ನಮಸ್ತೆ ಪ್ರಿಯ ಓದುಗರೇ, ಗಣೇಶ ದೇವನಿಗೆ ಕಟ್ಟದೇ ಹೋದ ಮಂದಿರಗಳೆ ಇಲ್ಲ. ಈತ ನೆಲೆ ನಿಲ್ಲದ ಸ್ಥಳಗಳೆ ಇಲ್ಲ. ಏಕದಂತ, ವಕ್ರತುಂಡ, ವಿಘ್ನ ನಿವಾರಕ, ಪಾರ್ವತಿ ಸುತ, ಮೋದಕ ಪ್ರಿಯ ಹೀಗೆ ಅನೇಕ ಹೆಸರುಗಳಿಂದ ಕರೆಯುವ ಈತನಿಗೆ ಮನುಷ್ಯರಾದ ನಾವು ಅದೆಷ್ಟೋ ದೇಗುಲಗಳನ್ನು ನಿರ್ಮಿಸಿದ್ದೇವೆ. ಆದ್ರೆ ಇವತ್ತು ನಾವು ನಿಮಗೆ ಪರಿಚಯಿಸುವ ದಕ್ಕೆ ಹೊರಟಿರುವ ಗಣೇಶ ದೇಗುಲ ಮಾತ್ರ ಪ್ರಕೃತಿ ದೇವಿಯೇ ನಿರ್ಮಾಣ ಮಾಡಿದ್ದಾಗಿದೆ. ಆಶ್ಚರ್ಯ ಆಗ್ತಾ ಇದೇ ಅಲ್ವಾ? ಇಂತಹ ಒಂದು ಮಂದಿರ ನಿಜಕ್ಕೂ ಇದೆಯಾ ಎಂದು ಕೇಳುವವರಿಗೆ ಇವತ್ತಿನ ಲೇಖನದಲ್ಲಿ ಉತ್ತರವಿದೆ. ಬನ್ನಿ ಹಾಗಾದರೆ ಆ ದೇಗುಲ ಯಾವುದು ಅಲ್ಲಿನ ವಿಶೇಷತೆಗಳು ಏನು ಎಂದು ತಿಳಿದುಕೊಂಡು ಬರೋಣ. ಕಲ್ಲು ಗಣಪತಿ ದೇವಾಲಯ ಸುಮಾರು ಸಾವಿರ ವರ್ಷಗಳಷ್ಟು ಪುರಾತನವಾದ ದೇವಾಲಯ ಆಗಿದೆ. ಇಲ್ಲಿ ಗಣೇಶನು ತನ್ನ ತಂದೆ ತಾಯಿ ಆದ ಪಾರ್ವತಿ ಪರಮೇಶ್ವರ ಜೊತೆ ನೆಲೆ ನಿಂತಿದ್ದಾನೆ.
ಸಂಪೂರ್ಣವಾಗಿ ಶಿಲಾ ಮಯವಾಗಿ ಇರುವ ಗುಹೆಯ ಒಳಗಡೆ ಏಕದಂತ ನು ಪುಟ್ಟದಾದ ಕಣ್ಣು,ಮಂದಹಾಸ ಬೀರುವ ಮೊಗ ಹಾಗೂ ನಾಲ್ಕು ಕೈಗಳನ್ನು ಹೊತ್ತು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಒಂದು ಬಂಡೆಗಲ್ಲ ಮೇಲೆ ಇನ್ನೊಂದು ಬಂಡೆ ಕಲ್ಲು ಅಲ್ಲಲ್ಲಿ ಸಣ್ಣದಾಗಿ ಬೆಳೆದಿರುವ ಗಿಡ ಗಂಟೆಗಳು ಗುಹೆಯ ಒಳಗೆ ಹೋದರೆ ತಂಪು ಎನಿಸುವ ವಾತಾವರಣ. ಇದು ದೇಗುಲದ ವಿಶೇಷತೆ ಆಗಿದ್ದು, ಈ ಕ್ಷೇತ್ರವನ್ನು ಪ್ರಕೃತಿ ಮಾತೆ ನಿರ್ಮಿಸಿದ ಅದ್ಭುತ ಕಲಾ ಸೃಷ್ಟಿ ಎಂದೇ ಕರೆಯಲಾಗುತ್ತದೆ. ಈ ಕಲ್ಲು ಗಣಪತಿಯನ್ನು ದರ್ಶನ ಮಾಡಬೇಕು ಅಂದ್ರೆ ಸುಮಾರು 80 ಮೀಟರ್ ದೂರ ಬಂಡೆ ಕಲ್ಲಿನ ನಡುವೆ ನುಸುಳಿ ಹೋಗಬೇಕು. ಕಷ್ಟ ಪಟ್ಟು ಹೋಗಿ ಭಕ್ತಿಯಿಂದ ಪ್ರಾರ್ಥಿಸಿದರೆ ಈ ಗಣೇಶ ನಮ್ಮೆಲ್ಲ ಕೋರಿಕೆಗಳನ್ನು ಶೀಘ್ರವಾಗಿ ಸಿದ್ಧಿ ಆಗುವಂತೆ ವರ ನೀಡುತ್ತಾನೆ ಎಂದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ.
ವಿವಾಹ ವಿಳಂಬ ಸಮಸ್ಯೆ, ಆರ್ಥಿಕ ಸಮಸ್ಯೆ,ಉದ್ಯೋಗ ಸಮಸ್ಯೆ, ವಿದ್ಯಾಭ್ಯಾಸ ಸಮಸ್ಯೆ, ಇನ್ನೂ ಮುಂತಾದ ಸಮಸ್ಯೆ ಇರುವವರು ಇಲ್ಲಿಗೆ ಬಂದು ಗಣೇಶನಿಗೆ ಪ್ರಿಯವಾದ ತುಲಾಭಾರ ಸೇವೆ ರಂಗಪೂಜೆ ಅಥವಾ ಸತ್ಯ ಗಣಪತಿ ವ್ರತ ಮಾಡಿಸಿ ಕೊಡುತ್ತೇವೆ ನಮ್ಮ ಸಮಸ್ಯೆಗಳನ್ನು ಪರಿಹರಿಸು ಎಂದು ಭಕ್ತಿಯಿಂದ ಹರಕೆ ಹೊತ್ತರೆ, ಅವರ ಎಲ್ಲ ಸಮಸ್ಯೆಗಳನ್ನೂ ಈ ಗಣಪತಿ ದೊರೆತ ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಗಣೇಶ ಚತುರ್ಥಿ, ಸಂಕಷ್ಟಿ ದಿನ ಇಲ್ಲಿರುವ ಗಣೇಶನಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ಕಲ್ಲು ಗಣಪನಿಗೆ ದಿನದಲ್ಲಿ ಮೂರು ಬಾರಿ ವಿಶೇಷ ಪೂಜೆ ನಡೆಯುತ್ತದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಈ ದೇವರನ್ನು ದರ್ಶನ ಮಾಡಬಹುದು. ಹಸಿರು ಕಾನನದ ಮಧ್ಯದಲ್ಲಿ ಇರುವ ಈ ಕಲ್ಲು ಗಣಪತಿ ಸಮೀಪದಲ್ಲಿ ಸೂರ್ಯ ಪುಷ್ಕರಣಿ ಹಾಗೂ ಚಂದ್ರ ಪುಷ್ಕರಣಿ ಎಂಬ ಎರಡು ಪುಷ್ಕರಣಿ ಇದ್ದು ಇವು ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ಈ ಕ್ಷೇತ್ರವನ್ನು ತುಳು ನಾಡಿನ ಹಂಪಿ ಎಂದು ಕರೆಯಲಾಗುತ್ತದೆ. ಈ ಕಲ್ಲು ಗಣಪತಿ ಸೃಷ್ಟಿಯಾಗಿರುವ ಈ ದೇಗುಲ ಇಂದಿಗೂ ಅಚ್ಚರಿಯಾಗಿ ಉಳಿದಿದೆ. ಈ ದೇವಸ್ಥಾನವು ಉಡುಪಿ ಜಿಲ್ಲೆಯ ಶಿರಿಯಾರ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ಸಿದ್ಧಿ ವಿನಾಯಕನ ಕೃಪೆಗೆ ಪಾತ್ರರಾಗಿ. ಶುಭದಿನ.