ಈ ಕ್ಷೇತ್ರದಲ್ಲಿ ಇದೆ ಬಭ್ರುವಾಹನನು ನಾಗಲೋಕಕ್ಕೆ ಹೋಗಿ ಬಂದ ರಹಸ್ಯ ಬಾವಿ..!!!

ಈ ಕ್ಷೇತ್ರದಲ್ಲಿ ಇದೆ ಬಭ್ರುವಾಹನನು ನಾಗಲೋಕಕ್ಕೆ ಹೋಗಿ ಬಂದ ರಹಸ್ಯ ಬಾವಿ..!!!

ನಮಸ್ತೆ ಆತ್ಮೀಯ ಓದುಗರೇ, ನಮ್ಮ ರಾಜ್ಯದಲ್ಲಿ ಇರುವ ಪ್ರತಿಯೊಂದು ಊರು ಒಂದಿಲ್ಲ ಒಂದು ವಿಶೇಷತೆಗಳನ್ನು ಹೊಂದಿದೆ. ಅಲ್ಲದೆ ಆಯಾ ಊರುಗಳಿಗೆ ಹೆಸರು ಬಂದಿರುವುದರ ಹಿಂದೆ ರೋಚಕ ಕಥೆ ಇದೆ. ನೀವೆಲ್ಲ ನಾಗಮಂಗಲ ಊರಿನ ಹೆಸರನ್ನು ಕೇಳಿರುತ್ತೀರಾ ಅಲ್ವಾ. ಸೌಮ್ಯ ಕೇಶವ ಹಾಗೂ ಶ್ರೀ ಯೋಗ ನರಸಿಂಹ ಸ್ವಾಮಿಯ ದೇಗುಲಗಳಿಗೆ ಖ್ಯಾತವಾಗಿರುವ ಈ ಊರಿಗೂ ಮತ್ತು ಹಾವುಗಳಿಗೆ ಒಂದು ವಿಶೇಷವಾದ ನಂಟು ಇದೆ. ಅಲ್ಲದೆ ಮಹಾಭಾರತ ಕಾಲದಲ್ಲಿ ಬರುವ ಬಭ್ರುವಾಹನ ನೀಗೆ ಈ ಸ್ಥಳಕ್ಕೆ ಬಿಡಿಸಲಾರದ ನಂಟು ಇದೆಯಂತೆ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ನಾಗಮಂಗಲದ ಪ್ರಸಿದ್ಧ ದೇವಾಲಯ ಆದ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನ ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ನಾಗಮಂಗಲ ಊರಿನಲ್ಲಿ ಮೊಟ್ಟಮೊದಲು ನಿರ್ಮಾಣವಾದ ದೇವಾಲಯ ಎಂದು ಖ್ಯಾತಿಯನ್ನು ಹೊಂದಿರುವ ಶ್ರೀ ಯೋಗ ನರಸಿಂಹ ಸ್ವಾಮಿಯ ದೇವಾಲಯ ಸುಮ್ಮರು 3-4 ಸಾವಿರ ವರ್ಷಗಳಷ್ಟು ಪುರಾತನವಾದ ದೇವಾಲಯ ಆಗಿದ್ದು, ಈ ದೇಗುಲವನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಲಾಗಿದೆ.

 

 

ಪುರಾಣದ ಕಾಲದಲ್ಲಿ ಈ ಸ್ಥಳವನ್ನು ಮಣಿಪುರ, ಉಲೂಚಿ ನಗರ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು. ಈ ಆಲಯವು ಸುಖಾಸೀನ , ಮುಖ ಮಂಟಪ, ಗರ್ಭ ಗೃಹ ಹಾಗೂ ವಿಶಾಲವಾದ ಪ್ರಾಂಗಣ ಒಳಗೊಂಡಿದೆ. ಆಲಯದ ಮುಖ್ಯ ಗರ್ಭ ಗುಡಿಯಲ್ಲಿ ನರಸಿಂಹ ಸ್ವಾಮಿಯು ಯೋಗ ಮುದ್ರೆಯಲ್ಲಿ ಕುಳಿತು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಈ ಕ್ಷೇತ್ರಕ್ಕೆ ಬಂದು ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಪೂಜೆ ಮಾಡಿಸಿಕೊಂಡು ಹೋದ್ರೆ, ಎಷ್ಟೇ ಕಠಿಣ ಸರ್ಪದೋಷ ಇದ್ರು ಅವು ದೂರಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಸಂತಾನ ಸಮಸ್ಯೆ, ವ್ಯಾಪಾರ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ, ಹೀಗೆ ಏನೇ ಸಮಸ್ಯೆ ಇದ್ದರೂ ಈ ದೇಗುಲಕ್ಕೆ ಬಂದು ಸ್ವಾಮಿಯ ಎದುರಿನಲ್ಲಿ ನಿಂತು ಭಕ್ತಿಯಿಂದ ಬೇಡಿಕೊಂಡು ಕೈಲಾದ ಸೇವೆಯನ್ನು ಮಾಡ್ತೀವಿ ಅಂತ ಹರಕೆ ಹೊತ್ತರೆ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವುದು ಈ ದೇವನ ಕೃಪೆಯಿಂದ ಒಳಿತನ್ನು ಕಂಡ ಭಕ್ತ ಜನರ ಮನದ ಮಾತಾಗಿದೆ. ಇನ್ನೂ ನರಸಿಂಹ ನಾಯಕ ಎಂಬ ಪಾಳೆಗಾರ ಈ ದೇಗುಲವನ್ನು ಜೀರ್ಣೋದ್ಧಾರ ಮಾಡಿರುವುದರ ಹಿಂದೆ ಒಂದು ಕಥೆ ಇದೆ. ಕಲಿಯುಗದಲ್ಲಿ ನರಸಿಂಹ ನಾಯಕ ಪಾಳೆಗಾರ ನ ಕನಸಿನಲ್ಲಿ ನರಸಿಂಹ ಸ್ವಾಮಿ ಕಾಣಿಸಿಕೊಂಡು ನಾನು ನಿಮ್ಮ ಊರಿನ ದಟ್ಟ ಅರಣ್ಯದ ಮಧ್ಯೆ ಇರುವ ಹುತ್ತವೊಂದರಲ್ಲಿ ವಾಸವಾಗಿದ್ದೇನೆ, ನನ್ನನ್ನು ಹೊರತೆಗೆದು ನಾನು ಹೇಳುವ ಜಾಗದಲ್ಲಿ ಪುನರ್ ಪ್ರತಿಷ್ಠಾಪನೆ ಮಾಡು ಎಂದು ಹೇಳಲಾಗಿ, ಸ್ವಾಮಿಯ ಮಾತಿನಂತೆ ನಾಯಕನು ಹುತ್ತವನ್ನು ಹುಡುಕುತ್ತಾ ಹೊರಟಾಗ ಆತನಿಗೆ ಕಾಡಿನ ತುಂಬಾ ಬರೀ ಹುತ್ತಗಳೆ ಕಾಣಿಸಿಕೊಂಡವು.

 

 

ಆಗ ಪುನಃ ನಾಯಕನು ನರಸಿಂಹ ದೇವರನ್ನು ಪ್ರಾರ್ಥಿಸಲು, ಹಂಗರ ಮರ ಹತ್ತಿರ ಬೆಳೆದಿರುವ ಹುತ್ತದಲ್ಲಿ ನಾನು ವಾಸವಾಗಿದ್ದೇನೆ ಎಂದು ಸ್ವಾಮಿ ಹೇಳಿದನಂತೆ. ಆಮೇಲೆ ನಾಯಕರು ಅಂಗರ ಮರದ ಬಳಿ ಬೆಳೆದ ಹುತ್ತದಿಂದ ಸ್ವಾಮಿಯ ವಿಗ್ರಹವನ್ನು ತೆಗೆದುಕೊಂಡು ಎಲ್ಲಿ ಪ್ರತಿಷ್ಠಾಪಿಸ ಬೇಕು ಎಂದು ತಿಳಿಯದೇ ನಿಂತಿದ್ದಾಗ ನಾಗರ ಹಾವು ನಾಯಕರನ್ನು ಈ ಸ್ಥಳಕ್ಕೆ ಕರೆದುಕೊಂಡು ಬಂದು ಇಲ್ಲಿ ಮಂಡಲಾಕಾರವಾಗಿ ಮಲಗಿ ನಾಯಕರಿಗೆ ಈ ಜಾಗದಲ್ಲಿಯೇ ದೇಗುಲವನ್ನು ಜೀರ್ಣೋದ್ಧಾರ ಮಾಡಬೇಕು ಎಂದು ಸೂಚನೆ ನೀಡಿತಂತೆ. ನಾಗರ ಹಾವು ಮಂಡಲಾಕಾರವಾಗೀ ಮಲಗಿದ್ದರಿಂದ ಮುಂದೆ ಈ ಊರನ್ನು ನಾಗಮಂಡಲ ಎಂದು ಕರೆದು ನಂತರ ನಾಗಮಂಗಲ ಆಯಿತು ಎಂದು ಹೇಳಲಾಗುತ್ತದೆ. ಇಂದಿಗೂ ಕೂಡ ನಾವು ಈ ದೇವಾಲಯದಲ್ಲಿ ಹುತ್ತವನ್ನು ನೋಡಬಹುದು. ಈ ದೇವಾಲಯ ಒಳಗಡೆ ಕಲ್ಲಿನ ಬಾವಿ ಇದ್ದು, ಈ ಬಾವಿಯ ಒಳಗಡೆ ನೀರು ಎಂದಿಗೂ ಬತ್ತುವುದಿಲ್ಲ. ಸ್ವಾಮಿಯ ಅಭಿಷೇಕಕ್ಕೆ ಇದೆ ನೀರನ್ನು ಬಳಸಲಾಗುತ್ತದೆ. ಈ ಬಾವಿಗೋ ಅರ್ಜುನನ ಮಗ ಬಭ್ರುವಾಹನ ಗೆ ನಂಟು ಇದೆ ಎಂದು ಹೇಳಲಾಗುತ್ತದೆ. ತನ್ನ ತಂದೆಯ ಜೊತೆ ಯುದ್ದಾದಾಲಿ ಶಿರಚ್ಛೇದ ಮಾಡಿದಾಗ, ಇವನೇ ತನ್ನ ತಂದೆ ಎಂದು ತಿಳಿದು ಅವನ ಜೀವ ಉಳಿಸಲು ನಾಗಮಣಿ ತರಲು ಇದೆ ಬಾವಿಯಿಂದ ಹೋದನೆಂದು ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ದೇವಾಲಯವು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಇದೆ. ಸಾಧ್ಯವಾದರೆ ಈ ಪುರಾಣ ಪ್ರಸಿದ್ಧ ದೇವಾಲಯಕ್ಕೆ ನೀವು ಒಮ್ಮೆ ಭೇಟಿ ನೀಡಿ. ಶುಭದಿನ.

ಭಕ್ತಿ