ಉಳ್ಳಾಲ್ತಿ ದೈವಗಳ ನೇಮೋತ್ಸವ ಕಟ್ಟುಪಾಡುಗಳ ಬಗ್ಗೆ ನಿಮಗೆಷ್ಟು ಗೊತ್ತು..???

ನಮಸ್ತೆ ಪ್ರಿಯ ಓದುಗರೇ, ತುಳುನಾಡಿನಲ್ಲಿ ಭೂತಾರಾಧನೆ ಗೆ ತನ್ನದೇ ಆದ ಮಹತ್ವವಿದೆ. ಭೂತಾರಾಧನೆ ಗೆ ಇರುವ ಕಟ್ಟುಪಾಡನ್ನು ತುಳುನಾಡಿನ ಜನರು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ. ಸುಮಾರು ನಾಲ್ಕು ನೂರಕ್ಕೂ ಮಿಕ್ಕಿದ ಪ್ರಕಾರದ ದೈವಗಳನ್ನು ಆರಾಧಿಸಿಕೊಂಡು ಬರುತ್ತಾ ಇರುವ ತುಳುನಾಡಿಗರು ಒಂದೊಂದು ದೈವದ ಆಚರಣೆಗೆ ಒಂದೊಂದು ರೀತಿಯ ಕಟ್ಟುಪಾಡುಗಳನ್ನು ಪಾಲಿಸುತ್ತಾರೆ. ಇಂತಹ ಕಟ್ಟುಪಾಡುಗಳಲ್ಲಿ ತುಳುನಾಡಿನ ಉಳ್ಳಾಲ್ತಿ ದೈವಗಳ ನೇಮೋತ್ಸವ ಕೂಡ ಒಂದು. ಪಾರ್ವತಿಯ ಸ್ವರೂಪದಂತೆ ಆರಾಧಿಸಲ್ಪಡುವ ಉಳ್ಳಾಲ್ತಿ ದೈವಗಳ ನೇಮೋತ್ಸವ ಕ್ಕೇ ತನ್ನದೇ ಆದ ಮಹತ್ವ ಇದ್ದು, ತುಳುನಾಡಿನಲ್ಲಿ ಒಟ್ಟು ಪ್ರಮುಖವಾದ ಒಟ್ಟು ಐದು ಉಳ್ಳಾಲ್ತಿ ದೇವಸ್ಥಾನಗಳು ಇವೆ. ಮಾಡಿ, ಅಂತನಾಡಿ, ಬಲ್ನಾಡಿ, ಕೆಳಿಂಜಿ ಮತ್ತು ಕೇಪು ಈ ಐದು ಕ್ಷೇತ್ರಗಳಲ್ಲಿ ಆರಾಧಿಸಲ್ಪಡುವ ಉಳ್ಳಾಲ್ತಿ ದೈವಗಳ ಹಿಂದೆ ಒಂದೊಂದು ಕಥೆ ಇದೆ.

 

 

ಈ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಲ್ನಾಡಿನಲ್ಲಿ ಇರುವ ಉಳ್ಳಾಲ್ತಿ ಕ್ಷೇತ್ರ ಕೂಡ ಒಂದಾಗಿದ್ದು, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ನಡೆಯುವ ಆಚರಣೆಗೂ ಉಳ್ಳಲ್ತಿಯಲ್ಲಿ ಕ್ಷೇತ್ರದಲ್ಲಿ ನಡೆಯುವ ಆಚರಣೆ ಕೊಂಚ ಭಿನ್ನ. ಈ ಕ್ಷೇತ್ರದಲ್ಲಿ ಮಹಾ ಲಿಂಗೇಶ್ವರ ದೇವಸ್ಥಾನದ ಜಾತ್ರೆ ಮುಗಿದು ದ್ವಜಾರೋಹಣ ಮಾಡಿದ ಮರು ದಿನವೇ ಬಲ್ನಾಡು ಉಳ್ಳಾಲ್ತಿ ಕ್ಷೇತ್ರದಲ್ಲಿ ಜಾತ್ರೆಗೆ ಗೊನೆ ಕಡಿಯುವ ಕಾರ್ಯಕ್ರಮ ನಡೆಯುತ್ತೆ. ಪ್ರತಿ ವರ್ಷ ಏಪ್ರಿಲ್ 28 ರಂದು ಬಲ್ನಾಡು ಉಳ್ಳಾಲ್ತಿ ಜಾತ್ರೆ ನಡೆಯುವುದು ಇಲ್ಲಿನ ವಾಡಿಕೆಯಾಗಿದ್ದು, ಈಗಿನ ಜಾತ್ರೆ ಸಂದರ್ಭ ಕ್ಷೇತ್ರ ದ ಆಸುಪಾಸಿನಲ್ಲಿ ವ್ಯಾಪಾರ ಮಳಿಗೆಗಳು ಹಾಕುವಂತಿಲ್ಲ.

 

 

ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಎಲ್ಲವನ್ನೂ ಉಚಿತವಾಗಿ ನೀಡಬೇಕು ಎನ್ನುವ ಕಾನೂನು ಇದೆ. ಜಾತ್ರೆಯ ಸಂದರ್ಭದಲ್ಲಿ ಬಲ್ನಾಡಿಗೆ ಬರುವ ಆಟೋ ಟ್ಯಾಕ್ಸಿ ಅಥವಾ ಇನ್ಯಾವುದೇ ಖಾಸಗಿ ವಾಹನಗಳು ಭಕ್ತರಿಂದ ಬಾಡಿಗೆ ಸ್ವೀಕರಿಸುವಂತೆ ಇಲ್ಲ. ಭಕ್ತರಿಗೆ ತಿಂಡಿ ಊಟಾ ಪಾನೀಯ ಎಲ್ಲವನ್ನೂ ಇಲ್ಲಿ ಉಚಿತವಾಗಿ ನೀಡಲಾಗುತ್ತದೆ. ಉಳ್ಳಾಲ್ತಿ ಗೆ ಅತಿ ಪ್ರೀತಿ ಪಾತ್ರವಾದ ಮಲ್ಲಿಗೆ ಹೂವನ್ನು ಬಿಟ್ಟು ಎಲ್ಲವೂ ಉಚಿತವಾಗಿ ಸಿಗ್ತಾ ಇದ್ದು, ಇದು ಕ್ಷೇತ್ರದ ವಿಶೇಷತೆ ಆಗಿದೆ. ಸ್ತ್ರೀ ಪ್ರಧಾನ ದೈವ ಆಗಿರುವ ಉಳ್ಳಾಲ್ತಿ ದೈವದ ನೇಮೋತ್ಸವ ವನ್ನಾ ಮಹಿಳೆಯರು ನೋಡುವಂತಿಲ್ಲ. ನೇಮೋತ್ಸವ ಆಗುತ್ತಿರುವ ಸಂದರ್ಭದಲ್ಲಿ ಕ್ಷೇತ್ರದ ಆಸುಪಾಸು ಮಹಿಳೆಯರು ಬರುವಂತಿಲ್ಲ ಎಂಬ ಸಂಪ್ರದಾಯವನ್ನು ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *