ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಗುದನಾಳ, ದೊಡ್ಡ ಕರುಳು, ಹಾಗೂ ಗುದದ್ವಾರದ ಕ್ಯಾನ್ಸರ್ ನ ಲಕ್ಷಣಗಳು ಏನೇನು ಎಂದು ತಿಳಿದುಕೊಂಡು ಬರೋಣ. ಲಕ್ಷಣಗಳು ಅಂದ್ರೆ ಯಾವುದೋ ರೋಗ ಬಂದು ನಮಗೆ ಬಾಧೆ ನೀಡುತ್ತಿರುವಾಗ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ ಅವುಗಳನ್ನು ನಾವು ಯಾವುದೋ ಒಂದು ರೋಗದ ಲಕ್ಷಣಗಳು ಎಂದು ಹೇಳಬಹುದು. ಆ ಬದಲಾವಣೆಗಳು ನಾಲ್ಕು ವಾರಗಳಿಂದ ಆರು ವಾರಗಳಲ್ಲಿ ಈ ಬದಲಾವಣೆಗಳನ್ನು ನಾವು ಸಹಜವಾಗಿ ಗಮನಿಸಬಹುದು. ಉದಾಹರಣೆಗೆ ಮಲ ವಿಸರ್ಜನೆ ಮಾಡುತ್ತೇವೆ, ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಮಲ ವಿಸರ್ಜನೆ ಮಾಡುತ್ತೇವೆ, ಹಾಗಾಗಿ ಇದ್ದಕ್ಕಿದ್ದ ಹಾಕೆ ನಾಲ್ಕರಿಂದ ಆರು ಬಾರಿ ಮಲ ವಿಸರ್ಜನೆ ಮಾಡಲು ಶುರು ಮಾಡುತ್ತವೆ, ಇದು ನಾರ್ಮಲ್ ಅಲ್ಲ. ಇದಕ್ಕೆ ಕಾರಣಗಳು ಏನು ಇಲ್ಲ. ಮಾತ್ರೆಗಳನ್ನು ತೆಗೆದುಕೊಂಡಿಲ್ಲ, ದೂರದ ಊರಿಗೆ ಹೋಗಿಲ್ಲ, ಯಾವುದೇ ರೀತಿಯ ಇನ್ಫೆಕ್ಷನ್ ಇಲ್ಲ.
ಹೀಗಿರುವಾಗ ಈ ಬದಲಾವಣೆ ಯಾಕೆ ಆಯ್ತು ದೇಹದಲ್ಲಿ ಎಂದು ತಿಳಿದುಕೊಳ್ಳಬೇಕು. ಈ ರೀತಿ ಬದಲಾವಣೆ ಆದಾಗ ಆ ಬದಲಾವಣೆಗಳಿಗೆ ಯಾವುದೇ ಕಾರಣಗಳು ಇಲ್ಲದಿದ್ದಾಗ, ನಾಲ್ಕರಿಂದ ಆರು ವಾರಗಳ ಅವಧಿಯಲ್ಲಿ ಈ ರೀತಿಯ ಸುಖ ಸುಮ್ಮನೆ ಬದಲಾವಣೆ ಆದಾಗ ಅವುಗಳನ್ನು ಲಕ್ಷಣಗಳು ಎಂದು ಹೇಳಲಾಗುತ್ತದೆ. ಈ ಗುದನಾಳ, ದೊಡ್ಡ ಕರುಳು, ಹಾಗೂ ಗುದದ್ವಾರದ ಕ್ಯಾನ್ಸರ್ ಗೆ ಸಂಬಂಧ ಪಟ್ಟ ಲಕ್ಷಣಗಳನ್ನು ನೋಡುವುದಾದರೆ, ನಮ್ಮ ಮಲ ವಿಸರ್ಜನೆ ಆಗುವುದರಲ್ಲಿ ಆಗುವ ಬದಲಾವಣೆಗಳು, ಮಲದಲ್ಲಿ ರಕ್ತ ಸ್ರಾವ ಆಗುವುದು, ಇದ್ದಕ್ಕಿದ್ದ ಹಾಗೆ ತೂಕ ಕಡಿಮೆ ಆಗುವ ಪರಿಸ್ಥಿತಿ, ಗುದದ್ವಾರದಲ್ಲಿ ಒಂದು ಲಂಪ್ ಅಥವಾ ಒಂದು ಗಡ್ಡೆ ಕಾಣಿಸಿಕೊಳ್ಳುವುದು,ಹೊಟ್ಟೆಯಲ್ಲಿ ಗಂತಿ ಅಥವಾ ಲಂಪ್ ಗೆಡ್ಡೆ ಕಂಡು ಬಂದ್ರೆ ಅದು ಕೂಡ ಗುದನಾಳ, ದೊಡ್ಡ ಕರುಳು ಹಾಗೂ ಗುದದ್ವಾರದ ಕ್ಯಾನ್ಸರ್ ನ ಲಕ್ಷಣ, ಅನೀಮಿಯಾ ಅಂದ್ರೆ ನಮ್ಮ ದೇಹದಲ್ಲಿರುವ ರಕ್ತದ ಅಂಶ ಕಡಿಮೆ ಆಗುವುದು, ಇವೆಲ್ಲಾ ಗುದನಾಳ, ದೊಡ್ಡ ಕರುಳು ಹಾಗೂ ಗುದದ್ವಾರದ ಕ್ಯಾನ್ಸರ್ ನ ಲಕ್ಷಣಗಳು.
ಸ್ನೇಹಿತರೆ ಈ ಲಕ್ಷಣಗಳು ತಮ್ಮಲ್ಲಿ ಕಂಡು ಬಂದಾಗ ತಾವು ಒಂದು ಸೂಕ್ತ ವೈದ್ಯನನ್ನು ಕಂಡು ಆ ವೈದ್ಯರ ಬಳಿ ಮಾತನಾಡಿ ಪರೀಕ್ಷೆ ಮಾಡಿಸಿಕೊಂಡು ಕೊಳನಸ್ಕೋಪಿ ಎಂಬ ಪರೀಕ್ಷೆ ಮಾಡಿಸಿಕೊಂಡರೆ ನಿಮಗೆ ಉತ್ತಮ, ಒಂದುವೇಳೆ ಕ್ಯಾನ್ಸರ್ ಇದ್ದ ಪಕ್ಷದಲ್ಲಿ ಕ್ಯಾನ್ಸರ್ ನ ಮೊದಲನೇ ಹಂತದಲ್ಲಿ ಕಂಡು ಬಂದ್ರೆ ಅದಕ್ಕೆ ನೂರಕ್ಕೆ ನೂರು ಪ್ರತಿಶತ ಚಿಕತ್ಸೆ ಸಿಕ್ಕು ಸಂಪೂರ್ಣ ಗುಣಮುಖ ಹೊಂದಬಹುದು. ಇತ್ತೀಚಿನ ದಿನಗಳಲ್ಲಿ ಈ ಮೇಲೆ ತಿಳಿಸಿದ ಕ್ಯಾನ್ಸರ್ ಗಳು ಜಾಸ್ತಿ ಆಗುತ್ತಿದ್ದು, ತಾವು ತಿಳಿದ ತಕ್ಷಣ ವೈದ್ಯರ ಬಳಿ ಸಮಾಲೋಚನೆ ನಡೆಸಿ ಗುಣಮುಖ ಹೊಂದಿ ಎಂದು ಹೇಳುತ್ತ ಇಂದಿನ ಲೇಖನಕ್ಕೆ ಪೂರ್ಣ ವಿರಾಮ ಹಾಕುತ್ತಿದ್ದೇವೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.