ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಿಮ್ಮ ಜನ್ಮ ದಿನಾಂಕ ದಿಂದಾ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಎಂದು ತಿಳಿಯಬಹುದು. ಹೇಗೆ ಎಂದು ತಿಳಿಯೋಣ ಸ್ನೇಹಿತರೆ. ಜನ್ಮ ದಿನಾಂಕ ಗೊತ್ತಿದ್ರೆ ಸಾಕು ಅದರ ಆಧಾರದ ಮೇಲೆ ನಿಮ್ದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಆಗುತ್ತಾ ಎಂದು ತಿಳಿದುಕೊಳ್ಳಬಹುದು. ಇಬ್ಬರು ವ್ಯಕ್ತಿಗಳನ್ನು ಜೀವನ ಪೂರ್ತಿ ಬಂಧನಕ್ಕೆ ಒಳಪಡಿಸುವ ವಿವಾಹವು ಅತ್ಯಂತ ಪವಿತ್ರ ಬಂಧನವಾಗಿದೆ. ಗಂಡು ಮತ್ತು ಹೆಣ್ಣು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಪೂರ್ತಿ ಸುಖವಾಗಿ ಬಾಳುತ್ತಾರ ಎನ್ನುವುದನ್ನು ಜಾತಕ ನೋಡಿ ಹೊಂದಾಣಿಕೆ ಆದ್ರೆ ಮದುವೆ ಮಾಡುವುದು ನಮ್ಮ ಸಂಪ್ರದಾಯ ಹಾಗಾದ್ರೆ ಜನ್ಮ ದಿನಾಂಕ ಮದುವೆ ನಿರ್ಧಾರ ಮಾಡುವ ಸಂದರ್ಭದಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಹುಟ್ಟಿದ ದಿನಾಕ 6,15,24 ಇದ್ರೆ ನಿಮ್ಮ ಸಂಖ್ಯೆ 6 ಆಗುತ್ತೆ. ನಿಮ್ಮ ಜನ್ಮ ದಿನಾಂಕ 2,11,20,29 ಇದ್ರೆ ನಿಮ್ಮ ಸಂಖ್ಯೆ 2 ಆಗುತ್ತೆ. ಇದೇ ರೀತಿ ನೀವು ಲೆಕ್ಕಾಚಾರ ಮಾಡಬಹುದು.
ಇದೆ ರೀತಿ ನಿಮ್ಮ ಡೇಟ್ ಆಫ್ ಬರ್ತ್ ಮೂಲಕ ನಿಮ್ಮದು ಅರೇಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ನೋಡೋಣ ಬನ್ನಿ. ಸಂಖ್ಯೆ 1- ಒಂದನೇ ಸಂಖ್ಯೆ ಸೂರ್ಯನನ್ನು ಪ್ರತಿನಿಧಿಸುತ್ತದೆ, ಇವರಲ್ಲಿ ನಾಯಕತ್ವದ ಗುಣ ಇರುತ್ತೆ. ಬೇರೆಯವರ ಜೊತೆ ಯಾವುದೇ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ. ಎಲ್ಲಾ ವಿಷಯಗಳು ಹೀಗೆ ಆಗಬೇಕು, ಇದೇ ರೀತಿ ನಡೆಯಬೇಕು ಎಂದು ಬಯಸುತ್ತಾರೆ ಹಾಗಾಗಿ ಪ್ರೀತಿಯನ್ನು ವ್ಯಕ್ತಪಡಿಸುವುದು ಇವರಿಗೆ ತುಸು ಕಷ್ಟ ಹಾಗೆ ಇವರು ನಾಚಿಕೆ ಸ್ವಭಾವದವರು ಆಗಿರುತ್ತಾರೆ. ಇವ್ರು ಪ್ರೀತಿಯನ್ನು ಎಕ್ಸ್ಪ್ರೆಸ್ ಮಾಡುವುದರಲ್ಲಿ ತುಂಬಾ ಹಿಂಜರಿಯುತ್ತಾರೆ. ಸಂಖ್ಯೆ 2- ಈ ನಂಬರ್ ನ ಚಂದ್ರ ಎಂದು ಹೇಳಲಾಗುತ್ತದೆ. ಇವ್ರು ಮಹತ್ವಪೂರ್ಣ ನಿರ್ಧಾರ ತೆಗೆದುಕೊಳ್ಳುವ ಮುಂಚೆ ತಲೆಯಿಂದ ಯೋಚನೆ ಮಾಡುವುದಕ್ಕೆ ಹೆಚ್ಚಿಗೆ ಮನಸ್ಸಿನಿಂದ ಯೋಚಿಸುತ್ತಾರೆ. ಇವರು ತುಂಬಾ ಭಾವನಾತ್ಮಕ ಜೀವಿಗಳು ಇವರಿಗೆ ಪ್ರೀತಿ ನಿಧಾನವಾಗಿ ಉಂಟಾಗುತ್ತದೆ. ಇಬ್ರೂ ತಮ್ಮ ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಂಡರೆ ಲವ್ ಮ್ಯಾರೇಜ್ ಆಗುವುದು ಪಕ್ಕ. ಸಂಖ್ಯೆ 3- ಗುರು ಈ ಸಂಖ್ಯೆಯ ಅಧಿಪತಿ. ಈ ಸಂಖ್ಯೆಯವರು ತುಂಬಾ ಪ್ರಾಕ್ಟಿಕಲ್ ಆಗಿರುತ್ತಾರೆ. ಇವ್ರು ಲವ್ ಮ್ಯಾರೇಜ್ ಅಲ್ಲಿ ಹೆಚ್ಚು ಸಫಲ ಆಗುತ್ತಾರೆ. ಇವ್ರು ಪ್ರೀತಿಯಲ್ಲಿ ಬಿದ್ರೆ ಇವರಿಗೆ ಸ್ವಲ್ಪ ಸಹಾಯದ ಅವಶ್ಯಕತೆ ಇರುತ್ತೆ. ಆಗ ತಮ್ಮ ಪ್ರೀತಿಯನ್ನು ಮದುವೆ ವರೆಗೆ ತೆಗೆದುಕೊಂಡು ಹೋಗ್ತಾರೆ. ಸಂಖ್ಯೆ 4- ರಾಹು ಈ ಸಂಖ್ಯೆಯ ಅಧಿಪತಿ. ಇವ್ರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿ ಮಾಡುತ್ತಾರೆ. ಇವ್ರು ಪ್ರೇಮ ವಿವಾಹದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವುದಿಲ್ಲ. ಇವ್ರು ತಮ್ಮ ಸ್ವಭಾವದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಉತ್ತಮ ಪ್ರೇಮಿ ಆಗಬಹುದು. ಸಂಖ್ಯೆ 5- ಈ ಸಂಖ್ಯೆಯ ಅಧಿಪತಿ ಬುಧ. ಇವರಿಗೆ ಪ್ರೇಮ ವಿವಾಹಕ್ಕೆ ಇಂಥ ಅರೇಂಜ್ ಮ್ಯಾರೇಜ್ ಹೆಚ್ಚು ಇಷ್ಟ. ಹಾಗಾಗಿ ಮನೆಯಲ್ಲಿ ಹಿರಿಯರು ನಿಷ್ಚಯಿಸುವವರನ್ನು ಮದುವೆ ಆಗುತ್ತಾರೆ. ಒಂದುವೇಳೆ ಪ್ರೇಮ ವಿವಾಹ ಆಗುವ ಪ್ರಸಂಗ ಬಂದ್ರೂ ಇವರು ಮನೆಯವರ ಒಪ್ಪಿಗೆ ಪಡೆದು ಮದುವೆ ಆಗ್ತಾರೆ.
ಸಂಖ್ಯೆ 6- ಈ ಸಂಖ್ಯೆಯ ಅಧಿಪತಿ ಶುಕ್ರ. ಇಬ್ರೂ ಪ್ರೇಮ ವಿವಾಹ ಆಗುತ್ತಾರೆ. ಇವ್ರು ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಂಡು ಚಾರ್ಮಿಂಗ್ ಆಗಿ ಕಾಣುತ್ತಾರೆ. ಹಾಗಾಗಿ ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧವನ್ನು ಹೊಂದುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಕೆಲ ಸಂದರ್ಭದಲ್ಲಿ ಸೂಕ್ತ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ. ಸಂಖ್ಯೆ 7- ಈ ಸಂಖ್ಯೆಯನ್ನು ಕೇತು ಎಂದು ಹೇಳಲಾಗುತ್ತದೆ. ಇವರದ್ದು ಸಂಕೋಚದ ಸ್ವಭಾವ ಆಗಿರುತ್ತೆ. ಇವ್ರು ಹಗಲು ಕನಸು ಕಾಣುವುದು ಹೆಚ್ಚು. ಇವ್ರು ತಮ್ಮ ಸಂಗಾತಿಗಳಿಗೆ ತುಂಬಾ ನಂಬಿಕಸ್ಥ ಆಗಿರುತ್ತಾರೆ. ಇವ್ರು ತಮ್ಮ ಸ್ಟೇಟಸ್ ಗೆ ಅಳೆದು ತೂಗಿ ಪ್ರೇಮ ವಿವಾಹ ಆಗಬೇಕು ಎಂದು ಬಯಸುತ್ತಾರೆ. ಸಂಖ್ಯೆ 8- ಈ ಸಂಖ್ಯೆಯನ್ನು ಶನಿ ದೇವ ಆಳುತ್ತರೆ. ಇವ್ರು ಪ್ರೇಮ ವಿವಾಹ ಆಗುವುದು ಕಡಿಮೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಇವ್ರು ತುಂಬಾ ಭಾವನಾತ್ಮಕ ಜೀವಿಗಳು. ಪ್ರೀತಿಯಲ್ಲಿ ಬೀಳಲು ಇಬ್ರೂ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಆದ್ರೆ ಒಂದುವೇಳೆ ಪ್ರೀತಿ ಮಾಡಿದ್ರೆ ಸಾಯುವವರೆಗೆ ತಮ್ಮ ಪ್ರೀತಿಯನ್ನು ನಿಭಾಯಿಸುತ್ತಾರೆ. ಸಂಖ್ಯೆ 9- ಈ ಸಂಖ್ಯೆಯ ಅಧಿಪತಿ ಮಂಗಳ. ಇವ್ರು ತಮ್ಮ ಹೆತ್ತವರಿಗೆ ಮತ್ತು ಕುಟುಂಬಕ್ಕೆ ಹೆಚ್ಚು ಅತ್ಯಾಚ್ ಆಗಿರುತ್ತಾರೆ. ಇವ್ರು ಯಾವುದೇ ರೀತಿ ವಿವಾದಕ್ಕೆ ಬೀಳಲು ಇಷ್ಟ ಪಡುವುದಿಲ್ಲ. ಪ್ರೇಮದಲ್ಲಿ ವಿವಾದ ಇರುವುದು ಸಹಜ ಅಲ್ವಾ ಹಾಗಾಗಿ ಇವ್ರು ಲವ್ ಬಗ್ಗೆ ತುಸು ಉದಾಸೀನ ತೋರಿಸುತ್ತಾರೆ. ಇವತ್ತಿನ ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.