ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಹೋಮಿಯೋಪಥಿ ಹಾಗೂ ಹೈಪರ್ ಟೆನ್ಷನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ರಕ್ತದೊತ್ತಡ ಅಂದ್ರೇನು? ಈ ರಕ್ತದೊತ್ತಡ ಎಲ್ಲರಿಗೂ ಇರುತ್ತಾ? ರಕ್ತದೊತ್ತಡ ಎಲ್ಲರಿಗೂ ಇರುತ್ತೆ, ಆದ್ರೆ ಅದು ವಯಸ್ಸಿಗೆ ಅನುಗುಣವಾಗಿ ಒಂದು ಮಿತಿಯಲ್ಲಿ ಇರುತ್ತೆ. ಯಾವಾಗ ಅತೀ ಹೆಚ್ಚಾಗುತ್ತದೆ ಆಗ ನಮಗೆ ಒತ್ತಡದಿಂದ ಆಗುವ ಲಕ್ಷಣಗಳನ್ನೂ ಹೈಪರ್ ಟೆನ್ಷನ್ ಅಂತ ಕರೆಯಬಹುದು. ಕೆಲವೊಂದು ಈ ರಕ್ತದೊತ್ತಡ ಕೇವಲ ಒತ್ತಡದಿಂದ ಅಲ್ಲದೆ ಕಿಡ್ನಿಯಲ್ಲಿ ಏನಾದರೂ ಸಮಸ್ಯೆ ಇದ್ದಾಗ ಸಹ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ಹಾಗಾಗಿ ರಕ್ತದೊತ್ತಡದ ಲಕ್ಷಣಗಳು ಕಾಣಿಸಿಕೊಂಡಾಗ ನೀವು ಅದನ್ನು ಎಚ್ಚೆತ್ತುಕೊಂಡು ಮೊದಲೇ ಅದನ್ನು ವೈದ್ಯರ ಬಳಿ ತೋರಿಸಿಕೊಂಡರೆ ಬೇರೆ ತರಹದ ಅಪಾಯಗಳು ಆಗುವುದು ಕಡಿಮೆ ಆಗುತ್ತೆ. ಈ ರಕ್ತದೊತ್ತಡ ಆದಾಗ ಏನಾಗುತ್ತೆ ಅಂದ್ರೆ ಅತಿ ಹೆಚ್ಚು ರಕ್ತದೊತ್ತಡ ಇದ್ದಾಗ, ನಾರ್ಮಲ್ ಮಿತಿ 120/80 .
ಆದ್ರೆ ವಯಸ್ಸು ಆಗುತ್ತಿದ್ದಂತೆ 160/80 ಆಗುತ್ತೆ. ಇಷ್ಟು ಇದ್ರೂ ಸಹ ವಯಸ್ಸಾದವರಿಗೆ ಇದು ನಾರ್ಮಲ್ ಎಂದೇ ಹೇಳಬಹುದು. ಈ ರಕ್ತದೊತ್ತಡದ ಕಾರಣಗಳು ಏನು ಅಂದ್ರೆ, ರಕ್ತದೊತ್ತಡ ಜಾಸ್ತಿ ಆದಾಗ ಕೆಲವರಿಗೆ ತಲೆ ಸುತ್ತು ಬರುವುದು,ಕಣ್ಣು ಮಾಂಜಾಗುವುದೂ, ಕೆಲವರಿಗೆ ಎದೆ ಬಡಿತ ಜಾಸ್ತಿ ಆಗುವುದು, ಕಾರಣ ಇಲ್ಲದೆ ಆತಂಕ ಆಗುತ್ತಿದ್ರೆ, ಕಾರಣ ಇಲ್ಲದೆ ಭಯ ಆಗುತ್ತಿದ್ರೇ,ಕೆಲವರಿಗೆ ವಾಂತಿ, ಬೇಧಿ, ಉಸಿರಾಟದ ಸಮಸ್ಯೆ ಹೇಗೆ ನಾನಾ ರೀತಿಯ ಲಕ್ಷಣಗಳು ಕಾಣಿಸುತ್ತವೆ. ಇನ್ನೂ ಕೆಲವು ಮೆನೋಪಾಸ್ ಅಲ್ಲಿ ಹೆಣ್ಣುಮಕ್ಕಳಲ್ಲಿ ರಕ್ತದೊತ್ತಡ ಕಾಣಿಸುತ್ತೆ. ಅದು ಕೇವಲ ತಾತ್ಕಾಲಿಕವಾಗಿ ನೋಡಲಾಗುತ್ತದೆ. ಮೆನೋಪಾಸ್ ಮುಗಿದ ಮೇಲೆ ಅವರಿಗೆ ನಾರ್ಮಲ್ ರಕ್ತದೊತ್ತಡ ಮರಳುತ್ತದೆ. ಈ ನಿಟ್ಟಲ್ಲಿ ಹೆಣ್ಣುಮಕ್ಕಳು ಮೆನೋಪಾಸ್ ಟೈಂ ಆಲಿ ಗೈನೋಕಲಾಜಿಸ್ಟ್ ಹತ್ರ ಹೋಗಿ ಸಮಸ್ಯೆಗೆ ಪರಿಹಾರ ಕೇಳಿಕೊಳ್ಳಬೇಕು. ಹೋಮಿಯೋಪಥಿ ಚಿಕಿತ್ಸೆ ಯಲ್ಲಿ ಈ ಹೈಪರ್ ಟೆನ್ಷನ್ ಗೆ ಕಾರಣ ಏನು ಎಂದು ನೋಡಿ ಅದರ ಮೂಲ ರೂಪ ನೋಡಿ ಅದಕ್ಕೆ ಚಿಕಿತ್ಸೆ ಕೊಡಲಾಗುತ್ತದೆ. ಎಲ್ಲರಿಗೂ ಬಿಪಿ ಬಂದ್ರೆ ತಲೆ ತಿರುಗೊಲ್ಲ, ಎದೆಬಡಿತ ಜಾಸ್ತಿ ಆಗಲ್ಲ.
ಕೆಲವರಿಗೆ ಯಾವುದೋ ವಿಷಯಕ್ಕೆ ಗಾಬರಿ ಆದಾಗ ಸಹ ಬಿಪಿ ಹೈ ಆಗಿರುತ್ತೆ. ಹೀಗೆ ಅವರವರ ಸಮಸ್ಯೆಗಳ ಬ್ಯಾಕ್ ಗ್ರೌಂಡ್ ನೋಡಿಕೊಂಡು ಚಿಕಿತ್ಸೆ ಕೊಡುತ್ತಾರೆ. ಇದಲ್ಲದೆ ಈ ಹೈಪರ್ ಟೆನ್ಷನ್ ಬರಲು ಕಾರಣಗಳು ಅಂದ್ರೆ, ಅತೀ ತೂಕ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು, ರಾತ್ರಿ ಸಮಯದಲ್ಲಿ ಹೆಚ್ಚು ಊಟಾ ಮಾಡುವುದು, ಪಾಕೆಟ್ ಫುಡ್ ತಿನ್ನುವುದು, ಅತಿ ಉಪ್ಪು ಹಾಕಿರುವ ಚಿಪ್ಸ್, ಹೆಚ್ಚು ಆಲ್ಕೋಹಾಲ್, ಕೆಫಿನ್ ತೆಗೆದುಕೊಳ್ಳುವುದು, ಧೂಮಪಾನ ಮಾಡುವುದು ಇವೆಲ್ಲ ರಕ್ತವನ್ನು ಮಂದಗೊಳಿಸುತ್ತೆ. ರಕ್ತ ಮಂದ ಆದಾಗ ಒತ್ತಡ ಜಾಸ್ತಿ ಆಗಿ, ಹಾರ್ಟ್ ಇನ್ನೂ ಜಾಸ್ತಿ ಶಕ್ತಿ ಹಾಕಿ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಪಂಪ್ ಮಾಡಬೇಕಾಗುತ್ತದೆ. ಹೀಗೆಲ್ಲ ಇದ್ದಾಗ ಹೈ ಬಿಪಿ ಬರೋ ಸಾಧ್ಯತೆ ಇರುತ್ತೆ. ಇವೆಲ್ಲವನ್ನೂ ನಿಮ್ಮ ಜೀವನ ಶೈಲಿ ಬದಲಾಯಿಸಿಕೊಂಡರೆ ಸಾಕು ರೋಗ ಅದಷ್ಠಕ್ಕೆ ಅದೇ ವಾಸಿ ಆಗುತ್ತೆ. ಲೈಫ್ ಲಾಂಗ್ ಬಿಪಿ ಮಾತ್ರೆ ತೆಗೆದುಕೊಳ್ಳುವ ಗೋಜು ಬರಲ್ಲ. ಹಾಗಾಗಿ ಸ್ನೇಹಿತರೆ ನಿಮಗೆ ಯಾವುದೇ ಸಣ್ಣ ಲಕ್ಷಣ ಅಂದ್ರೆ ತಲೆ ಸುತ್ತೋದು, ಎದೆ ಬಡಿತ ಜಾಸ್ತಿ ಆಗುವುದು, ಅತಿ ಬೇಗ ಸುಸ್ತು ಆಗುವುದು, ಕಣ್ಣು ಮಂಜಾಗುವುದು ಅಂತ ಅನಿಸುವಾಗ ತಕ್ಷಣ ವೈದ್ಯರ ಬಳಿ ಹೋಗಿ ನಿಮ್ಮ ಬಿಪಿ ನ ಚೆಕ್ ಮಾಡಿಸಿಕೊಳ್ಳಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.