ತಾಯಿಯ ಹಾಲಿನ ನಂತರ ಅಧಿಕ ಪೋಷಕಾಂಶಗಳನ್ನು ಹೊಂದಿರುವ ಏಕೈಕ ಸಸ್ಯ ಸ್ಪಿರುಲಿನಾ. ಇದನ್ನು ಸೇವನೆ ಮಾಡಿದರೆ ಎಷ್ಟೆಲ್ಲಾ ಕಾಯಿಲೆಗಳು ನಿವಾರಣೆ ಆಗುತ್ತೆ ಗೊತ್ತಾ..!??

ತಾಯಿಯ ಹಾಲಿನ ನಂತರ ಅಧಿಕ ಪೋಷಕಾಂಶಗಳನ್ನು ಹೊಂದಿರುವ ಏಕೈಕ ಸಸ್ಯ ಸ್ಪಿರುಲಿನಾ. ಇದನ್ನು ಸೇವನೆ ಮಾಡಿದರೆ ಎಷ್ಟೆಲ್ಲಾ ಕಾಯಿಲೆಗಳು ನಿವಾರಣೆ ಆಗುತ್ತೆ ಗೊತ್ತಾ..!??

ನಮಸ್ತೆ ಪ್ರಿಯ ಓದುಗರೇ, ನಾವು ಯಾವುದೇ ತರಕಾರಿ ಅಥವಾ ಹಣ್ಣನ್ನು ಸೇವನೆ ಮಾಡಿದರೆ ನಮಗೆ ನೂರಕ್ಕೆ ನೂರರಷ್ಟು ಪೌಷ್ಟಿಕಾಂಶಗಳು ಸಿಗುವುದು ತುಂಬಾ ಕಷ್ಟ. ಆದ್ರೆ ನಾವು ಇವತ್ತು ಹೇಳಲು ಹೊರಟಿರುವ ಸಸ್ಯದಲ್ಲಿ ನೀವು ಇದನ್ನು ಸೇವನೆ ಮಾಡಿದರೆ ನಿಮಗೆ ನೂರಕ್ಕೆ ನೂರರಷ್ಟು ಪೌಷ್ಟಿಕಾಂಶಗಳು ಸಿಗುತ್ತವೆ. ಇದನ್ನು ಕೇಳಲು ಆಶ್ಚರ್ಯ ಆಗಬಹುದು ಆದ್ರೆ ಇದು ಸತ್ಯ. ಇಷ್ಟು ಉಪಯೋಗ ಹೊಂದಿರುವ ವಿರಳ ಸಸ್ಯ ಯಾವುದು ಎಂದ್ರೆ ಅದು ಸ್ಪಿರುಲಿನಾ. ಇದು ಅಪೌಷ್ಟಿಕತೆ ಹಾಗೂ ರಕ್ತ ಹೀನತೆಗೆ ಪರಿಹಾರ ರೂಪದಲ್ಲಿ ಸ್ಪಿರುಲಿನಾ ಬಳಸಲಾಗುತ್ತದೆ. ಇದೊಂದು ಸಂಪೂರ್ಣವಾದ ಆಹಾರವಾಗಿದ್ದು, ತರಕಾರಿ ಹಣ್ಣುಗಳಿಗಿಂತ ಹೆಚ್ಚಿನ ಪೌಷ್ಟಕಾಂಶ ಹೊಂದಿದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ. ಪೌಷ್ಟಿಕಾಂಶಗಳು ಆಗರ ಆಗಿರುವ ಈ ಸಸ್ಯದ ಕುರಿತು ಒಂದಿಷ್ಟು ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ನಾವು ಇತ್ತೀಚಿನ ದಿನಗಳಲ್ಲಿ ಸೇವಿಸುವ ಆಹಾರದಲ್ಲಿ ಅಷ್ಟೊಂದು ಪೌಷ್ಟಕಾಂಶ ಸಿಗುವುದಿಲ್ಲ ಎಂಬ ವಿಷಯ ನಿಮಗೂ ಗೊತ್ತು.

 

 

ಅಪೌಷ್ಟಿಕತೆ ಹಾಗೂ ರಕ್ತ ಹೀನತೆಯಿಂದ ಬಳಲುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದ್ರೆ ಸ್ಪಿರುಲಿನಾ ಅಂದ್ರೇನು? ಅದೊಂದು ಆಹಾರ? ಔಷಧಿ? ಅಥವಾ ಚಿಕಿತ್ಸೆಯೂ ಇಂತಹ ಹಲವಾರು ಪ್ರಶ್ನೆಗಳು ಕಾಡುವುದು ಸಹಜ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಈ ಸ್ಪಿರುಲಿನಾ ನೀರಿನಲ್ಲಿ ಬೆಳೆಯುವ ಒಂದು ಪಾಚಿ ಸಸ್ಯ. ಯಾವುದೇ ಸಸ್ಯ ಅಥವಾ ಆಹಾರದಲ್ಲಿ ಎಷ್ಟು ಪೋಷಕಾಂಶ ಇರಬಹುದು? ಅಬ್ಬಬ್ಬಾ ಅಂದ್ರೆ 10-20 ರ ವರೆಗೆ ಇರಬಹುದು. ಆದ್ರೆ ಇದರಲ್ಲಿ ಬರೋಬ್ಬರಿ ನೂರರಷ್ಟು ಪೌಷ್ಟಿಕಾಂಶಗಳು ಕೂಡಿದ್ದು, ಇದು ಸಮಗ್ರವಾದ ನೈಸರ್ಗಿಕವಾದ ಆಹಾರ ಆಗಿದೆ. ವ್ಯಕ್ತಿಯೊಬ್ಬ ಆರೋಗ್ಯವಾಗಿರಲು ಏನೇನು ಬೇಕು ಆ ಎಲ್ಲಾ ಪೌಷ್ಟಿಕಾಂಶಗಳನ್ನು ಇದು ಒದಗಿಸುವ ಏಕೈಕ ಆಹಾರ ಎಂದು ಇದನ್ನು ಗುರುತಿಸಲಾಗಿದೆ. ಕ್ಯಾರೆಟ್ ಗಿಂತ 25 ಪಟ್ಟು ಹೆಚ್ಚು ಮತ್ತು ಪಪ್ಪಾಯ ಹೆಣ್ಣಿಗಿಂತ 100 ಪಟ್ಟು ಹೆಚ್ಚು ವಿಟಮಿನ್ ಏ ಅಂಶವನ್ನು ಹೊಂದಿದೆ.

 

 

ಹಾಗೆ ಪಾಲಕ್ ಹಾಗೂ ಇನ್ನೂ ಅನೇಕ ಸೊಪ್ಪುಗಳಿಗಿಂತ 50 ಪಟ್ಟು ಹೆಚ್ಚು ಕಬ್ಬಿಣದ ಅಂಶವನ್ನು ಇದು ಹೊಂದಿದೆ. ಹಾಗೆ ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ ಇದು ಹೊಂದಿದೆ. ದಿನನಿತ್ಯ ಉಪಯೋಗಿಸುವ ಹಾಲಿನಲ್ಲಿ ಶೇಕಡಾ 4 ರಷ್ಟು ಹಾಗೂ ಮೊಟ್ಟೆಯಲ್ಲಿ ಶೇಕಡಾ 14 ರಷ್ಟು ಮತ್ತು ಮಾಂಸದಲ್ಲಿ ಶೇಕಡಾ 20 ರಷ್ಟು ಪ್ರೊಟೀನ್ ಹೊಂದಿದ್ರೆ, ಇದು 65% ಪ್ರೊಟೀನ್ ಹಾಗೂ ವಿಟಮಿನ್ ಗಳನ್ನ ಹೊಂದಿದೆ. ಮತ್ತು 30 ವಿಧವಾದ ಖನಿಜಗಳು ಅಂದ್ರೆ ಕಬ್ಬಿಣ ಕ್ಯಾಲ್ಸಿಯಂ ಜಿಂಕ್ ಇತ್ಯಾದಿಗಳನ್ನು ಹೊಂದಿದೆ. ಹಾಗೂ 18 ಅಮೈನೋ ಆಸಿಡ್ ಇನ್ನೂ ಅನೇಕ ಪೌಷ್ಟಿಕಾಂಶಗಳ ಕಣಜವನ್ನು ಹೊಂದಿದೆ. ಮಕ್ಕಳ ಬುದ್ಧಿಮತ್ತೆ ಹಾಗೂ ನೆನಪಿನ ಶಕ್ತಿ ಹೆಚ್ಚಿಸುವ ಡಿ.ಹೆಚ್.ಏ ತಾಯಿಯ ಎದೆ ಹಾಲಿನಲ್ಲಿ ಸಿಗುತ್ತದೆ. ಇದನ್ನು ಬಿಟ್ಟರೆ ಇದು ಹೆಚ್ಚಾಗಿರುವುದು ಈ ಸ್ಪಿರುಲಿನಾ ಸಸ್ಯದಲ್ಲಿ. ಅದಕ್ಕಾಗಿ ತಾಯಿಯ ಹಾಲಿನ ನಂತರ ಎರಡನೇ ಸ್ಥಾನವನ್ನು ಈ ಸಸ್ಯಕ್ಕೆ ಕೊಟ್ಟಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಭಕ್ತಿ