ಈ ಕ್ಷೇತ್ರದಲ್ಲಿ ಇದೆ ವಿಶ್ವದಲ್ಲೇ ಅತ್ಯಂತ ಎತ್ತರವಾಗಿರುವ ಚಾಮುಂಡೇಶ್ವರಿ ಬೃಹತ್ ವಿಗ್ರಹ..!!!

ಈ ಕ್ಷೇತ್ರದಲ್ಲಿ ಇದೆ ವಿಶ್ವದಲ್ಲೇ ಅತ್ಯಂತ ಎತ್ತರವಾಗಿರುವ ಚಾಮುಂಡೇಶ್ವರಿ ಬೃಹತ್ ವಿಗ್ರಹ..!!!

ನಮಸ್ತೆ ಪ್ರಿಯ ಓದುಗರೇ, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಶಿವನ ವಾಹನವಾದ ನಂದಿಯವಿಗ್ರಹ ವನ್ನಾ ಸಹ ದೇವರೆಂದು ಪೂಜಿಸುವ ಪರಿಪಾಠವಿದೆ. ಎಷ್ಟೋ ಜನ್ಮಗಳ ಪಾಪಗಳು ಗೋಮಾತೆಯ ಸೇವೆಯಿಂದ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಬೇಡಿ ಬಂದ ಭಕ್ತರನ್ನು ಹರಸುವ ಗೌಡಗೆರೆಯ ಬಸವಣ್ಣ ನೆಲೆಸಿರುವ ಪುಣ್ಯ ತಾಣವನ್ನು ಕಣ್ಣು ತುಂಬಿಕೊಂಡು ಬರೋಣ. ಗೌಡಗೆರೆ ಎಂಬ ಪುಣ್ಯ ಕ್ಷೇತ್ರವೂ ತಾಯಿ ಚಾಮುಂಡೇಶ್ವರಿ ಹಾಗೂ ಬಸವಣ್ಣನ ಮಹಿಮೆಯಿಂದ ಖ್ಯಾತವಾಗಿರುವ ಶಕ್ತಿ ಸ್ಥಳವಾಗಿದ್ದು, ಈ ದೇಗುಲದಲ್ಲಿ ತಾಯಿ ಚಾಮುಂಡೇಶ್ವರಿ ಮೂಲ ವಿಗ್ರಹ ಹಾಗೂ ಭಕ್ತರ ಕಷ್ಟಗಳನ್ನು ಪರಿಹರಿಸುವ ಬಸವಣ್ಣ ನೆಲೆ ನಿಂತು ಬೇಡಿ ಬಂದ ಭಕ್ತರನ್ನು ಹರಸುತ್ತಿದ್ದನೆ. ಇಲ್ಲಿರುವ ಬಸವಣ್ಣನನ್ನು ನಡೆದಾಡುವ ದೇವರು ಎಂದೇ ಕರೆಯಲಾಗುತ್ತದೆ. ಈ ಬಸವಣ್ಣನನ್ನು ದರ್ಶನ ಮಾಡಿ ಕಷ್ಟಗಳನ್ನು ಹೇಳಿಕೊಂಡು ಹರಕೆ ಹೊತ್ತರೆ ಯಾವುದೇ ರೀತಿಯ ಕಷ್ಟಗಳು ಇದ್ರೂ ಅವು ದೂರಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಬಸಪ್ಪನ ದರ್ಶನದಿಂದ ಮಾತ್ರ ಇಷ್ಟಾರ್ಥಗಳು ಸಿದ್ಧಿ ಆಗುತ್ತವಂತೆ. ವಿವಾಹ ವಿಳಂಬ ಸಮಸ್ಯೆ, ಆರ್ಥಿಕ ಸಮಸ್ಯೆ, ಕೋರ್ಟ್ ಕಚೇರಿ ಸಮಸ್ಯೆ ಹೀಗೆ ಎಲ್ಲಾ ಸಮಸ್ಯೆಗಳಿಗೆ ಇಲ್ಲಿರುವ ಬಸಪ್ಪನ ಬಳಿ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆಯಬಹುದು.

 

ಒಂದು ಕೊಂಬಿನ ಸೂಚನೆ, ಕಾಲು ಮುಂದೆ ಇಡುವ ಹಿಂದೆ ಇಡುವ ಸೂಚನೆಗಳ ಮೂಲಕ ಭಕ್ತರ ಪ್ರಶ್ನೆಗಳಿಗೆ ಬಸಪ್ಪ ನಿಖರವಾದ ಉತ್ತರ ನೀಡುತ್ತಾನೆ. ಅಲ್ಲದೆ ರೋಗ ರುಜಿನಗಳಿಂದ ಬಳಲುವವರು, ಮನಸ್ಸಿನ ಕೋರಿಕೆಗಳು ಇಡೆರಬೇಕು ಅಂದುಕೊಂಡರೆ, ಮಕ್ಕಳು ಆಗದವರು ದೇಗುಲದ ಆವರಣದಲ್ಲಿ ಮಲಗಿಕೊಂಡರು ಬಸಪ್ಪ ಅವರನ್ನು ದಾಟುವುದರ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾನೆ. ಸಾಕಷ್ಟು ಜನ ದೇವಾಲಯದ ಅರ್ಚಕರ ನೇಮಕ ಮಾಡುವಾಗ ಸಮಸ್ಯೆ ಬಗೆಹರಿಸುವುದಕ್ಕೆ, ಮನೆ ಗೃಹ ಪ್ರವೇಶಕ್ಕೆ, ಮದುವೆ ಮುಂಜಿ ಅಂತಹ ಶುಭ ಸಮಾರಂಭಗಳಿಗೆ ಸಹ ಬಸವಣ್ಣನನ್ನು ಕರೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಾರೆ. ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಿಗೆ ಬಸವಣ್ಣನು ಕರೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಾರೆ. ಇನ್ನೂ ಈ ಕ್ಷೇತ್ರದಲ್ಲಿ ಬಸವಣ್ಣ ಬಂದು ನೆಲೆಸಿರುವುದರ ಹಿಂದೆ ಒಂದು ಘಟನೆ ಕೂಡ ಇದೆ. ಈ ಕ್ಷೇತ್ರದಲ್ಲಿ ಇರುವ ಮೂಲ ದೇವಿಯಾದ ಚಾಮುಂಡೇಶ್ವರಿ ದೇವಿಯು ಭಕ್ತರ ಕನಸಿನಲ್ಲಿ ಬಂದು ನನಗೆ ಒಂದು ಕರುವನ್ನು ನೀಡೆಂದು ಹೇಳಿದಳಂತೆ.

 

ಆಗ ಆ ಭಕ್ತರು ತಾಯಿ ಹೇಳಿರುವ ಮಾತನ್ನು ಪಾಲಿಸಬೇಕು ಎಂದುಕೊಂಡು ಕರುವನ್ನು ಹುಡುಕಲು ಪ್ರಾರಂಭ ಮಾಡಿದರು. ಆದ್ರೆ ಯಾವುದೇ ಕರು ಸಿಗದ ಕಾರಣ ಕಸಾಯಿ ಖಾನೆಗೆ ಮಾರಾಟ ಆದ ಕರುವನ್ನು ಕೊಂಡುಕೊಂಡು ಬಂದು ತಾಯಿಗೆ ಕಾಣಿಕೆಯಾಗಿ ನೀಡಿದರು. ಅಮ್ಮನವರ ಆಶೀರ್ವಾದದಿಂದ ಅಂದು ಭಕ್ತರು ತಂದುಕೊಟ್ಟ ಕರುವೆ ಭಕ್ತರ ಪಾಲಿನ ಇಷ್ಟಾರ್ಥ ದೇವನಾಗಿ ಪೂಜಿಸಲ್ಪಡುತ್ತದೇ ಎಂದು ಹೇಳಲಾಗುತ್ತದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಈ ದೇವಸ್ಥಾನದಲ್ಲಿ ಚಾಮುಂಡೇಶ್ವರಿಯ ಮೂಲ ವಿಗ್ರಹ ಇರುವ ಸ್ಥಳದಲ್ಲಿ ಸುಂದರವಾದ ದೇವಾಲಯವನ್ನು ನಿರ್ಮಿಸಲಾಗಿದ್ದು, ಮಾನವರು ಶ್ರೀಚಕ್ರ ಸಮೇತಲಾಗಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾರೆ. ಗರ್ಭ ಗೃಹ, ಪ್ರಾಂಗಣ, ಪ್ರದಕ್ಷಿಣಾ ಪಥ ಒಳಗೊಂಡಿರುವ ಈ ಆಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ತಾಯಿ ಚಾಮುಂಡೇಶ್ವರಿ ಮಾತ್ರವಲ್ಲದೆ ದಕ್ಷಿಣಮೂರ್ತಿ, ಜ್ವಾಲಾಮಾಲಿನಿ, ಗಣಪತಿ ದೇವರ ಮೂರ್ತಿಯನ್ನು ಪೂಜಿಸಲಾಗುತ್ತದೆ. ಇತ್ತೀಚೆಗೆ ಈ ದೇವಾಲಯದಲ್ಲಿ ಪಂಚಲೋಹದ ಚಾಮುಂಡೇಶ್ವರಿ ವಿಗೃಹವನ್ನು ನಿರ್ಮಿಸಲಾಗಿದೆ. ಈ ವಿಗ್ರಹ ಸುಮಾರು 35000 ಕಿಜಿ ತೂಕವಿದ್ದು, 60 ಅಡಿ ಎತ್ತರವಾಗಿದೆ. ಈ ಬಸವಣ್ಣನ ದೇವಾಲಯ ಬೆಳಿಗ್ಗೆ 6 ಗಂಟೆಯಿಂದ ಸಂಜೆ 8.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಈ ಪುಣ್ಯ ಕ್ಷೇತ್ರವೂ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆ ಎಂಬಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವಾಲಯದ ದರ್ಶನ ಮಾಡಿ ಬನ್ನಿ. ಶುಭದಿನ.

ಭಕ್ತಿ