ಅಪಘಾತವಾದಾಗ ನರಗಳ ಬಗ್ಗೆ ಎಚ್ಚರಿಕೆ ಅಗತ್ಯ..

ಅಪಘಾತವಾದಾಗ ನರಗಳ ಬಗ್ಗೆ ಎಚ್ಚರಿಕೆ ಅಗತ್ಯ..

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಆಕ್ಸಿಡೆಂಟ್ ಆದಾಗ ನರಗಳ ಬಗ್ಗೆ ಜಾಗ್ರತೆ ಇರುವುದು ಎಷ್ಟು ಮುಖ್ಯ ಅಂದು ತಿಳಿಯೋಣ. ಒಂದುವೇಳೆ ನಾವು ನರಗಳ ಬಗ್ಗೆ ಜಾಸ್ತಿ ಕಾಳಜಿ ವಹಿಸದಿದ್ದರೆ ಮುಂದೆ ದೊಡ್ಡ ದೊಡ್ಡ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಯಾರೋ ನಡೆದುಕೊಂಡು ಹೋಗುವಾಗ, ಬೈಕ್ ಅಲ್ಲಿ ಹೋಗುವಾಗ, ಕಾರ್ ಅಲ್ಲಿ ಹೋಗುವಾಗ ಆಕ್ಸಿಡೆಂಟ್ ಆದಾಗ ತಲೆಗೆ ಏಟು ಬಿದ್ದಾಗ ನರಗಳ ತಜ್ಞರ ಬಳಿ ಹೋಗಿ ಟ್ರೀಟ್ಮೆಂಟ್ ತಗೊತಿವಿ. ಇಲ್ಲವೇ ಮೆದುಳಲ್ಲಿ ರಕ್ತ ಸ್ರಾವ ಆದಾಗ ಅದಕ್ಕೆ ತಕ್ಕ ವೈದ್ಯರ ಬಳಿ ಅಡ್ಮಿಟ್ ಆಗಿ ಚಿಕತ್ಸೆ ತಾಗೊತಿವಿ. ಆದ್ರೆ ಎಷ್ಟೋ ಬಾರಿ ಆಕ್ಸಿಡೆಂಟ್ ಆಗಿರುತ್ತೆ ಆದ್ರೆ ತಲೆಗೆ ಏಟು ಬಿದ್ದಿರುವ ರೀತಿ ಕಾಣಿಸಲ್ಲ. ಕೈ ಕಾಲು ಮುರಿಯುವುದು,ಭುಜದ ಮೂಳೆಗಳು ಸ್ಥಳ ಬದಲಾವಣೆ ಆಗಿರುವುದು ಆದಾಗ ಇದೆಲ್ಲ ನಮ್ಮ ಕಣ್ಣಿಗೆ ಕಾಣಿಸುವುದರಿಂದ ಬೇಗನೆ ಅದಕ್ಕೆ ತಕ್ಕ ಚಿಕತ್ಸೆ ತೊಗೊಂಡು ಬಿಡುತ್ತೇವೆ,ಆದ್ರೆ ತಲೆಗೆ ಏನು ಏಟು ಆಗಿಲ್ಲ ಅಂತ ನೆಗ್ಲೆಕ್ಟ್ ಮಾಡ್ತೀವಿ.

 

 

ಆದ್ರೆ ಎಷ್ಟೋ ಸಾರಿ ಆಕ್ಸಿಡೆಂಟ್ ಆದಾಗ ತಲೆಯ ಹೊರಭಾಗ ಮೂಳೆ ಇದೆ ಒಳಗಡೆ ಮೃದುವಾದ ಮೆದುಳು ಇದೆ. ಇದೆಲ್ಲ ನಮಗೆ ಗೊತ್ತಿದೆ ಆದ್ರೆ ಯಾವುದೇ ರೀತಿಯ ಆಕ್ಸಿಡೆಂಟ್ ಆದಾಗ ತಲೆಗೆ ಮೆದುಳು ಒಮ್ಮೆ ಶೇಕ್ ಆಗುತ್ತೆ. ಕೆಲವೊಮ್ಮೆ ಇಂಜುರಿ ಆಗುವ ಸಾಧ್ಯತೆ ಇರುತ್ತದೆ. ಸ್ವಲ್ಪ ಹೊತ್ತು ಕನ್ಶಿಯಸ್ ಇಲ್ಲದೆ ಹೋಗುವುದು, ಎಚ್ಚರ ತಪ್ಪುವುದು ಆಗುತ್ತೆ ಆಕ್ಸಿಡೆಂಟ್ ಆದ ಕ್ಷಣದಲ್ಲಿ. ಪ್ರತಿ ಆಕ್ಸಿಡೆಂಟ್ ಆದಾಗ ಕೈ ಕಾಲು ಮುರಿದು ಹೋಗಿದೆ ಅಂದ್ರೆ ಅದು ತುಂಬಾ ದೊಡ್ಡ ಅಪಘಾತ ವೆ ಆಗಿರುತ್ತೆ. ಅಷ್ಟು ದೊಡ್ಡ ಆಕ್ಸಿಡೆಂಟ್ ಆದಾಗ ಆ ಕ್ಷಣದ ಹೊಡೆತಕ್ಕೆ ಕತ್ತು, ತಲೆಯ ಮೇಲೆ ನೇರವಾಗಿ ಅಥವಾ ಬೇರೆ ಯಾವುದೇ ಕಾರಣದಿಂದ ಇಂಜೂರಿ ಆಗಿರುವುದು, ಸಣ್ಣದಾಗಿ ರಕ್ತ ಸ್ರಾವ ಆಗುವುದು, ಕೆಲವೊಮ್ಮೆ ಆಕ್ಸಿಡೆಂಟ್ ಆದಾಗ ತಲೆಯ ಭಾಗಕ್ಕೆ ಏನೋ ಏಟು ಬಿದ್ದಿಲ್ಲ ಎಂದು ಕಂಡು ಬಂದರೂ ಆಕ್ಸಿಡೆಂಟ್ ಆದ ಕೆಲ ದಿನಗಳ ನಂತರ ತಲೆನೋವು ಬರುವುದು, ಕತ್ತು ನೋವು,ಕೈ ಕಾಲು ನಿಧಾನಕ್ಕೆ ಜೋಮು ಹಿಡಿಯುವುದು,ದೇಹದ ಮೇಲೆ ಬ್ಯಾಲನ್ಸ್ ತಪ್ಪುವುದು ಅನಿಸಲು ಶುರು ಆಗುವುದು, ದೇಹದಲ್ಲಿ ಸತ್ವ ಕಡಿಮೆ ಆಗಿ ಕೈ ಕಾಳು ತೆಳ್ಳಗೆ ವೀಕ್ ಆಗುವುದು ಕಂಡು ಬರುವ ಸಾಧ್ಯತೆ ಇರುತ್ತದೆ.

 

 

ಹೀಗೆ ಎಲ್ಲರಿಗೂ ಆಗಲ್ಲ. ತುಂಬಾ ಭೀಕರವಾಗಿ ಅಪಘಾತ ಆದಾಗ ಈ ತರಹದ ಲಕ್ಷಣಗಳು ಕಾಣಿಸುತ್ತವೆ. ಹೀಗೆ ಇವೆಲ್ಲಾ ಲಕ್ಷಣಗಳು ಕಾಣಿಸಿದರೆ ಒಂದು ಸಾರಿ ನ್ಯೂರೋಲಾಜಿಸ್ಟ್ ಗೆ ತೋರಿಸಿ ಕತ್ತು ಮೆದುಳಿನ ಎಕ್ಸರೇ ತೆಗೆಸಿ, ಅಥವಾ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುವುದು ಸೂಕ್ತ. ಅದರಲ್ಲಿ ಏನೋ ಆಗಿಲ್ಲ ಎನ್ನುವುದನ್ನು ಒಮ್ಮೆ ಕನ್ಫರ್ಮ್ ಮಾಡಿಕೊಂಡರೆ ಉತ್ತಮ. ಯಾಕೆ ಅಂದ್ರೆ ಆಮೇಲೆ ಇದೆಲ್ಲ ಒಟ್ಟುಗೂಡಿ ದಿನವೂ ಒಂದೊಂದೇ ಸಮಸ್ಯೆ ತಲೆದೋರಿದ ಮೇಲೆ ಏನೇ ಚಿಕಿತ್ಸೆ ಕೊಟ್ರೆ ಅದೇನು ಅಷ್ಟು ಕೆಲ್ಸ ಮಾಡದೇ, ಕೊನೆಯವರೆಗೂ ಕತ್ತು ಹಾಗೂ ತಲೆಯ ನರಗಳ ಡ್ಯಮಜ್ ಹಾಗೆ ಉಳಿಯುತ್ತದೆ. ಎಷ್ಟೋ ಸಾರಿ ಸ್ಪೈನಲ್ ಕಾರ್ಡ್ ಇಂದಲೇ ನಮ್ಮ ಕೈಗಳಿಗೆ ಹಾಗೂ ಕಾಲುಗಳಿಗೆ ನರಗಳು ಹೋಗಿರುತ್ತದೆ, ಅಲ್ಲಿ ಏನಾದ್ರೂ ರಕ್ತ ಸ್ರಾವ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಪಘಾತ ಆದ ತಕ್ಷಣ ಇವೆಲ್ಲ ಒಮ್ಮೆ ಸ್ಕ್ಯಾನ್ ಮಾಡಿಸಿದರೆ ಅದಕ್ಕೆ ಸರಿಯಾಗಿ ಚಿಕಿತ್ಸೆ ಕೊಟ್ಟು ದೊಡ್ಡ ತೊಂದರೆಗಳು ಆಗದಂತೆ ನೋಡಿಕೊಳ್ಳುವುದು ತುಂಬಾ ಒಳ್ಳೆಯದು. ಇದರಿಂದ ಮುಂದೆ ಆಗುವ ಸಮಸ್ಯೆಗಳು ಕಡಿಮೆ ಆಗುತ್ತವೆ ಅಷ್ಟೇ. ಹೀಗಾಗಿ ಆಕ್ಸಿಡೆಂಟ್ ಆದಾಗ ಯಾವುದನ್ನು ಕಡೆಗಣಿಸದೆ ತಲೆ ಕತ್ತು ಸ್ಕ್ಯಾನ್ ಮಾಡಿಸುವುದು ತುಂಬಾ ಮುಖ್ಯ ಎಂದು ಹೇಳಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು