ನಮಸ್ತೆ ಪ್ರಿಯ ಓದುಗರೇ, ಸಂಖ್ಯಾಶಸ್ತ್ರದ ಪ್ರಕಾರ ಕೆಲವೊಂದು ಹೀಲಿಂಗ್ ಕೋಡ್ ಬಳಸಿ ಅಂದ್ರೆ ಕೆಲವೊಂದು ಸಂಖ್ಯೆಗಳನ್ನು ಬಳಸಿ ಹೇಗೆ ನಿಮ್ಮ ತೊಂದರೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ನೋಡೋಣ. ಇಂದಿನ ಲೇಖನದಲ್ಲಿ ಸಾಕಷ್ಟು ಜನ ತುಂಬಾ ಕಷ್ಟಪಟ್ಟು ಶ್ರದ್ಧೆ ಭಕ್ತಿಯಿಂದ ಅವರ ಕೆಲಸವನ್ನು ನಿಭಾಯಿಸುತ್ತಾರೆ. ಹೀಗೆ ತುಂಬಾ ವರ್ಷಗಳ ನಂತರವೂ ಅವರ ಕಷ್ಟಕ್ಕೆ ಪ್ರತಿಫಲದಂತೆ ಅವರಿಗೆ ಉದ್ಯೋಗದಲ್ಲಿ ಬಡ್ತಿ ಅಂದ್ರೆ ಪ್ರಮೋಷನ್ ಸಿಗ್ತಾನೆ ಇರಲ್ಲ. ಅಂಥವರಿಗೆ ಸಂಖ್ಯಾಶಸ್ತ್ರದ ಲ್ಲಿ ಒಂದು ಪರಿಹಾರ ಇದೆ. ಅದು ಏನು ಯಾವುದು ಎಂದು ತಿಳಿದುಕೊಳ್ಳೋಣ ಸ್ನೇಹಿತರೆ. ನಿಮ್ಮ ಕೆಲಸದ ಜಾಗದಲ್ಲಿ ನಿಮ್ಮ ಮೇಲಧಿಕಾರಿ ನಿಮ್ಮ ಬಳಿ ಚೆನ್ನಾಗಿ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ ಆದ್ರೆ ಪ್ರಮೋಷನ್ ಬಡ್ತಿ ಸಿಗ್ತನೆ ಇರಲ್ಲ. ಈ ವರ್ಷ ಪ್ರಮೋಷನ್ ಕೊಡ್ತೀವಿ ಅಂತಾರೆ ಕೊಡಲ್ಲ ಮುಂದಿನ ವರ್ಷ ಇದೇ ಥರ ಮಾಡ್ತಾ ಇರ್ತಾರೆ.
ಕೊಡ್ತೀವಿ ಕೊಡ್ತೀವಿ ಹೀಗೆ ಹೇಳ್ತಾ ಇರ್ತಾರೆ. ಪ್ರಮೋಷನ್ ಕೊಟ್ರೂ ಅಲ್ಲಿ ಸ್ಯಾಲರಿ ಹೈಕ್ ಇರಲ್ಲ. ಯಾವುದೋ ಮನೇಜರ್ ಅಂತ ಪ್ರಮೋಷನ್ ಕೊಟ್ಟು ಕ್ಲರ್ಕ್ ಗೆ ಕೊಟ್ಟ ಸಂಬಳ ಕೊಟ್ರೆ ಅದೇನು ಉಪಯೋಗ ಇಲ್ಲ. ಯಾವ ರೀತಿ ಆ ಸಂಬಳವನ್ನು ಹೆಚ್ಚು ಮಾಡುವಂತೆ ಪ್ರೇರೇಪಿಸುವುದು? ಬರೀ ಕೋಡ್ ನ ಬಳಸಿ ಯಾವ ರೀತಿ ನಮ್ಮ ಸಂಬಳವನ್ನು ಹೆಚ್ಚಿಗೆ ಮಾಡಿಸಿಕೊಳ್ಳುವುದು ಈಗ ಸಂಖ್ಯಾಶಾಸ್ತ್ರ ದಲ್ಲಿ ಹೇಳಿರುವಂತೆ. ಆ ಕೋಡ್ ಯಾವುದು ಅಂದ್ರೆ 86 85 931 . ಇದನ್ನು ಎರಡು ಸಂದರ್ಭದಲ್ಲಿ ಬಳಕೆ ಮಾಡಬಹುದು, ಒಂದು ಈ ಕೋಡ್ ಅನ್ನು ಬಳಸಿ ಸಂಬಳ ಹೆಚ್ಚಿಗೆ ಮಾಡಿಸಿಕೊಳ್ಳಲು ಬರುತ್ತೆ, ಹಾಗೆ ಪ್ರಮೋಷನ್ ಆಗಿರುತ್ತೆ ಆದ್ರೆ ಹಳೆಯ ಸಂಬಳವೇ ಇರುತ್ತೆ. ಇಂತಹ ಎರಡು ಸಂದರ್ಭದಲ್ಲಿ ಈ ಕೋಡ್ ಅನ್ನು ಮೇಲೆ ತಿಳಿಸಿದ ರೀತಿ ಮಧ್ಯ ಗ್ಯಾಪ್ ಕೊಟ್ಟು ಬರೆದುಕೊಳ್ಳಬೇಕೂ.
ಒಂದು ಬಿಳಿ ಚೀಟಿ ತೆಗೆದುಕೊಂಡು, ಮೇಲೆ ಪ್ರಮೋಷನ್/ ಸ್ಯಾಲರಿ ಹೈಕ್ ಅಂತ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಬರೆದು ಕೆಳಗೆ ಮೇಲೆ ತಿಳಿಸಿದ ಕೋಡ್ ಅದೇ ರೀತಿ ಬಿಡಿ ಬಿಡಿಯಾಗಿ ಹಸಿರು ಬಣ್ಣ ಇರುವ ಇಂಕ್ ಪೆನ್ ಇಂದ ಬರೆದು ನಿಮ್ಮ ದೇಹದ ಎಡ ಭಾಗದ ಪ್ಯಾಂಟ್ ಶರ್ಟ್ ಪ್ಯಾಕೆಟ್ ಅಲ್ಲಿ ಇಟ್ಟುಕೊಳ್ಳಬೇಕು. ಅಥವಾ ಇದನ್ನು ಗ್ರೀನ್ ಇಂಕ್ ಪೆನ್ ಅಲ್ಲಿ ನಿಮ್ಮ ದೇಹದ ಎಡ ಭಾಗದ ಅಂಗಗಳ ಮೇಲೆ ಬರೆದುಕೊಳ್ಳಬಹೂದು. ಇದನ್ನು ಬೆಳಿಗ್ಗೆ ಟೈಮ್ ಅಲ್ಲಿ ಬರೆದು ಇಟ್ಟುಕೊಂಡರೆ ಇಡೀ ದಿನ ನಿಮ್ಮ ಜೊತೆ ಇರುವುದರಿಂದ ನಿಮಗೆ ಒಳ್ಳೆಯದೇ ಆಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ, ದಯವಿಟ್ಟು ನಿಮ್ಮ ಫ್ರೆಂಡ್ಸ್ ಫ್ಯಾಮಿಲಿ ಗೆ ಶೇರ್ ಮಾಡಿ. ಅವರಿಗೂ ಸಹ ಇದು ಒಂದಲ್ಲಾ ಒಂದು ದಿನ ಉಪಯುಕ್ತ ಆಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.