನ್ನು ಹೊಂದಿ ಮೇರು ಪರ್ವತಕ್ಕಿಂತ ಹೆಚ್ಚು ಎತ್ತರಕ್ಕೆ ಬೆಳೆಯುತ್ತಿತ್ತು. ವಿಂಧ್ಯ ಪರ್ವತವನ್ನು ಎತ್ತರವನ್ನು ಹೆಚ್ಚಿಸುತ್ತಾ ಹೋದಂತೆ ಭೂಮಿಯ ಸಮತೋಲನ ತಪ್ಪಿತು, ಇದರಿಂದ ಭಯಗೊಂಡ ದೇವತೆಗಳು ಅಗಸ್ತ್ಯರ ಬಳಿ ಹೋಗಿ ನೀವೇ ವಿಂದ್ಯಾ ಪರ್ವತದ ಅಹಂಕಾರವನ್ನು ತಡೆಯಬೇಕು ಎಂದು ಕೇಳಿಕೊಂಡರು. ನಂತರ ಅಗಸ್ತ್ಯರು ದಕ್ಷಿಣಕ್ಕೆ ತೆರಳಿ ವಿಂದ್ಯಾ ಪರ್ವತದ ಬಳಿ ನಾನು ಬರುವ ವರೆಗೂ ನೀನು ಎತ್ತರಕ್ಕೆ ಬೇಳೆಬಾರದು ಎಂದು ಹೇಳಿದರು, ನಂತರ ಈ ಕ್ಷೇತ್ರಕ್ಕೆ ಬಂದು ಶಿವನ ಕುರಿತು ದೀರ್ಘವಾದ ತಪಸ್ಸನ್ನು ಮಾಡಿದರೂ, ಆಗ ಪರಮೇಶ್ವರ ಪ್ರತ್ಯಕ್ಷನಾಗಿ ಇನ್ನೂ ಮುಂದೆ ನಾನು ಈ ಕ್ಷೇತ್ರದಲ್ಲಿ ನೆಲೆ ನಿಂತು ಇಲ್ಲಿಗೆ ಬರುವ ಭಕ್ತರನ್ನು ಹರಸುತ್ತೇನೆ ಎಂದು ಹೇಳಿದರಂತೆ.
ನೀನು ನನ್ನನ್ನು ಪೂಜಿಸಿದ ಕಾರಣ ಈ ದೇಗುಲವು ಅಗಸ್ತ್ಯೇಶ್ವರ ದೇವಾಲಯ ಎಂದು ಪ್ರಸಿದ್ಧಿ ಆಗಲಿ ಎಂದು ಹೇಳಿದನಂತೆ. ಈ ರೀತಿಯಾಗಿ ಜಗದಿಶ್ವರ ಇಲ್ಲಿಗೆ ಬಂದು ನೆಲೆ ನಿಂತ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದ ವಿಶೇಷತೆ ಏನೆಂದರೆ ಪ್ರತಿ ವರ್ಷ ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು ರಾಷ್ಟ್ರದ ಏಳಿಗೆಗಾಗಿ ದೇಗುಲದಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ಹೀಗಾಗಿ ಇಲ್ಲಿಗೆ ಬಂದರೆ ದೈವ ಭಕ್ತಿಯ ಜೊತೆಗೆ ದೇಶ ಭಕ್ತಿ ಸಹ ಹೆಚ್ಚಾಗುತ್ತೆ. ಪ್ರತಿ ವರ್ಷ ಈ ಕ್ಷೇತ್ರದಲ್ಲಿ ದೇವರ ಮಣ್ಮಹಾರ ರಥೋತ್ಸವ ನಡೆಯುತ್ತದೆ. ಈ ದಿನ ದೇಗುಲದಲ್ಲಿ ನಿತ್ಯ ಬಲಿ, ರಥ ಶುದ್ಧಿ ಹೋಮ, ರಥ ಬಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಲ್ಲದೆ ಶಿವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಈ ಅಗಸ್ತ್ಯೇಶ್ವರ ದೇವಾಲಯವನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಈ ದೇವಾಲಯವು ಉಡುಪಿ ಜೆಲ್ಲೆಯ ಕುಂದಾಪುರ ತಾಲೂಕಿನ ಉತ್ತರಕ್ಕೆ ಸಿಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿದೆ. ಸಾಧ್ಯವಾದರೆ ರಾಷ್ಟ್ರ ಪ್ರೇಮ ಹೆಚ್ಚಿಸುವ ಈ ದೇಗುಲಕ್ಕೆ ನೀವು ಒಮ್ಮೆ ಭೇಟಿ ನೀಡಿ. ಶುಭದಿನ.