ಬಂಡೆಯಲ್ಲಿ ಒಡಮೂಡಿ ಭಕ್ತರಿಗೆ ದರ್ಶನವನ್ನು ನೀಡುತ್ತಿರುವ ಜಗನ್ಮಾತೆ ಈಕೆ.!!!

ಬಂಡೆಯಲ್ಲಿ ಒಡಮೂಡಿ ಭಕ್ತರಿಗೆ ದರ್ಶನವನ್ನು ನೀಡುತ್ತಿರುವ ಜಗನ್ಮಾತೆ ಈಕೆ.!!!

ನಮಸ್ತೆ ಆತ್ಮೀಯ ಓದುಗರೇ, ಬೆಂಗಳೂರು ಊರಿನ ಹೆಸರು ಕೇಳುತ್ತಿದ್ದ ಹಾಗೆ ನೆನಪಾಗುವುದು ಐಟಿ ಬಿಟಿ ಕಂಪನಿಗಳು ಹಾಗೂ ದೊಡ್ಡ ದೊಡ್ಡ ಕಟ್ಟಡಗಳು. ಉದ್ಯಾನ ನಗರಿ ಎಂದೇ ಖ್ಯಾತವಾದ ಊರನ್ನು ಕೆಂಪೇಗೌಡರು ನಿರ್ಮಾಣ ಮಾಡಿದರು. ಕರ್ನಾಟಕದ ರಾಜಧಾನಿ ಆದ ಈ ಊರು ತನ್ನ ಒಡಲಾಳದಲ್ಲಿ ಹಲವಾರು ಪುರಾತನ ದೇವಾಲಯಗಳನ್ನು ಒಳಗೊಂಡಿದೆ. ಬನ್ನಿ ಇವತ್ತಿನ ಲೇಖನದಲ್ಲಿ ಬೆಂಗಳೂರನ್ನು ರಕ್ಷಿಸುತ್ತಿರುವ ಬಂಡೆ ಮಹಾಕಾಳಿ ದೇವಿಯನ್ನು ದರ್ಶನ ಮಾಡಿ ಕೃತಾರ್ಥ ಆಗೋಣ. ಸುಮಾರು 400 ವರ್ಷಗಳಷ್ಟು ಪುರಾತನವಾದ ಬಂಡೆ ಮಹಾಕಾಳಿ ದೇವಾಲಯವು ಬೆಂಗಳೂರಿನ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು, ಈ ದೇವಿಯು ಕೆಂಪೇಗೌಡರಿಗೆ ಅನುಗ್ರಹ ನೀಡಿದ್ದಳು ಎಂದು ಹೇಳಲಾಗುತ್ತದೆ. ವಿಶಾಲವಾದ ಪ್ರಾಂಗಣ, ಗರ್ಬಗುಡಿ, ಹಾಗೂ ಪ್ರದಕ್ಷಿಣಾ ಪಥವನ್ನು ಹೊಂದಿರುವ ಈ ದೇಗುಲದಲ್ಲಿ ಮಹಾಕಾಳಿ ಆರಾಧ್ಯ ದೇವತೆಯಾಗಿ ಆರಾಧಿಸಲ್ಪಡುತ್ತಾಳೆ.

 

 

ಬಂಡೆಯಲ್ಲಿ ಕೆತ್ತಿರುವ ದೇವಿಯ ಮೂರ್ತಿ 3 ಅಡಿ ಎತ್ತರವಾಗಿದ್ದು, ದೇವಿಯು ನಿಂತ ಭಂಗಿಯಲ್ಲಿ ಚತುರ್ಭಜ ಆಗಿ ಕೈಯಲ್ಲಿ ಅಭಯ, ತ್ರಿಶೂಲ, ಡಮರು ಮತ್ತು ಮುದ್ರೆಗಳನ್ನು ಹಿಡಿದು, ಸುಪ್ರಸನ್ನ ವಾದನಾಲಾಗಿ ಭಕ್ತರಿಗೆ ತನ್ನ ದಿವ್ಯ ರೂಪವನ್ನು ತೋರುತ್ತಿದ್ದಾರೆ. ವಾಮಾಚಾರ ಸಮಸ್ಯೆಯಿಂದ ಬಳಲುವವರು ಈ ದೇಗುಲಕ್ಕೆ ಬಂದು ತದೆ ಓಡಿಸಿಕೊಂಡು ಹೋದ್ರೆ ವಾಮಾಚಾರ ಸಮಸ್ಯೆ ದೂರವಾಗುತ್ತದೆ. ಮಂಗಳವಾರ ಶುಕ್ರವಾರ ಹುಣ್ಣಿಮೆ ಅಮಾವಾಸ್ಯೆ ದಿನದಂದು ಈ ದೇಗುಲಕ್ಕೆ ಬಂದು ಹರಕೆ ಹೊತ್ತುಕೊಂಡರೆ ಅಂದುಕೊಂಡ ಕಾರ್ಯಗಳು ತಾಯಿಯ ಕೃಪೆಯಿಂದ ಬಲು ಬೇಗ ಫಲಿಸುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ. ಇನ್ನೂ ಈ ಕ್ಷೇತ್ರದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ತ್ರಿಶೂಲ ಕ್ಕ ನಿಂಬೆ ಹಣ್ಣನ್ನು ಕೂಡ ಚುಚ್ಚಲಾಗುತ್ತೆ. ದೇಗುಲದ ಹೊರ ಪ್ರಾಕಾರದಲ್ಲಿ ದೇವಿಯ ವಿವಿಧ ಭಂಗಿಗಳ ಶಿಲ್ಪಗಳನ್ನು ಕೆತ್ತಲಾಗಿದೆ.

 

 

ಅರ್ಧ ನಾರಿಶ್ವರನ ವಿಗ್ರಹ ನೋಡುಗರ ಮೈ ನವಿರೆಳುವಂತೆ ಮಾಡುತ್ತೆ. ಬಹಳ ವರ್ಷಗಳ ಹಿಂದೆ ಇಲ್ಲಿ ದೇವಿಗೆ ಕೇವಲ ಒಂದಂಕಣದ ಗುಡಿ ಇದ್ದು, ರಾತ್ರಿ ಊರಿಗೆ ಹೋಗಲಾರದವರು ಎತ್ತಿನ ಬಂಡಿಯನ್ನೂ ತಂದು ಈ ಸ್ಥಳದಲ್ಲಿ ನಿಲ್ಲಿಸಿ ಮರು ದಿನ ಬೆಳಿಗ್ಗೆ ದೇವಿಗೆ ಪೂಜೆ ಮಾಡಿ ಊರಿಗೆ ಹೋಗ್ತಾ ಇದ್ರಂತೆ. ಎತ್ತಿನ ಬಂಡಿಗಳು ಇಲ್ಲಿ ನಿಲ್ಲಿಸಿ ಜನರು ತಂಗುತ್ತ ಇದ್ದರಿಂದ ಈ ಕ್ಷೇತ್ರವನ್ನು ಬಂಡೆ ಮಾರಮ್ಮ ಎಂದು ಹೇಳಲಾಗುತ್ತದೆ. ಇನ್ನೂ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸುವ ಈ ದೇಗುಲದಲ್ಲಿ ನವರಾತ್ರಿಯ ಒಂಬತ್ತು ದಿನವೂ ದೇವಿಗೆ ಬಗೆ ಬಗೆಯ ಅಲಂಕಾರ ಮಾಡಲಾಗುತ್ತದೆ. ಈ ಸಮಯದಲ್ಲಿ ಸರ್ವಾಭರಣ ಭೋಷಿತೆ ಆದ ದೇವಿಯು ಮತ್ತಷ್ಟು ಅಂದವಾಗಿ ಕಾಣುತ್ತಾಳೆ. ನಿತ್ಯ ದೇವಿಗೆ ಮೂರು ಹೊತ್ತು ಪೂಜೆಯನ್ನು ಮಾಡಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಈ ದೇವಿಯನ್ನು ಕಣ್ಣು ತುಂಬಿಕೊಳ್ಳಬಹುದು. ಬಂಡೆ ಮಹಾಕಾಳಿ ದೇವಾಲಯವು ಬೆಂಗಳೂರಿನ ಗವಿಪುರಂ ನ ಗುಟ್ಟ ಹಳ್ಳಿಯಲ್ಲಿ ಇದೆ. ಸಾಧ್ಯವಾದರೆ ಈ ತಾಯಿಯ ಆಶೀರ್ವಾದವನ್ನು ನೀವು ಪಡೆದುಕೊಂಡು ಬನ್ನಿ. ಶುಭದಿನ.

ಭಕ್ತಿ