ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಸೊಳ್ಳೆಗಳನ್ನು ಓಡಿಸುವುದಕ್ಕೆ ಒಂದು ಒಳ್ಳೆಯ ಟಿಪ್ ನ ತಿಳಿದುಕೊಳ್ಳೋಣ. ಈಗ ಎಲ್ಲ ಕಡೆ ಸೊಳ್ಳೆ ಕಾಟ ಅದ್ರಲ್ಲಿ ಬೆಂಗಳೂರು ಅಂತಹ ಮಹಾ ನಗರಗಳಲ್ಲಿ ಸಿಕ್ಕಾಪಟ್ಟೆ ಸೊಳ್ಳೆಗಳು ಬರುತ್ತೆ. ಈ ಸೊಳ್ಳೆಗಳಿಂದ ಮುಕ್ತಿ ಪಡೆಯುವುದು ಹೇಗೆ? ಏನೇ ಮಾಡಿದ್ರೂ ಸೊಳ್ಳೆಗಳು ಮನೆಯೊಳಗೆ ಬರುವುದು ಬಿಡೋದಿಲ್ಲ ಎಂದು ಟೆನ್ಷನ್ ಆಗಿರ್ತಿರ, ಇನ್ನೂ ಮಕ್ಕಳಿದ್ದ ಮನೆಯಲ್ಲಿ ಅಂತೂ ಹೇಳೋದೇ ಬೇಡ. ಪೋಷಕರು ಸೊಳ್ಳೆಗಳಿಂದ ಮಕ್ಕಳನ್ನೂ ರಕ್ಷಿಸಲು ಹರ ಸಾಹಸ ಪಡಬೇಕಾಗುತ್ತದೆ. ಈ ಸೊಳ್ಳೆಗಳು ಸುಮ್ಮನೆ ಕಚ್ಚಿ ಹೋಗಲ್ಲ ಬೇಗ ವಾಸಿಯಾಗದ ಖಾಯಿಲೆ ತಂದು ಕೊಟ್ಟು ಹೋಗುತ್ತವೆ. ಹಾಗಾಗಿ ಮನೆಯಲ್ಲಿಯೇ ಇರುವಂತಹ ಪದಾರ್ಥಗಳನ್ನು ಬಳಸಿ ಯಾವ ರೀತಿ ಈ ಸೊಳ್ಳೆಗಳ ಕಾಟಕ್ಕೆ ಒಂದು ಮುಕ್ತಿ ದೊರೆಯುವಂತಹ ಮಣೆಮದ್ದನ್ನು ತಯಾರಿಸುವುದು ಎಂದು ನೋಡೋಣ ಸ್ನೇಹಿತರೆ.
ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಮಾನೆಮದ್ದನ್ನು ತಯಾರಿಸಲು ಮೊದಲು 15-20 ಲವಂಗ ತೆಗೆದುಕೊಂಡು ಕುಟ್ಟಾಣಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಲವಂಗದ ಘಾತ ನಮಗೆ ಇಷ್ಟ ಆಗುತ್ತೆ ಆದ್ರೆ ಲವಂಗದ ಘಾಟ ಈ ಸೊಳ್ಳೆಗಳಿಗೆ ಇಷ್ಟ ಆಗಲ್ಲ ಹಾಗಾಗಿ ಇದರ ಘಾಟ್ ಇರುವ ಜಾಗದಲ್ಲಿ ಸೊಳ್ಳೆಗಳು ಬರೋದಿಲ್ಲ. ಒಂದುವೇಳೆ ಬಂದ್ರೂ ಹೊರಗೆ ಓಡಿ ಹೋಗುತ್ತವೆ. ನಾವು ಇನ್ನೊಂದು ಕೆಲಸ ಏನು ಮಾಡ್ತೀವಿ ಅಂದ್ರೆ ಸಾಮಾನ್ಯ ಶಾಪ್ ಗಳಲ್ಲಿ ಸಿಗುವ ಬೇರೆ ಬೇರೆ ರೀತಿಯ ಕಾಯಿಲ್ ಗಳನ್ನ ಬಳಸುತ್ತೇವೆ, ಆದ್ರೆ ಅದನ್ನು ಜಾಸ್ತಿ ಬಳಸಬಾರದು ಅದರಲ್ಲಿ ಕೆಮಿಕಲ್ಸ್ ಇರುತ್ತೆ. ಹಾಗೆ ಸೈಡ್ ಎಫೆಕ್ಟ್ ಇರುತ್ತೆ. ಮಕ್ಕಳು ಮನೆಯಲ್ಲಿ ಇದಾರೆ ಅಂದ್ರೆ ಯಾವುದೇ ರೀತಿ ಕಾಯಿಲ್ ನ ಬಳಸಬೇಡಿ. ಈಗ ಕುತ್ತಿದ ಲವಂಗದ ಪುಡಿಯನ್ನು ಒಂದು ಬಟ್ಟಲಿಗೆ ನೀರು ಹಾಕಿ ಆ ಬಟ್ಟಲಿಗೆ ಲವಂಗದ ಪುಡಿಯನ್ನು ವರ್ಗಾಯಿಸಿ. ಹೀಗೆ ಹಾಕುವುದರಿಂದ ಇದರ ಪರಿಮಳ ಇನ್ನಷ್ಟು ಜಾಸ್ತಿ ಆಗಿ ಮನೆಯೆಲ್ಲಾ ಪಸರಿಸುತ್ತದೆ.
ನೀವು ಯಾವ ಜಾಗದಲ್ಲಿ ಕುಳಿತುಕೊಳ್ಳುತ್ತಿರ ಹಾಗೆ ಎಲ್ಲಿ ಮಲಗುತ್ತಿರ ಆ ಜಾಗಗಳಲ್ಲಿ ಇದನ್ನು ಇಟ್ಟರೆ ಇದರ ವಾಸನೆಗೆ ಸೊಳ್ಳೆಗಳು ನಿಮ್ಮ ಹತ್ರ ಸುಳಿಯುವುದಿಲ್ಲ. ಇದು ಮೊದಲ ಟಿಪ್. ಸೊಳ್ಳೆಗಳನ್ನು ಓಡಿಸಲು ಇನ್ನೊಂದು ಟಿಪ್ ನ ನೋಡೋಣ. ಸೆಕೆಂಡ್ ಟಿಪ್ ನಲ್ಲಿ ಬೆಳ್ಳಿಯ ಎಸಳುಗಳನ್ನು ಜಾಸ್ತಿ ಪ್ರಮಾಣದಲ್ಲಿ ತೆಗೆದುಕೊಂಡು ಸಿಪ್ಪೆ ತೆಗೆಯದೆ ಇದನ್ನು ಸಹ ಕುಟ್ಟಾಣಿಯಲ್ಲಿ ಜಜ್ಜಿಕೊಳ್ಳಿ. ಇದರ ವಾಸನೆ ತುಂಬಾ ಘಾಟದಿಂದ ಕೂಡಿರುತ್ತದೆ. ಇದರ ವಾಸನೆಗೆ ಸಹ ಸೊಳ್ಳೆಗಳು ಮನೆಯ ಒಳಗೆ ಬರುವುದು ಕಡಿಮೆ ಆಗುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ಒಂದು ಚಿಕ್ಕ ಬಟ್ಟಲಿಗೆ ಹಾಕಿ ಮನೆಯ ಒಂದು ಮೂಲೆಯಲ್ಲಿ ಇಟ್ರೆ ಸಾಕು. ಸಂಜೆ ಹೊತ್ತಿನಲ್ಲಿ ಸೊಳ್ಳೆಗಳು ಮನೆಯ ಒಳಗೆ ಬರುವುದು ಜಾಸ್ತಿ ಹಾಗಾಗಿ ಈ ಸಮಯದಲ್ಲಿ ಈ ಬೆಳ್ಳುಳ್ಳಿಯ ಮಿಶ್ರಣವನ್ನು ಇಟ್ರೆ ನಿಜವಾಗಲೂ ಸೊಳ್ಳೆಗಳ ಕಾಟ ತಪ್ಪುತ್ತೆ. ಹಾಗೂ ಅದರಿಂದಾಗುವ ರೋಗಗಳು ಕಡಿಮೆ ಆಗುತ್ತವೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.