ಎಂಟು ಬಗೆಯ ಸರ್ಪ ದೋಷಗಳಿಗೆ ಮುಕ್ತಿ ನೀಡೋ ಪುಣ್ಯ ಕ್ಷೇತ್ರವಿದು..!!!

ಎಂಟು ಬಗೆಯ ಸರ್ಪ ದೋಷಗಳಿಗೆ ಮುಕ್ತಿ ನೀಡೋ ಪುಣ್ಯ ಕ್ಷೇತ್ರವಿದು..!!!

ನಮಸ್ತೆ ಪ್ರಿಯ ಓದುಗರೇ, ನದಿ ಕಲ್ಲು ಅರಣ್ಯ ಭೂಮಿ ಪ್ರಾಣಿ ಪಕ್ಷಿಗಳಲ್ಲಿ ದೇವರನ್ನು ಕಂಡು ಅವರನ್ನು ಪೂಜೆ ಮಾಡುವ ಅಪರೂಪದ ಧರ್ಮ ಅಂದ್ರೆ ಅದು ನಮ್ಮ ಹಿಂದೂ ಧರ್ಮ. ಸಕಲ ಚರಾಚರ ಜೀವಿಗಳಲ್ಲಿ ಭಗವಂತ ನೆಲೆಸಿರುತ್ತಾನೆ ಎನ್ನುವ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ ಸನಾತನ ಹಿಂದೂ ಸಂಸ್ಕೃತಿ. ಸಾಮಾನ್ಯವಾಗಿ ವಿಷ್ಣು ದೇವರಿಗೆ ನಮ್ಮ ದೇಶದಲ್ಲಿ ಹಲವಾರು ದೇವಸ್ಥಾನಗಳನ್ನು ಕಟ್ಟಿದ್ದಾರೆ. ಆದ್ರೆ ವಿಷ್ಣು ದೇವನ ವಾಹನವಾದ ಗರುಡ ದೇವನಿಗೆ ಕಟ್ಟಿರುವ ವಿಶೇಷ ಆಲಯದ ಬಗ್ಗೆ ನಿಮಗೆ ಗೊತ್ತೇ? ಹಾಗಾದ್ರೆ ಬನ್ನಿ ಇವತ್ತಿನ ಲೇಖನದಲ್ಲಿ ಕೊಲಾದೇವಿಯಲ್ಲಿ ಇರುವ ಗರುಡ ಸ್ವಾಮಿಯ ದರ್ಶನ ಮಾಡಿ ಬರೋಣ. ಶಕ್ತಿ ಮತ್ತು ವೇಗಕ್ಕೆ ಮತ್ತೊಂದು ಹೆಸರು ಅಂದ್ರೆ ಅದು ವಿಷ್ಣುವಿನ ವಾಹನವಾದ ಗರುಡ ದೇವ. ಭಾರತದಲ್ಲಿನ ಏಕೈಕ ಗರುಡ ದೇವಾಲಯ ಇದಾಗಿದ್ದು, ಇಲ್ಲಿಗೆ ಬಂದು ಗರುಡ ಸ್ವಾಮಿಯನ್ನು ದರ್ಶನ ಮಾಡಿದ್ರೆ ಅದೃಷ್ಟ ಖುಲಾಯಿಸುತ್ತೆ.

 

 

ಜೊತೆಗೆ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ,ವಿವಾಹ ವಿಳಂಬ ಸಮಸ್ಯೆ ಇದ್ದರೆ ಈ ಕ್ಷೇತ್ರಕ್ಕೆ ಬಂದು ಗರುಡ ದೇವನಿಗೆ ಪೂಜೆ ಸಲ್ಲಿಸಿದರೆ ಎಲ್ಲಾ ಪರಿಹಾರ ಆಗುತ್ತೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ. ಶನಿವಾರ ಮತ್ತು ಭಾನುವಾರ ಈ ದೇವಾಲಯಕ್ಕೆ ಮಕ್ಕಳಾಗದ ದಂಪತಿ ಬಂದು ಗರುಡ ದೇವನಿಗೆ ಪೂಜೆ ಸಲ್ಲಿಸಿದರೆ ಅವರಿಗೆ ಉತ್ತಮ ಸಂತಾನ ಭಾಗ್ಯ ದೊರಕುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಸರ್ಪ ದೋಷದಿಂದ ಮುಕ್ತಿ ಪಡೆಯಬೇಕು ಎಂದು ಬಯಸುವವರು ಇಲ್ಲಿಗೆ ಬಂದು ಗರುಡ ದೇವನಿಗೆ ಸೇವೆ ಸಲ್ಲಿಸಿದರೆ ಆ ದೇವ ನಮ್ಮೆಲ್ಲ ಸರ್ಪ ದೋಷಗಳನ್ನು ದೂರ ಮಾಡುತ್ತಾನೆ. ಇನ್ನೂ ವಾಮಾಚಾರ ಮಾಟ ಮಂತ್ರಗಳ ನಿವಾರಣೆಗೆ ಈ ದೇಗುಲಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ನಾವು ಬೇರೆಲ್ಲೂ ನೋಡಲು ಸಾಧ್ಯವಿಲ್ಲದ ಈ ದೇವಾಲಯವು ಕೊಲಾದೇವಿಯಲ್ಲಿ ಸ್ಥಾಪನೆ ಆಗಿರುವ ಹಿಂದೆ ಪುರಾಣದ ಕಥೆ ಕೂಡ ಇದೆ. ಹಿಂದೆ ದ್ವಾಪರ ಯುಗದಲ್ಲಿ ಅರ್ಜುನ ಬೇಟೆ ಆಡಲು ಕಾಡಿಗೆ ತೆರಳಿ ಬಾಣಗಳನ್ನು ಬಿಡುತ್ತಾ ಇದ್ದಾಗ ಅವುಗಳ ರಭಸ ಹಾಗೂ ಶಕ್ತಿಯಿಂದ ಕಾಡಿನಲ್ಲಿ ಬೆಂಕಿ ಹತ್ತಿ ಸಾಕಷ್ಟು ಹಾವುಗಳು ಸಾಯುತ್ತವೆ.

 

 

ಇದರಿಂದ ಅರ್ಜುನನಿಗೆ ಸರ್ಪ ದೋಷ ಉಂಟಾಗಿ ಅದರಿಂದ ಮುಕ್ತಿ ಪಡೆಯಲು ಗರುಡನಿಗೆ ಪೂಜಿಸಬೇಕು ಎಂಬ ಪರಿಹಾರವೂ ಋಷಿಗಳಿಂದ ಸಿಗುತ್ತೆ. ಹೀಗಾಗಿ ಸ್ವತಃ ಅರ್ಜುನನೇ ಬಂದು ಈ ಕ್ಷೇತ್ರದಲ್ಲಿ ಗರುಡ ದೇವನನ್ನು ಸ್ಥಾಪನೆ ಮಾಡಿದ ಎಂಬ ಪ್ರತೀತಿ ಇದೆ. ಅಲ್ಲದೆ ಇನ್ನೊಂದು ಕಥೆಯ ಪ್ರಕಾರ ರಾವಣಾಸುರ ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಕೊಂಡೊಯ್ಯುವಾಗ ಒಂದು ಗರುಡ ಪಕ್ಷಿ ರಾವಣನ ಜೊತೆ ಪ್ರಸ್ತುತ ದೇವಾಲಯ ಇರುವ ಪ್ರದೇಶದಲ್ಲಿ ಹೋರಾಟ ಪ್ರಾರಂಭ ಮಾಡಿ ಕೊನೆಗೆ ಆ ಹೋರಾಟದಲ್ಲಿ ಮರಣ ಹೊಂದುತ್ತದೆ. ಗರುಡ ಸಾಯುವಾಗ ರಾಮ ರಾಮ ಎಂದು ಕರೆಯಿತಂತೆ. ಈ ವಿಷಯವನ್ನು ದೂರ ದೃಷ್ಟಿಯಿಂದ ನೋಡಿದ ರಾಮನು ಗರುಡ ಪಕ್ಷಿಗೆ ಮೋಕ್ಷ ನೀಡಿ ಇನ್ನೂ ಮುಂದೆ ನಿನ್ನ ಹೆಸರಿನಿಂದ ಈ ಕ್ಷೇತ್ರವು ಪುಣ್ಯ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಲಿ ಎಂದು ಹೇಳುತ್ತಾರೆ. ಹಾಗಾಗಿ ಇಲ್ಲಿ ಗರುಡನ ದೇವಸ್ಥಾನ ಸ್ಥಾಪನೆ ಆಯಿತು ಎಂದು ದಂತ ಕಥೆಗಳಲ್ಲಿ ಬರೆಯಲಾಗಿದೆ. ಈ ಗರುಡ ದೇವನನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಗರುಡ ದೇವನ ಈ ವಿಶಿಷ್ಟ ದೇವಾಲಯವು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲಾದೇವಿ ಎಂಬ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ವಿರಳವಾದ ಗರುಡ ದೇವನ ದೇವಸ್ಥಾನದ ದರ್ಶನ ಮಾಡಿ ಬನ್ನಿ. ಶುಭದಿನ.

ಉಪಯುಕ್ತ ಮಾಹಿತಿಗಳು